Mardaani 3 Day 1 Box Office: ರಾಣಿ ಮುಖರ್ಜಿಯ 'ಮರ್ದಾನಿ' ಮೊದಲ ದಿನ ಕಲೆಕ್ಷನ್ ಎಷ್ಟು?
2026 ಅನ್ನು ಬಾಲಿವುಡ್ ಶುಭಾರಂಭ ಮಾಡಿದೆ. 'ಬಾರ್ಡರ್ 2' ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇರಲಿಲ್ಲ. ಆದರೂ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡಿತ್ತು. ಹೊಸ ವರ್ಷದ ಮೊದಲ ತಿಂಗಳಲ್ಲಿಯೇ ಬಾಲಿವುಡ್‌ಗೆ ಬ್ಲಾಕ್ ಬಸ್ಟರ್ ಸಿನಿಮಾ ನೀಡುವಲ್ಲಿ ಯಶಸ್ವಿ ಆಯ್ತು. ಇದರ ಹಿಂದೇನೆ ನಟಿ ರಾಣಿ ಮುಖರ್ಜಿಯ 'ಮರ್ದಾನಿ 3' ರಿಲೀಸ್ ಆಗಿದೆ.
ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್, ಅಹಾನ್ ಶೆಟ್ಟಿಯ 'ಬಾರ್ಡರ್ 2' ಸಿನಿಮಾದ ಸದ್ದುಗದ್ದಲದ ನಡುವೆಯೇ 'ಮರ್ದಾನಿ 3' ರಿಲೀಸ್ ಆಗಿತ್ತು. ಆದರೆ, ಮೊದಲ ದಿನವೇ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಡುಗಡೆಗೂ ಮುನ್ನವೇ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿತ್ತು. ಆದರೆ, ಅದಕ್ಕೂ ನಿರೀಕ್ಷಿತ ಮಟ್ಟಕ್ಕೆ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.

'ಮರ್ದಾನಿ 3' ರಾಣಿ ಮುಖರ್ಜಿ ನಟನೆ ಸೀಕ್ವಲ್ ಸಿನಿಮಾ. 2014ರಲ್ಲಿ 'ಮರ್ದಾನಿ' ಮೊದಲು ರಿಲೀಸ್ ಆಗಿತ್ತು. ನಂತರ ಎರಡನೇ ಸೀಕ್ವೆಲ್ 2019ರಲ್ಲಿ ರಿಲೀಸ್ ಆಗಿತ್ತು. ಎರಡು ಸಿರೀಸ್‌ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಮೂರನೇ ಸೀರಿಸ್ ಮೇಲೂ ಸಾಕಷ್ಟು ನಿರೀಕ್ಷೆಯಿದೆ. ಇಷ್ಟೆಲ್ಲ ಇದ್ದರೂ 'ಮರ್ದಾನಿ 3' ಮೊದಲ ದಿನದ ಕಲೆಕ್ಷನ್ ಹೇಗಿದೆ? ಎಲ್ಲೆಲ್ಲಿ ರೆಸ್ಪಾನ್ಸ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಮರ್ದಾನಿ 3' ಫಸ್ಟ್ ಡೇ ಕಲೆಕ್ಷನ್ ಎಷ್ಟು?
ಮೂರು ವರ್ಷಗಳ ಬಳಿಕ ರಾಣಿ ಮುಖರ್ಜಿ ಸಿನಿಮಾ ರಿಲೀಸ್ ಆಗಿದೆ. ಪತಿ ಆದಿತ್ಯ ಛೋಪ್ರಾ ನಿರ್ಮಿಸಿರುವ ಈ ಸಿನಿಮಾವನ್ನು ಅಭಿರಾಜ್ ಮಿನವಾಲಾ ನಿರ್ದೇಶನ ಮಾಡಿದ್ದಾರೆ. ಅಡ್ವಾನ್ಸ್ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಸಿಗದೇ ಹೋದರೂ, ಮಹಿಳಾ ಪ್ರಧಾನ ಸಿನಿಮಾ 'ಮರ್ದಾನಿ 3' ಕಲೆಕ್ಷನ್ ಸಾಧಾರಾಣವಾಗಿದೆ. ಬಾಕ್ಸ್ ಆಫೀಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ ಮೊದಲ ದಿನ ಈ ಸಿನಿಮಾದ ಕಲೆಕ್ಷನ್ ₹3.8 ಕೋಟಿ (Net) ಆಗಿದೆ. ಇದು ಸಾಧಾರಣ ಓಪನಿಂಗ್ ಎಂದೇ ಹೇಳಲಾಗುತ್ತಿದೆ.
ಬಜೆಟ್,ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟು?
ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ 'ಮರ್ದಾನಿ 3' ಸಿನಿಮಾವನ್ನು ಸುಮಾರು ₹60 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಈ ಸಿನಿಮಾದ ಕಲೆಕ್ಷನ್ ವೀಕೆಂಡ್‌ನಲ್ಲಿ ಅದ್ಭುತವಾಗಿದ್ದರೆ, ಬಜೆಟ್ ರಿಕವರಿ ಸಾಧ್ಯ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕುತ್ತಿದ್ದಾರೆ. ಮೊದಲ ವರ್ಲ್ಡ್‌ವೈಡ್ ಕಲೆಕ್ಷನ್ ₹5.5 ಕೋಟಿ ಕಲೆಕ್ಷನ್ ಆಗಿದ್ದು, ₹60 ಕೋಟಿಗೂ ಅಧಿಕ ಗಳಿಸುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

'ಮರ್ದಾನಿ', 'ಮರ್ದಾನಿ 2' ಕಲೆಕ್ಷನ್ ಎಷ್ಟು?
ರಾಣಿ ಮುಖರ್ಜಿಯ 'ಮರ್ದಾನಿ' ಫ್ರಾಂಚೈಸಿ 2014ರಲ್ಲಿ ಶುರುವಾಗಿತ್ತು. ದಿವಂಗತ ಪ್ರದೀಪ್ ಸರ್ಕಾರ್ ನಿರ್ದೇಶನದ ಈ ಸಿನಿಮಾ ₹21 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿತ್ತು. ಹಾಗೇ ಬಾಕ್ಸಾಫೀಸ್‌ನಲ್ಲಿ ₹59.55 ಕೋಟಿ ಗಳಿಸಿತ್ತು. 2019ರಲ್ಲಿ 'ಮರ್ದಾನಿ 2' ರಿಲೀಸ್ ಆಗಿತ್ತು. ಇದು ₹27 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಆಗಿತ್ತು. ಇದು ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು ₹67.12 ಕೋಟಿ. ಹೀಗಾಗಿ ಈಗ 'ಮರ್ದಾನಿ 3' ಕಲೆಕ್ಷನ್ ಮೇಲೆ ಕಣ್ಣಿದೆ. ಒಂದು ಲೆಕ್ಕಾಚಾರದ ಪ್ರಕಾರ ಬಾಕ್ಸಾಫೀಸ್‌ನಲ್ಲಿ ₹100 ಕೋಟಿ ಆದರೂ ಕಲೆಕ್ಷನ್ ಆಗಲೇ ಬೇಕಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











