Peddi Box Office Day 1:ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ 'ಸೆಂಚುರಿ': ರಾಮ್ ಚರಣ್ 'ಪೆದ್ದಿ' ಲೂಟಿ ಮಾಡಿದ್ದೆಷ್ಟು?
ಟಾಲಿವುಡ್‌ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟಿಸಿದ ಬಹು ನಿರೀಕ್ಷಿತ ಸಿನಿಮಾ 'ಪೆದ್ದಿ' ಜೂನ್ 4 ರಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ ಬಹುನಿರೀಕ್ಷಿತ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾದಲ್ಲಿ ಜಾಹ್ನವಿ ಕಪೂರ್ ಹಾಗೂ ಶಿವರಾಜ್‌ಕುಮಾರ್ ಪಾತ್ರಗಳು ಕೂಡ ಪ್ರಮುಖ ಆಕರ್ಷಣೆಯಾಗಿದೆ. 'ಪೆದ್ದಿ' ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ಇತಿಹಾಸ ಸೃಷ್ಟಿಸಿದೆ.
ವಿಶ್ವದಾದ್ಯಂತ ತೆರೆಕಂಡ 'ಪೆದ್ದಿ' ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 100 ಕೋಟಿ ರೂಪಾಯಿಗಳ ಗಡಿ ದಾಟಿದೆ. ವಿಶ್ವದಾದ್ಯಂತ ಈ ಸಿನಿಮಾ ನೂರು ಕೋಟಿಯ ಗಡಿ ದಾಟುವ ಮೂಲಕ ಹೊಸ ದಾಖಲೆಯನ್ನೇ ಬರೆದಿದೆ.

ಬಾಕ್ಸಾಫೀಸ್ ಟ್ರೇಡ್ ವರದಿ ಮಾಡುವ 'ಪೆದ್ದಿ' ಜೂನ್ 3ರ ರಾತ್ರಿ ನಡೆದ ಪೇಯ್ಡ್ ಪ್ರೀಮಿಯರ್ ಶೋಗಳಲ್ಲೇ ಭರ್ಜರಿ ಕಲೆಕ್ಷನ್ ಮಾಡಿದೆ. ಸ್ಯಾಕ್ನಿಲ್ಕ್ ಪ್ರಕಾರ 'ಪೆದ್ದಿ' ಸಿನಿಮಾ ಮೊದಲ ದಿನವೇ ವಿಶ್ವದಾದ್ಯಂತ ಒಟ್ಟು ₹112.49 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಆ ಮೂಲಕ ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿದ ಭಾರತದ 11ನೇ ತೆಲುಗು ಸಿನಿಮಾ ಎನಿಸಿಕೊಂಡಿದೆ.
ಮೊದಲ ದಿನದ ಕಲೆಕ್ಷನ್
'ಪೆದ್ದಿ' ರಾಜಮೌಳಿ ನಿರ್ದೇಶನದ RRR ಸಿನಿಮಾದ ಬಳಿಕ ರಾಮ್ ಚರಣ್ ವೃತ್ತಿಜೀವನದಲ್ಲೇ ಅತೀ ದೊಡ್ಡ ಓಪನಿಂಗ್ ಪಡೆದ ಸಿನಿಮಾವಾಗಿ ಹೊರಹೊಮ್ಮಿದೆ. ವಿಶ್ವದಾದ್ಯಂತ ಈ ಸಿನಿಮಾ ಕಲೆಕ್ಷನ್ ಭರ್ಜರಿಯಾಗಿದ್ದು, ಮಿಶ್ರ ಪ್ರತಿಕ್ರಿಯೆಯ ಹೊರತಾಗಿಯೂ ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. 'ಪೆದ್ದಿ' ಕಲೆಕ್ಷನ್ ವಿವರ ಹೀಗಿದೆ.
ಭಾರತದ ಕಲೆಕ್ಷನ್ (India Gross)- ₹82.49 ಕೋಟಿ
ಭಾರತದ ನಿವ್ವಳ ಕಲೆಕ್ಷನ್ (India Net)- ₹69.50 ಕೋಟಿ
ಓವರ್ ಸೀಸ್ ಕಲೆಕ್ಷನ್ (Overseas Gross)- ₹30.00 ಕೋಟಿ
ವಿಶ್ವದಾದ್ಯಂತ ಒಟ್ಟು ಕಲೆಕ್ಷನ್ (Worldwide Gross)-₹112.49 ಕೋಟಿ
ತೆಲುಗು ರಾಜ್ಯಗಳಲ್ಲಿ ಹೇಗಿದೆ ಕಲೆಕ್ಷನ್?
ನಟ ರಾಮ್ ಚರಣ್ ಸಿನಿಮಾ 'ಪೆದ್ದಿ' ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಎರಡು ತೆಲುಗು ರಾಜ್ಯಗಳಿಂದಲೇ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಬರೋಬ್ಬರಿ ₹48 ಕೋಟಿ (Gross) ಕಲೆಕ್ಷನ್ ಮಾಡಿದೆ. ಇದರಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ ಭಾರತದಲ್ಲಿ ₹20 ಕೋಟಿಗೂ ಅಧಿಕ ಕಲೆಕ್ಷನ್ ಬಂದಿದೆ ಎನ್ನಲಾಗಿದೆ.

ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು ಕಲೆಕ್ಷನ್?
'ಪೆದ್ದಿ' ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿದೆ. ಹೀಗಾಗಿ ಮೊದಲ ದಿನದ ಭಾರತದಾದ್ಯಂತ ಭಾಷಾವಾರು ಕಲೆಕ್ಷನ್ ಹೀಗಿದೆ.
ಕನ್ನಡ ವರ್ಷನ್: ₹25 ಲಕ್ಷ
ತೆಲುಗು ವರ್ಷನ್: ₹47.20 ಕೋಟಿ
ಹಿಂದಿ ವರ್ಷನ್: ₹3.00 ಕೋಟಿ
ತಮಿಳು ವರ್ಷನ್: ₹45 ಲಕ್ಷ
ಮಲಯಾಳಂ ವರ್ಷನ್: ₹10 ಲಕ್ಷ
'ಪುಷ್ಪ' ನಿರ್ದೇಶಕ ಸುಕುಮಾರ್ ಶಿಷ್ಯ ಬುಚ್ಚಿ ಬಾಬು ಸನಾ 'ಪೆದ್ದಿ'ಗೆ ಆಕ್ಷನ್ ಕಟ್ ಹೇಳಿದ್ದಾರೆ. ರಾಮ್ ಚರಣ್ ಹಾಗೂ ಶಿವರಾಜ್‌ಕುಮಾರ್ ಕಾಂಬಿನೇಷನ್ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿದೆ. ಹಾಗೇ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಿನಿಮಾದ ಹೈಲೈಟ್. ಕುಸ್ತಿಯ ದೃಶ್ಯಗಳು ಹಾಗೂ ರಾಮ್ ಚರಣ್ ನಟನೆಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications
