Elumale Box Office Day 9: 9ನೇ ದಿನ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತೇ 'ಏಳುಮಲೆ'? ಇಲ್ಲಿವರೆಗೂ ಎಷ್ಟಾಗಿದೆ ಕಲೆಕ್ಷನ್?

'ಮಾದೇವ', 'ಸು ಫ್ರಮ್ ಸೋ' ಬಳಿಕ ಮತ್ತೊಂದು ಒಳ್ಳೆಯ ಸಿನಿಮಾ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅದುವೇ ತರುಣ್ ಸುಧೀರ್ ನಿರ್ಮಾಣ ಮಾಡಿರುವ 'ಏಳುಮಲೆ'. ನೈಜ ಘಟನೆಗಳನ್ನು ಇಟ್ಟುಕೊಂಡು ಹೆಣೆದ ಕಥೆಗೆ ಸಿನಿಮಾ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಾಗೂ ಪ್ರಿಯಾಂಕಾ ಆಚಾರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದ ನಟಿಸಿದ್ದಾರೆ.

ಕರ್ನಾಟಕ ಹಾಗೂ ತಮಿಳುನಾಡು ಬಾರ್ಡರ್‌ನಲ್ಲಿ ನಡೆಯುವ ಕಥೆ ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ. ಈ ಸಿನಿಮಾ ರಿಲೀಸ್ ಆಗಿ ಇಂದಿಗೆ (ಸೆಪ್ಟೆಂಬರ್ 14) 10ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 9 ದಿನಗಳಿಂದಲೂ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಸ್ಟಡಿಯಾಗಿಯೇ ಇದೆ. ಎರಡನೇ ವೀಕೆಂಡ್‌ಗೆ ದೊಡ್ಡ ಕಲೆಕ್ಷನ್ ಅನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ, ಆ ಲೆಕ್ಕಾಚಾರ ತಲೆಕೆಳಗಾಗಿದೆ.

Ranna Priyanka Achar starrer Elumale movie day 9 Box office collection report

ಹಾಗಂತ ಕಲೆಕ್ಷನ್ ಡಿಸೆಂಟ್ ಆಗಿದೆ. ಹೊಸಬರ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೋ ಆ ಹಾದಿಯಲ್ಲಿಯೇ ಸಾಗುತ್ತಿದೆ. ತರುಣ್ ಸುಧೀರ್ ನಿರ್ಮಾಣದ ಈ ಸಿನಿಮಾ ಕಲೆಕ್ಷನ್ ಭಾನುವಾರ (ಸೆಪ್ಟೆಂಬರ್ 14) ಎಷ್ಟಾಗುತ್ತೆ ಅನ್ನೋದನ್ನು ಎದುರು ನೋಡುತ್ತಿದ್ದಾರೆ. ಹಾಗಿದ್ದರೆ, 9ನೇ ದಿನವಾದ ಶನಿವಾರ ಈ ಸಿನಿಮಾ ಗಳಿಸಿದ್ದು ಎಷ್ಟು? ಭಾನುವಾರದ ಲೆಕ್ಕಾಚಾರವೇನು? ಎಷ್ಟು ಕಲೆಕ್ಷನ್ ಮಾಡಬಹುದು? ತಿಳಿಯುವುದಕ್ಕೆ ಮುಂದೆ ಓದಿ.

9ನೇ ದಿನದ ಕಲೆಕ್ಷನ್ ಎಷ್ಟು?

'ಏಳುಮಲೆ' ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಕನೆಕ್ಟ್ ಆಗುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತಿದೆ. ಮೊದಲ ದಿನದಿಂದ 9ನೇ ದಿನದವರೆಗೂ 'ಏಳುಮಲೆ' ಸಿನಿಮಾ ಕಲೆಕ್ಷನ್ ಒಂದೇ ರೀತಿಯಿದೆ. ಸ್ಯಾಕ್ನಿಲ್ಕ್ ವರದಿ ಮಾಡಿದಂತೆ 9ನೇ ದಿನ ಅಂದರೆ, ಎರಡನೇ ವೀಕೆಂಡ್‌ನ ಮೊದಲ ದಿನ ₹26 ಲಕ್ಷ ಕಲೆಕ್ಷನ್ ಆಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳು ₹50 ಲಕ್ಷ ನಿರೀಕ್ಷೆ ಮಾಡಿದ್ದರು. ಆದರೆ, ನಿರೀಕ್ಷೆ ಮಾಡದಷ್ಟು ಕಲೆಕ್ಷನ್ ಆಗದೇ ಹೋದರೂ, 8ನೇ ದಿನಕ್ಕಿಂತ ಹೆಚ್ಚು ಗಳಿಕೆ ಕಂಡಿದೆ.

9 ದಿನಗಳ ಒಟ್ಟು ಕಲೆಕ್ಷನ್

ಪುನೀತ್ ರಂಗಸ್ವಾಮಿ ನಿರ್ದೇಶನದ 'ಏಳುಮಲೆ' ಸಿನಿಮಾ ಕಲೆಕ್ಷನ್ ಡಿಸೆಂಟ್ ಆಗಿದೆ. ಸಿನಿಮಾಗೆ ಹಾಕಿದ ಬಂಡವಾಳ ಹೆಚ್ಚು ಕಡಿಮೆ ಬಂದಂತೆ ಆಗಿದೆ. ಆದರೆ, ಸಿನಿಮಾತಂಡ ಇನ್ನೂ ದೊಡ್ಡ ಮಟ್ಟದ ನಿರೀಕ್ಷೆ ಮಾಡಿದ್ದರು. ಈ 9 ದಿನಗಳಲ್ಲಿ ಇನ್ನೋ ದೊಡ್ಡ ಮಟ್ಟದ ಕಲೆಕ್ಷನ್ ಆಗಬಹುದಿತ್ತು. ಎಲ್ಲೋ ಎಡವಿದೆ ಅನ್ನೋ ಅಭಿಪ್ರಾಯನೂ ವ್ಯಕ್ತವಾಗುತ್ತಿದೆ. ಸದ್ಯ 9 ದಿನಗಳ ಒಟ್ಟು ಕಲೆಕ್ಷನ್ ಕರ್ನಾಕಟದಲ್ಲಿ ₹2.82 ಕೋಟಿ ಹಾಗೂ ವಿಶ್ವದಾದ್ಯಂತ ₹3.18 ಕೋಟಿ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

ಏಳುಮಲೆ 9 ದಿನಗಳ ಕಲೆಕ್ಷನ್

ಮೊದಲ ದಿನ ₹27 ಲಕ್ಷ
ಎರಡನೇ ದಿನ ₹34 ಲಕ್ಷ
ಮೂರನೇ ದಿನ ₹66 ಲಕ್ಷ
ನಾಲ್ಕನೇ ದಿನ ₹32 ಲಕ್ಷ
ಐದನೇ ದಿನ ₹31 ಲಕ್ಷ
ಆರನೇ ದಿನ ₹25 ಲಕ್ಷ
ಏಳನೇ ದಿನ ₹23 ಲಕ್ಷ
ಎಂಟನೇ ದಿನ ₹18 ಲಕ್ಷ
ಒಂಬತ್ತನೇ ದಿನ ₹26 ಲಕ್ಷ
ಒಟ್ಟು ₹2.82 ಕೋಟಿ

Ranna Priyanka Achar starrer Elumale movie day 9 Box office collection report

ಭಾನುವಾರದ ಮೇಲೆ ಕಣ್ಣು

'ಏಳುಮಲೆ' ಇಂದು ಭಾನುವಾರ ಆಗಿರುವ ಹಿನ್ನೆಲೆಯಲ್ಲಿ ಕಲೆಕ್ಷನ್ ಹೆಚ್ಚಾಗುವ ನಿರೀಕ್ಷೆಯಿದೆ. ಎರಡನೇ ವೀಕೆಂಡ್‌ನಲ್ಲಿ ಕಲೆಕ್ಷನ್ ₹50 ಲಕ್ಷದಿಂದ ₹60 ಲಕ್ಷದವರೆಗೂ ಆಗಬಹುದೆಂಬ ನಿರೀಕ್ಷೆಯಿದೆ. ಇನ್ನು ಟ್ರೇಡ್‌ ಎಕ್ಸ್‌ಪರ್ಟ್‌ಗಳ ಪ್ರಕಾರ, ಹೀಗೆ ಮುಂದುವರೆದರೆ, ಲೈಫ್‌ ಟೈಮ್ ಕಲೆಕ್ಷನ್ ₹4.50 ಕೋಟಿಯಿಂದ ₹5 ಕೋಟಿ ಆಗಬಹುದೆಂಬ ಅಂದಾಜು ಹಾಕಲಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Tharun Sudhir produced Ranna, Priyanka Achar starrer Elumale movie day 9 Box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X