Elumale Box Office Day 5: 5ನೇ ದಿನ 'ಏಳುಮಲೆ' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಾಗೂ ಪ್ರಿಯಾಂಕಾ ಆಚಾರ್ ನಟಿಸಿರುವ 'ಏಳುಮಲೆ' ಸಿನಿಮಾ ರಿಲೀಸ್ ಆಗಿ ಮುನ್ನುಗ್ಗುತ್ತಿದೆ. ಫಸ್ಟ್ ಡೇ ಫಸ್ಟ್ ಶೋನೇ ಈ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ಕಂಟೆಂಟ್, ಕಥೆ ಹೇಳಿರುವ ರೀತಿ ಎಲ್ಲದನ್ನೂ ಜನರು ಮೆಚ್ಚಿಕೊಂಡಿದ್ದರು. ಆರಂಭದಲ್ಲಿ ಸಾಧಾರಣ ಗಳಿಕೆ ಕಂಡಿದ್ದರೂ, ವೀಕೆಂಡ್‌ನಲ್ಲಿ ಏರಿಕೆ ಕಂಡಿತ್ತು. ಈಗ ವೀಕ್ ಡೇಸ್‌ನಲ್ಲೂ ವೀಕ್ಷಕರನ್ನು ಸೆಳೆಯುತ್ತಿದೆ.

'ಏಳುಮಲೆ' ಈ ವರ್ಷದ ಮತ್ತೊಂದು ಒಳ್ಳೆಯ ಸಿನಿಮಾ ಅನ್ನೋದರಲ್ಲಿ ಎರಡು ಮಾತಿಲ್ಲ. ತರುಣ್ ಸುಧೀರ್ ಮೊದಲ ಸಲ ನಿರ್ಮಾಣದಲ್ಲಿ ಗೆದ್ದಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯಿಂದ ಒಂದೊಳ್ಳೆ ಸಿನಿಮಾವನ್ನು ಪ್ರೇಕ್ಷಕರ ಮುಂದಿದ್ದಾರೆ. ಆದರೆ, ನಿಧಾನವಾಗಿ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುತ್ತಿರುವ ಈ ಸಿನಿಮಾದ ನಾಲ್ಕನೇ ದಿನದ ಕಲೆಕ್ಷನ್‌ಗೂ ಐದನೇ ದಿನ ಕಲೆಕ್ಷನ್‌ಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.

Ranna Priyanka Achar starrer Elumale movie day 5 Box office collection report

ವೀಕ್‌ ಡೇಸ್‌ನಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಕುಸಿಯಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಕಲೆಕ್ಷನ್ ವಿಚಾರದಲ್ಲಿ ಸ್ಟಡಿಯನ್ನು ಕಾಯ್ತುಕೊಂಡಿದೆ. ಹಾಗಿದ್ದರೆ, ಐದನೇ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ಇಲ್ಲಿವರೆಗೂ ಕಲೆಕ್ಷನ್ ಎಷ್ಟಾಗಿದೆ? ಸಿನಿಮಾದ ಮುಂದಿನ ಭವಿಷ್ಯವೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

5ನೇ ದಿನ ಏಳುಮಲೆ ಕಲೆಕ್ಷನ್ ಎಷ್ಟು?

'ಏಳುಮಲೆ' ಸಿನಿಮಾ ನಿಧಾನವಾಗಿ ಪಿಕಪ್ ಆಗುತ್ತಿದೆ. ಈ ಸಿನಿಮಾಗೆ ಅಬ್ಬರ ಪ್ರಚಾರ ಮಾಡುತ್ತಿಲ್ಲ. ಜನರೇ ಸಿನಿಮಾವನ್ನು ನೋಡಿ, ಮೌತ್ ಪಬ್ಲಿಸಿಟಿಯ ಮೂಲಕ ಮೇಲಕ್ಕೆ ತೆಗೆದುಕೊಂಡು ಹೋಗಬೇಕು ಅನ್ನೋದು ನಿರ್ಮಾಣ ಸಂಸ್ಥೆಯ ಉದ್ದೇಶ. ಹೀಗಾಗಿ ನಿಧಾನವಾಗಿ ಪಿಕಪ್ ಆಗುತ್ತಿದೆ. ಇನ್ನು ಸ್ಯಾಕ್ನಿಲ್ಕ್ ವರದಿ ಮಾಡಿದಂತೆ ಈ ಸಿನಿಮಾ ಐದನೇ ದಿನ 31 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ವರ್ಕಿಂಗ್ ಡೇಸ್‌ನಲ್ಲಿ ಇದು ಒಳ್ಳೆಯ ಕಲೆಕ್ಷನ್ ಎಂದೇ ಹೇಳಲಾಗುತ್ತಿದೆ.

5 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ತರುಣ್ ಸುಧೀರ್ ನಿರ್ಮಿಸಿ, ಪುನೀತ್ ರಂಗಸ್ವಾಮಿ ನಿರ್ದೇಶಿಸಿರುವ 'ಏಳುಮಲೆ' ಐದು ದಿನಗಳ ಎರಡು ಕೋಟಿಯ ಸಮೀಪದಲ್ಲಿದೆ. ಮತ್ತೊಂದು ಸ್ಮಾಲ್ ಬಜೆಟ್ ಸಿನಿಮಾ ಯಶಸ್ಸಿನ ಸನಿಹದಲ್ಲಿದೆ. ಸ್ಯಾಕ್ನಿಲ್ಕ್ ವರದಿ ಮಾಡಿದಂತೆ ರಿಲೀಸ್ ಆದ ದಿನದಿಂದ ಐದು ದಿನಗಳ ಕಲೆಕ್ಷನ್ 1.9 ಕೋಟಿ ರೂಪಾಯಿ ಆಗಿದೆ. ಇನ್ನು ಎರಡನೇ ವೀಕೆಂಡ್ ವೇಳೆಗೆ ಈ ಸಿನಿಮಾ 3 ಕೋಟಿ ರೂಪಾಯಿ ಸಮೀಪಿಸಬಹುದು.

5 ದಿನಗಳ ಕಲೆಕ್ಷನ್ ರಿಪೋರ್ಟ್

ಮೊದಲ ದಿನ ₹27 ಲಕ್ಷ
ಎರಡನೇ ದಿನ ₹34 ಲಕ್ಷ
ಮೂರನೇ ದಿನ ₹66 ಲಕ್ಷ
ನಾಲ್ಕನೇ ದಿನ ₹32 ಲಕ್ಷ
ಐದನೇ ದಿನ ₹31 ಲಕ್ಷ
ಒಟ್ಟು ₹1.90 ಕೋಟಿ

ಮುಂದಿನ ಲೆಕ್ಕಾಚಾರವೇನು?

'ಏಳುಮಲೆ' ಸಿನಿಮಾಗೊಂದು ಬಿಗ್‌ ಬೂಸ್ಟ್ ಬೇಕಿದೆ. ಮುಂಬರುವ ವೀಕೆಂಡ್‌ನಲ್ಲಿ ಎರಡು ಕೋಟಿಗೂ ಮೇಲೆ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಅಲ್ಲಿವರೆಗೂ ಸಿನಿಮಾ ಹೇಗೆ ಸಾಗುತ್ತೆ? ಸಿನಿಮಾ ತಂಡದ ಜನರನ್ನು ಥಿಯೇಟರ್‌ಗೆ ಕರ್ಕೊಂಡು ಬರುವಲ್ಲಿ ಯಶಸ್ವಿಯಾಗುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಅಲ್ಲದೇ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಿದೇ ಇರುವುದರಿಂದ ಏಳುಮಲೆಗೆ ಇದೊಂದು ಅಡ್ವಾಂಟೇಜ್ ಇದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Tharun Sudhir produced Ranna, Priyanka Achar starrer Elumale movie day 5 Box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X