'ಸಂಪತ್ತಿಗೆ ಸವಾಲ್' ಹೌಸ್‌ಫುಲ್..3ನೇ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?
ವರನಟ ಡಾ.ರಾಜ್‌ಕುಮಾರ್ ಅಭಿನಯದ ಸಿನಿಮಾ 'ಸಂಪತ್ತಿಗೆ ಸವಾಲ್' ಮರು ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಹೊಸ ಸಿನಿಮಾಗಳು ಕಲೆಕ್ಷನ್ ಮಾಡುವಲ್ಲಿ ಪರದಾಡುತ್ತಿರುವಾಗ ಅಣ್ಣಾವ್ರ ಸಿನಿಮಾ ಭಾನುವಾರ ಅಂದರೆ, ನಿನ್ನೆ (ಫೆಬ್ರವರಿ 22) ಕೆಲವೆಡೆ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಅದರಲ್ಲೂ ಬೆಂಗಳೂರಿನ ಥಿಯೇಟರ್‌ಗಳಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ.
ಅಣ್ಣಾವ್ರ ಸಿನಿಮಾ ಯಾವಾಗಲೇ ರಿಲೀಸ್ ಮಾಡಿದರೂ ಜನರು ಮುಗಿ ಬಿದ್ದು ನೋಡುತ್ತಾರೆ. ಅದು ಎಷ್ಟು ವರ್ಷಗಳ ಹಿಂದೆ ರಿಲೀಸ್ ಆಗಿದ್ದರೂ ಅಷ್ಟೇ. ಥಿಯೇಟರ್‌ನಲ್ಲಿ ಹೊಸ ರೂಪ ಪಡೆದುಕೊಂಡು ರಿಲೀಸ್ ಆದರೆ, ಜನರು ಮಿಸ್ ಮಾಡೋದಿಲ್ಲ. ಈ ಸಿನಿಮಾವನ್ನು ಕೂಡ ವೀಕೆಂಡ್‌ನಲ್ಲಿ ಜನರು ಫ್ಯಾಮಿಲಿ ಜೊತೆ ಬಂದು ನೋಡಿದ್ದಾರೆ.

1974ರಲ್ಲಿ ಡಾ.ರಾಜ್‌ಕುಮಾರ್, ಮಂಜುಳ ಹಾಗೂ ವಜ್ರಮುನಿ ನಟಿಸಿದ ಈ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಎ ವಿ ಶೇಷಗಿರಿ ರಾವ್ ನಿರ್ದೇಶಿಸಿದ 'ಸಂಪತ್ತಿಗೆ ಸವಾಲ್' ರಿಲೀಸ್ ಆದ ಬಳಿಕ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾಗಳ ಲಿಸ್ಟ್ ಸೇರಿತ್ತು. ಈಗ ಮತ್ತೆ ಈ ಸಿನಿಮಾ ರೀ-ರಿಲೀಸ್ ಆಗಿದೆ. ಮೂರನೇ ದಿನ ಒಳ್ಳೆಯ ಕಲೆಕ್ಷನ್ ಆಗಿದೆ ಎಂದು ವಿತರಕರ ಮೂಲಗಳು ಹೇಳುತ್ತಿವೆ. ಹಾಗಿದ್ರೆ, 3ನೇ ದಿನ ಕಲೆಕ್ಷನ್ ಎಷ್ಟಾಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಸಂಪತ್ತಿಗೆ ಸವಾಲ್'ಗೆ ಭರ್ಜರಿ ರೆಸ್ಪಾನ್ಸ್
ಅಣ್ಣಾವ್ರ ಸಿನಿಮಾ 'ಸಂಪತ್ತಿಗೆ ಸವಾಲ್' ಬೆಂಗಳೂರಿನ ಕೆಲವು ಥಿಯೇಟರ್‌ಗಳಲ್ಲಿ ರಿ-ರಿಲೀಸ್ ಆಗಿತ್ತು. ಭಾನುವಾರದ ಮ್ಯಾಟನಿ ಶೋಗೆ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದಾರೆ. ಅದರಲ್ಲೂ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ 'ಸಂಪತ್ತಿಗೆ ಸವಾಲ್' ಹೌಸ್‌ಫುಲ್ ಆಗಿತ್ತು. ಈ ವಾರ ರಿಲೀಸ್ ಆಗಿದ್ದ ಹೊಸ ಸಿನಿಮಾಗಳಿಗೆ ಜನರು ಬಂದಿದ್ದಕ್ಕಿಂತ ಹೆಚ್ಚು ಮಂದಿ ಈ ಸಿನಿಮಾ ನೋಡುವುದಕ್ಕೆ ಬಂದಿದ್ದರು ಎಂದು ವಿತರಕರು ಹೇಳುತ್ತಿದ್ದಾರೆ.
'ಸಂಪತ್ತಿಗೆ ಸವಾಲ್' 3ನೇ ದಿನ ಗಳಿಸಿದ್ದೆಷ್ಟು?
ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಅಣ್ಣಾವ್ರ ಸಿನಿಮಾ ಹೌಸ್‌ಪುಲ್ ಆಗಿತ್ತು. ಕಟೌಟ್‌ಗಳಿಗೆ ಹಾರ, ಹಾಲಿನ ಅಭಿಷೇಕ ಆಗಿತ್ತು. ಅಭಿಮಾನಿಗಳು ವರನಟನ ಸಿನಿಮಾವನ್ನು ನೋಡಿ ಸಂಭ್ರಮಿಸಿದ್ದರು. ಪ್ರಸನ್ನ ಚಿತ್ರಮಂದಿರದ ಮುಂದು ಮ್ಯಾಟ್ನಿ ಶೋನಲ್ಲಿ ಜನಸಂದಣಿ ಸೇರಿತ್ತು. ಕರ್ನಾಟಕದ ವಿತರಕರ ಪ್ರಕಾರ ಈ ಸಿನಿಮಾ ಪ್ರಸನ್ನ ಚಿತ್ರಮಂದಿರಲ್ಲಿ ₹2 ಲಕ್ಷದಿಂದ ₹2.5 ಲಕ್ಷ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ಲೆಕ್ಕಾ ಹಾಕಿದ್ದಾರೆ.

3 ದಿನಗಳ ಕಲೆಕ್ಷನ್ ಹೇಗಿದೆ?
'ಸಂಪತ್ತಿಗೆ ಸವಾಲ್' ಮೂರು ದಿನಗಳಲ್ಲಿ ಮೊದಲ ಎರಡು ದಿನಗಳು ಅಷ್ಟೇನು ದೊಡ್ಡ ಮಟ್ಟದ ಕಲೆಕ್ಷನ್ ಆಗಿಲ್ಲ. ಆದರೆ, ಭಾನುವಾರ ಜನರು ಥಿಯೇಟರ್ ಕಡೆಗೆ ಬಂದಿದ್ದರಿಂದ ಕಲೆಕ್ಷನ್ ಉತ್ತಮವಾಗಿ ಆಗಿದೆ ಎಂದು ಹೇಳಾಗುತ್ತಿದೆ. ಇಲ್ಲಿವರೆಗೂ ಅಣ್ಣಾವ್ರ ಸಿನಿಮಾ ಮೂರು ದಿನಗಳಲ್ಲಿ ಹೆಚ್ಚು ಕಡಿಮೆ ₹15 ರಿಂದ ₹20 ಲಕ್ಷ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ವಿತರಕರು ಅಂದಾಜು ಹಾಕಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರ ಬರಬೇಕಿದೆ.
ಹೊಸ ಸಿನಿಮಾಗಳಿಗೆ ಸೆಡ್ಡು
ಡಾ.ರಾಜ್‌ಕುಮಾರ್ ನಟಿಸಿದ ಸಿನಿಮಾ 'ಸಂಪತ್ತಿಗೆ ಸವಾಲ್' ಕಳೆದ ವಾರ ತೆರೆಕಂಡ ಹೊಸಬರ ಸಿನಿಮಾಗಳಿಗೆ ಸೆಡ್ಡು ಹೊಡೆದಿದೆ. ಹೊಸ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ 50 ವರ್ಷಗಳ ಹಿಂದೆ ತೆರೆಕಂಡ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ. ₹15 ರಿಂದ ₹20 ಲಕ್ಷ ಕಲೆಕ್ಷನ್ ಉತ್ತಮ ಎನ್ನುತ್ತಿವೆ ವಿತರಕರ ಮೂಲಗಳು.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications