ರಜನಿ ಜೊತೆ ನಟಿಸಿದ ಉಪ್ಪಿ, ರಚಿತಾ ರಾಮ್ 'ಕೂಲಿ' ಸಿನಿಮಾದ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು ಗೊತ್ತೇ?
ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕೂಲಿ'. ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್ ಸಿನಿಮಾಗಾಗಿ ಸಿನಿಪ್ರಿಯರ ಕಾಯುತ್ತಲೇ ಇದ್ದರು. ಹೀಗಾಗಿ ಬಿಡುಗಡೆಗೂ ಮುನ್ನವೇ 'ಕೂಲಿ' ಮೇನಿಯಾ ಶುರುವಾಗಿತ್ತು. ನಿರೀಕ್ಷೆಯಂತೆ ರಜನಿ ಸಿನಿಮಾ ರಿಲೀಸ್ ಆಗಿದ್ದು ಬಾಕ್ಸಾಫೀಸ್‌ನಲ್ಲಿ ಚಿಂದಿ ಕಲೆಕ್ಷನ್ ಮಾಡಿದೆ. ಸೂಪರ್‌ಸ್ಟಾರ್ ವೃತ್ತಿ ಬದುಕಿನಲ್ಲೇ ಫಸ್ಟ್ ಡೇ ಅತೀ ಹೆಚ್ಚು ಕಲೆಕ್ಷನ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ಕರ್ನಾಟಕದಲ್ಲೂ 'ಕೂಲಿ' ಸಿನಿಮಾಗೆ ಸಿಕ್ಕಾಪಟ್ಟೆ ಕ್ರೇಜ್ ಇತ್ತು. ತಮಿಳುನಾಡಿಗಿಂತ ರಜನಿ ಸಿನಿಮಾಗೆ ಕರ್ನಾಟಕದಲ್ಲಿ ಬೇಡಿಕೆ ಹೆಚ್ಚಿತ್ತು. ಟಿಕೆಟ್ ಬೆಲೆ ದುಬಾರಿಯಾಗಿತ್ತು. ಬಹುದೊಡ್ಡ ತಾರಾಗಣವಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡುತ್ತೆ ಅಂತ ಗೆಸ್ ಮಾಡಲಾಗಿತ್ತು. ಆದರೆ, ಇಷ್ಟೊಂದು ಕ್ರೇಜ್ ಹುಟ್ಟಾಕುತ್ತೆ ಎನ್ನುವ ನಿರೀಕ್ಷೆಯಿರಲಿಲ್ಲ. ವಿತರಕರ ಪ್ರಕಾರ 'ಕೂಲಿ' ಕರ್ನಾಟಕದಲ್ಲೂ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ.

ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗಿಂತ ಹೆಚ್ಚು ಶೋಗಳನ್ನು 'ಕೂಲಿ'ಗೆ ನೀಡಲಾಗಿದೆ. ಮೊದಲ ಸುಮಾರು 450 ಸ್ಕ್ರೀನ್‌ಗಳಿಗೂ ಹೆಚ್ಚು ನೀಡಲಾಗಿದ್ದು, ಬಹುತೇಕ ಎಲ್ಲಾ ಕಡೆಯಿಂದಲೂ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದ ವಿತರಕರು ನೀಡಿರುವ ಮಾಹಿತಿ ಪ್ರಕಾರ, ನಮ್ಮಲ್ಲಿ ಕೂಲಿ ಕಲೆಕ್ಷನ್ ಭರ್ಜರಿಯಾಗಿ ಆಗಿದೆ. ಹಾಗಿದ್ದರೆ, ಮೊದಲ ದಿನ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ ಅನ್ನೋದನ್ನು ನೋಡೋಣ.
ಕರ್ನಾಟಕದಲ್ಲಿ 'ಕೂಲಿ'ಗೆ ಎಷ್ಟು ಸ್ಕ್ರೀನ್?
ಕರ್ನಾಟಕದಾದ್ಯಂತ 'ಕೂಲಿ' ಸಿನಿಮಾ 450ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ ರಿಲೀಸ್ ಮಾಡಲಾಗಿದೆ. ಕೊನೆ ಕ್ಷಣದಲ್ಲಿ ಇನ್ನೊಂದಿಷ್ಟು ಸ್ಕ್ರೀನ್‌ಗಳನ್ನು ಏರಿಕೆ ಮಾಡಲಾಗಿತ್ತು. ಕರ್ನಾಟಕದ ವಿತರಕರ ಪ್ರಕಾರ, 'ಕೂಲಿ' ಸಿನಿಮಾ ಮೊದಲ ದಿನ ಸುಮಾರು 1000 ಶೋಗಳು ಪ್ರದರ್ಶನ ಕಂಡಿದ್ದು, ಅವುಗಳಲ್ಲಿ ಸುಮಾರು ಶೇ.80 ರಿಂದ 85ರಷ್ಟು ಶೋಗಳು ಫುಲ್ ಆಗಿವೆ. ಇನ್ನು ಸ್ಯಾಕ್ನಿಲ್ಕ್ ಪ್ರಕಾರ, ಚೆನ್ನೈಗಿಂತ ಬೆಂಗಳೂರಿನಲ್ಲೇ ಹೆಚ್ಚು ಶೋಗಳನ್ನು ಹಾಕಲಾಗಿದೆ. ಚೆನ್ನೈನಲ್ಲಿ 639 ಶೋಗಳನ್ನು ಹಾಕಿದ್ದರೆ, ಬೆಂಗಳೂರಿನಲ್ಲಿ 905 ಶೋಗಳನ್ನು ಹಾಕಲಾಗಿದೆ. ಹೀಗಾಗಿ ಮೊದಲ ದಿನ ಕರ್ನಾಟಕದಲ್ಲಿ ದೊಡ್ಡ ಮೊತ್ತವನ್ನೇ ಕಲೆಕ್ಷನ್ ಮಾಡಿದೆ ಎಂದು ಲೆಕ್ಕ ಹಾಕಲಾಗಿದೆ.
ಫಸ್ಟ್ ಡೇ ಕಲೆಕ್ಷನ್ ಲೆಕ್ಕಾಚಾರವೇನು?
'ಕೂಲಿ' ಕರ್ನಾಟಕದಲ್ಲಿ ಒಳ್ಳೆಯ ಕಲೆಕ್ಷನ್ ಆಗಿದೆ. ಬೆಂಗಳೂರಿನಲ್ಲಿ ಸುಮಾರು ಶೇ.89ರಷ್ಟು ಶೋಗಳು ಫುಲ್ ಆಗಿತ್ತು. ಹಾಗೇ ಬಹುತೇಕ ಫ್ಯಾನ್ಸ್ ಶೋಗಳಿಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿವೆ. ಕರ್ನಾಟಕದ ವಿತರಕರ ಪ್ರಕಾರ, 'ಕೂಲಿ' ಮೊದಲ ದಿನ ಕರ್ನಾಟಕದಲ್ಲಿ ₹12 ರಿಂದ ₹15 ಕೋಟಿಯಿಂದ ಕಲೆಕ್ಷನ್ ಮಾಡಿರಬಹುದು ಎಂದು ಅಂದಾಜು ಮಾಡಲಾಗಿದೆ. ಯಾಕಂದ್ರೆ, ಬಹುತೇಕ ಎಲ್ಲಾ ಪ್ರಮುಖ ಏರಿಯಾಗಳಲ್ಲಿ ಸಿನಿಮಾಗೆ ಸಖತ್ ರೆಸ್ಪಾನ್ಸ್ ರೆಸ್ಪಾನ್ಸ್ ಸಿಕ್ಕಿದೆ.

ಸೂಪರ್‌ಸ್ಟಾರ್ ರಜನಿಕಾಂತ್ 'ಕೂಲಿ' ಸಿನಿಮಾ ಕರ್ನಾಟಕದಲ್ಲಿ ಬಿಕೆಟಿ (ಬೆಂಗಳೂರು, ಕೋಲಾರ ಹಾಗೂ ತುಮಕೂರು) ಹಾಗೂ ಎಂಎಂಸಿಎಚ್ (ಮಂಡ್ಯ,ಮೈಸೂರು, ಕೂರ್ಗ್, ಹಾಸನ) ಏರಿಯಾಗಳಲ್ಲಿ ಉತ್ತಮ ಕಲೆಕ್ಷನ್ ಆಗಿದೆ. ಬಿಕೆಟಿಯಿಂದ ಸುಮಾರು ₹8 ಕೋಟಿ ಹತ್ತಿರ ಕಲೆಕ್ಷನ್ ಆಗಿದ್ದರೆ, ಎಂಎಂಸಿಎಚ್ ₹4 ಕೋಟಿ ಹಾಗೂ ಉಳಿದ ಏರಿಯಾಗಳಿಂದ ₹2 ರಿಂದ ₹3 ಕೋಟಿ ಕಲೆಕ್ಷನ್ ಆಗಿರಬಹುದೆಂಬ ನೀರಿಕ್ಷೆ ಮಾಡಲಾಗಿದೆ.
ವೀಕೆಂಡ್ ಲೆಕ್ಕಾಚಾರವೇನು?
'ಕೂಲಿ'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ನಾಳೆಯಿಂದ ಸಿಗುವ ರೆಸ್ಪಾನ್ಸ್ ಮೇಲೆ ಕಲೆಕ್ಷನ್ ಲೆಕ್ಕಾಚಾರ ನಿಂತಿದೆ. ಆದರೆ, ವಿತರಕರ ಪ್ರಕಾರ ಮೊದಲ ನಾಲ್ಕು ದಿನಗಳ ಕಮ್ಮಿ ಅಂದರೂ ₹35 ರಿಂದ ₹40 ಕೋಟಿ ಕಲೆಕ್ಷನ್ ಅನ್ನು ನಿರೀಕ್ಷೆ ಮಾಡಬಹುದೆಂದು ನಿರೀಕ್ಷೆ ಮಾಡಿದೆ. ಆದರೆ, ಈ ಎಲ್ಲಾ ಲೆಕ್ಕಾಚಾರ ಮುಂದಿನ ಮೂರು ದಿನಗಳು ಸಿಗುವ ರೆಸ್ಪಾನ್ಸ್ ಮೇಲೆ ನಿಂತಿದೆ.


Click it and Unblock the Notifications











