Elumale Box Office Day 7: 7ನೇ ದಿನ 'ಏಳುಮಲೆ' ಕಲೆಕ್ಷನ್ ಹೇಗಿತ್ತು? 8ನೇ ದಿನ ಭವಿಷ್ಯವೇನು?

'ಸು ಫ್ರಮ್ ಸೋ' ಬಳಿಕ ಕನ್ನಡದಲ್ಲಿ ಮತ್ತೊಂದು ಸಿನಿಮಾ ಮೆಚ್ಚುಗೆ ಗಳಿಸಿದೆ ಅದುವೇ 'ಏಳುಮಲೆ'. ತರುಣ್ ಸುಧೀರ್ ನಿರ್ಮಾಣದಲ್ಲಿ ರಾಣಾ-ಪ್ರಿಯಾಂಕಾ ಆಚಾರ್ ನಟಿಸಿರುವ ಈ ಸಿನಿಮಾಗೆ ಫಸ್ಟ್ ಡೇ ಫಸ್ಟ್ ಶೋಯಿಂದಾನೇ ಪಾಸಿಟಿವ್ ರಿಸಲ್ಟ್ ಸಿಕ್ಕಿತ್ತು. ಹೀಗಾಗಿ ಸಿನಿಮಾ ದಿನದಿಂದ ದಿನಕ್ಕೆ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ದುಪ್ಪಟ್ಟಾಗುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅಂದ್ಕೊಂಡಂತೆ ಆಗದೇ ಇದ್ದರೂ ಬಾಕ್ಸಾಫೀಸ್ ಕಲೆಕ್ಷನ್‌ ಸ್ಟಡಿಯಾಗಿದೆ.

ಕಳೆದ 7 ದಿನಗಳಲ್ಲಿ ಪುನೀತ್ ರಂಗಸ್ವಾಮಿ ನಿರ್ದೇಶಿಸಿರುವ 'ಏಳುಮಲೆ' ಡಿಸೆಂಟ್ ಕಲೆಕ್ಷನ್ ಮಾಡಿದೆ. ಇಂದಿನಿಂದ ಇನ್ನೊಂದು ವೀಕೆಂಡ್ ಶುರುವಾಗಿದ್ದು, 8 ದಿನದಿಂದ ಬಾಕ್ಸಾಫೀಸ್‌ನಲ್ಲಿ ಮತ್ತೆ ಏರಿಕೆಯಾಗಬಹುದೆಂಬ ನಿರೀಕ್ಷೆಯಿದೆ. ಇನ್ನೊಂದು ಕಡೆ ತಮಿಳು ಹಾಗೂ ತೆಲುಗು ಭಾಷೆಯಲ್ಲೂ ರಿಲೀಸ್‌ಗೆ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಈ ಎರಡು ಭಾಷೆಯ ಡಬ್ಬಿಂಗ್ ವರ್ಷನ್ ರಿಲೀಸ್ ಮಾಡುವ ಆಲೋಚನೆಯಿದೆ.

Ranna Priyanka Achar starrer Elumale movie day 7 Box office collection report

'ಏಳುಮಲೆ' ಥ್ರಿಲ್ಲರ್ ಲವ್ ಸ್ಟೋರಿ ಆಗಿರುವುದರಿಂದ ಸ್ಲೋ ಪಿಕಪ್ ಆಗುತ್ತಿದೆ. ಸಿನಿಮಾದ ಮೇಕಿಂಗ್ ಚೆನ್ನಾಗಿದೆ. ಕಂಟೆಂಟ್ ಯುವ ಸಮುದಾಯವನ್ನು ಸೆಳೆಯುತ್ತಿದೆ. ಹೀಗಾಗಿ 2ನೇ ವೀಕೆಂಡ್‌ನಲ್ಲಿ ಕಲೆಕ್ಷನ್ ಚೆನ್ನಾಗಿ ಆಗುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಸದ್ಯ 7ನೇ ದಿನ ಕೂಡ ಬಾಕ್ಸಾಫೀಸ್‌ನಲ್ಲಿ ಮೋಸವೇನೂ ಆಗಿಲ್ಲ. ಹಾಗಿದ್ರೆ, ಎಷ್ಟು ಕಲೆಕ್ಷನ್ ಆಗಿದೆ? ವೀಕೆಂಡ್‌ ಲೆಕ್ಕಾಚಾರವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

7ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್

'ಏಳುಮಲೆ' ಕರ್ನಾಟಕ ಹಾಗೂ ತಮಿಳುನಾಡಿಗೆ ಸಂಬಂಧಿಸಿದ ಕಥೆ. ತಮಿಳುನಾಡಿನ ಹುಡುಗಿ ಹಾಗೂ ಕರ್ನಾಟಕದ ಹುಡುಗನ ಲವ್ ಸ್ಟೋರಿಯನ್ನು ನೈಜ ಘಟನೆಗಳೊಂದಿಗೆ ತೆರೆಮೇಲೆ ತರಲಾಗಿದೆ. ಈ ಕಥೆಯನ್ನು ತೆರೆಮೇಲೆ ಪ್ರಸ್ತುತ ಪಡಿಸಿದ ರೀತಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಯಾಕ್ನಿಲ್ಕ್ ಪ್ರಕಾರ, ನಿನ್ನೆ (ಸೆಪ್ಟೆಂಬರ್ 11) ಅಂದರೆ, 7ನೇ ದಿನ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 23 ಲಕ್ಷ ರೂಪಾಯಿಯನ್ನು ಕಲೆ ಹಾಕಿದೆ. 6ನೇ ದಿನ ಕೂಡ 25 ಲಕ್ಷ ರೂಪಾಯಿ ಕಲೆ ಹಾಕಿತ್ತು. ಹೀಗಾಗಿ ಬಾಕ್ಸಾಫೀಸ್ ಕಲೆಕ್ಷನ್ ಸ್ಟಡಿಯಾಗಿದೆ.

7 ದಿನಗಳ ಒಟ್ಟು ಕಲೆಕ್ಷನ್ ಹೀಗಿದೆ

ಹೊಸಬರ ಸಿನಿಮಾ 'ಏಳುಮಲೆ' ವೀಕ್‌ ಡೇಸ್‌ನಲ್ಲಿ ಬಾಕ್ಸಾಫೀಸ್‌ ಸ್ಟಡಿಯಾಗಿರೋದು ಒಳ್ಳೆಯ ಸೂಚನೆ. ವೀಕೆಂಡ್‌ನಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ ಅನ್ನೋದರ ಮೇಲೆ ಎರಡನೇ ವಾರದ ಭವಿಷ್ಯ ನಿರ್ಧಾರ ಆಗುತ್ತೆ. ಸದ್ಯಕ್ಕೆ 7 ದಿನಗಳಲ್ಲಿ ಈ ಸಿನಿಮಾ 2 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

ಏಳುಮಲೆ ಏಳು ದಿನದ ಕಲೆಕ್ಷನ್

ಮೊದಲ ದಿನ ₹27 ಲಕ್ಷ
ಎರಡನೇ ದಿನ ₹34 ಲಕ್ಷ
ಮೂರನೇ ದಿನ ₹66 ಲಕ್ಷ
ನಾಲ್ಕನೇ ದಿನ ₹32 ಲಕ್ಷ
ಐದನೇ ದಿನ ₹31 ಲಕ್ಷ
ಆರನೇ ದಿನ ₹25 ಲಕ್ಷ
ಏಳನೇ ದಿನ ₹23 ಲಕ್ಷ
ಒಟ್ಟು ₹2.38 ಕೋಟಿ

Ranna Priyanka Achar starrer Elumale movie day 7 Box office collection report

ವೀಕೆಂಡ್ ಲೆಕ್ಕಾಚಾರವೇನು?

ರಾಣಾ-ಪ್ರಿಯಾಂಕಾ ಆಚಾರ್ ಸಿನಿಮಾ 'ಏಳುಮಲೆ' ವೀಕೆಂಡ್‌ನಲ್ಲಿ ಪಿಕಪ್ ಆಗಲೇಬೇಕು. ಶನಿವಾರ ಹಾಗೂ ಭಾನುವಾರ ಜನ ಥಿಯೇಟರ್‌ಗೆ ನುಗ್ಗಿ ಬಂದರೆ, ಒಂದೊಳ್ಳೆ ಕಲೆಕ್ಷನ್ ಆಗುತ್ತೆ. ಈ ವೀಕೆಂಡ್‌ನಲ್ಲಿ 4.50 ರಿಂದ 5 ಕೋಟಿವರೆಗೂ ಕಲೆಕ್ಷನ್ ಆದರೆ, ಸಿನಿಮಾ ತಂಡಕ್ಕೆ ಹುರುಷು ಹೆಚ್ಚಾಗುತ್ತೆ. ಯಾಕಂದ್ರೆ, ಕನ್ನಡದ ಮತ್ತೊಂದು ಒಳ್ಳಯ ಸಿನಿಮಾ ಗೆಲ್ಲಲೇ ಬೇಕಿದೆ. 'ಸು ಫ್ರಮ್ ಸೋ' ಜೋಷ್ ಅನ್ನು ಮುಂದುವರೆಸಿಕೊಂಡು ಹೋಗಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Tharun Sudhir produced Ranna, Priyanka Achar starrer Elumale movie day 7 Box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X