Elumale Box Office Day 10: 10ನೇ ದಿನ ಚಿರುಗಿದ 'ಏಳುಮಲೆ'; ವೀಕೆಂಡ್‌ನಲ್ಲಿ ಹೇಗಿತ್ತು ಕಲೆಕ್ಷನ್?

ಕನ್ನಡ ಚಿತ್ರರಂಗದಿಂದ ಈ ವಾರ ನಿರೀಕ್ಷಿತ ಸಿನಿಮಾಗಳಿಲ್ಲ. ಎಲ್ಲರೂ ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾಗಾಗಿಯೇ ಕಾಯುತ್ತಿದ್ದಾರೆ. ಅದು ಬಿಟ್ಟರೆ, ಸದ್ಯ ಟ್ರೆಂಡಿಂಗ್‌ನಲ್ಲಿರುವ ಸಿನಿಮಾ ಅಂದರೆ 'ಏಳುಮಲೆ'. ಬಾಕ್ಸಾಫೀಸ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡುತ್ತಿರುವ ಈ ಸಿನಿಮಾ ಈ ವರ್ಷ ತೆರೆಕಂಡ ಬೆಸ್ಟ್ ಸಿನಿಮಾಗಳಲ್ಲಿ ಒಂದಾಗಿದೆ. 'ಸು ಫ್ರಮ್ ಸೋ' ಬಳಿಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಒಳ್ಳೆಯ ಸಿನಿಮಾ ಬಂದಿದೆ.

'ಏಳುಮಲೆ' ಬಿಡುಗಡೆಯಾದಲ್ಲಿಂದ ಇಲ್ಲಿವರೆಗೂ ಬಾಕ್ಸಾಫೀಸ್‌ನಲ್ಲಿ ಸ್ಟಡಿಯಾಗಿ ಮುನ್ನುಗ್ಗುತ್ತಿದೆ. ವೀಕೆಂಡ್‌ನಲ್ಲಿ ಕಲೆಕ್ಷನ್ ಸ್ವಲ್ಪ ಜಾಸ್ತಿಯಾಗುತ್ತಿದೆ. ಇನ್ನು ವೀಕ್‌ಡೇಸ್‌ನಲ್ಲಿ ಒಂದೇ ತರಹದ ಕಲೆಕ್ಷನ್ ಇದ್ದು, ನಿಧಾನವಾಗಿ ಬಾಕ್ಸಾಫೀಸ್‌ನಲ್ಲಿ ಮೇಲೇರುತ್ತಿದೆ. ಇದೊಂದು ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಆಗಿರುವುದರಿಂದ 'ಏಳುಮಲೆ' ಕಲೆಕ್ಷನ್ ನಿಧಾನಗತಿಯಲ್ಲಿ ಸಾಗುತ್ತಿದೆ. ಹಾಗಂತ ಹೊಸಬರ ಸಿನಿಮಾವೊಂದು ಈ ಮಟ್ಟಿಗೆ ಕಲೆಕ್ಷನ್ ಮಾಡುತ್ತಿರೋದು ಸಿನಿಮಾ ಮಂದಿಗೆ ಸಮಾಧಾನ ತಂದಿದೆ.

Ranna Priyanka Achar starrer Elumale movie day 10 Box office collection report

ಸಿನಿಮಾ ಮೇಕಿಂಗ್ ದೃಷ್ಠಿಯಿಂದ ಪಾಸಿಟಿವ್ ಆಗಿದೆ. ಅದಕ್ಕೆ ತಕ್ಕಂತೆ ಬಾಕ್ಸಾಫೀಸ್‌ನಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಬೇಕಿತ್ತು. ಒಂದು ಒಳ್ಳೆಯ ಸಿನಿಮಾದ ಕಲೆಕ್ಷನ್ ಈಗಾಗಲೇ ಕೋಟಿ ದಾಟಬೇಕಿತ್ತು. ಆದರೆ, ಹಾಗಾಗುತ್ತಿಲ್ಲ. ನಿನ್ನೆ ಭಾನುವಾರ ಅಂದರೆ, 10ನೇ ದಿನ ಈ ಸಿನಿಮಾದ ಕಲೆಕ್ಷನ್‌ನಲ್ಲಿ ಸ್ವಲ್ಪ ಏರಿಯಾಗಿದ್ದು, ₹4 ಕೋಟಿಯತ್ತ ಮುನ್ನುಗ್ಗುತ್ತಿದೆ.

'ಏಳುಮಲೆ' 10ನೇ ದಿನದ ಕಲೆಕ್ಷನ್ ಎಷ್ಟು?

'ಏಳುಮಲೆ' ರಿಲೀಸ್ ಆಗಿದೆ ಇಂದಿಗೆ (ಸೆಪ್ಟೆಂಬರ್ 15) 11ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆವರೆಗೂ ತರುಣ್ ಸುಧೀರ್ ನಿರ್ಮಿಸಿದ 'ಏಳುಮಲೆ' ಕಲೆಕ್ಷನ್ ಸಮಾಧಾನ ತಂದಿದೆ. 10ನೇ ದಿನವಾದ ನಿನ್ನೆ ಸ್ಯಾಕ್ನಿಲ್ಕ್ ಪ್ರಕಾರ, ನಿನ್ನೆ ಅಂದರೆ ಸಿನಿಮಾ ತೆರೆಕಂಡ ಎರಡನೇ ಭಾನುವಾರದಂದು 40 ಲಕ್ಷ ರೂಪಾಯಿ (Net) ಕಲೆಕ್ಷನ್ ಮಾಡಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳು ವೀಕೆಂಡ್‌ನಲ್ಲಿ ₹50 ಲಕ್ಷ ಆಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಹಾಕಿದ ಲೆಕ್ಕಾಚಾರಕ್ಕಿಂತ ಸ್ವಲ್ಪ ಕಡಿಮೆ ಕಲೆಕ್ಷನ್ ಆಗಿದೆ.

10 ದಿನಗಳಲ್ಲಿ ಎಷ್ಟು ಗಳಿಕೆ ಕಂಡಿದೆ?

ರಾಣಾ, ಪ್ರಿಯಾಂಕಾ ಆಚಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ 10 ದಿನಗಳಲ್ಲಿ ₹3.63 ಕೋಟಿ (Gross) ಕಲೆಕ್ಷನ್ ಮಾಡಿದೆ. ಇನ್ನು Net ಕಲೆಕ್ಷನ್ ₹3.22 ಕೋಟಿ ಎಂದು ಸ್ಯಾಕ್ನಿಲ್ಕ್ ಹೇಳಿಕೊಂಡಿದೆ. ಭಾನುವಾರ ವೀಕೆಂಡ್ ಆಗಿದ್ದರಿಂದ ನಿರೀಕ್ಷೆ ಹೆಚ್ಚಿತ್ತು. ಆದರೂ, ಶನಿವಾರಕ್ಕೆ ಹೋಲಿಕೆ ಮಾಡಿದರೆ ₹16 ಲಕ್ಷ ಹೆಚ್ಚು ಕಲೆಕ್ಷನ್ ಮಾಡಿದೆ ಎಂದೇ ಹೇಳಬಹುದು. ಒಟ್ಟು 10 ದಿನಗ ಕಲೆಕ್ಷನ್ ನೋಡುವುದಾರೇ,

Ranna Priyanka Achar starrer Elumale movie day 10 Box office collection report

ಏಳುಮಲೆ 10 ದಿನಗಳ ಕಲೆಕ್ಷನ್

ಮೊದಲ ದಿನ ₹27 ಲಕ್ಷ
ಎರಡನೇ ದಿನ ₹34 ಲಕ್ಷ
ಮೂರನೇ ದಿನ ₹66 ಲಕ್ಷ
ನಾಲ್ಕನೇ ದಿನ ₹32 ಲಕ್ಷ
ಐದನೇ ದಿನ ₹31 ಲಕ್ಷ
ಆರನೇ ದಿನ ₹25 ಲಕ್ಷ
ಏಳನೇ ದಿನ ₹23 ಲಕ್ಷ
ಎಂಟನೇ ದಿನ ₹18 ಲಕ್ಷ
ಒಂಬತ್ತನೇ ದಿನ ₹26 ಲಕ್ಷ
ಹತ್ತನೇ ದಿನ ₹40 ಲಕ್ಷ
ಒಟ್ಟು ₹3.22 ಕೋಟಿ (Net)

3ನೇ ವಾರದ ಭವಿಷ್ಯವೇನು?

'ಏಳುಮಲೆ' ಮೂರನೇ ವಾರ ದೊಡ್ಡ ಗಳಿಕೆ ಆಗಬೇಕಿದೆ. ಮೂರನೇ ವಾರ ಕಮ್ಮಿ ಅಂದರೂ ₹5 ಕೋಟಿಗೂ ಅಧಿಕ ಗಳಿಕೆ ಮಾಡಲೇಬೇಕು. ಆದರೆ, ಎರಡನೇ ಸೋಮವಾರ 'ಏಳುಮಲೆ' ಕಲೆಕ್ಷನ್ ಏನಾಗುತ್ತೆ ಅನ್ನೋದರ ಮೇಲೆ ₹5 ಕೋಟಿ ಮೈಲಿಗಲ್ಲು ದಾಟುತ್ತಾ? ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಎದುರು ನೋಡತ್ತಿದ್ದಾರೆ. ಆದರೆ, ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದಂತೆ ಸಿನಿಮಾಗೆ ಜನರು ನುಗ್ಗುತ್ತಾರೆ ಅನ್ನೋ ನಂಬಿಕೆಯಲ್ಲಿ ಚಿತ್ರತಂಡದ ಮೇಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Tharun Sudhir produced Ranna, Priyanka Achar starrer Elumale movie day 10 Box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X