Dhurandhar 2 Box Office Day 1: 'ಕೆಜಿಎಫ್ 2', RRR, 'ಬಾಹುಬಲಿ 2' ದಾಖಲೆಗೆ ಕೊಳ್ಳಿ ಇಟ್ಟ 'ಧುರಂಧರ್ 2'

ಈ ವರ್ಷ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದಾಗಿರೋ 'ಧುರಂಧರ್ 2' (Dhurandhar: The Revenge) ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಮಾರ್ಚ್ 18 ಎರಡು ಶೋಗಳು ಪ್ರೀಮಿಯರ್‌ನಿಂದ ಹಿಡಿದು ಮಾರ್ಚ್ 19ರ ಮೊದಲ ದಿನ ಕಲೆಕ್ಷನ್ ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಹೊಸ ದಾಖಲೆಗಳನ್ನೇ ಬರೆದಿದೆ. ನಿರೀಕ್ಷೆ ಮಾಡಿದಂತೆ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಕೆಲವು ಸಿನಿಮಾ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದೆ.

'ಧುರಂಧರ್' ಮೆಗಾ ಸಕ್ಸಸ್ ಕಂಡ ಬೆನ್ನಲ್ಲೇ ಪಾರ್ಟ್‌ 2 ರಿಲೀಸ್‌ಗೆ ಟೀಮ್ ಮುಂದಾಗಿತ್ತು. ಹೆಚ್ಚು ಪ್ರಚಾರ ಮಾಡದೇ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಸುಮಾರು 3 ಗಂಟೆ 49 ನಿಮಿಷಗಳ ಈ ಸಿನಿಮಾವನ್ನು ಪ್ರೇಕ್ಷಕರು ತಾಳ್ಮೆಯಿಂದ ನೋಡಿದ್ದಾರೆ. 'ಧುರಂಧರ್ 2' ಈಗ ಭಾರತದ ಎರಡನೇ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಂಡಿದೆ. ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಬಹುದೆಂಬ ನಿರೀಕ್ಷೆ ಇದ್ದಿದ್ದಾದರೂ ಒಂದು ಸಿನಿಮಾವನ್ನು ಮಾತ್ರ ಹಿಂದಿಕ್ಕಲು ಸಾಧ್ಯವಾಗಲಿಲ್ಲ.

Ranveer Singh Starrer Dhurandhar 2 Day 1 Box Office collection Beat KGF 2 RRR and Baahubali 2

ವಿಶ್ವದಾದ್ಯಂತ 'ಧುರಂಧರ್ 2' ಕಲೆಕ್ಷನ್ ಅದ್ಭುತವಾಗಿದೆ. ಹೀಗಿದ್ದರೂ, ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ 2' ಕಲೆಕ್ಷನ್ ಬೀಟ್ ಮಾಡುವುದರಲ್ಲಿ ಹಿಂದೆ ಬಿದ್ದಿದೆ. ಭಾರತದಲ್ಲಿ ಸಿನಿಮಾ ತುಂಬಾ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ಭಾರತದಲ್ಲಿ ಸುಮಾರು 21,728 ಶೋಗಳ ಪ್ರದರ್ಶನ ಕಂಡಿತ್ತು. ಈ ಶೋಗಳಿಂದ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ. ಹಾಗಿದ್ದರೆ, ಮೊದಲ ದಿನ 'ಧುರಂಧರ್ 2' ಕಲೆಕ್ಷನ್ ಎಷ್ಟು ತಿಳಿಯುವುದಕ್ಕೆ ಮುಂದೆ ಓದಿ.

'ಧುರಂಧರ್ 2' ಮೊದಲ ದಿನದ ಕಲೆಕ್ಷನ್

ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2'ಗೆ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಕಿಕ್ ಸ್ಟಾರ್ ಸಿಕ್ಕಿದೆ. ಸ್ಯಾಕ್ನಿಲ್ಕ್ ವರದಿ ಮಾಡಿದಂತೆ ಈ ಸಿನಿಮಾ ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ಮೊದಲ ಭಾರತದಲ್ಲಿ ಕಲೆಕ್ಷನ್ 102.55 ಕೋಟಿ ರೂಪಾಯಿ (Nett). ಹಾಗೇ ಪೇಯ್ಡ್ ಪ್ರೀಮಿಯರ್ ಶೋಗಳಿಂದ ಕಲೆಕ್ಷನ್ ಆಗಿದ್ದು 43 ಕೋಟಿ ರೂಪಾಯಿ. ಎರಡನ್ನೂ ಸೇರಿಸಿದರೆ, ಮೊದಲ ದಿನ 145.55 ಕೋಟಿ ರೂಪಾಯಿ ಎಂದು ವರದಿ ಮಾಡಿದೆ. ಹಾಗೇ ಮಿಂಟ್ ವರದಿಯಲ್ಲಿ 'ಧುರಂಧರ್ 2' ಮೊದಲ ದಿನದ ಗ್ರಾಸ್ (Gross) ಕಲೆಕ್ಷನ್ 172.63 ಕೋಟಿ ರೂಪಾಯಿ ದಾಟಿದೆ ಎಂದು ಹೇಳಲಾಗಿದೆ.

Also Read
Dhurandhar 2 Box office: ಕರ್ನಾಟಕದಲ್ಲಿ 'ಧುರಂಧರ್ 2' ಕ್ರೇಜ್ ಹೇಗಿದೆ? ಪೇಯ್ಡ್ ಪ್ರಿವ್ಯೂ ಕಲೆಕ್ಷನ್ ಎಷ್ಟು?
Dhurandhar 2 Box office: ಕರ್ನಾಟಕದಲ್ಲಿ 'ಧುರಂಧರ್ 2' ಕ್ರೇಜ್ ಹೇಗಿದೆ? ಪೇಯ್ಡ್ ಪ್ರಿವ್ಯೂ ಕಲೆಕ್ಷನ್ ಎಷ್ಟು?

ಯಾವ್ಯಾವ ದಾಖಲೆ ಉಡೀಸ್

'ಧುರಂಧರ್ 2' ಕ್ರೇಜ್ ನೋಡಿ ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅದರಂತೆ ಈಗಾಗಲೇ ಬಾಕ್ಸಾಫೀಸ್‌ನಲ್ಲಿ ಮೊದಲ ದಿನದ ದಾಖಲೆ ಬರೆದಿದ್ದ ದಕ್ಷಿಣ ಭಾರತದ ಪ್ರಮುಖ ಸಿನಿಮಾಗಳ ಬಾಕ್ಸಾಫೀಸ್‌ ರೆಕಾರ್ಡ್ ಅನ್ನು ಬ್ರೇಕ್ ಮಾಡಿದೆ. ಅದರಲ್ಲಿ 'ಕೆಜಿಎಫ್ 2' ಮೊದಲ ದಿನ 134.5 ಕೋಟಿ ರೂಪಾಯಿ (Gross), RRR 133 ಕೋಟಿ ರೂಪಾಯಿ (net), 'ಬಾಹುಬಲಿ 2' 121 ಕೋಟಿ (net) ರೂಪಾಯಿ ಕಲೆಕ್ಷನ್ ಮಾಡಿತ್ತು. ಇದರ ಜೊತೆಗೆ ಬಾಲಿವುಡ್ ಸಿನಿಮಾ 'ಸ್ತ್ರೀ 2' 54 ಕೋಟಿ ರೂಪಾಯಿ, ಪಠಾಣ್ 57 ಕೋಟಿ ರೂಪಾಯಿ, ಅನಿಮಲ್ 64 ಕೋಟಿ ರೂಪಾಯಿ, ಜವಾನ್ 75 ಕೋಟಿ ರೂಪಾಯಿ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿದೆ.

Ranveer Singh Starrer Dhurandhar 2 Day 1 Box Office collection Beat KGF 2 RRR and Baahubali 2

'ಪುಷ್ಪ 2' ಹಿಂದಿಕ್ಕಲಿಲ್ಲ 'ಧುರಂಧರ್ 2'

ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ 2' ಮೊದಲ ದಿನ 164 ಕೋಟಿ ರೂಪಾಯಿ (net) ಕಲೆಕ್ಷನ್ ಮಾಡಿತ್ತು. ಇಲ್ಲಿವರೆಗೂ ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪೈಕಿ ಟಾಪ್‌ನಲ್ಲಿ ಈ ಸಿನಿಮಾವಿದೆ. ಆ ದಾಖಲೆಯನ್ನು ಮಾತ್ರ 'ಧುರಂಧರ್ 2' ಬ್ರೇಕ್ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಆದರೂ ಕೇವಲ ಒಂದು ಭಾಷೆಯಲ್ಲಿಯೇ ದಾಖಲೆ ಕಲೆಕ್ಷನ್ ಆಗಿದೆ ಎಂದು ಟ್ರೇಡ್‌ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಬೇರೆ ಮೂಲಗಳು ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Ranveer Singh Starrer Dhurandhar 2 Day 1 Box Office collection Beat KGF 2, RRR and Baahubali 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X