Peddi Box Office Day 1 Prediction:ಮೊದಲ ದಿನವೇ ಎರಡು ಅಂಕಿಗಳ ಓಪನಿಂಗ್; ಎಷ್ಟು ಕೋಟಿ ಆಗಬಹುದು?

ಐಪಿಎಲ್ ಮುಗಿಯುತ್ತಿದ್ದಂತೆ ಬಾಕ್ಸಾಫೀಸ್‌ನಲ್ಲಿ ಮತ್ತೆ ಸದ್ದು ಕೇಳಿಸೋಕೆ ಶುರುವಾಗಿದೆ. ಒಂದೊಂದೇ ಸಿನಿಮಾಗಳು ಅಖಾಡಕ್ಕೆ ಇಳಿಯುವುದಕ್ಕೆ ರೆಡಿಯಾಗಿವೆ. ಗ್ಲೋಬಲ್ ಸ್ಟಾರ್ ರಾಮ್ ಚರಣ್ ಸಿನಿಮಾ 'ಪೆದ್ದಿ' ಮೂಲಕ ಆರಂಭ ಆಗುತ್ತಿರೋದು ಇನ್ನೊಂದು ವಿಶೇಷ. ತೆಲುಗು ಚಿತ್ರರಂಗದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಇದು ಕೂಡ ಒಂದು. 'ಪುಷ್ಪ' ಸಿನಿಮಾದ ನಿರ್ದೇಶಕ ಸುಕುಮಾರ್ ಶಿಷ್ಯ ಆಕ್ಷನ್ ಕಟ್‌ ಹೇಳಿರೋದು ಮತ್ತೊಂದು ಹೈಲೈಟ್.

ಎಲ್ಲಕ್ಕಿಂತ ಹೆಚ್ಚಾಗಿ ಈ ರಾಮ್ ಚರಣ್ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿರೋದು ದೊಡ್ಡ ಹೈಪ್ ಅನ್ನು ಕ್ರಿಯೇಟ್ ಮಾಡಿದೆ. ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸಿರುವ ಈ ಆಕ್ಷನ್-ಸ್ಪೋರ್ಟ್ಸ್ ಡ್ರಾಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

Ram Charan Janhvi Kapoor Shivarajkumar movie Peddi Box Office Day 1 prediction

'ಪೆದ್ದಿ' ಈಗಾಗಲೇ ಪೇಯ್ಡ್ ಪ್ರೀಮಿಯರ್ ಕಂಡಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಮುಂಗಡ ಟಿಕೆಟ್ ಬುಕಿಂಗ್ ಹಾಗೂ ಕ್ರೇಜ್ ನೋಡಿದರೆ, ಸಿನಿಮಾ ಮೊದಲ ದಿನವೇ ವರ್ಲ್ಡ್‌ ವೈಡ್ ಬಾಕ್ಸ್ ಆಫೀಸ್‌ನಲ್ಲಿ ಅತೀ ದೊಡ್ಡ ಓಪನಿಂಗ್ ಸಿಗುವ ನಿರೀಕ್ಷೆಗಳಿವೆ. ಹಾಗಿದ್ದರೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಹಾಕಿರುವ ಲೆಕ್ಕಾಚಾರ ಏನು? ಮೊದಲ ದಿನ ಎಷ್ಟು ಕಲೆಕ್ಷನ್ ಆಗಬಹುದು? ತಿಳಿಯುವುದಕ್ಕೆ ಮುಂದೆ ಓದಿ.

ಮೊದಲ ದಿನದ ಬಾಕ್ಸಾಫೀಸ್ ಲೆಕ್ಕಾಚಾರವೇನು?

ಸಿನಿಮಾ ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 'ಪೆದ್ದಿ' ಮೊದಲ ದಿನದ ವರ್ಲ್ಡ್‌ವೈಟ್ ಕಲೆಕ್ಷನ್ ಸುಲಭವಾಗಿ ಎರಡಂಕಿ ದಾಟಲಿದೆ. ಸಿನಿಮಾ ಟ್ರ್ಯಾಕರ್ 'ಸ್ಯಾಕ್ನಿಲ್ಕ್'(Sacnilk) ಈ ಸಿನಿಮಾ ಮೊದಲ ದಿನ ಅಂದಾಜು 35 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಬಹುದು. ಆರಂಭಿಕ ಹಂತದ ಬುಕಿಂಗ್‌ನಲ್ಲಿ ಸುಮಾರು 8.55 ಕೋಟಿ ರೂ. ಗಳಿಸಿದ್ದರೆ, ಬಿಡುಗಡೆ ಒಂದು ಮುನ್ನ ಅಡ್ವಾನ್ಸ್ ಬುಕಿಂಗ್ 13.50 ಕೋಟಿ ರೂಪಾಯಿಗೂ ಹೆಚ್ಚಿತ್ತು.

Also Read
Peddi Movie Review:ಕ್ರೀಡೆ ಮತ್ತು ಭಾವನೆಗಳ ಅದ್ಭುತ ಸಂಗಮ.. ರಾಮ್ ಚರಣ್-ಶಿವಣ್ಣ ಕಾಂಬೋನೇ ಕಿಕ್!
Peddi Movie Review:ಕ್ರೀಡೆ ಮತ್ತು ಭಾವನೆಗಳ ಅದ್ಭುತ ಸಂಗಮ.. ರಾಮ್ ಚರಣ್-ಶಿವಣ್ಣ ಕಾಂಬೋನೇ ಕಿಕ್!

5 ಭಾಷೆಯಲ್ಲಿ 'ಪೆದ್ದಿ' ರಿಲೀಸ್

'ಪೆದ್ದಿ' ಸಿನಿಮಾ ಐದು ಪ್ರಮುಖ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ತೆಲುಗು ಪ್ರಮುಖ ಭಾಷೆಯಾಗಿದ್ದರೂ, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿದೆ. ಮೊದಲ ದಿನ ಭಾರತದಾದ್ಯಂತ ಸುಮಾರು 4,248 ಪ್ರದರ್ಶನಗಳನ್ನು ಕಾಣುತ್ತಿದೆ ಎಂದು ಟೈಮ್ಸ್ ನೌ ಹಿಂದಿ ವರದಿ ಮಾಡಿದೆ. ಇದರಲ್ಲಿ ತೆಲುಗು ವರ್ಷನ್‌ಗೆ 2,809 ಶೋಗಳು, ಹಿಂದಿಗೆ 1,073 ಶೋಗಳು, ತಮಿಳಿಗೆ 235 ಶೋಗಳು, ಕನ್ನಡಕ್ಕೆ 54 ಶೋಗಳು ಮತ್ತು ಮಲಯಾಳಂ ಆವೃತ್ತಿಗೆ 77 ಶೋ ನೀಡಲಾಗಿದೆ. ತೆಲುಗು ವರ್ಷನ್‌ನಿಂದ ಈಗಾಗಲೇ ಸುಮಾರು 28 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಸೇಲ್ ಆಗಿವೆ.

Ram Charan Janhvi Kapoor Shivarajkumar movie Peddi Box Office Day 1 prediction

4 ದಿನಗಳಲ್ಲಿ 100 ಕೋಟಿ?

ಒಂದು ವೇಳೆ ರಾಮ್ ಚರಣ್ ಸಿನಿಮಾ ಮೊದಲ ದಿನ 35 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದರೆ, ಮೊದಲ ವೀಕೆಂಡ್‌ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡೋದು ಗ್ಯಾರಂಟಿ. ತೆಲುಗು ಸಿನಿಮಾಗಳು ಅಮೆರಿಕ, ಆಸ್ಟ್ರೇಲಿಯಾ, ದುಬೈ ಹಾಗೂ ಅರಬ್ ದೇಶಗಳಲ್ಲಿ ಉತ್ತಮ ಪ್ರದರ್ಶನವನ್ನು ಕಾಣುತ್ತವೆ. ಹೀಗಾಗಿ ಸಿನಿಮಾ ಕಲೆಕ್ಷನ್ ಉತ್ತಮವಾಗಿ ಆಗಬಹುದೆಂದು ಹೇಳಲಾಗಿದೆ.

'ಪೆದ್ದಿ' ಹೈಲೈಟ್ ಏನು?

'ಪೆದ್ದಿ' ಸಿನಿಮಾದ ಹೈಲೈಟ್ ರಾಮ್ ಚರಣ್ ಪರ್ಫಾಮೆನ್ಸ್. ಆಕ್ಷನ್ ಸೀನ್‌ಗಳಲ್ಲಿ, ಭಾವನಾತ್ಮಕ ದೃಶ್ಯಗಳಲ್ಲಿ ಮಿಂಚಿದ್ದಾರೆ. ಇವರೊಂದಿಗೆ ಕುಸ್ತಿಯ ತರಬೇತುದಾರನಾಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ಅತೀ ಸಮಯ ಶಿವಣ್ಣನನ್ನು ನೋಡಬಹುದಾಗಿದೆ. ರಾಮ್ ಚರಣ್-ಜಾಹ್ನವಿ ಕಪೂರ್ ಜೋಡಿ, ಎ.ಆರ್. ರೆಹಮಾನ್ ಮ್ಯೂಸಿಕ್ ಹಾಗೂ ರತ್ನವೇಲು ಕ್ಯಾಮರಾ ವರ್ಕ್ ಈ ಸಿನಿಮಾದ ಹೈಲೈಟ್ಸ್.

English summary
Ram Charan, Janhvi Kapoor, Shivarajkumar movie Peddi Box Office Day 1 prediction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X