Peddi Karnataka Box office Day 7:7 ದಿನಗಳಲ್ಲಿ 'ಪೆದ್ದಿ' ಕರ್ನಾಟಕದಲ್ಲಿ ಚಿಂದಿ? ಕನ್ನಡ ವರ್ಷನ್‌ಗೆ ಭರ್ಜರಿ ರೆಸ್ಪಾನ್ಸ್

ಈ ತಿಂಗಳ ಆರಂಭದಲ್ಲಿ ರಿಲೀಸ್ ಅಗಿದ್ದ ಪ್ಯಾನ್ ಇಂಡಿಯಾ ಸಿನಿಮಾ 'ಪೆದ್ದಿ'. ರಾಮ್ ಚರಣ್, ಜಾಹ್ನವಿ ಕಪೂರ್, ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಜೂನ್ 4 ರಂದು ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಮೊದಲ ನಾಲ್ಕು ದಿನ ಬಾಕ್ಸಾಫೀಸ್‌ನಲ್ಲಿ ಭರ್ಜರಿ ರೆಸ್ಪಾನ್ಸ್ ಗಳಿಸಿತ್ತು. ಆದರೆ, ಐದನೇ ದಿನದಿಂದ ಸಿನಿಮಾದ ಕಲೆಕ್ಷನ್‌ನಲ್ಲಿ ಡ್ರಾಪ್ ಕಂಡಿದೆ.

'ಪುಷ್ಪ' ಸಿನಿಮಾದ ನಿರ್ದೇಶಕ ಸುಕುಮಾರ್ ಅವರ ಶಿಪ್ಯ ಬುಚ್ಚಿ ಬಾಬು ಸನಾ 'ಪೆದ್ದಿ'ಗೆ ಆಕ್ಷನ್ ಕಟ್ ಹೇಳಿದ್ದು, ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡಿತ್ತು. ಕರ್ನಾಟಕದಲ್ಲೂ ಈ ಸಿನಿಮಾಗೆ ಕ್ರೇಜ್ ದುಪ್ಪಟ್ಟಾಗಿತ್ತು. ಅದಕ್ಕೆ ಕಾರಣ ಶಿವಣ್ಣ. ಈ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಗೌರ್ ನಾಯ್ಡು ಪಾತ್ರದಲ್ಲಿ ನಟಿಸಿದ್ದರು. ರಾಮ್ ಚರಣ್ ಹಾಗೂ ಶಿವಣ್ಣ ಇಬ್ಬರನ್ನೂ ಒಂದೇ ಫ್ರೇಮ್‌ನಲ್ಲಿ ನೋಡುವುದಕ್ಕೆ ಕಾತುರರಾಗಿದ್ದರು.

Ram Charan Janhvi Kapoor Shivarajkumar movie Peddi Day 7 Karnataka Box office report

ಕರ್ನಾಟಕದಲ್ಲಿ 'ಪೆದ್ದಿ' ಸಿನಿಮಾ ಕಲೆಕ್ಷನ್‌ ಮೇಲೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಕಣ್ಣಿಟ್ಟಿದ್ದರು. ಕಳೆದ 7 ದಿನಗಳಲ್ಲಿ ಈ ಸಿನಿಮಾ ಕರ್ನಾಟಕದಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಆದರೆ, 6ನೇ ದಿನದಿಂದ ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ ದಿಢೀರನೇ ಕುಸಿತ ಕಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ವರ್ಷನ್‌ಗೆ ಗಲ್ಲಾಪೆಟ್ಟಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಹಾಗಿದ್ದರೆ, 'ಪೆದ್ದಿ' ಈ 7 ದಿನಗಳಲ್ಲಿ ಆದ ಕಲೆಕ್ಷನ್ ಎಷ್ಟು? ವಿಶ್ವದಾದ್ಯಂತ ಎಷ್ಟು ಗಳಿಕೆ ಕಂಡಿದೆ? ಅಂಕಿ-ಅಂಶಗಳ ಲಿಸ್ಟ್ ಇಲ್ಲಿದೆ.

'ಪೆದ್ದಿ' ಕರ್ನಾಟಕ ಕಲೆಕ್ಷನ್ ಎಷ್ಟು?

ರಾಮ್ ಚರಣ್, ಜಾಹ್ನವಿ ಕಪೂರ್, ಶಿವಣ್ಣ ಸಿನಿಮಾ 'ಪೆದ್ದಿ' ಕರ್ನಾಟಕದಲ್ಲಿ ಎರಡು ಪ್ರಮುಖ ಭಾಷೆಗಳಲ್ಲಿ ರಿಲೀಸ್ ಆಗಿತ್ತು. ತೆಲುಗು ಪ್ರಮುಖ ಭಾಷೆಯಲ್ಲಿ ರಿಲೀಸ್ ಆಗಿದ್ದರೆ, ಕನ್ನಡದಲ್ಲೂ ಸುಮಾರು 125ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕರ್ನಾಟಕದ ವಿತರಕರ ವಲಯದಿಂದ ಸಿಕ್ಕಿರೋ ಮಾಹಿತಿ ಪ್ರಕಾರ, ಈ ಸಿನಿಮಾದ ತೆಲುಗು ವರ್ಷನ್ ಕಳೆದ 7 ದಿನಗಳಲ್ಲಿ 16 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

Also Read
Peddi Karnataka Boxoffice: ಕರ್ನಾಟಕದಲ್ಲಿ ತಂದೆ 'ವರಪ್ರಸಾದ್' ದಾಖಲೆ ಮುರಿದ 'ಪೆದ್ದಿ'; ಕನ್ನಡ ವರ್ಷನ್ ಗಳಿಸಿದ್ದೆಷ್ಟು?
Peddi Karnataka Boxoffice: ಕರ್ನಾಟಕದಲ್ಲಿ ತಂದೆ 'ವರಪ್ರಸಾದ್' ದಾಖಲೆ ಮುರಿದ 'ಪೆದ್ದಿ'; ಕನ್ನಡ ವರ್ಷನ್ ಗಳಿಸಿದ್ದೆಷ್ಟು?

'ಪೆದ್ದಿ' ಕನ್ನಡ ವರ್ಷನ್ ಕಲೆಕ್ಷನ್

'ಪೆದ್ದಿ' ಕನ್ನಡದಲ್ಲಿಯೂ ರಿಲೀಸ್ ಆಗಿತ್ತು. ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವುದರಿಂದ ಕನ್ನಡಿಗರು ಸಿನಿಮಾ ನೋಡಬಹುದೆಂಬ ನಿರೀಕ್ಷೆಯಲ್ಲಿ ಕನ್ನಡ ಅವತರಣಿಕೆಯನ್ನು ರಿಲೀಸ್ ಮಾಡಲಾಗಿತ್ತು. ಇದಕ್ಕೆ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡ ಡಬ್ ವರ್ಷನ್ ವೀಕೆಂಡ್‌ನಲ್ಲಿ ಉತ್ತಮ ಗಳಿಕೆ ಕಂಡಿದ್ದು, ಕರ್ನಾಟಕದ ವಿತರಕರ ವಲಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ, 7ನೇ ದಿನಗಳಲ್ಲಿ 1 ಕೋಟಿ ರೂಪಾಯಿ (Net) ಕಲೆಕ್ಷನ್ ಆಗಿದೆ.

Ram Charan Janhvi Kapoor Shivarajkumar movie Peddi Day 7 Karnataka Box office report

ವಿಶ್ವದಾದ್ಯಂತ ಕಲೆಕ್ಷನ್ ಎಷ್ಟು?

'ಪೆದ್ದಿ' ಸಿನಿಮಾ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಬಾಕ್ಸಾಫೀಸ್‌ ಅಂಕಿ-ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ ಪ್ರಕಾರ, ಈ ಸಿನಿಮಾ 7,535 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕಳೆದ ಏಳು ದಿನಗಳಲ್ಲಿ ಭಾರತದಾದ್ಯಂತ ₹187.25 ಕೋಟಿ ಕಲೆಕ್ಷನ್ (Net) ಮಾಡಿದೆ. 7ನೇ ದಿನ ಸಿನಿಮಾದ ಕಲೆಕ್ಷನ್ 7.55 ಕೋಟಿ ರೂಪಾಯಿಗೆ ಇಳಿದಿದೆ.

ಪೇಯ್ಸ್ ಪ್ರೀಮಿಯರ್-₹18.50 ಕೋಟಿ
1ನೇ ದಿನ-₹51.00 ಕೋಟಿ
2ನೇ ದಿನ-₹26.90 ಕೋಟಿ
3ನೇ ದಿನ-₹29.10 ಕೋಟಿ
4ನೇ ದಿನ-₹32.15 ಕೋಟಿ
5ನೇ ದಿನ-₹12.35 ಕೋಟಿ
6ನೇ ದಿನ-₹9.70 ಕೋಟಿ
7ನೇ ದಿನ-₹7.55 ಕೋಟಿ
ಒಟ್ಟು-₹187.25 ಕೋಟಿ (Net)

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
Ram Charan, Janhvi Kapoor, Shivarajkumar movie Peddi Day 7 Karnataka Box office report. After 7 days Peddi movie collection drops in box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X