Dhurandhar Box Office Day 1: ರಣ್‌ವೀರ್ ಸಿಂಗ್ ಅಬ್ಬರಿಸಿದ 'ಧುರಂಧರ್' ಮೊದಲ ದಿನದ ಕಲೆಕ್ಷನ್ ಎಷ್ಟು?
ಈ ವಾರ ಬಾಲಿವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾ 'ಧುರಂಧರ್' ರಿಲೀಸ್ ಆಗಿದೆ. ಬಹಳ ದಿನಗಳಿಂದ ಯಶಸ್ಸಿಗಾಗಿ ಹುಡುಕಾಡುತ್ತಿದ್ದ ರಣ್‌ವೀರ್ ಸಿಂಗ್ ಈ ಸಿನಿಮಾ ಮೂಲಕ ತನ್ನ ವೃತ್ತಿ ಬದುಕಿನಲ್ಲಿ ಅತೀ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಂಡಿದೆ. ಸಿನಿಮಾ ಬಿಡುಗಡೆ ಸಮಯದಲ್ಲಿ ಅಡ್ವಾನ್ಸ್ ಬುಕಿಂಗ್‌ಗೆ ಹೇಳಿಕೊಳ್ಳುವಂತಹ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ, ರಿಲೀಸ್ ಆಗುತ್ತಿದ್ದಂತೆ ಜಾದುವೇ ನಡೆದಿದೆ.
ಕಳೆದ ಕೆಲವು ವರ್ಷಗಳಿಂದ ರಣ್‌ವೀರ್ ಸಿಂಗ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಮೋಡಿ ಮಾಡಿರಲಿಲ್ಲ. ಹೀಗಾಗಿ ರಣ್‌ವೀರ್ ಸಿಂಗ್ ಕರಿಯರ್‌ಗೆ ಒಂದು ಮೆಗಾ ಸಕ್ಸಸ್ ಸಿನಿಮಾ ಬೇಕಿದೆ. ಅದಕ್ಕೆ ನಿನ್ನೆ (ಡಿಸೆಂಬರ್ 6) ರಿಲೀಸ್ ಆಗಿರುವ 'ಧುರಂಧರ್' ಸಿನಿಮಾ ಸಾಕ್ಷಿಯಾಗುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಆದರೆ, 'ಧುರಂಧರ್' ಅಡ್ವಾನ್ಸ್ ಬುಕಿಂಗ್ ಉತ್ತಮವಾಗಿಯೇ ಶುರುವಾಗಿದ್ದರೂ ಆಮೇಲೆ ನಿಧಾನಗತಿಯಲ್ಲಿ ಸಾಗಿತ್ತು. ಇಷ್ಟೇ ಅಲ್ಲದೆ. ಮೊದಲ ದಿನದ ಆರಂಭದ ಶೋಗಳಿಗನ್ನೂ ನೋಡುವುದಕ್ಕೆ ಜನರು ಬಂದಿರಲಿಲ್ಲ. ಆದರೆ, ಸಂಜೆಯ ಶೋಗಳಿಗೆ ಜನರು ಥಿಯೇಟರ್ ಕಡೆಗೆ ಬರುವುದಕ್ಕೆ ಶುರು ಮಾಡಿದ್ದರು. ಹಾಗಿದ್ದರೆ, ಮೊದಲ ದಿನ ರಣ್‌ವೀರ್ ಸಿಂಗ್ ಸಿನಿಮಾ ಗಳಿಸಿದ್ದೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
'ಧುರಂಧರ್' ಫಸ್ಟ್ ಡೇ ಕಲೆಕ್ಷನ್ ಎಷ್ಟು?
ರಣ್‌ವೀರ್ ಸಿಂಗ್ ವೃತ್ತಿ ಬದುಕಿಗೆ 'ಧುರಂಧರ್' ಸಿನಿಮಾ ಗೆಲ್ಲುವುದು ಬಹಳ ಮುಖ್ಯವಾಗಿದೆ. ಸುಮಾರು 5 ಸಾವಿರ ಸ್ಕ್ರೀನ್‌ಗಳಲ್ಲಿ ತೆರೆಕಂಡಿದ್ದ ಈ ಸಿನಿಮಾ ಅಡ್ವಾನ್ಸ್ ಬುಕಿಂಗ್‌ನಿಂದ ಕೇವಲ ₹9 ಕೋಟಿಯಷ್ಟೇ ಕಲೆಕ್ಷನ್ ಆಗಿತ್ತೆಂದು ವರದಿಯಾಗಿದೆ. ಸ್ಯಾಕ್ನಿಲ್ಕ್ ವರದಿ ಮಾಡಿರುವ ಪ್ರಕಾರ, ಮೊದಲ ದಿನದ ಆರಂಭದ ಶೋಗಳು ಕೇವಲ %16 ರಷ್ಟು ಮಾತ್ರ ಇದ್ದರೂ, ಸಂಜೆ ವೇಳೆಗೆ ತುಂಬಿದ ಪ್ರದರ್ಶನಗಳನ್ನು ಕಂಡಿವೆ. ಈ ಸಿನಿಮಾ ಫಸ್ಟ್ ಡೇ ಬರೋಬ್ಬರಿ ₹27 ಕೋಟಿ (Net) ರೂಪಾಯಿ ಕಲೆಕ್ಷನ್ ಮಾಡಿದೆ.
'ಕಾಂತಾರ'-'ಅನಿಮಲ್' ಹಿಂದಿಕ್ಕಲಿಲ್ಲ
ಆದಿತ್ಯ ಧರ್ ನಿರ್ದೇಶಿಸಿರುವ 'ಧುರಂಧರ್' ಸಿನಿಮಾ ಕಲೆಕ್ಷನ್ ₹27 ಕೋಟಿ ದಾಟಬಹುದೆಂದು ನಿರೀಕ್ಷೆಯನ್ನೂ ಮಾಡಿರಲಿಲ್ಲ. ಆದರೆ, ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ. ಆದರೂ, ಈ 'ಕಾಂತಾರ ಚಾಪ್ಟರ್ 1' (₹61.85 ಕೋಟಿ) ಹಾಗೂ ರಣ್‌ಬೀರ್ ಕಪೂರ್ ನಟನೆಯ 'ಅನಿಮಲ್' (₹64 ಕೋಟಿ) ಕಲೆಕ್ಷನ್ ಮಾಡಿತ್ತು. ಈ ದಾಖಲೆಯ ಹತ್ತಿರಕ್ಕೂ ಸುಳಿಯುವುದಕ್ಕೂ ಆಗಲಿಲ್ಲ. ಆದರೂ, ರಣ್‌ವೀರ್ ಸಿಂಗ್ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಓಪನಿಂಗ್ ಪಡೆದುಕೊಂಡ ಸಿನಿಮಾ ಎನಿಸಿಕೊಂಡಿದೆ.

ಬೆಸ್ಟ್ ಓಪನಿಂಗ್ ಪಡೆದ ಸಿನಿಮಾಗಳು
ರಣ್‌ವೀರ್ ಸಿಂಗ್ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಓಪನಿಂಗ್ ಪಡೆದ ಸಿನಿಮಾಗಳ ಲಿಸ್ಟ್ ಇಲ್ಲಿದೆ. '83' ಸಿನಿಮಾ ಮೊದಲ ದಿನ ಗಳಿಸಿದ್ದು ₹12.64 ಕೋಟಿ, 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ₹11.10 ಕೋಟಿ, 'ಸಿಂಬ' ₹20.72 ಕೋಟಿ ಗಳಿಸಿದೆ. ಹೀಗಾಗಿ 'ಧುರಂಧರ್' ₹27 ಕೋಟಿ ಕಲೆಕ್ಷನ್ ಮಾಡುವ ಮೂಲಕ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











