Elumale Box Office Day 13: 13ನೇ ದಿನ ₹4 ಕೋಟಿಗೆ ಲಗ್ಗೆ ಇಟ್ಟ 'ಏಳುಮಲೆ'; ಹೇಗೆ ಬಾಕ್ಸಾಫೀಸ್ ಖಬರ್?

'ಸು ಫ್ರಮ್ ಸೋ' ಬಳಿಕ ಕನ್ನಡದಲ್ಲಿ ಮತ್ತೊಂದು ಹೊಸಬರ ಸಿನಿಮಾ ಹಿಟ್ ಆಗಿದೆ. ತರುಣ್ ಸುಧೀರ್ ನಿರ್ಮಾಣದ 'ಏಳುಮಲೆ'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗಾಗಲೇ ಸಿನಿಮಾ ರಿಲೀಸ್ ಆಗಿ 14ನೇ ದಿನಗಳಾಗಿವೆ. ರಕ್ಷಿತ್ ಪ್ರೇಮ್ ಸಹೋದರ ರಾಣಾ ನಾಯಕನಾಗಿ ಎರಡನೇ ಸಿನಿಮಾದಲ್ಲಿ ಮಿಂಚಿದ್ದಾರೆ. ಇವರ ಪರ್ಫಾಮೆನ್ಸ್‌ಗೆ ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ. ಇವರೊಂದಿಗೆ 'ಮಹಾನಟಿ' ರಿಯಾಲಿಟಿ ಶೋನ ಪ್ರಿಯಾಂಕಾ ಆಚಾರ್ ನಾಯಾಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ.

'ಏಳುಮಲೆ' ನೀಟ್ ಆಗಿ ಮಾಡಿರುವ ಸಿನಿಮಾ. ಇದೊಂದು ಸೀರಿಯಸ್ ಸಬ್ಜೆಕ್ಟ್ ಅನ್ನು ಇಟ್ಟುಕೊಂಡು ಮಾಡಿದಂತಹ ಕಥೆ. ಕರ್ನಾಟಕ ಹಾಗೂ ತಮಿಳುನಾಡು ಬಾರ್ಡರ್‌ನಲ್ಲಿ ನಡೆಯುವ ಲವ್‌ ಸ್ಟೋರಿಯ ಜೊತೆಗೆ ಕೆಲವು ನೈಜ ಘಟನೆಗಳನ್ನು ತೆರೆ ಮೇಲೆ ತರಲಾಗಿದೆ. ಹೊಸಬರನ್ನು ಇಟ್ಕೊಂಡು ನಿರ್ಮಿಸಿದ ಒಂದು ಒಳ್ಳೆಯ ಸಿನಿಮಾ ಎನ್ನಬಹುದು.

Ranna Priyanka Achar starrer Elumale movie day 13 Box office collection report

ತರುಣ್ ಸುಧೀರ್ ಹಾಕಿದ ಲೆಕ್ಕಾಚಾರವೆಲ್ಲವೂ ಸರಿಯಾಗಿಯೇ ಇತ್ತು. ಸಿನಿಮಾ ಹಿಟ್ ಅಂತ ಸಾಬೀತಾಗಿದೆ. ಆದರೆ, ಇನ್ನೂ ಸ್ಪಲ್ಪ ಪ್ರಚಾರ ಮಾಡಿದ್ದರೆ, ಇನ್ನೂ ಹೆಚ್ಚು ಕಲೆಕ್ಷನ್ ಮಾಡಬಹುದಿತ್ತು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಹೀಗಿದ್ದರೂ 13ನೇ ದಿನದ ಹೊತ್ತಿಗೆ ಕಲೆಕ್ಷನ್ ಸ್ಟಡಿಯಾಗಿಯೇ ಇದೆ. ಹಾಗಿದ್ದರೆ, 13ನೇ ದಿನದ ಕಲೆಕ್ಷನ್ ಎಷ್ಟು? ಅನ್ನೋದನ್ನು ನೋಡೋಣ.

13ನೇ ದಿನ 'ಏಳುಮಲೆ' ಕಲೆಕ್ಷನ್ ಎಷ್ಟು?

ತರುಣ್ ಸುಧೀರ್ 'ಏಳುಮಲೆ' ಸಿನಿಮಾ ಮೌತ್ ಪಬ್ಲಿಸಿಟಿಯಿಂದಲೇ ಗೆಲ್ಲಬೇಕು ಎನ್ನುವ ಹಠಕ್ಕೆ ಬಿದ್ದಂತೆ ಇದೆ. ಹೀಗಾಗಿ ರಿಲೀಸ್ ಬಳಿಕ ಹೆಚ್ಚು ಪ್ರಚಾರವನ್ನು ಮಾಡಿಲ್ಲ. ಹೀಗಾಗಿ ವೀಕ್‌ ಡೇಸ್‌ನಲ್ಲಿ ಇನ್ನೂ ಹೆಚ್ಚು ಗಳಿಸುವ ಅವಕಾಶವಿತ್ತು. ಆದರೂ ಸ್ಯಾಕ್ನಿಲ್ಕ್ ಪ್ರಕಾರ 13ನೇ ದಿನ ಈ ಸಿನಿಮಾ 11 ಲಕ್ಷ ರುಪಾಯಿಗಳನ್ನು ಕಲೆಕ್ಷನ್ ಮಾಡಿದೆ. ಸಿನಿಮಾ ತಂಡ ಒಂದಿಷ್ಟು ಆಕ್ಟಿವ್ ಆಗಿದ್ದರೆ, ಇನ್ನೂ ಒಂದಿಷ್ಟು ಕಲೆಕ್ಷನ್ ಮಾಡಬಹುದಿತ್ತು.

13 ದಿನಗಳಲ್ಲಿ ಎಷ್ಟಾಗಿದೆ ಕಲೆಕ್ಷನ್?

ಈ ವರ್ಷ ಹಿಟ್ ಲಿಸ್ಟ್ ಸೇರಿದ ಸಿನಿಮಾಗಳಲ್ಲಿ 'ಏಳುಮಲೆ' ಕೂಡ ಸೇರಿಕೊಂಡಿದೆ. ಇದು ಕೂಡ ಸ್ಮಾಲ್ ಬಜೆಟ್ ಸಿನಿಮಾ ಅನ್ನೋದು ಅಷ್ಟೇ ಸತ್ಯ. ಕಳೆದ 13 ದಿನಗಳಲ್ಲಿ 'ಏಳುಮಲೆ' ಹಾಕಿದ ಬಂಡವಾಳವನ್ನು ಹಿಂಪಡೆದು ಒಂದಿಷ್ಟು ಲಾಭವನ್ನು ಪಡೆದುಕೊಂಡಿದೆ. ಕಳೆದ 13 ದಿನಗಳಲ್ಲಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ₹4 ಕೋಟಿ (Gross) ಕಲೆಕ್ಷನ್ ದಾಟಿದೆ. ಹಾಗಿದರೆ, ಯಾವ್ಯಾವ ದಿನ ಎಷ್ಟೆಷ್ಟು ಆಗಿದೆ ಅನ್ನೋ ಲಿಸ್ಟ್ ಇಲ್ಲಿದೆ.

ಏಳುಮಲೆ 13 ದಿನಗಳ ಕಲೆಕ್ಷನ್

ಮೊದಲ ದಿನ ₹27 ಲಕ್ಷ
ಎರಡನೇ ದಿನ ₹34 ಲಕ್ಷ
ಮೂರನೇ ದಿನ ₹66 ಲಕ್ಷ
ನಾಲ್ಕನೇ ದಿನ ₹32 ಲಕ್ಷ
ಐದನೇ ದಿನ ₹31 ಲಕ್ಷ
ಆರನೇ ದಿನ ₹25 ಲಕ್ಷ
ಏಳನೇ ದಿನ ₹23 ಲಕ್ಷ
ಎಂಟನೇ ದಿನ ₹18 ಲಕ್ಷ
ಒಂಬತ್ತನೇ ದಿನ ₹26 ಲಕ್ಷ
ಹತ್ತನೇ ದಿನ ₹40 ಲಕ್ಷ
ಹನ್ನೊಂದನೆ ದಿನ ₹14 ಲಕ್ಷ
ಹನ್ನೆರಡನೇ ದಿನ ₹13 ಲಕ್ಷ
ಹದಿಮೂರನೇ ದಿನ ₹11 ಲಕ್ಷ

ಒಟ್ಟು ₹3.60 ಕೋಟಿ (Net)
₹4.06 ಕೋಟಿ (Gross)

Ranna Priyanka Achar starrer Elumale movie day 13 Box office collection report

ವೀಕೆಂಡ್ ಕಲೆಕ್ಷನ್ ಮೇಲೆ ಕಣ್ಣು

'ಏಳುಮಲೆ' ಸಿನಿಮಾ ಕಲೆಕ್ಷನ್ ವೀಕ್‌ಡೇಸ್‌ನಲ್ಲಿ ಡ್ರಾಪ್ ಕಂಡಿದೆ. ಈ ಸಿನಿಮಾ ಏನಿದ್ದೂ ವೀಕೆಂಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆಗುತ್ತಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 'ಏಳುಮಲೆ' ವೀಕೆಂಡ್ ಹೊತ್ತಿಗೆ ₹5 ಕೋಟಿ ಕಲೆಕ್ಷನ್ (Gross) ಆಗಬಹುದು ಎಂದು ನಿರೀಕ್ಷೆ ಮಾಡಿದ್ದಾರೆ. ಹೊಸ ಸಿನಿಮಾ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡುತ್ತಿರೋದು ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸೂಚನೆ ಅಂತಲೇ ಹೇಳಬಹುದು.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Tharun Sudhir produced Ranna, Priyanka Achar starrer Elumale movie day 13 Box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X