Coolie Box Office Day 2: ಮೊದಲ ದಿನವೇ 'ಕೂಲಿ'ಗೆ ಮಿಶ್ರ ಪ್ರತಿಕ್ರಿಯೆ; 2ನೇ ದಿನ ಕಲೆಕ್ಷನ್ ಹೇಗಾಯ್ತು?
ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕೂಲಿ' ಥಿಯೇಟರ್‌ಗಳಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಮೂರನೇ ದಿನ ಬಾಕ್ಸಾಫೀಸ್‌ನಲ್ಲಿ ಗುದ್ದಾಡುತ್ತಿರುವ ಈ ಸಿನಿಮಾ ಮೊದಲವೇ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಈ ಮಲ್ಟಿಸ್ಟಾರರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬರೆಯೋ ದಾಖಲೆಗಳಿಗೆ ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿತ್ತು.
'ಕೂಲಿ' ಸಿನಿಮಾವನ್ನು ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಮೂಲ ಭಾಷೆ ತಮಿಳಿನಿಂದ ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಗಿದೆ. ಬಹುತೇಕ ಎಲ್ಲಾ ಭಾಷೆಯಲ್ಲಿಯೂ 'ಕೂಲಿ' ಕಲೆಕ್ಷನ್ ಉತ್ತಮವಾಗಿದೆ. ಮಿಶ್ರ ಪ್ರತಿಕ್ರಿಯೆಯ ಹೊರತಾಗಿಯೂ ತಮಿಳು ವರ್ಷನ್ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

74ರಲ್ಲೂ ರಜನಿಕಾಂತ್ ಎನರ್ಜಿ ಕಂಡು ಪ್ರೇಕ್ಷಕರು ಮನಸೋತಿದ್ದಾರೆ. ಕೇವಲ ಎರಡು ದಿನಕ್ಕೇ 'ಕೂಲಿ'ಯ ಕಲೆಕ್ಷನ್ ₹100 ಕೋಟಿ ದಾಟಿದೆ. ಕೇವಲ ಭಾರತ ಅಷ್ಟೇ ಅಲ್ಲ ವಿದೇಶದಲ್ಲಿಯೂ ಸೂಪರ್‌ಸ್ಟಾರ್ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಹಾಗಿದ್ದರೆ, ಎರಡನೇ ದಿನ 'ಕೂಲಿ' ಸಿನಿಮಾದ ಕಲೆಕ್ಷನ್ ಎಷ್ಟು? ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ ತಿಳಿಯುವುದಕ್ಕೆ ಮುಂದೆ ಓದಿ.
'ಕೂಲಿ' 2ನೇ ದಿನದ ಕಲೆಕ್ಷನ್
ಸೂಪರ್‌ಸ್ಟಾರ್ ರಜನಿ ಸಿನಿಮಾಗೆ ಸಿಗುವ ಓಪನಿಂಗ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಎಲ್ಲೇ ರಿಲೀಸ್ ಮಾಡಿದರೂ ಮೊದಲ ವಾರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡೋದು ಗ್ಯಾರಂಟಿ. ಇನ್ನು 'ಕೂಲಿ' ಅಂತಹ ಸಿನಿಮಾ ರಿಲೀಸ್ ಆದ್ಮೇಲೆ ಅದರ ಕಲೆಕ್ಷನ್ ನಿರೀಕ್ಷೆಗಿಂತಲೂ ದೊಡ್ಡ ಮಟ್ಟದಲ್ಲೇ ಇರುತ್ತೆ. ಸಿನಿಮಾಗೆ ಮಿಕ್ಸ್ ರೆಸ್ಪಾನ್ಸ್ ಸಿಕ್ಕಿದ ನಂತರವೂ ಎರಡನೇ ದಿನ ಕಲೆಕ್ಷನ್ ಸಖತ್ ಆಗಿಯೇ ಇದೆ. ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ 2ನೇ ದಿನ 53.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಮಿಕ್ಸ್ ರೆಸ್ಪಾನ್ಸ್ ಬಂದಿದ್ದರೂ, ಕಲೆಕ್ಷನ್‌ಗೆ ಏನೂ ಎಫೆಕ್ಟ್ ಆಗಿಲ್ಲ.
2 ದಿನಗಳ 'ಕೂಲಿ' ಕಲೆಕ್ಷನ್ ಎಷ್ಟು?
ರಜನಿಕಾಂತ್ ಸಿನಿಮಾ 'ಕೂಲಿ' ಬಿಡುಗಡೆಗೂ ಮುನ್ನವೇ ಕ್ರೇಜ್ ಹುಟ್ಟಾಕಿತ್ತು. ಅದರಲ್ಲೂ ರಜನಿಗೆ ಲೋಕೇಶ್ ಕನಕರಾಜ್ ನಿರ್ದೇಶನ ಅಂದರೆ, ಸಿನಿಪ್ರಿಯರಲ್ಲಿ ಆ ಕ್ರೇಜ್ ಹುಟ್ಟೋದು ಸಹಜ. ಹೀಗಾಗಿ ಮೊದಲ ಎರಡು ದಿನಗಳ ಕಲೆಕ್ಷನ್ ಸಖತ್ ಆಗಿದೆ. ಎರಡೇ ದಿನಕ್ಕೆ ವಿಶ್ವದಾದ್ಯಂತ 150 ಕೋಟಿ ಕಲೆಕ್ಷನ್ ಮಾಡಿದೆ. ಇದು ರಜನಿ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾಗಳಲ್ಲೊಂದು. ಮೊದಲ ಎರಡು ದಿನಗಳ ಕಲೆಕ್ಷನ್ ಹೀಗಿದೆ.
2 ದಿನಗಳ 'ಕೂಲಿ' ಕಲೆಕ್ಷನ್
ಮೊದಲ ದಿನ ₹65 ಕೋಟಿ (ಭಾರತ)
ಎರಡನೇ ದಿನ ₹53.5 ಕೋಟಿ (ಭಾರತ)
ಒಟ್ಟು ₹118.5 ಕೋಟಿ (ಭಾರತ)
ಓವರ್‌ಸೀಸ್ ₹35 ಕೋಟಿ
ಒಟ್ಟು ₹153.5 ಕೋಟಿ

ಕನ್ನಡ ವರ್ಷನ್ ಕಲೆಕ್ಷನ್ ಎಷ್ಟು?
'ಕೂಲಿ' ಸಿನಿಮಾ ಕನ್ನಡದಲ್ಲಿಯೂ ಬಿಡುಗಡೆಯಾಗಿದೆ. ಆದರೆ, ಕಡಿಮೆ ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಕೇವಲ 30 ರಿಂದ 40 ಸ್ಕ್ರೀನ್‌ಗಳಷ್ಟೇ ರಿಲೀಸ್ ಆಗಿದ್ದು, ಎರಡು ದಿನಗಳಲ್ಲಿ ಒಂದು ಕೋಟಿ ರೂಪಾಯಿ ಬ್ಯುಸಿನೆಸ್ ಆಗಿದೆ. ಆದರೆ, ಕರ್ನಾಟಕದಲ್ಲಿ 'ಕೂಲಿ' ಎಲ್ಲಾ ಭಾಷೆಗಳಿಂದ ಹೆಚ್ಚು ಕಡಿಮೆ ₹20 ಕೋಟಿ (gross) ಹತ್ತಿರ ಕಲೆಕ್ಷನ್ ಆಗಿದೆ ಎನ್ನಲಾಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











