Elumale Box Office Day 11: 11ನೇ ದಿನ 'ಏಳುಮಲೆ' ಗಳಿಸಿದ್ದೆಷ್ಟು? 2ನೇ ಸೋಮವಾರವೂ ಗೆದ್ದಿತೇ?

ತರುಣ್ ಸುಧೀರ್ ನಿರ್ಮಾಣದ 'ಏಳುಮಲೆ'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ನೋಡಿದವರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಾಗೂ 'ಮಹಾನಟಿ'ಯ ಸ್ಪರ್ಧಿ ಪ್ರಿಯಾಂಕಾ ಆಚಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ತರುಣ್ ಸುಧೀರ್ ಗರಡಿಯಲ್ಲಿ ಪಳಗಿರುವ ಪುನೀತ್ ರಂಗಸ್ವಾಮಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. 'ಏಳುಮಲೆ' ವಿಮರ್ಶಕರಿಂದ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

'ಏಳುಮಲೆ' ಮೇಕಿಂಗ್, ಕಥೆ ಹೇಳುವ ಪರಿ ಎಲ್ಲವೂ ಅದ್ಭುತವಾಗಿದೆ. ಆದರೆ, ಮೌತ್‌ ಟಾಕ್ ಮೂಲಕ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯಬಹುದು ಎಂದುಕೊಂಡಿದ್ದ ಸಿನಿಮಾ ತಂಡಕ್ಕೆ ಶಾಕ್ ಆಗಿದೆ. 'ಏಳುಮಲೆ' ನಿರೀಕ್ಷಿಸಿದಷ್ಟು ಗಳಿಸಲು ಸಾಧ್ಯವಾಗಿಲ್ಲ. ವೀಕೆಂಡ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಮಾಡುವ 'ಏಳುಮಲೆ' ವೀಕ್‌ಡೇಸ್‌ನಲ್ಲಿ ಹಿಂದೆ ಬೀಳುತ್ತಿದೆ. ಹೀಗಾಗಿ ವೀಕ್‌ಡೇಸ್‌ನಲ್ಲಿ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆದರೆ, ಸಿನಿಮಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಲಿದೆ.

Ranna Priyanka Achar starrer Elumale movie day 11 Box office collection report

ಇದೂವರೆಗೂ ಕನ್ನಡ ಸಿನಿಮಾ 'ಏಳುಮಲೆ' ಒಳ್ಳೆಯ ಕಲೆಕ್ಷನ್ ಮಾಡಿದೆ. ಹೊಸಬರ ಸಿನಿಮಾವೊಂದು ಈ ಮಟ್ಟಿಗೆ ಕಲೆಕ್ಷನ್ ಮಾಡಿರೋದು ಪಾಸಿಟಿವ್ ಆಗಿಯೇ ಇದೆ. ಆದರೆ, ಮೊದಲ ಎರಡು ವಾರ ಇನ್ನೂ ಒಳ್ಳೆಯ ಕಲೆಕ್ಷನ್ ಆಗಿದ್ದರೆ, ಸಿನಿಮಾ ಈಗಾಗಲೇ ಬಾಕ್ಸಾಫೀಸ್ ಲಿಸ್ಟ್ ಸೇರಿತ್ತಿತ್ತು. ಅಷ್ಟಕ್ಕೂ 11ನೇ ದಿನ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್‌ನಲ್ಲಿ ಮುಂದಿನ ಭವಿಷ್ಯವೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

11ನೇ ದಿನ 'ಏಳುಮಲೆ' ಕಲೆಕ್ಷನ್ ಎಷ್ಟು?

ಮೊದಲ ವಾರ ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದ 'ಏಳುಮಲೆ' 2ನೇ ಸೋಮವಾರದ ಹೊತ್ತಿಗೆ ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದೆ. ಒಂದು ವೇಳೆ ಈ ಸೋಮವಾರವೂ ಸೂಪರ್ ಕಲೆಕ್ಷನ್ ಆಗಿದ್ದರೆ, ಸಿನಿಮಾ ಈ ವಾರದ ಅಂತ್ಯದ ವೇಳೆಗೆ ಆರೇಳು ಕೋಟಿ ಕಲೆಕ್ಷನ್ ಮಾಡುತ್ತಿತ್ತು. ಸ್ಯಾಕ್ನಿಲ್ಕ್ ಪ್ರಕಾರ, 11ನೇ ದಿನ ಈ ಸಿನಿಮಾ ಕೇವಲ ₹14 ಲಕ್ಷ ಕಲೆಕ್ಷನ್ ಮಾಡಿದೆ. ಭಾನುವಾರಕ್ಕೆ ಹೋಲಿಸಿದರೆ, 11ನೇ ದಿನ ಕಲೆಕ್ಷನ್ ಮೂರು ಪಟ್ಟು ಡ್ರಾಪ್ ಆಗಿದೆ.

11 ದಿನಗಳಲ್ಲಿ ಎಷ್ಟಾಗಿದೆ ಕಲೆಕ್ಷನ್?

'ಏಳುಮಲೆ' ಈ ವರ್ಷ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಮತ್ತೊಂದು ಹಿಟ್ ಸಿನಿಮಾ. ಅದು ಕೂಡ ಹೊಸಬರ ಸಿನಿಮಾ ಅನ್ನೋದು ವಿಶೇಷ. ಈ 11 ದಿನಗಳಲ್ಲಿ 'ಏಳುಮಲೆ' ಹಾಕಿದ ಬಂಡವಾಳವನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿದೆ. ಕಳೆದ 11 ದಿನಗಳಲ್ಲಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ₹3.78 ಕೋಟಿ (Gross) ಕಲೆಕ್ಷನ್ ಆಗಿದೆ. ಯಾವ್ಯಾವ ದಿನ ಎಷ್ಟೆಷ್ಟು ಆಗಿದೆ ಅಂತ ನೋಡುವುದಾದರೇ..

ಏಳುಮಲೆ 10 ದಿನಗಳ ಕಲೆಕ್ಷನ್

ಮೊದಲ ದಿನ ₹27 ಲಕ್ಷ
ಎರಡನೇ ದಿನ ₹34 ಲಕ್ಷ
ಮೂರನೇ ದಿನ ₹66 ಲಕ್ಷ
ನಾಲ್ಕನೇ ದಿನ ₹32 ಲಕ್ಷ
ಐದನೇ ದಿನ ₹31 ಲಕ್ಷ
ಆರನೇ ದಿನ ₹25 ಲಕ್ಷ
ಏಳನೇ ದಿನ ₹23 ಲಕ್ಷ
ಎಂಟನೇ ದಿನ ₹18 ಲಕ್ಷ
ಒಂಬತ್ತನೇ ದಿನ ₹26 ಲಕ್ಷ
ಹತ್ತನೇ ದಿನ ₹40 ಲಕ್ಷ
ಹನ್ನೊಂದನ ದಿನ ₹11 ಲಕ್ಷ
ಒಟ್ಟು ₹3.36 ಕೋಟಿ (Net)
₹3.78 ಕೋಟಿ (Gross)

Ranna Priyanka Achar starrer Elumale movie day 11 Box office collection report

'ಏಳುಮಲೆ' ಸಿನಿಮಾದ ಭವಿಷ್ಯವೇನು?

'ಸು ಫ್ರಮ್ ಸೋ' ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಿಸಿತ್ತು. ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಮತ್ತೆ ಹೊಸಬರ ಸಿನಿಮಾಗಳಿಗೆ ಮಣೆ ಹಾಕುತ್ತಿರುವ ಪ್ರೇಕ್ಷಕರು 'ಏಳುಮಲೆ' ಸಿನಿಮಾವನ್ನು ಗೆಲ್ಲಿಸಿದ್ದಾರೆ. ಆದರೆ, ಇದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಒಂದು ವೇಳೆ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದರೆ, ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ ಸಿಗುತ್ತಿತ್ತು.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Tharun Sudhir produced Ranna, Priyanka Achar starrer Elumale movie day 11 Box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X