Padayappa re release box office: 'ಪಡೆಯಪ್ಪ' ರಿ-ರಿಲೀಸ್.. ವಿಶ್ವದಾದ್ಯಂತ ಎಷ್ಟಾಯ್ತು ಕಲೆಕ್ಷನ್?
ರಜನಿಕಾಂತ್ ವೃತ್ತಿ ಬದುಕಿನ ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದು 'ಪಡಯಪ್ಪ'. 1999ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಇಂದಿಗೂ ರಜನಿಕಾಂತ್ ಅಭಿಮಾನಿಗಳ ಫೇವರಿಟ್ ಸಿನಿಮಾ. ವಿಶೇಷ ಅಂದರೆ, ಈ ಸಿನಿಮಾಗೆ ಕಥೆ ಬರೆದು, ನಿರ್ಮಾಣ ಮಾಡಿದ್ದು ಸ್ವತ: ಸೂಪರ್‌ಸ್ಟಾರ್ ರಜನಿಕಾಂತ್ ಅವರೇ. ತಮ್ಮ 75ನೇ ಹುಟ್ಟುಹಬ್ಬ ಹಾಗೂ 50 ವರ್ಷಗಳ ಸಿನಿಮಾ ಜರ್ನಿಯ ನೆನಪಿಗಾಗಿ ರಿಲೀಸ್ ಮಾಡಿದ್ದರು.
ಈ ಸಿನಿಮಾದ ಹಕ್ಕುಗಳನ್ನು ರಜನಿಕಾಂತ್ ಯಾರಿಗೂ ಕೊಟ್ಟಿಲ್ಲ. ಒಂದೆರಡು ಬಾರಿ ಸನ್ ನೆಟ್‌ವರ್ಕ್ ಪ್ರಸಾರ ಮಾಡಿದ್ದು ಬಿಟ್ಟರೆ, ಅದನ್ನು ಸ್ಯಾಟಲೈಟ್ ಹಾಗೂ ಓಟಿಟಿ ವೇದಿಕೆಗಳಿಗೆ ಮಾರಾಟ ಮಾಡಿಲ್ಲ. ಹೀಗಾಗಿ ಈ ಸಿನಿಮಾ ಇದೇ ಮೊದಲ ಬಾರಿಗೆ ರಿಲೀಸ್ ಆಗುತ್ತಿದೆ. ಈ ಹೀಗಾಗಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ಗಳಿಕೆಯನ್ನು ನಿರೀಕ್ಷೆ ಮಾಡಲಾಗಿದೆ.

'ಪಡೆಯಪ್ಪ' ಸಿನಿಮಾವನ್ನು ತಮಿಳಿನ ಜನಪ್ರಿಯ ನಿರ್ದೇಶಕ ಕೆ.ಎಸ್.ರವಿಕುಮಾರ್ ನಿರ್ದೇಶನ ಮಾಡಿದ್ದರೆ, ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇವರ ಎದುರು ನೀಲಾಂಬರಿ ಪಾತ್ರದಲ್ಲಿ ರಮ್ಯಾ ಕೃಷ್ಣ ನಟಿಸಿದ್ದರು. ಇದು ಕೇವಲ ರಜನಿಕಾಂತ್ ಅಷ್ಟೇ ಅಲ್ಲ. ರಮ್ಯಾ ಕೃಷ್ಣ ಅವರ ವೃತ್ತಿ ಬದುಕಿಗೂ ದೊಡ್ಡ ಮೈಲಿಗಲ್ಲಾಯಿತು. ಈ ಸಿನಿಮಾ ರಿ-ರಿಲೀಸ್ ಆಗಿದ್ದು, ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಹೀಗಿದೆ.
ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ 'ಪಡಯಪ್ಪ' ಸಿನಿಮಾದಲ್ಲಿ ಸೌಂದರ್ಯ, ಅಬ್ಬಾಸ್, ಸಿತಾರಾ, ನಾಸರ್, ರಾಧಾ ರವಿ, ತಮಿಳು ಚಿತ್ರರಂಗದ ದಿಗ್ಗಜ ಶಿವಾಜಿ ಗಣೇಶನ್ ಮುಖ್ಯ ಪಾತ್ರದಲ್ಲಿ ನಟಿಸಿದರು. ರಜನಿಕಾಂತ್ ತಮ್ಮ ವೃತ್ತಿಜೀವನದಲ್ಲೇ ಅತ್ಯುತ್ತಮ ಅಭಿನಯ ನೀಡಿದ್ದರು. ಈ ಸಿನಿಮಾ ರಜನಿಗೆ ದೇಶ ಅಷ್ಟೇ ಅಲ್ಲ. ವಿದೇಶದಲ್ಲಿಯೂ ಮಿಂಚುವಂತೆ ಮಾಡಿತ್ತು. ಹಾಗೇ ರಮ್ಯಾಕೃಷ್ಣರ ನೀಲಾಂಬರಿ ಪಾತ್ರ ವೀಕ್ಷಕರನ್ನು ಥಿಯೇಟರ್ ಕಡೆಗೆ ಸೆಳೆದಿತ್ತು.
ಇನ್ನು ಈ ಸಿನಿಮಾಗೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದರು. ಎಸ್. ಮೂರ್ತಿ-ಪ್ರಸಾದ್ ಕ್ಯಾಮರಾ ವರ್ಕ್ ಇತ್ತು. ಆಕ್ಷನ್, ಸೇಡು, ಲವ್ ಸ್ಟೋರಿ ಹೊಂದಿದ್ದ 'ಪಡಯಪ್ಪ' 1999 ರಲ್ಲಿ ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನಿಸಿಕೊಂಡಿತ್ತು. ಈಗ ಮರು ಬಿಡುಗಡೆಯಾದಾಗಲೂ ಅದೇ ಕ್ರೇಜ್ ಇದೆಯೇ? ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ರಿ-ರಿಲೀಸ್ ಆಗಿರುವ 'ಪಡಯಪ್ಪ' ಭಾರತದಲ್ಲಿ ಮೊದಲ ದಿನವೇ ಉತ್ತಮ ಗಳಿಕೆ ಕಂಡಿದೆ. ತಮಿಳುನಾಡಿನಲ್ಲಿ ₹3.15 ಕೋಟಿ ಗಳಿದರೆ, ಕರ್ನಾಟಕದಲ್ಲಿ ₹32.7 ಲಕ್ಷ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ. ಇನ್ನು ನಿಜಾಮ್‌ನಲ್ಲಿ ₹3.11 ಲಕ್ಷ, ಪುದುಚೇರಿಯಲ್ಲಿ ₹3 ಲಕ್ಷ, ಕೇರಳದಲ್ಲಿ ₹3 ಲಕ್ಷ ಹಾಗೂ ಎಲ್ಲಾ ಉಳಿದ ಏರಿಯಾ ಸೇರಿ ₹60 ಲಕ್ಷ ಕಲೆಕ್ಷನ್ ಆಗಿದ್ದು, ಭಾರತದಲ್ಲಿ ಒಟ್ಟು ₹3.75 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.
ಇನ್ನು ವಿದೇಶದಲ್ಲಿಯೂ ರಜನಿ ಅಭಿಮಾನಿಗಳು ಈ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಉತ್ತರ ಅಮೆರಿಕಾದಲ್ಲಿ $21.6K, ಶ್ರೀಲಂಕಾದಲ್ಲಿ $7K, ಇನ್ನು ದೇಶಗಳಿಂದ $27K ಡಾಲರ್‌ಗಳನ್ನು ಕಲೆಕ್ಷನ್ ಆಗಿದ್ದು, ವಿಶ್ವದಾದ್ಯಂತ ಮೊದಲ ದಿನದ ಸುಮರು ₹4.10 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ಮೊದಲ ದಿನದ ಯಶಸ್ಸು ಕಂಡ ಬಳಿಕ 'ಪಡಯಪ್ಪ' ಎರಡನೇ ದಿನ ವಿಶ್ವದಾದ್ಯಂತ ₹4.5 ಕೋಟಿ ಗಳಿಸಿದೆ. ಈ ಮೂಲಕ ಎರಡು ದಿನಗಳಲ್ಲಿ ₹8.6 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ. ಇದು ಆರಂಭದ ಲೆಕ್ಕಾಚಾರ ಆಗಿದ್ದು, ಇನ್ನೂ ಅಧಿಕೃತ ಘೋಷಣೆ ಆಗಬೇಕಿದೆ. ಹಾಗೇ ವೀಕೆಂಡ್ ಕಲೆಕ್ಷನ್ ಲೆಕ್ಕಾಚಾರವೂ ಸಿಗಬಹುದು.


Click it and Unblock the Notifications











