Elumale Box Office Day 17: ವೀಕೆಂಡ್‌ನಲ್ಲಿ ಹೇಗಿತ್ತು 'ಏಳುಮಲೆ' ಬಾಕ್ಸಾಫೀಸ್ ಕಲೆಕ್ಷನ್? ₹5 ಕೋಟಿ ಕ್ಲಬ್ ಸೇರಿತೇ?
'ಸು ಫ್ರಮ್ ಸೋ' ಕನ್ನಡದಲ್ಲಿ ತೆರೆಕಂಡ ಮತ್ತೊಂದು ಉತ್ತಮ ಸಿನಿಮಾ 'ಏಳುಮಲೆ'. ತರುಣ್ ಸುಧೀರ್ ನಿರ್ಮಾಣದ ಈ ಸಿನಿಮಾ ಕೂಡ ಹೊಸ ಪ್ರತಿಭೆಗಳನ್ನು ಇಟ್ಟುಕೊಂಡು, ಕಂಟೆಂಟ್‌ಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟು ಸಿನಿಮಾ ಮಾಡಲಾಗಿತ್ತು. ಕರ್ನಾಟಕ ಹಾಗೂ ತಮಿಳುನಾಡಿನ ಲವ್ ಸ್ಟೋರಿಯನ್ನು ತೆರೆಮೇಲೆ ತರಲಾಗಿತ್ತು. ಈ ಸ್ಟೋರಿ ಪ್ರೇಕ್ಷಕರಿಗೆ ಇಷ್ಟ ಆಗಿದೆ.
ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಾಗೂ ಪ್ರಿಯಾಂಕಾ ಆಚಾರ್ ನಟನೆಯ 'ಏಳುಮಲೆ' ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದ 'ಸು ಫ್ರಮ್ ಸೋ' ಅಷ್ಟು ಯಶಸ್ಸು ಕಾಣದೇ ಹೋದರೂ, ಈ ವರ್ಷ ರಿಲೀಸ್ ಆದ ಬೆಸ್ಟ್ ಸಿನಿಮಾಗಳ ಪಟ್ಟಿಯಲ್ಲಿ ಇದು ಕೂಡ ಸೇರಿಕೊಂಡಿದೆ. ಈಗಾಗಲೇ ಸಿನಿಮಾ ಹಿಟ್ ಅಂತ ಸಾಬೀತಾಗಿದೆ. ಆದರೆ, ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಆಯ್ತಾ? ಈ ಪ್ರಶ್ನೆ ಸಿನಿಮಾ ಮಂದಿಯಲ್ಲಿ ಇನ್ನೂ ಇದೆ.

'ಏಳುಮಲೆ' ಸಿನಿಮಾ ₹10 ಕೋಟಿ ಕ್ಲಬ್ ಸೇರಿದ್ದರೆ, ಸೂಪರ್ ಹಿಟ್ ಸಿನಿಮಾಗಳ ಪಟ್ಟಿಗೆ ಸುಲಭವಾಗಿ ಸೇರುತ್ತಿತ್ತು. ಸಿನಿಮಾ ತಂಡದ ನಿರೀಕ್ಷೆ ಕೂಡ ಇತ್ತು. ಯಾಕಂದ್ರೆ, ಕಥೆ, ಚಿತ್ರಕತೆ, ಕಲಾವಿದರ ಪರ್ಫಾಮೆನ್ಸ್, ಸಿನಿಮ್ಯಾಟೋಗ್ರಫಿ ಸೇರಿದಂತೆ ಒಟ್ಟಾರೆ ಮೇಕಿಂಗ್ ಸಿನಿಮಾ ನೋಡಿದವರಿಗೆ ಇಷ್ಟ ಆಗಿತ್ತು. ಆದರೂ ನಿರ್ಮಾಪಕರಿಗೇನು ಮೋಸವಿಲ್ಲ. ಈ ಸಿನಿಮಾದಿಂದ ಲಾಭದಲ್ಲಿಯೇ ಇದ್ದಾರೆ ಅನ್ನೋದು ಇಂಡಸ್ಟ್ರಿ ಟಾಕ್. ಹಾಗಿದ್ದರೆ, ವೀಕೆಂಡ್‌ನಲ್ಲಿ ಕಲೆಕ್ಷನ್ ಹೇಗಿದೆ? 17ನೇ ದಿನದ ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
'ಏಳುಮಲೆ' 17ನೇ ದಿನದ ಕಲೆಕ್ಷನ್ ಎಷ್ಟು?
ಈ ವರ್ಷ ಕೂಡ ಸೋಲಿನ ಸುಳಿಗೆ ಸಿಲುಕಿದ್ದ ಕನ್ನಡ ಚಿತ್ರರಂಗಕ್ಕೆ 'ಏಳುಮಲೆ' ಬೂಸ್ಟ್ ಕೊಟ್ಟಿರೋದು ನಿಜ. ಕನ್ನಡದಲ್ಲಿ ಕಂಟೆಂಟ್ ಸಿನಿಮಾಗಳು ಬರೋದಿಲ್ಲ ಅನ್ನೋರಿಗೆ ಇದು ಒಳ್ಳೆಯ ಉದಾಹರಣೆ. ಹಾಗೇ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಆಗದೇ ಹೋದರೂ ಕಂಟೆಂಟ್ ಸಿನಿಮಾಗಳನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ ಅನ್ನೋದಕ್ಕೆ ಇದು ಒಳ್ಳೆಯ ಉದಾಹರಣೆ. ಸ್ಯಾಕ್ನಿಲ್ಕ್ ಪ್ರಕಾರ 'ಏಳುಮಲೆ' ಸಿನಿಮಾ ವೀಕೆಂಡ್‌ನಲ್ಲೂ ಸಾಧಾರಣ ಕಲೆಕ್ಷನ್ ಮಾಡಿದೆ. 17ನೇ ದಿನ ಈ ಸಿನಿಮಾ 15 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿ ಮಾಡಿದೆ. ಹಾಗೇ ಶನಿವಾರ ಅಂದರೆ, 16ನೇ ದಿನ 12 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ.

17 ದಿನಗಳಲ್ಲಿ 'ಏಳುಮಲೆ' ಗಳಿಸಿದ್ದೆಷ್ಟು?
'ಏಳುಮಲೆ' ₹10 ಕೋಟಿ ಕ್ಲಬ್ ಸೇರಿದ್ದರೆ ಸೂಪರ್ ಹಿಟ್ ಸಿನಿಮಾಗಳ ಪಟ್ಟಿಗೆ ಸೇರಿಬಿಡುತ್ತಿತ್ತು. ಆದರೆ, 17 ದಿನಗಳಲ್ಲಿ ಆ ಮೈಲಿಗಲ್ಲು ತಲುಪುವುದಕ್ಕೆ ಸಾಧ್ಯವಾಗಿಲ್ಲ. ಈ 17 ದಿನಗಳಲ್ಲಿ 'ಏಳುಮಲೆ' ಸಿನಿಮಾ ಗಳಿಸಿದ್ದು ₹4.57 ಕೋಟಿ (Gross) ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಇನ್ನು ನೆಟ್ ಕಲೆಕ್ಷನ್ ₹4.04 ಕೋಟಿ ಎಂದು ಹೇಳಲಾಗುತ್ತಿದೆ. 17 ದಿನಗಳ ಒಟ್ಟು ಕಲೆಕ್ಷನ್ ಹೀಗಿದೆ.
ಏಳುಮಲೆ 17 ದಿನಗಳ ಕಲೆಕ್ಷನ್
ಮೊದಲ ದಿನ ₹27 ಲಕ್ಷ
ಎರಡನೇ ದಿನ ₹34 ಲಕ್ಷ
ಮೂರನೇ ದಿನ ₹66 ಲಕ್ಷ
ನಾಲ್ಕನೇ ದಿನ ₹32 ಲಕ್ಷ
ಐದನೇ ದಿನ ₹31 ಲಕ್ಷ
ಆರನೇ ದಿನ ₹25 ಲಕ್ಷ
ಏಳನೇ ದಿನ ₹23 ಲಕ್ಷ
ಎಂಟನೇ ದಿನ ₹18 ಲಕ್ಷ
ಒಂಬತ್ತನೇ ದಿನ ₹26 ಲಕ್ಷ
ಹತ್ತನೇ ದಿನ ₹40 ಲಕ್ಷ
ಹನ್ನೊಂದನೆ ದಿನ ₹14 ಲಕ್ಷ
ಹನ್ನೆರಡನೇ ದಿನ ₹13 ಲಕ್ಷ
ಹದಿಮೂರನೇ ದಿನ ₹11 ಲಕ್ಷ
ಹದಿನಾಲ್ಕನೇ ದಿನ ₹9 ಲಕ್ಷ
ಹದಿನೈದನೇ ದಿನ ₹8 ಲಕ್ಷ
ಹದಿನಾರನೇ ದಿನ ₹12 ಲಕ್ಷ
ಹದಿನೇಳನೇ ದಿನ ₹15 ಲಕ್ಷ
ಒಟ್ಟು ₹4.04 ಕೋಟಿ (Net)
₹4.57 ಕೋಟಿ (Gross)
'ಏಳುಮಲೆ' ಕಲೆಕ್ಷನ್‌ಗೆ ಅಡ್ಡಿಯಾಗಿದ್ದೇನು?
ತರುಣ್ ಸುಧೀರ್ ನಿರ್ಮಾಣದಲ್ಲಿ ಪುನೀತ್ ರಂಗಸ್ವಾಮಿ ನಿರ್ದೇಶಿಸಿದ ಈ ಸಿನಿಮಾ ಮೆಚ್ಚುಗೆ ವ್ಯಕ್ತವಾಗಿದ್ದೇನೋ ಸರಿ. ಆದರೆ, ಕರ್ನಾಟಕ ಎಲ್ಲಾ ಭಾಗಗಳಲ್ಲಿ ತಲುಪಲು ಸಾಧ್ಯವಾಗಿಲ್ಲ. ಇದು ಕರ್ನಾಟಕ ಹಾಗೂ ತಮಿಳುನಾಡಿನ ಗಡಿಭಾಗದಲ್ಲಿ ನಡೆಯುವ ಕಥೆಯಾಗಿದ್ದರಿಂದ ರಾಜ್ಯದ ಬೇರೆ ಭಾಗಗಳಲ್ಲಿ ಕನೆಕ್ಟ್ ಆಗಲಿಲ್ಲ. ಟ್ರೇಡ್ ಎಕ್ಸ್‌ಪರ್ಟ್‌ಗಳು ಕೂಡ ಇದೇ ಕಾರಣವೆಂಬ ಅಭಿಪ್ರಾಯ ಪಟ್ಟಿದ್ದಾರೆ. ಜೊತೆ ಚಿತ್ರತಂಡ ಮೈಸೂರು, ಮಂಡ್ಯ, ಬೆಂಗಳೂರು ಬಿಟ್ಟು ಬೇರೆ ಏರಿಯಾಗಳಲ್ಲಿ ಸಿನಿಮಾವನ್ನು ತಲುಪಿಸುವುದಕ್ಕೆ ಹೋಗಲಿಲ್ಲ ಅನ್ನೋ ಮಾತು ಕೂಡ ಇದೆ. ಒಟ್ನಲ್ಲಿ ಸಿನಿಮಾ ಹಿಟ್ ಆಗಿದೆ. ಆದರೆ, ನಿರೀಕ್ಷೆ ತಲುಪಲಿಲ್ಲ ಎಂದು ಹೇಳಬಹುದು.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











