Dhurandhar Box Office Day 2: 2ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಗೆದ್ದ ರಣ್‌ವೀರ್ ಸಿಂಗ್; 'ಟಾಕ್ಸಿಕ್'ಗೆ ಟಕ್ಕರ್ ಫಿಕ್ಸ್
ಬಾಲಿವುಡ್‌ನ ಮತ್ತೊಂದು ಸ್ಪೈ ಥ್ರಿಲ್ಲರ್ ಸಿನಿಮಾ 'ಧುರಂಧರ್' ರಿಲೀಸ್ ಆಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಅಂತ ಸಿನಿಮಾವನ್ನು ನಿರ್ದೇಶಿಸಿರುವ ಆದಿತ್ಯ ಧರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ರಣ್‌ವೀರ್ ಸಿಂಗ್ ಹಾಗೂ ಆದಿತ್ಯ ಧರ್ ಕಾಂಬಿನೇಷನ್‌ನ ಮೊದಲನೇ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆಯನ್ನು ಕಾಣುತ್ತಿದೆ.
ಕೆಲವು ಸಿನಿಮಾಗಳಲ್ಲಿ ಸತತ ಸೋಲುಗಳನ್ನೇ ಕಾಣುತ್ತಿದ್ದ ರಣ್‌ವೀರ್ ಸಿಂಗ್ ಕೊನೆಗೆ ಗೆಲುವಿನ ನಗೆಯನ್ನು ಬೀರುತ್ತಿದ್ದಾರೆ. ಮೊದಲ ಎರಡು ದಿನ 'ಧುರಂಧರ್' ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ವೀಕೆಂಡ್‌ನಲ್ಲಿ ಈ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಆಸಕ್ತಿ ತೋರುತ್ತಿದ್ದಾರೆ. ಅಡ್ವಾನ್ಸ್ ಬುಕಿಂಗ್‌ಗೆ ಅಷ್ಟೊಂದು ಆಸಕ್ತಿ ತೋರಿಸದ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿದ್ದಾರೆ.

ಮೊದಲ ದಿನ 'ಧುರಂಧರ್' ರಣ್‌ವೀರ್ ಸಿಂಗ್ ವೃತ್ತಿ ಬದುಕಿನಲ್ಲಿಯೇ ಅತೀ ದೊಡ್ಡ ಓಪನಿಂಗ್ ಕೊಟ್ಟಿದೆ. ಇನ್ನು ಎರಡನೇ ದಿನವೂ ಮೊದಲನೇ ದಿನಕ್ಕೆ ಹೋಲಿಕೆ ಮಾಡಿದರೆ, ಹೆಚ್ಚು ಕಲೆಕ್ಷನ್ ಆಗಿದೆ. ಸದ್ಯ ಬಾಕ್ಸಾಫೀಸ್‌ನಿಂದ ಪಾಸಿಟಿವ್ ರಿಪೋರ್ಟ್ ಸಿಕ್ಕಿದೆ. ಹಾಗಿದ್ದರೆ, 'ಧುರಂಧರ್' 2ನೇ ದಿನದ ಕಲೆಕ್ಷನ್ ಎಷ್ಟು? ₹100 ಕೋಟಿ ಕ್ಲಬ್ ಸೇರುವುದಕ್ಕೆ ಇನ್ನೆಷ್ಟು ಬೇಕಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಧುರಂಧರ್' 2ನೇ ದಿನದ ಕಲೆಕ್ಷನ್?
ಮೊದಲ ದಿನ ಸೂಪರ್ ಓಪನಿಂಗ್ ಸಿಕ್ಕಿದ ಬಳಿಕ ಎರಡನೇ ದಿನ ಮೇಲೆ ಎಲ್ಲರ ಕಣ್ಣಿತ್ತು. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ 2ನೇ ದಿನವೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ. ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ವರದಿ ನೀಡುವ ಸ್ಯಾಕ್ನಿಲ್ಕ್ ಪ್ರಕಾರ 'ಧುರಂಧರ್' 2ನೇ ದಿನ ₹32 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಮೊದಲನೇ ದಿನಕ್ಕೂ ಎರಡನೇ ದಿನಕ್ಕೂ ಬರೋಬ್ಬರಿ ₹5 ಕೋಟಿ ಹೆಚ್ಚು ಕಲೆಕ್ಷನ್ ಆಗಿದೆ. ಇದು ಸಿನಿಮಾ ತಂಡಕ್ಕೆ ಹೊಸ ಹುರುಪು ನೀಡಿದೆ.
2 ದಿನಗಳಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್?
'ಧುರಂಧರ್' ಎರಡು ದಿನಗಳಲ್ಲಿ ಉತ್ತಮ ಕಲೆಕ್ಷನ್ ಆಗಿದೆ. ಭಾರತದಾದ್ಯಂತ ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ. ಅದೇ ದಕ್ಷಿಣ ಭಾರತದಲ್ಲಿ ಈ ಸಿನಿಮಾಗೆ ಅಷ್ಟೊಂದು ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಆದರೂ 'ಧುರಂದರ್' 2 ದಿನಗಳಲ್ಲಿ ಭಾರತದಾದ್ಯಂತ ₹60 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ವಿಶ್ವದಾದ್ಯಂತ ಸುಮಾರು ₹77 ರಿಂದ ₹78 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ನಿರೀಕ್ಷೆ ಮಾಡಲಾಗಿದೆ.
2 ದಿನಗಳ ಧುರಂಧರ್ ಕಲೆಕ್ಷನ್
1ನೇ ದಿನ ₹28 ಕೋಟಿ
2ನೇ ದಿನ ₹32 ಕೋಟಿ
ಒಟ್ಟು ₹60 ಕೋಟಿ

ಮೂರು ದಿನಗಳಲ್ಲಿ ₹100 ಕೋಟಿ
ರಣ್‌ವೀರ್ ಸಿಂಗ್ ಮೂರು ದಿನಗಳಲ್ಲಿ ವಿಶ್ವದಾದ್ಯಂತ ₹100 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಇಂದಿನ (ಡಿಸೆಂಬರ್ 7) ಕಲೆಕ್ಷನ್ ಎಷ್ಟಾಗುತ್ತೆ? ಅನ್ನೋದರ ಮೇಲೆ ಬಾಕ್ಸಾಫೀಸ್‌ನಲ್ಲಿ ನೂರು ಕೋಟಿ ಕಲೆಕ್ಷನ್ ಆಗುತ್ತಾ ಇಲ್ಲವೋ ಅನ್ನೋದು ಗೊತ್ತಾಗುತ್ತೆ. ಇಲ್ಲಿವರೆಗೂ ಸಿಕ್ಕಿರುವ ಮಾಹಿತಿ ಪ್ರಕಾರ, 'ಧುರಂಧರ್' ಸಿನಿಮಾ 3ನೇ ದಿನದ ಕಲೆಕ್ಷನ್ ಆರಾಮಾಗಿ ₹30 ಕೋಟಿ ದಾಟುತ್ತೆ ಎಂದು ಹೇಳಲಾಗಿದೆ. ಈ ಸಿನಿಮಾ ಒಂದು ವೇಳೆ ಬಾಕ್ಸಾಫೀಸ್‌ನಲ್ಲಿ ಮೆಗಾ ಸಕ್ಸಸ್ ಕಂಡರೇ, ಪಾರ್ಟ್ 2 ಮೂಲಕ 'ಟಾಕ್ಸಿಕ್'ಗೆ ಟಕ್ಕರ್ ಕೊಡೋದು ಗ್ಯಾರಂಟಿ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











