Dhurandhar 2-Karnataka: ಹೆಚ್ಚೆಬ್ಬಿಸುತ್ತಿದೆ 'ಧುರಂಧರ್ 2'.. ರಿಲೀಸ್‌ಗೂ ಮುನ್ನವೇ ಕರ್ನಾಟಕದಲ್ಲಿ ಕೋಟಿ ಕೋಟಿ ಕಲೆಕ್ಷನ್
ಬಾಲಿವುಡ್ ಸಿನಿಮಾ 'ಧುರಂಧರ್ 2'ಗೆ ಎಲ್ಲೆಡೆ ಕ್ರೇಜ್ ಅದ್ಭುತವಾಗಿದೆ. ಈ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ನಾಳೆ (ಮಾರ್ಚ್ 19) ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಾಣುವುದಕ್ಕೆ ಸಜ್ಜಾಗಿದೆ. ಆದರೆ, ಅದಕ್ಕೂ ಮುನ್ನ, ಅಂದರೆ ಇಂದು (ಮಾರ್ಚ್ 18) ವಿಶ್ವದ ಹಲವೆಡೆ ಸಾವಿರಾರು ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿದೆ. ಈ ಶೋಗಳಿಗೂ ಕ್ರೇಜಿ ರೆಸ್ಪಾನ್ಸ್ ಸಿಕ್ಕಿದೆ.
'ಧುರಂಧರ್ 2' ಈ ವರ್ಷದ ಅತೀ ಹೆಚ್ಚು ಕಲೆಕ್ಷನ್ ಮಾಡುವ ಸಿನಿಮಾ ಆಗುವ ಎಲ್ಲಾ ಸಾಧ್ಯತೆಗಳೂ ಇವೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್‌ನಿಂದಲೇ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕೇವಲ ಉತ್ತರ ಭಾರತದ ಅಷ್ಟೇ ಅಲ್ಲ, ದಕ್ಷಿಣ ಭಾರತದಲ್ಲಿಯೂ ಈ ಸಿನಿಮಾದ ಹವಾ ಜೋರಾಗಿಯೇ ಇದೆ. ಅದರಲ್ಲೂ ಕರ್ನಾಟಕದಲ್ಲಿ ಸಿನಿಮಾದ ಕಲೆಕ್ಷನ್ ಕೋಟಿಗಳನ್ನು ಮೀರಿದೆ.

ಕರ್ನಾಟಕದಲ್ಲಿ 'ಧುರಂಧರ್ 2'ಗೆ ಬುಕಿಂಗ್ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ಟಿಕೆಟ್‌ಗಳು ಹಾಟ್ ಕೇಕ್‌ನಂತೆ ಸೇಲ್ ಆಗಿವೆ. ಸಿನಿಮಾ ಟ್ರೇಡ್ ಬಗ್ಗೆ ಮಾಹಿತಿಯನ್ನು ನೀಡುವ ಸ್ಯಾಕ್ನಿಲ್ಕ್ 'ಧುರಂಧರ್ 2' ಅಡ್ವಾನ್ಸ್ ಬುಕಿಂಗ್‌ನಿಂದ ಆದ ಕಲೆಕ್ಷನ್ ಬಗ್ಗೆ ವರದಿ ನೀಡಿದೆ. ಅಡ್ವಾನ್ಸ್ ಬುಕಿಂಗ್‌ನಲ್ಲಿ ಕರ್ನಾಟಕದಿಂದ ಈ ಸಿನಿಮಾ ಮಾಡಿದ ಕಲೆಕ್ಷನ್ ರಿಪೋರ್ಟ್ ನೋಡಿದರೆ, ಬೆಚ್ಚಿ ಬೀಳೋದು ಗ್ಯಾರಂಟಿ. ಹಾಗಿದ್ದರೆ, ಕರ್ನಾಟಕದಲ್ಲಿ ಎಷ್ಟು ಟಿಕೆಟ್‌ಗಳು ಸೇಲ್ ಆಗಿವೆ? ಅಡ್ವಾನ್ಸ್ ಬುಕಿಂಗ್ ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
ಭಾರತದಲ್ಲಿ 'ಧುರಂಧರ್ 2' ಸುನಾಮಿ
ಹೌದು, ಭಾರತದ ಬಾಕ್ಸಾಫೀಸ್‌ನಲ್ಲಿ 'ಧುರಂಧರ್ 2' ಬಿಡುಗಡೆಗೂ ಮುನ್ನವೇ ಸುನಾಮಿಯನ್ನು ಎಬ್ಬಿಸಿದೆ. ಮೊದಲ ದಿನದ ಅಡ್ವಾನ್ಸ್ ಬುಕಿಂಗ್‌ನಿಂದಲೇ 150 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆ ಮಾಡಲಾಗಿದೆ. ಪ್ರೀಮಿಯರ್ ಶೋಗಳು ಹಾಗೂ ಮೊದಲ ದಿನದ ಅಡ್ವಾನ್ಸ್ ಬುಕಿಂಗ್‌ಗೆ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಾಗೇ ಕರ್ನಾಟಕದಲ್ಲಿಯೂ ಬಿಡುಗಡೆಗೂ ಮುನ್ನವೇ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಆಗಿದೆ.
'ಧುರಂಧರ್ 2' ಕರ್ನಾಟಕ ಕಲೆಕ್ಷನ್
ರಣ್‌ವೀರ್ ಸಿಂಗ್ ಸಿನಿಮಾ 'ಧುರಂಧರ್ 2'ಗೆ ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಅಡ್ವಾನ್ಸ್ ಬುಕಿಂಗ್‌ನಿಂದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 5.87 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿ ಮಾಡಿದೆ. ಇದರಲ್ಲಿ ಎಲ್ಲಾ ಭಾಷೆಯೂ ಸೇರಿಕೊಂಡಿದೆ. ಆದರೆ, ಈ ಅಂಕಿ-ಅಂಶಗಳಲ್ಲಿ ಪ್ರೀಮಿಯರ್ ಶೋ ಕಲೆಕ್ಷನ್ ಕೂಡ ಸೇರಿದೆಯೇ? ಅನ್ನೋದನ್ನು ಖಚಿತವಾಗಿ ಹೇಳಿಲ್ಲ.


Click it and Unblock the Notifications











