Dhurandhar Box Office Day 9:9ನೇ ಶೇ.61ರಷ್ಟು ಏರಿಕೆ.. ಧುರಂಧರ್ ಮುಂದೆ ಹಿಂದೆ ಬಿದ್ದ 'ಅಖಂಡ', 'ಡೆವಿಲ್'
ಬಾಲಿವುಡ್ ನಟ ರಣ್‌ವೀರ್ ಸಿಂಗ್ ಕೊನೆಗೂ ಯಶಸ್ಸಿನ ರುಚಿ ನೋಡಿದ್ದಾರೆ. ಬಹಳ ದಿನಗಳಿಂದ ಇವರು ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ್ದವು. ಇನ್ನೇನು ರಣ್‌ವೀರ್ ಸಿಂಗ್ ಕರಿಯರ್ ಆರಕ್ಕೆ ಏಳಲ್ಲ. ಮೂರಕ್ಕೆ ಬೀಳಲ್ಲ ಅನ್ನೋ ತರಾನೇ ಇತ್ತು. ಕೇವಲ ಮನಸ್ಸಿಗೆ ಬಂದಂತೆ ಫ್ಯಾಷನ್ ಮಾಡಿಕೊಂಡು ಓಡಾಡಿಕೊಂಡಿರುವ ನಟ ಎಂಬ ಅಭಿಪ್ರಾಯಕ್ಕೆ ಸಿನಿಮಾ ಮಂದಿನೇ ಬಂದಿದ್ದರು.
ಆದರೆ, ಈ ಟೀಕೆಗಳನ್ನು ತಲೆ ಕೆಳಗೆ ಮಾಡಿದ್ದು 'ಧುರಂಧರ್'. ಈ ಸಿನಿಮಾದ ಮೂಲಕ ರಣ್‌ವೀರ್ ಸಿಂಗ್ ಮತ್ತೆ ಯಶಸ್ಸಿನ ರುಚಿ ಸವಿಯುತ್ತಿದ್ದಾರೆ. ರಣ್‌ವೀರ್ ಸಿಂಗ್ ಮತ್ತೆ ಗೆದ್ದು ಬೀಗಿದ್ದಾರೆ. ಎರಡನೇ ವಾರದ ವೇಳೆ 'ಧುರಂಧರ್' ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಈ ಸಿನಿಮಾ 9ನೇ ದಿನ (ಡಿಸೆಂಬರ್ 13) ಶೇ.61ರಷ್ಟು ಏರಿಕೆಯಾಗಿದೆ.

'ಧುರಂಧರ್' ಬಾಲಿವುಡ್ ಸೈ-ಥ್ರಿಲ್ಲರ್ ಸಿನಿಮಾ. ರಣ್‌ವೀರ್ ಸಿಂಗ್ ಜೊತೆ ಅಕ್ಷಯ್ ಖನ್ನಾ, ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಅಂದರೆ, ರಣ್‌ವೀರ್ ಸಿಂಗ್‌ಗಿಂತ ಹೆಚ್ಚಾಗಿ ಅಕ್ಷಯ್ ಖನ್ನಾ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹಾಗಿದ್ದರೆ, 'ಧುರಂಧರ್' 9ನೇ ದಿನದ ಕಲೆಕ್ಷನ್ ಎಷ್ಟು? 9 ದಿನಗಳಲ್ಲಿ ಎಷ್ಟು ಕಲೆ ಹಾಕಿದೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಧುರಂಧರ್' 9ನೇ ದಿನ ಕಲೆಕ್ಷನ್
2ನೇ ಶನಿವಾರ 'ಧುರಂಧರ್' ಕಲೆಕ್ಷನ್ ನೋಡಿ ಸಿನಿಮಾ ಮಂದಿನೇ ಬೆಚ್ಚಿಬಿದ್ದಿದ್ದಾರೆ. ಈ ವಾರ ತೆರೆಕಂಡ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ. ಹೀಗಿರುವಾಗ 'ಧುರಂಧರ್' ಎರಡನೇ ವಾರಕ್ಕೆ ಕಾಲಿಟ್ಟಿದ್ದರೂ, ಬಾಕ್ಸಾಫೀಸ್‌ನಲ್ಲಿ ಶೇ.61ರಷ್ಟು ಏರಿಕೆಯಾಗಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ ಸಿನಿಮಾ ₹53.70 ಕೋಟಿ ಕಲೆಕ್ಷನ್ ಮಾಡಿದೆ.
3 ದಿನಗಳಲ್ಲಿ ₹300 ಕೋಟಿ ಕಲೆಕ್ಷನ್
'ಧುರಂಧರ್' ರಣ್‌ವೀರ್ ಸಿಂಗ್ ವೃತ್ತಿ ಬದುಕಿನಲ್ಲಯೇ ಅತೀ ವೇಗವಾಗಿ 300 ಕೋಟಿ ಕ್ಲಬ್ ಸೇರಿದ ಸಿನಿಮಾ ಎನಿಸಿಕೊಂಡಿದೆ. ಸತತ ಸೋಲಿನ ಬಳಿಕ ಈ ಸಿನಿಮಾ ರಣ್‌ವೀರ್ ಸಿಂಗ್‌ಗೆ ಅತೋ ದೊಡ್ಡ ಸಕ್ಸಸ್ ಸಿಕ್ಕಿದೆ. ಕಳೆದ 9 ದಿನಗಳಿಂದ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಡಲ್ ಹೊಡೆದೇ ಇಲ್ಲ. ಕೇವಲ 9 ದಿನಗಳಲ್ಲಿ ರಣ್‌ವೀರ್ ಸಿನಿಮಾ ₹300 ಕೋಟಿ ಕಲೆಕ್ಷನ್ ಮಾಡಿದೆ.
9 ದಿನಗಳ ಕಲೆಕ್ಷನ್ ಹೀಗಿದೆ.
1ನೇ ದಿನ ₹28 ಕೋಟಿ
2ನೇ ದಿನ ₹32 ಕೋಟಿ
3ನೇ ದಿನ ₹43 ಕೋಟಿ
4ನೇ ದಿನ ₹23.25 ಕೋಟಿ
5ನೇ ದಿನ ₹27 ಕೋಟಿ
6ನೇ ದಿನ ₹27 ಕೋಟಿ
7ನೇ ದಿನ ₹27 ಕೋಟಿ
8ನೇ ದಿನ ₹32.5 ಕೋಟಿ
9ನೇ ದಿನ ₹53.70 ಕೋಟಿ
ಒಟ್ಟು ₹292.75 ಕೋಟಿ (Net)
₹351.25 ಕೋಟಿ (Gross)

₹500 ಕೋಟಿ ಮೇಲೆ ಕಣ್ಣು
'ಧುರಂಧರ್' ಸಿನಿಮಾದ ಕ್ರೇಜ್ ಹೀಗೆ ಮುಂದುವರೆದರೆ ಇನ್ನೊಂದು ವಾರದಲ್ಲಿ ಸುಲಭವಾಗಿ ₹500 ಕೋಟಿ ಕ್ಲಬ್ ಸೇರಲಿದೆ. ಸಿನಿಮಾ ತಂಡ ಕೂಡ ಇದರ ಮೇಲೆನೇ ಕಣ್ಣಿಟ್ಟಿದೆ. ಇಂದು (ಭಾನುವಾರ) ದೇಶಾದ್ಯಂತ ಹೆಚ್ಚು ಕಡಿಮೆ 90ರಷ್ಟು ಆಕ್ಯೂಪೆನ್ಸಿ ಇದೆಯೆಂದು ಹೇಳಲಾಗುತ್ತಿದೆ. ಹೀಗಾಗಿ 10ನೇ ದಿನ ಸಿನಿಮಾದ ಕಲೆಕ್ಷನ್ ದುಪ್ಪಟ್ಟು ಆಗುವ ಸಾಧ್ಯತೆಯಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











