'ಕೂಲಿ' ಮುಂದೆನೂ ಸೈಲೆಂಟ್ ಆಗ್ಲಿಲ್ಲ 'ಸು ಫ್ರಮ್ ಸೋ'; 22ನೇ ದಿನವೂ ದಾಖಲೆ ಕಲೆಕ್ಷನ್
ಒಂದು ವಾರದಿಂದ ಎಲ್ಲಿ ನೋಡಿದರೂ ಸೂಪರ್‌ಸ್ಟಾರ್ ರಜನಿಕಾಂತ್ 'ಕೂಲಿ' ಬಗ್ಗೆನೇ ಟಾಕ್. ರಜನಿ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್ ಅನ್ನೇ ಹಾಡಿ ಹೊಗಳುತ್ತಿದ್ದರು. ಈ ಅಬ್ಬರದಲ್ಲಿ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ 'ಸು ಫ್ರಮ್ ಸೋ' ಕಥೆಯೇನು ಅಂತ ಸಿನಿಮಾ ಮಂದಿ ಲೆಕ್ಕ ಹಾಕಿದ್ದೇ ಹಾಕಿತ್ತು. 'ಕೂಲಿ' ಎಂಟ್ರಿ ಕೊಟ್ಮೇಲೆ ಈ ಸಿನಿಮಾ ಸೈಲೆಂಟ್ ಆಗಿಬಿಡುತ್ತೆ. ಎಲ್ಲರೂ 'ಕೂಲಿ' ಕಡೆಗೆ ಡೈವರ್ಟ್ ಆಗುತ್ತಾರೆ ಎಂದು ಭವಿಷ್ಯ ನುಡಿಯಲಾಗಿತ್ತು.
'ಕೂಲಿ' ಒಂದೇ ಅಲ್ಲ. ರಜನಿ ಸಿನಿಮಾ ಜೊತೆಗೆ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ ಸಿನಿಮಾ 'ವಾರ್ 2' ಕೂಡ ರಿಲೀಸ್ ಆಗಿದೆ. ಈ ಎರಡೂ ಸಿನಿಮಾಗಳು ಸೇರಿ 'ಸು ಫ್ರಮ್ ಸೋ' ಕಲೆಕ್ಷನ್‌ಗೆ ಖನ್ನ ಹಾಕುತ್ತವೆ ಎಂದು ಭಾವಿಸಲಾಗಿತ್ತು. ಆದ್ರೀಗ ಆ ಎಲ್ಲಾ ಲೆಕ್ಕಾಚಾರಗಳು ತಲೆ ಕೆಳಗಾಗಿವೆ. ರಾಜ್ ಬಿ ಶೆಟ್ಟಿ ನಿರ್ಮಾಣದ ಈ ಸಿನಿಮಾ ಯಾರು ಬಂದರೂ ಬಾಕ್ಸಾಫೀಸ್‌ನಲ್ಲಿ ಜಗ್ಗುತ್ತಿಲ್ಲ. ವೀಕೆಂಡ್ ಆರಂಭ ಆದರೆ, ಕಲೆಕ್ಷನ್ ಕೂಡ ಏರಿಕೆಯಾಗುತ್ತಿದೆ.

ನಿನ್ನೆ (ಆಗಸ್ಟ್ 15) ರಜೆ ಇದ್ದಿದ್ದರಿಂದ 'ಸು ಫ್ರಮ್ ಸೋ' ಮತ್ತೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ. ಕನ್ನಡದ ಸ್ಮಾಲ್ ಬಜೆಟ್ ಸಿನಿಮಾವೊಂದು 22ನೇ ದಿನ 'ಕೂಲಿ' ಹಾಗೂ 'ವಾರ್ 2' ಬಿಗ್ ಬಜೆಟ್ ಸಿನಿಮಾಗಳ ಎದುರು ಪೈಪೋಟಿ ನೀಡುತ್ತಿದೆ. ಹಾಗಿದ್ದರೆ, 22ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ? 'ಕೂಲಿ', 'ವಾರ್ 2' ಎದುರು ಗೆದ್ದಿದ್ದು ಹೇಗೆ? ತಿಳಿಯುವುದಕ್ಕೆ ಮುಂದೆ ಓದಿ.
'ಕೂಲಿ' ಎದುರು 'ಸು ಫ್ರಮ್ ಸೋ'
ಕನ್ನಡ ಚಿತ್ರರಂಗದಲ್ಲಿ ಸಂಚಲನ ದೃಷ್ಟಿಸಿದ 'ಸು ಫ್ರಮ್ ಸೋ' ಸಿನಿಮಾ ತನ್ನ ಆಟವನ್ನು ಇನ್ನೂ ಮುಂದುವರೆಸಿದೆ. ರಜನಿ 'ಕೂಲಿ', ಹೃತಿಕ್-ಎನ್‌ಟಿಆರ್ 'ವಾರ್ 2' ಬಂದ್ಮೇಲೆ ಈ ಸಿನಿಮಾ ಹೇಳ ಹೆಸರಿಲ್ಲದೆ ಹೋಗುತ್ತೆ ಎಂದು ಸಿನಿಮಾ ಮಂದಿ ಲೆಕ್ಕ ಹಾಕಿದ್ದರು. ಆದರೆ, ಪ್ರತಿಯೊಂದು ಹಂತದಲ್ಲಿ ಅವರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುತ್ತಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, 22ನೇ ದಿನ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 2.55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕೇವಲ ಕನ್ನಡದಿಂದಲೇ 2.44 ಕೋಟಿ ರೂಪಾಯಿ ಗಳಿಸಿದ್ದರೆ, ಮಲಯಾಳಂನಿಂದ 14 ಲಕ್ಷ ರೂಪಾಯಿ, ತೆಲುಗಿನಿಂದ 1 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

100 ಕೋಟಿಗೆ ಇನ್ನೆಷ್ಟು ಬೇಕು?
ಸೂಪರ್‌ಸ್ಟಾರ್‌ಗಳೇ ಇಲ್ಲದ ಕನ್ನಡ ಸಿನಿಮಾವೊಂದು ₹100 ಕೋಟಿ ಕಲೆಕ್ಷನ್ ಮಾಡುತ್ತೆ ಅಂತಾದರೆ, ಅದು ನಿಜಕ್ಕೂ ಒಂದು ಇತಿಹಾಸ. ಹೀಗೆ ಚರಿತ್ರೆ ಸೃಷ್ಟಿಸುವ ಹಾದಿಯಲ್ಲಿ 'ಸು ಫ್ರಮ್ ಸೋ' ಸಿನಿಮಾವಿದೆ. 22 ದಿನಗಳಲ್ಲಿ ಈ ಸಿನಿಮಾ 73.1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯೆಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಇದರಲ್ಲಿ ಕನ್ನಡ ವರ್ಷನ್‌ನಿಂದ ₹66.95 ಕೋಟಿ, ಮಲಯಾಳಂ ವರ್ಷನ್‌ನಿಂದ ₹4.93 ಕೋಟಿ, ತೆಲುಗಿನಿಂದ ₹1.22 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ದಿನಗಳ ಆಧಾರದ ಮೇಲೆ ಕಲೆಕ್ಷನ್ ಲೆಕ್ಕ ಹಾಕುವುದಾರೇ. ಹೀಗೆ ಮುಂದುವರೆದರೆ, ಇನ್ನೂ 10 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಲಿದೆ.
21 ದಿನಗಳ ಕಲೆಕ್ಷನ್
ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ
9ನೇ ದಿನ ₹5.40 ಕೋಟಿ
10ನೇ ದಿನ ₹6.55 ಕೋಟಿ
11ನೇ ದಿನ ₹3.70 ಕೋಟಿ
12ನೇ ದಿನ ₹3.40 ಕೋಟಿ
13ನೇ ದಿನ ₹2.80 ಕೋಟಿ
14ನೇ ದಿನ ₹2.25 ಕೋಟಿ
15ನೇ ದಿನ ₹3.10 ಕೋಟಿ
16ನೇ ದಿನ ₹6.00 ಕೋಟಿ
17ನೇ ದಿನ ₹6.95 ಕೋಟಿ
18ನೇ ದಿನ ₹2.05 ಕೋಟಿ
19ನೇ ದಿನ ₹1.70 ಕೋಟಿ
20ನೇ ದಿನ ₹1.60 ಕೋಟಿ
21ನೇ ದಿನ ₹1.10 ಕೋಟಿ
22ನೇ ದಿನ ₹2.55 ಕೋಟಿ
ಒಟ್ಟು ₹73.10 ಕೋಟಿ
'ಕೆಜಿಎಫ್ 2', 'ಕಾಂತಾರ'ಗಿಂತಲೂ ಭರ್ಜರಿ ಕಲೆಕ್ಷನ್
ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದ 'ಕೆಜಿಎಫ್ 2', 'ಕಾಂತಾರ' ಸಿನಿಮಾಗಳು ಕಲೆಕ್ಷನ್ ಮಾಡಿದ್ದಕ್ಕಿಂತ 'ಸು ಫ್ರಮ್ ಸೋ' ಕಲೆಕ್ಷನ್ ಗ್ರೇಟ್. ಯಾಕಂದ್ರೆ, ಅತೀ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣ ಮಾಡಿ, ಸ್ಟಾರ್‌ಕಾಸ್ಟ್‌ಗಳೇ ಇಲ್ಲದ ಈ ಸಿನಿಮಾ ಇಷ್ಟೊಂದು ಸದ್ದು ಮಾಡಿದ್ದಕ್ಕೆ ಕನ್ನಡ ಚಿತ್ರರಂಗ ಥ್ರಿಲ್ ಆಗಿದೆ. ಅದರಲ್ಲೂ ಈ ಸಿನಿಮಾ ಏನಾದರೂ 100 ಕೋಟಿ ಗಳಿಸಿದೆ, ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವೇ ಬರೆಯಲಿದೆ. ಕನ್ನಡ ಬಿಟ್ಟು ಎರಡೂ ಮಖ ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆದರೂ, ಕರ್ನಾಟಕದಿಂದಲೇ 66.95 ಕೋಟಿ ಕಲೆಕ್ಷ್ ಮಾಡಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











