Coolie Box Office Day 4: 4 ದಿನಗಳಲ್ಲೇ ₹300 ಕೋಟಿಯ ಗಡಿ ದಾಟಿ 'ಕೂಲಿ'; ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ರಜನಿ
ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ ಬಹುನಿರೀಕ್ಷಿತ ಸಿನಿಮಾ 'ಕೂಲಿ' ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ. ಬ್ಯಾಕ್ ಟು ಬ್ಯಾಕ್ ರಜೆಗಳು ರಜನಿಕಾಂತ್ ಸಿನಿಮಾಗೆ ಲಾಭವಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 'ಕೂಲಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೋಚಿದೆ. ರಜನಿ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಾಕಿದ್ದರೂ, ಫಸ್ಟ್ ಡೇ ಫಸ್ಟ್ ಶೋ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿದ್ದರೂ 'ಕೂಲಿ' ₹300 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ.
ನಾಲ್ಕನೇ ದಿನ ಅಂದರೆ, ಭಾನುವಾರ 'ಕೂಲಿ' ಒಳ್ಳೆಯ ಕಲೆಕ್ಷನ್ ಮಾಡಿದೆ. ಮೊದಲ ದಿನಕ್ಕೆ ಹೋಲಿಕೆ ಮಾಡಿದರೆ, ನಾಲ್ಕನೇ ದಿನ ಗಳಿಕೆಯಲ್ಲಿ ಇಳಿಕೆ ಕಂಡಿದ್ದರೂ, ವಿಶ್ವದಾದ್ಯಂತ ₹300 ಕೋಟಿಯ ಗಡಿದಾಟುವಲ್ಲಿ ಯಶಸ್ವಿಯಗಿದೆ. ಲೋಕೇಶ್ ಕನಕರಾಜ್ ನಿರ್ದೇಶನ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದ್ದರೂ, ರಜನಿಕಾಂತ್ ಎನರ್ಜಿ, ಮ್ಯಾನರಿಸಂ, ಸೆಂಟಿಮೆಂಟ್, ಆಕ್ಷನ್‌ಗೆ ಮರುಳಾಗಿದ್ದಾರೆ.

'ಕೂಲಿ' ತಮಿಳುನಾಡಿನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ತಮಿಳು ವರ್ಷನ್ ಕಲೆಕ್ಷನ್ ಕೂಡ ಚೆನ್ನಾಗಿದೆ. ಕರ್ನಾಟಕದಲ್ಲೇ ಕನ್ನಡ ವರ್ಷನ್ ಲಿಮಿಟೆಡ್ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಿದ್ದರಿಂದ ಗಳಿಕೆ ಕಡೆಯಿದೆ. ಉಳಿದಂತೆ ತೆಲುಗು ಹಾಗೂ ಹಿಂದಿ ವರ್ಷನ್‌ಗಳಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೇರೆ ಬೇರೆ ಭಾಷೆಯ ಸ್ಟಾರ್‌ಗಳು ರಜನಿಗೆ ಸಾಥ್ ಕೊಟ್ಟಿದ್ದು ಸಿನಿಮಾದ ಹೈಲೈಟ್. ಹಾಗಿದ್ದರೆ, 'ಕೂಲಿ' 4ನೇ ದಿನ ಎಷ್ಟು ಕಲೆಕ್ಷನ್ ಮಾಡಿದೆ? 4 ದಿನಗಳಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಕೂಲಿ' 4ನೇ ದಿನ ಗಳಿಸಿದ್ದೆಷ್ಟು?
ರಜನಿಕಾಂತ್ ಸಿನಿಮಾ 'ಕೂಲಿ'ಗೆ ವೀಕೆಂಡ್‌ನಲ್ಲಿ ಶೇ.80ರಷ್ಟು ಆಕ್ಯೂಪೆನ್ಸಿ ಇತ್ತು. ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ 4ನೇ ದಿನ ಭಾರತದಾದ್ಯಂತ ಎಲ್ಲಾ ಭಾಷೆಗಳಿಂದಲೂ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶನಿವಾರಕ್ಕೆ ಹೋಲಿಕೆ ಮಾಡಿದರೆ, ಭಾನುವಾರದ ಕಲೆಕ್ಷನ್‌ನಲ್ಲಿ ಸ್ವಲ್ಪ ಇಳಿಕೆ ಕಂಡಿದೆ. ಆದರೂ, ಕೇವಲ ನಾಲ್ಕು ದಿನಗಳಲ್ಲೇ ಭಾರತದಲ್ಲಿ ಸುಮಾರು 193.25 ಕೋಟಿ (Net) ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.
Coolie vs War- 2; ಬಾಕ್ಸಾಫೀಸ್ ವಾರ್ 3ನೇ ದಿನಕ್ಕೆ ಸಂಪೂರ್ಣವಾಗಿ 'ಕೂಲಿ' ಸೈಡ್ ಆಗೋತ್ತು!
4 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್ ದೊಡ್ಡ ಮಟ್ಟಕ್ಕೆ ಹೈಪ್ ಕ್ರಿಯೇಟ್ ಮಾಡಿತ್ತು. ರಿಲೀಸ್‌ಗೂ ಮುನ್ನ ಪ್ರೇಕ್ಷಕರು ಕೂಲಿ ಸಿನಿಮಾದ ಟಿಕೆಟ್‌ಗಳನ್ನು ಮುಗಿಬಿದ್ದು ಖರೀದಿ ಮಾಡಿದ್ದರು. ಸಿನಿಮಾಗೆ ಫಸ್ಟ್ ಡೇ ಫಸ್ಟ್ ಶೋ ಮಿಕ್ಸ್ ರೆಸ್ಪಾನ್ಸ್ ಹೊರತಾಗಿಯೂ ರಜನಿ ನೋಡುವುದಕ್ಕೆ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದಾರೆ. ವಿಶ್ವದಾದ್ಯಂತ ಈ ಸಿನಿಮಾ ಉತ್ತಮ ಕಲೆಕ್ಷನ್ ಅನ್ನೇ ಮಾಡಿದೆ. ವಲ್ಡ್‌ವೈಡ್ ಈ ಸಿನಿಮಾ ಸುಮಾರು ₹320 ಕೋಟಿ ಕಲೆಕ್ಷನ್ ಮಾಡಿದೆ.

4 ದಿನಗಳ ಕೂಲಿ ಕಲೆಕ್ಷನ್
ಮೊದಲ ದಿನ ₹65 ಕೋಟಿ
2ನೇ ದಿನ ₹54.75 ಕೋಟಿ
3ನೇ ದಿನ ₹39.5 ಕೋಟಿ
4ನೇ ದಿನ ₹35 ಕೋಟಿ
ಒಟ್ಟು ₹194.25 ಕೋಟಿ
ಸೋಮವಾರ ಕಲೆಕ್ಷನ್ ಮೇಲೆ ಭವಿಷ್ಯ
'ಕೂಲಿ' ಸಿನಿಮಾದ ಭವಿಷ್ಯ ಸೋಮವಾರದ ಕಲೆಕ್ಷನ್ ಮೇಲೆ ನಿಂತಿದೆ. ವೀಕ್ ಡೇಸ್‌ನಲ್ಲೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದರೆ, 'ಕೂಲಿ' ಕೂಡ ಬಾಕ್ಸಾಫೀಸ್‌ನಲ್ಲಿ ₹500 ಕೋಟಿ ಮಾಡಬಹುದು. ಸದ್ಯಕ್ಕೆ ಹೊಸ ಸಿನಿಮಾಗಳು ಯಾವುದೂ ರಿಲೀಸ್ ಇಲ್ಲದೇ ಇರುವುದರಿಂದ 'ಕೂಲಿ' ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











