Elumale Box Office Day 14: 14ನೇ ದಿನ 'ಏಳುಮಲೆ' ಕಲೆಕ್ಷನ್‌ನಲ್ಲಿ ಏರಿಕೆ ಆಯ್ತಾ? ಇಲ್ಲಿವರೆಗೂ ಗಳಿಸಿದ್ದೆಷ್ಟು?

ಸೆಕೆಂಡ್ ಹಾಫ್‌ನಲ್ಲಿ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಯಶಸ್ಸು ಕೊಟ್ಟ ಸಿನಿಮಾ 'ಏಳುಮಲೆ'. ಕರ್ನಾಟಕ ಹಾಗೂ ತಮಿಳುನಾಡು ಬಾರ್ಡರ್‌ನಲ್ಲಿ ಹುಟ್ಟಿಕೊಳ್ಳುವ ಕಥೆಗೆ ಒಳ್ಳೆಯ ಪ್ರಶಂಸೆ ಸಿಕ್ಕಿದೆ. ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ಭಾಗಗಳಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನೈಜ ಕಥೆಗಳನ್ನಿಟ್ಟುಕೊಂಡು ಹೆಣೆದಿರುವ ಕಥೆ ಪ್ರೇಕ್ಷಕರಿಗೆ ಇಷ್ಟ ಆಗಿದೆ.

ಎರಡು ವಾರಗಳನ್ನು ಯಶಸ್ಸಿಯಾಗಿ ಮುಗಿಸಿರುವ 'ಏಳುಮಲೆ' ಇನ್ನೊಂದು ವೀಕೆಂಡ್‌ಗೆ ಸಜ್ಜಾಗುತ್ತಿದೆ. ವೀಕ್‌ ಡೇಸ್‌ನಲ್ಲಿ ಈ ಸಿನಿಮಾ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವಲ್ಲಿ ಹಿಂದೆ ಬಿದ್ದಿದೆ. ಆದರೆ, ವೀಕೆಂಡ್‌ನಲ್ಲಿ ಡಿಸೆಂಟ್ ಕಲೆಕ್ಷನ್ ಆಗುತ್ತಿದೆ. ಹೀಗಾಗಿ ಇಂದಿನಿಂದ (ಸೆಪ್ಟೆಂಬರ್ 19) ಬಾಕ್ಸಾಫೀಸ್‌ನಲ್ಲಿ ಮತ್ತಷ್ಟು ಒಳ್ಳೆಯ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ.

Ranna Priyanka Achar starrer Elumale movie day 14 Box office collection report

14ನೇ ದಿನವೂ 'ಏಳುಮಲೆ' ಕಲೆಕ್ಷನ್‌ನಲ್ಲಿ ವ್ಯತ್ಯಾಸವೇನಿಲ್ಲ. ವೀಕ್‌ ಡೇಸ್‌ನಲ್ಲಿ ನಿರೀಕ್ಷೆ ಮಾಡಿದಂತೆ ಇಳಿಮುಖವಾಗಿಯೇ ಇದೆ. ಆದರೆ, ಟ್ರೇಡ್ ಎಕ್ಸ್‌ಪರ್ಟ್‌ಗಳು ವೀಕೆಂಡ್‌ನಲ್ಲಿ ಮತ್ತೆ ಚೇತರಿಕೆ ಕಾಣಬಹುದೆಂಬ ನಿರೀಕ್ಷೆಯಲ್ಲಿ ಇದ್ದಾರೆ. ಹಾಗಿದ್ದರೆ, 14ನೇ ದಿನ 'ಏಳುಮಳೆ' ಸಿನಿಮಾದ ಕಲೆಕ್ಷನ್ ಎಷ್ಟು? ಇಲ್ಲಿವರೆಗೂ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

14ನೇ ದಿನ 'ಏಳುಮಲೆ' ಕಲೆಕ್ಷನ್ ಎಷ್ಟು?

ತರುಣ್ ಸುಧೀರ್ ನಿರ್ಮಿಸಿರುವ 'ಏಳುಮಲೆ' ಅವರು ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಮಾಡಿದೆ. ರಕ್ಷಿತಾ ಪ್ರೇಮ್ ಸಹೋದರನಿಗೆ ಈ ಸಿನಿಮಾ ಯಶಸ್ಸು ತಂದುಕೊಟ್ಟಿದೆ. ಇನ್ನು 'ಮಹಾನಟಿ' ರಿಯಾಲಿಟಿ ಶೋ ಮೂಲಕ ಅವಕಾಶ ಗಿಟ್ಟಿಸಿಕೊಂಡಿರುವ ಪ್ರಿಯಾಂಕಾ ಆಚಾರ್‌ಗೂ ಈ ಸಿನಿಮಾ ಗೆಲುವು ತಂದು ಕೊಟ್ಟಿದೆ. ಸ್ಯಾಕ್ನಿಲ್ಕ್ ಪ್ರಕಾರ 14ನೇ ದಿನ ಈ ಸಿನಿಮಾ 9 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. 13ನೇ ದಿನಕ್ಕೆ ಹೋಲಿಸಿದರೆ, ಎರಡು ಲಕ್ಷ ಕಮ್ಮಿ ಕಲೆಕ್ಷನ್ ಆಗಿದೆ. ಆದರೂ ವೀಕೆಂಡ್‌ನಲ್ಲಿ ಹೆಚ್ಚಾಗಬಹುದೆಂಬ ನಿರೀಕ್ಷೆಯಿದೆ.

14 ದಿನಗಳಲ್ಲಿ 'ಏಳುಮಲೆ' ಕಲೆಕ್ಷನ್ ಎಷ್ಟು?

'ಏಳುಮಲೆ' ಸಿನಿಮಾಗೆ ಸಿಕ್ಕಿರೋ ರೆಸ್ಪಾನ್ಸ್ ನೋಡಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದರೆ, ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಆಗಲಿಲ್ಲ. ಆದರೂ, ಚಿತ್ರತಂಡಕ್ಕೆ ಲಾಭ ತಂದುಕೊಟ್ಟಿದೆ. ಅಂದರೆ, ಈ ಸಿನಿಮಾ ಇನ್ನೂ ಹೆಚ್ಚು ಕಲೆಕ್ಷನ್ ಮಾಡುವಷ್ಟು ಸಾಮರ್ಥ್ಯ ಇರುವ ಸಿನಿಮಾ. ಇನ್ನು 14 ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ.

ಏಳುಮಲೆ 14 ದಿನಗಳ ಕಲೆಕ್ಷನ್

ಮೊದಲ ದಿನ ₹27 ಲಕ್ಷ
ಎರಡನೇ ದಿನ ₹34 ಲಕ್ಷ
ಮೂರನೇ ದಿನ ₹66 ಲಕ್ಷ
ನಾಲ್ಕನೇ ದಿನ ₹32 ಲಕ್ಷ
ಐದನೇ ದಿನ ₹31 ಲಕ್ಷ
ಆರನೇ ದಿನ ₹25 ಲಕ್ಷ
ಏಳನೇ ದಿನ ₹23 ಲಕ್ಷ
ಎಂಟನೇ ದಿನ ₹18 ಲಕ್ಷ
ಒಂಬತ್ತನೇ ದಿನ ₹26 ಲಕ್ಷ
ಹತ್ತನೇ ದಿನ ₹40 ಲಕ್ಷ
ಹನ್ನೊಂದನೆ ದಿನ ₹14 ಲಕ್ಷ
ಹನ್ನೆರಡನೇ ದಿನ ₹13 ಲಕ್ಷ
ಹದಿಮೂರನೇ ದಿನ ₹11 ಲಕ್ಷ
ಹದಿನಾಲ್ಕನೇ ದಿನ ₹9 ಲಕ್ಷ

ಒಟ್ಟು ₹3.69 ಕೋಟಿ (Net)
₹4.17 ಕೋಟಿ (Gross)

Ranna Priyanka Achar starrer Elumale movie day 14 Box office collection report
ವೀಕೆಂಡ್‌ ಲೆಕ್ಕಾಚಾರವೇನು?

'ಏಳುಮಲೆ' ಸಿನಿಮಾ ವೀಕೆಂಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆಗುತ್ತಿದೆ. ಹೊಸ ಪ್ರತಿಭೆಗಳ ಸಿನಿಮಾ ಥಿಯೇಟರ್‌ನಲ್ಲಿ ಈ ಮಟ್ಟಿಗೆ ಕಲೆಕ್ಷನ್ ಮಾಡಿದ್ದೇ ದೊಡ್ಡ ವಿಷ್ಯ. ಅಲ್ಲದೆ ಕಳೆದ ಎರಡು ವೀಕೆಂಡ್‌ಗಳಲ್ಲೂ ಈ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ. ಹೀಗಾಗಿ ಮೂರನೇ ವೀಕೆಂಡ್‌ ಕಲೆಕ್ಷನ್ ಕೂಡ ಅಷ್ಟೇ ಅದ್ಭುತವಾಗಿರುತ್ತೆ ಅನ್ನೋ ನಿರೀಕ್ಷೆಯಿದೆ. ಮೂರು ದಿನಗಳಲ್ಲಿ ₹5 ಕೋಟಿ ರೀಚ್ ಆಗುವ ನಿರೀಕ್ಷೆಯಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Tharun Sudhir produced Ranna, Priyanka Achar starrer Elumale movie day 14 Box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X