ಇರೋ ಬರೋ ದಾಖಲೆಗಳನ್ನೆಲ್ಲ ಮುರಿದ 'ಧುರಂಧರ್'; 4 ವಾರದಿಂದ ಕರ್ನಾಟಕದ ಗಳಿಸಿದ್ದೆಷ್ಟು ಗೊತ್ತೇ?

ಬಾಲಿವುಡ್ ಸ್ಟಾರ್ ನಟ ರಣ್‌ವೀರ್ ಸಿಂಗ್ ನಟನೆಯ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಂದೊಂದೇ ದಾಖಲೆಗಳನ್ನು ಹೊಡೆದಾಕುತ್ತಾ ಮುನ್ನುತ್ತಾ ಮುಂದೆ ಸಾಗುತ್ತಿದೆ. ಎಲ್ಲರ ಬಾಯಲ್ಲಿಯೂ 'ಧುರಂಧರ್' ಸಿನಿಮಾ ಬಗ್ಗೆನೇ ಚರ್ಚೆ. ಈ ಸಿನಿಮಾ ರಿಲೀಸ್‌ಗೂ ಮುನ್ನ ಈ ಮಟ್ಟಿಗೆ ಸದ್ದು ಮಾಡಬಹುದೆಂಬ ಚಿಕ್ಕದೊಂದು ಸುಳಿವು ಕೂಡ ಇರಲಿಲ್ಲ.

'ಧುರಂಧರ್' ಸಿನಿಮಾ ರಿಲೀಸ್‌ಗೂ ಮುನ್ನ ಅಡ್ವಾನ್ಸ್ ಬುಕಿಂಗ್ ಕೂಡ ಸಾಧಾರಣವಾಗಿತ್ತು. ಈ ಸಿನಿಮಾ ಹೆಚ್ಚೇನು ಬಜ್ ಅನ್ನು ಕ್ರಿಯೇಟ್ ಮಾಡಿರಲಿಲ್ಲ. ಆದರೆ, ಅದ್ಯಾವಾಗ ಥಿಯೇಟರ್‌ಗೆ ಲಗ್ಗೆ ಇಟ್ಟಿತೋ ಅಲ್ಲಿಂದ 'ಧುರಂಧರ್' ಬಾಕ್ಸಾಫೀಸ್‌ನಲ್ಲಿ ನಿಧಾನವಾಗಿ ಲೂಟಿ ಮಾಡುವುದಕ್ಕೆ ಶುರು ಮಾಡಿತ್ತು. ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ₹100 ಕೋಟಿ, ಬಳಿಕ ₹500 ಕೋಟಿ ಹೀಗೆ ಈಗ ₹1000 ಕೋಟಿಗೆ ಲಗ್ಗೆ ಇಟ್ಟಿದೆ.

Ranveer Singh Akshay Khanna Sanjay Dutt movie Dhurandhar Karnataka Box Office Collection Report

ರಣ್‌ವೀರ್ ಸಿಂಗ್ ಸಿನಿಮಾ ಕೇವಲ ಉತ್ತರ ಭಾರತದಲ್ಲಷ್ಟೇ ಅಲ್ಲ. ದಕ್ಷಿಣ ಭಾರತದಲ್ಲಿಯೂ ಮಸ್ತ್ ಕಲೆಕ್ಷನ್ ಮಾಡಿದೆ. ಅದರಲ್ಲೂ ಕರ್ನಾಟಕದಲ್ಲಿ ಕಲೆಕ್ಷನ್ ಎಷ್ಟಾಗಿದೆ ಗೊತ್ತೇ? ಈ ತಿಂಗಳು ಬಿಡುಗಡೆಯಾದ ಸಿನಿಮಾಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಡೆವಿಲ್, ಮಾರ್ಕ್, 45 ಈ ಮೂವರು ದಿಗ್ಗಜರ ಸಿನಿಮಾಗಳಿಗೆ ಡ್ಯಾಮೇಜ್ ಮಾಡಿ ಮುನ್ನುಗ್ಗುತ್ತಿದೆ. ಹಾಗಿದ್ದರೆ, 4 ವಾರಗಳಲ್ಲಿ 'ಧುರಂಧರ್' ಕರ್ನಾಟಕದಲ್ಲಿ ಗಳಿಸಿದ್ದು ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

'ಧುರಂಧರ್' 4 ವಾರಗಳ ಕಲೆಕ್ಷನ್

'ಧುರಂಧರ್' ಕರ್ನಾಟಕದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಮಲ್ಟಿಪ್ಲೆಕ್ಸ್‌ನಲ್ಲೇ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗಿತ್ತು. ಅವುಗಳಿಂದಲೇ 'ಧುರಂಧರ್' ಸಿನಿಮಾ ನಾಲ್ಕು ವಾರಗಳ ಕಾಲ ನಿರಂತರವಾಗಿ ಬಾಕ್ಸಾಫೀಸ್ ಅನ್ನು ದೋಚುತ್ತಾ ಮುನ್ನಡೆಯುತ್ತಿದೆ. ಕರ್ನಾಟಕದ ವಿತರಕರ ಅಂಕಿ-ಅಂಶಗಳ ಪ್ರಕಾರ ಈ ಸಿನಿಮಾ ₹50 ಕೋಟಿಯಿಂದ ₹55 ಕೋಟಿವರೆಗೂ ಕಲೆಕ್ಷನ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ.

'ಧುರಂಧರ್' 4 ವಾರಗಳ ಕಲೆಕ್ಷನ್

1ನೇ ವಾರ ₹19 ಕೋಟಿ (Net) ₹15 ಕೋಟಿ (Share)
2ನೇ ವಾರ ₹28 ಕೋಟಿ (Net) ₹14 ಕೋಟಿ (Share)
3ನೇ ವಾರ ₹21 ಕೋಟಿ (Net) ₹11.5 ಕೋಟಿ (Share)
4ನೇ ವಾರ ₹21 ಕೋಟಿ (Net) ₹10 ಕೋಟಿ (Share)
ಒಟ್ಟು ₹50.5 ಕೋಟಿ (Share)

Ranveer Singh Akshay Khanna Sanjay Dutt movie Dhurandhar Karnataka Box Office Collection Report

ಕನ್ನಡದ ದಿಗ್ಗಜರಿಗೆ ಟಕ್ಕರ್

ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್' ಕನ್ನಡ ಸೂಪರ್‌ಸ್ಟಾರ್‌ಗಳಿಗೆ ಟಕ್ಕರ್ ಕೊಟ್ಟಿದೆ. ಡಿಸೆಂಬರ್ ತಿಂಗಳು ರಿಲೀಸ್ ಆಗಿದ್ದ ದರ್ಶನ್ ಸಿನಿಮಾ 'ಡೆವಿಲ್'ಗೂ ಮೀರಿ ಕಲೆಕ್ಷನ್ ಮಾಡಿದೆ. ಇನ್ನು ಡಿಸೆಂಬರ್ ತಿಂಗಳ ಕೊನೆಯಲ್ಲಿ ರಿಲೀಸ್ ಆಗಿದ್ದ 'ಮಾರ್ಕ್', '45' ಕಲೆಕ್ಷನ್‌ಗೂ ಅಧಿಕ ಗಳಿಕೆ ಮಾಡಿದೆ. 2026ರ ಮೊದಲ ದಿನವೇ ಭಾರತದಾದ್ಯಂತ ₹17 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

More from Filmibeat

Read more about: ranveer singh boxoffice report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X