Dhurandhar Box Office Day 3:ರಣ್‌ವೀರ್ ಸಿಂಗ್ 'ಧುರಂಧರ್' ಭಾನುವಾರದ ಕಲೆಕ್ಷನ್ ಎಷ್ಟು? 3 ದಿನಕ್ಕೆ ₹100 ಕೋಟಿ ದಾಟಿತೇ?

ಸತತ ಸೋಲುಗಳಿಂದ ಬೇಸತ್ತು ಹೋಗಿದ್ದ ರಣ್‌ವೀರ್ ಸಿಂಗ್‌ಗೆ 'ಧುರಂಧರ್' ಸಿನಿಮಾ ಬಳಿಕ ಮತ್ತೆ ಜೀವ ಬಂದಂತೆ ಆಗಿದೆ. 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ನಿರ್ದೇಶಕ ಆದಿತ್ಯ ಧರ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ಒಪಿನಿಯನ್ ಸಿಗುತ್ತಿದೆ. ಮೊದಲ ಮೂರು ದಿನದ ಕಲೆಕ್ಷನ್ ಈ ಸಿನಿಮಾ ತಂಡಕ್ಕೆ ಹೊಸ ಹುರುಪು ನೀಡುವಂತೆ ಮಾಡಿದೆ.

ಬಾಲಿವುಡ್‌ನ ಮತ್ತೊಂದು ಸ್ಪೈ-ಥ್ರಿಲ್ಲರ್ ಸಿನಿಮಾ 'ಧುರಂಧರ್' 2025ರ ಕೊನೆಯಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಅತೀ ದೊಡ್ಡ ಓಪನಿಂಗ್ ಸಿಕ್ಕದೆ. ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿರುವುದು ಬಾಲಿವುಡ್ ಮಂದಿಗೆ ಜೀವ ಬಂದಂತೆ ಆಗಿದೆ. ಹಾಗೇ ರಣ್‌ವೀರ್ ಸಿಂಗ್ ವೃತ್ತಿ ಬದುಕಿನಲ್ಲೇ ಅತೀ ದೊಡ್ಡ ಓಪನಿಂಗ್ ಪಡೆದುಕೊಂಡ ಸಿನಿಮಾ ಎನಿಸಿಕೊಂಡಿದೆ.

Ranveer Singh movie Dhurandhar day 3 box office collection report

ಈ ಸಿನಿಮಾದಲ್ಲಿ ನಟಿಸಿರುವ ಎಲ್ಲಾ ನಟ-ನಟಿಯರ ಪರ್ಫಾಮೆನ್ಸ್‌ಗೆ ಪ್ರೇಕ್ಷಕರು ಭೇಷ್ ಎಂದಿದ್ದಾರೆ. ಕೇವಲ ಭಾರತದಲ್ಲಷ್ಟೇ ಅಲ್ಲ. ವಿಶ್ವದೆಲ್ಲೆಡೆ ಇರುವ ಭಾರತೀಯರಿಂದ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ಹಾಗಿದ್ದರೆ, ನಿನ್ನೆ ಭಾನುವಾರ (ಡಿಸೆಂಬರ್ 7) ಈ ಸಿನಿಮಾ ಗಳಿಸಿದ್ದೆಷ್ಟು? ಮೂರು ದಿನಗಳ ಒಟ್ಟು ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

3ನೇ ದಿನ 'ಧುರಂಧರ್' ಗಳಿಕೆ ಎಷ್ಟು?

ರಣ್‌ವೀರ್ ಸಿಂಗ್ ಸಿನಿಮಾ ವೀಕೆಂಡ್‌ನಲ್ಲಿ ಉತ್ತಮ ಗಳಿಕೆ ಮಾಡಿದೆ. ಮೊದಲ ದಿನದಿಂದ ಮೂರನೇ ದಿನದವರೆಗೂ ಬಾಕ್ಸಾಫೀಸ್‌ನಲ್ಲಿ ಏರಿಕೆಯಾಗಿದೆ. ಅದರಲ್ಲೂ ವೀಕೆಂಡ್‌ನಲ್ಲಿ ಸಿನಿಮಾದ ಗಳಿಕೆಯಲ್ಲಿ ಏರಿಕೆ ಕಂಡಿದೆ. ಇನ್ನು ಮೂರನೇ ದಿನವಾದ ಭಾನುವಾರ 'ಧುರಂಧರ್' ಸಿನಿಮಾದ ಕಲೆಕ್ಷನ್ ನಿರೀಕ್ಷೆ ಮೀರಿದಷ್ಟು ಏರಿಕೆಯಾಗಿದೆ. ಸ್ಯಾಕ್ನಿಲ್ಕ್ ಪ್ರಕಾರ, 2ನೇ ದಿನಕ್ಕೆ ಹೋಲಿಕೆ ಮಾಡಿದರೆ, 3ನೇ ದಿನದ ಕಲೆಕ್ಷನ್ ₹11 ಕೋಟಿ ಹೆಚ್ಚು ಕಲೆಕ್ಷನ್ ಮಾಡಿದೆ. ಅಂದರೆ, 3ನೇ ದಿನ ಈ ಸಿನಿಮಾ ಭಾರತದಲ್ಲಿ ಗಳಿಸಿದ್ದು ₹43 ಕೋಟಿ (Net).

3 ದಿನಗಳಲ್ಲಿ ₹100 ಕೋಟಿ ಕಲೆಕ್ಷನ್

ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್' ಮೂರು ದಿನಗಳಲ್ಲಿ ₹100 ಕೋಟಿಯ ಗಡಿ ದಾಟಿದೆ. ಬಾಲಿವುಡ್‌ನ ಸಿನಿಮಾ 3 ದಿನಗಳಲ್ಲಿ ₹100 ಕೋಟಿ ಕ್ಲಬ್ ಸೇರಿದ್ದು, ಇದೇ ಮೊದಲು. ದಕ್ಷಿಣ ಭಾರತದಲ್ಲಿ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ಸಿಗದೇ ಹೋದರೂ, 'ಧುರಂಧರ್ 2' ಕಲೆಕ್ಷನ್ ಮೆಚ್ಚಿಕೊಳ್ಳುವಂತಹದ್ದೇ. ಕೇವಲ ಭಾರತ ಅಷ್ಟೇ ಅಲ್ಲ. ವಿಶ್ವದಾದ್ಯಂತ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿದೆ. ಹಾಗಿದ್ದರೆ, ಭಾರತದಾದ್ಯಂತ ಮೂರು ದಿನಗಳಲ್ಲಿ ಗಳಿಸಿದ ಕಲೆಕ್ಷನ್ ಹೀಗಿದೆ.

3 ದಿನಗಳ ಧುರಂಧರ್ ಕಲೆಕ್ಷನ್ (Net)

1ನೇ ದಿನ ₹28 ಕೋಟಿ
2ನೇ ದಿನ ₹32 ಕೋಟಿ
3ನೇ ದಿನ ₹43 ಕೋಟಿ
ಒಟ್ಟು ₹103 ಕೋಟಿ

Ranveer Singh movie Dhurandhar day 3 box office collection report

ವಿಶ್ವದಾದ್ಯಂತ ಗಳಿಸಿದ್ದೆಷ್ಟು?

'ಧುರಂಧರ್' ಸಿನಿಮಾ ವರ್ಲ್ಡ್‌ವೈಡ್ ಕಲೆಕ್ಷನ್ ಕೂಡ ಸಖತ್ ಆಗಿಯೇ ಇದೆ. ಬಾಲಿವುಡ್ ವರದಿಗಳ ಪ್ರಕಾರ ಈ ಸಿನಿಮಾ ವಿಶ್ವದಾದ್ಯಂತ ಸುಮಾರು ₹150 ಕೋಟಿ (Gross) ಕಲೆಕ್ಷನ್ ಮಾಡಿದೆ. ಇಲ್ಲಿವರೆಗೂ ಈ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಆದರೆ, ಸೋಮವಾರದ ಪರೀಕ್ಷೆಯಲ್ಲಿ 'ಧುರಂಧರ್' ಗೆದ್ದರೆ, ಈ ವಾರ ಆರಾಮಾಗಿ ₹200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X