Coolie Box Office Day 8:8ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ ರಜನಿಯ 'ಕೂಲಿ'; ಗಳಿಸಿದ್ದೆಷ್ಟು?
ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ಕೂಲಿ ವೀಕ್ ಡೇಸ್‌ನಲ್ಲಿ ಬಾಕ್ಸಾಫೀಸ್‌ನಲ್ಲಿ ಪರದಾಡುತ್ತಿದೆ. 8ನೇ ದಿನವೂ 'ಕೂಲಿ' ಬಾಕ್ಸಾಫೀಸ್‌ನಲ್ಲಿ ಇಳಿಕೆ ಕಂಡಿದೆ. ದಿನದಿಂದ ದಿನಕ್ಕೆ 'ಕೂಲಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಡ್ರಾಪ್ ಆಗುತ್ತಿದ್ದು, ಹೊಸ ದಾಖಲೆ ಬರೆಯುತ್ತೆ ಎಂದು ನಿರೀಕ್ಷೆಗಳು ಹುಸಿಯಾಗುತ್ತಿದೆ. ರಜನಿಕಾಂತ್, ಲೋಕೇಶ್ ಕನಕರಾಜ್ ಅಂತಹ ಕಾಂಬಿನೇಷನ್ ಇದ್ದಾಗಿಯೂ 'ಕೂಲಿ' ಬಾಕ್ಸಾಫೀಸ್‌ನಲ್ಲಿ ಪರದಾಡುತ್ತಿದೆ.
ವೀಕ್‌ಡೇಸ್‌ನಲ್ಲಿ ಮುಗ್ಗರಿಸಿರುವ ರಜನಿಕಾಂತ್ 'ಕೂಲಿ' ವೀಕೆಂಡ್‌ನಲ್ಲಿ ಮತ್ತೆ ದೊಡ್ಡ ಮೊತ್ತವನ್ನು ಕಲೆ ಹಾಕುವ ಸಾಧ್ಯತೆಯಿದೆ. ಯಾಕಂದ್ರೆ, ಈ ವೀಕೆಂಡ್‌ನಲ್ಲಿ 'ಕೂಲಿ'ಗೆ ಕಾಂಪಿಟೇಷನ್ ಕೊಡುವ ಯಾವುದೇ ಸಿನಿಮಾ ಇಲ್ಲ. ಹೀಗಾಗಿ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ. ಆದರೆ, 8ನೇ ದಿನ ರಜನಿ ಸಿನಿಮಾಗೆ ಆಶಾದಾಯಕವಾಗಿ ಇರಲಿಲ್ಲ ಎಂದು ಹೇಳಬಹುದು. 2ನೇ ದಿನದಿಂದ ಕುಸಿತ ಆರಂಭ ಆಗಿದ್ದು ಅದು 8ನೇ ದಿನದವರೆಗೂ ಮುಂದುವರೆದಿದೆ.

'ಕೂಲಿ' ಭಾರತದ ಬಾಕ್ಸಾಫೀಸ್‌ನಲ್ಲಿ ಇದೂವರೆಗೂ ಕೇವಲ ₹229 ಕೋಟಿ ಕಲೆಕ್ಷನ್ ಮಾಡಿದೆ. ಇದು ರಜನಿಕಾಂತ್, ಲೋಕೇಶ್ ಕನಕರಾಜ್, ನಾಗಾರ್ಜುನ, ಆಮಿರ್ ಖಾನ್, ಉಪೇಂದ್ರ ಅಂತಹವರು ಇದ್ದ ಹೊರತಾಗಿಯೂ ಬಾಕ್ಸಾಫೀಸ್‌ನಲ್ಲಿ ಹಿನ್ನೆಡೆ ಕಂಡಿದೆ. ಇನ್ನೊಂದು ಕಡೆ ಓವರ್‌ಸೀಸ್ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲೂ ದೊಡ್ಡ ಮಟ್ಟದಲ್ಲಿ ಡ್ರಾಪ್ ಕಂಡಿದೆ. ಹಾಗಿದ್ದರೆ, 8ನೇ ದಿನ ಗಳಿಸಿದ್ದೆಷ್ಟು? ಮುಂದಿನ ದಿನಗಳಲ್ಲಿ ಕೂಲಿ ಭವಿಷ್ಯವೇನು? ತಿಳಿಯುವುದಕ್ಕೆ ಮುಂದೆ ಓದಿ.
8ನೇ ದಿನ 'ಕೂಲಿ' ಕಲೆಕ್ಷನ್ ಎಷ್ಟು?
ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಅದರಲ್ಲೂ ಲೋಕೇಶ್ ಕನಕರಾಜ್ ಪ್ರೇಕ್ಷಕರ ಕಾತುರವನ್ನು ಬಾಕ್ಸಾಫೀಸ್ ಕಲೆಕ್ಷನ್ ಆಗಿ ಕನ್ವರ್ಟ್ ಮಾಡುವಲ್ಲಿ ವಿಫಲರಾಗಿದ್ದಾರೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, 'ಕೂಲಿ' ಸಿನಿಮಾ 8ನೇ ದಿನ ಕೇವಲ 6.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ 7ನೇ ದಿನ 7.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 8ನೇ ಸುಮಾರು 1.25 ಕೋಟಿ ರೂಪಾಯಿ ಕಡಿಮೆ ಕಲೆಕ್ಷನ್ ಆಗಿದೆ.
ಭಾರತದಲ್ಲಿ ಗಳಿಸಿದ್ದೆಷ್ಟು?
'ಕೂಲಿ' ರಿಲೀಸ್ ಆದ ಮೊದಲ ಮೂರು ದಿನ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಅದರಲ್ಲೂ ಅಡ್ವಾನ್ಸ್ ಬುಕಿಂಗ್ ಕ್ರೇಜ್ ನೋಡಿ, ₹1000 ಕೋಟಿ ಕಲೆಕ್ಷನ್ ಮಾಡೋದು ಕನ್ಫರ್ಮ್ ಅಂದುಕೊಂಡಿದ್ದರು. ಆದರೆ, ಹಾಗೆ ಆಗೋದು ಅನುಮಾನ. ಭಾರತದಲ್ಲಿ ಈ ಸಿನಿಮಾ 8 ದಿನಗಳಲ್ಲಿ 229.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಹೆಚ್ಚೆಂದರೆ 350 ಕೋಟಿ ಕಲೆಕ್ಷನ್ ಮಾಡಬಹುದೆಂದು ನಿರೀಕ್ಷೆ ಮಾಡಲಾಗಿದೆ. ಈ 8 ದಿನಗಳಲ್ಲಿ ಕೂಲಿ ಕಲೆಕ್ಷನ್ ರಿಪೋರ್ಟ್ ಹೀಗಿದೆ.
8 ದಿನಗಳ ಕೂಲಿ ಕಲೆಕ್ಷನ್ (ಭಾರತ)
ಮೊದಲ ದಿನ ₹65 ಕೋಟಿ
2ನೇ ದಿನ ₹54.75 ಕೋಟಿ
3ನೇ ದಿನ ₹39.5 ಕೋಟಿ
4ನೇ ದಿನ ₹35.25 ಕೋಟಿ
5ನೇ ದಿನ ₹12 ಕೋಟಿ
6ನೇ ದಿನ ₹9.50 ಕೋಟಿ
7ನೇ ದಿನ ₹7.5 ಕೋಟಿ
8ನೇ ದಿನ ₹6.25 ಕೋಟಿ
ಒಟ್ಟು ₹229.75 ಕೋಟಿ (Net)

2ನೇ ವೀಕೆಂಡ್ ಏನಾಗುತ್ತೋ?
ಈ ವಾರ ಬಿಗ್ ಸಿನಿಮಾಗಳ್ಯಾವುದೂ ರಿಲೀಸ್ ಆಗುತ್ತಿಲ್ಲ. ಹೀಗಾಗಿ 'ಕೂಲಿ' ಎರಡನೇ ವಾರ ಬಾಕ್ಸಾಫೀಸ್‌ನಲ್ಲಿ ಮತ್ತೆ ಏರಿಕೆ ಕಾಣಬಹುದೆಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ. ರಜನಿಕಾಂತ್ ಜೊತೆ ದೊಡ್ಡ ಸ್ಟಾರ್ ಇರುವುದರಿಂದ ಇದೂವರೆಗೂ ಸಿನಿಮಾ ನೋಡದವರು 2ನೇ ವಾರದಲ್ಲಿ ಥಿಯೇಟರ್ ಕಡೆಗೆ ನುಗ್ಗಬಹುದೆಂಬ ನಿರೀಕ್ಷೆಯಿದೆ. ಹಾಗೇನಾದರೂ ಆದರೆ, ಶನಿವಾರ ಹಾಗೂ ಭಾನುವಾರ ಎರಡು ದಿನಗಳಲ್ಲಿ ಕಲೆಕ್ಷನ್ 20 ಕೋಟಿ ರೂಪಾಯಿ ದಾಟಬಹುದೆಂದು ನಿರೀಕ್ಷೆ ಮಾಡಲಾಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











