ಓಟಿಟಿಗೆ ಎಂಟ್ರಿ ಕೊಡುವುದಕ್ಕೂ ಮುನ್ನ 'ಕಾಂತಾರ ಚಾಪ್ಟರ್ 1' ಮಾಡಿದ್ದ ಕಲೆಕ್ಷನ್ ಎಷ್ಟು? ಎಲ್ಲೆಲ್ಲಿ ಎಷ್ಟೆಷ್ಟು?

ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಮತ್ತೊಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದು ಓಟಿಟಿ ಲಗ್ಗೆ ಇಟ್ಟಿದೆ. ಅದೇ ಇನ್ನೊಂದು ಕಡೆ ಇಂಗ್ಲಿಷ್ ಹಾಗೂ ಸ್ಪಾನಿಷ್ ವರ್ಷನ್ ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಎರಡೂ ಬೆಳವಣಿಗಳೂ ಒಟ್ಟೊಟ್ಟಿಗೆ ಒಂದೇ ದಿನ ನಡೆದಿರೋದು ವಿಶೇಷ. ನಿನ್ನೆ (ಅಕ್ಟೋಬರ್ 31) 'ಕಾಂತಾರ ಚಾಪ್ಟರ್ 1' ಹೊಸ ಅಧ್ಯಾಯವನ್ನು ಆರಂಭಿಸಿದೆ.

ಓಟಿಟಿಗೆ ಎಂಟ್ರಿ ಕೊಟ್ಮೇಲೆ ಬಾಕ್ಸಾಫೀಸ್ ಕಲೆಕ್ಷನ್ ಕಥೆ ಮುಗೀತು ಅಂತ ಲೆಕ್ಕ ಹಾಕೋದು ಸಹಜ. ಆದರೆ, ಹೊಂಬಾಳೆ ಫಿಲ್ಮ್ಸ್ ಹೊಸ ಮಾರುಕಟ್ಟೆಯನ್ನು ಹುಡುಕಿಕೊಂಡು ಹೊರಟಿದೆ. ಒಂದು ವೇಳೆ ಇಂಗ್ಲಿಷ್ ಹಾಗೂ ಸ್ಪಾನಿಷ್ ಸಿನಿಮಾಗಳನ್ನು ನೋಡುವ ದೇಶಗಳಲ್ಲಿ 'ಕಾಂತಾರ ಚಾಪ್ಟರ್ 1'ಕ್ಕೆ ಅದ್ಬುತ ರೆಸ್ಪಾನ್ಸ್ ಸಿಕ್ಕರೆ, ಬಾಕ್ಸಾಫೀಸ್‌ನಲ್ಲಿ ಹೊಸ ಚರಿತ್ರೆಯನ್ನು ಸೃಷ್ಟಿಸೋದು ಗ್ಯಾರಂಟಿ.

Rishab Shetty directed Kantara Chapter 1 Worldwide box office report before OTT release

'ಕಾಂತಾರ ಚಾಪ್ಟರ್ 1' ಹೊಸ ಅಧ್ಯಾಯವನ್ನೇನೋ ಶುರು ಮಾಡಿದೆ. ಆದರೆ, ಇಲ್ಲಿವರೆಗೂ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ? ಐದು ಭಾಷೆಗಳಿಂದ ವಿಶ್ವದಾದ್ಯಂತ ಈ ಸಿನಿಮಾ ಗಳಿಸಿದ್ದೆಷ್ಟು? ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ? ವಿದೇಶದಿಂದ ಎಷ್ಟು ಹಣ ಹರಿದು ಬಂದಿದೆ ಅನ್ನೋ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.


ಕರ್ನಾಟಕದಲ್ಲಿ ಕಾಂತಾರ ಚರಿತ್ರೆ

ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಚರಿತ್ರೆಯನ್ನೇ ಸೃಷ್ಟಿಸಿದೆ. ಇದೂವರೆಗೂ ಯಾವ ಸಿನಿಮಾವೂ ಸಾಧಿಸದ ಮೈಲಿಗಲ್ಲನ್ನು ಈ ಸಿನಿಮಾ ಸಾಧಿಸಿ ತೋರಿಸಿದೆ. ಹೊಂಬಾಳೆ ಫಿಲ್ಮ್ಸ್ ಮೂಲಗಳಿಂದಲೇ ಸಿಕ್ಕಿರೋ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಇಲ್ಲಿವರೆಗೂ ಈ ಸಿನಿಮಾ ₹268 ಕೋಟಿ (Gross) ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಐದು ಭಾಷೆಗಳಿಂದ ಸೇರಿದ ಆದ ಕಲೆಕ್ಷನ್ ಆದರೆ, ಕೇವಲ ಕನ್ನಡ ವರ್ಷನ್‌ನಿಂದ ಆದ ಗಳಿಕೆ ₹200 ಕೋಟಿ ದಾಟಿದೆ.

ದಕ್ಷಿಣ ಭಾರತದಲ್ಲಿ ಕಲೆಕ್ಷನ್ ಎಷ್ಟು?

'ಕಾಂತಾರ ಚಾಪ್ಟರ್ 1' ಐದು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಅದರಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳು ಸೇರಿಕೊಂಡಿವೆ. ಕನ್ನಡ ವರ್ಷನ್ ಅತೀ ಹೆಚ್ಚು ಕಲೆಕ್ಷನ್ ಮಾಡಿದ್ದರೆ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿಯೋ ಕೆಲವು ದಾಖಲೆಗಳನ್ನು ಮಾಡಿ ಬ್ಲಾಕ್‌ ಬಸ್ಟರ್ ಸಿನಿಮಾಗಳ ಸಾಲಿಗೆ ಸೇರಿದೆ. ಇದು ರಿಷಬ್ ಶೆಟ್ಟಿ ಕರಿಯರ್‌ನಲ್ಲಷ್ಟೇ ಅಲ್ಲ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಚರಿತ್ರೆ ಸೃಷ್ಟಿಸಿದ ಸಿನಿಮಾ ಎನಿಸಿಕೊಂಡಿದೆ. ಹಾಗಿದ್ದರೆ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳದ ಕಲೆಕ್ಷನ್ ಡಿಟೈಲ್ಸ್ ಇಲ್ಲಿದೆ.

ಕರ್ನಾಟಕ ₹268 ಕೋಟಿ
ತೆಲಂಗಾಣ+ ಆಂಧ್ರ ₹108 ಕೋಟಿ
ತಮಿಳುನಾಡು ₹82 ಕೋಟಿ
ಕೇರಳ ₹60 ಕೋಟಿ

Rishab Shetty directed Kantara Chapter 1 Worldwide box office report before OTT release

ಹಿಂದಿ+ ಓವರ್ ಸೀಸ್ ಕಲೆಕ್ಷನ್

ಹೊಂಬಾಳೆ ಫಿಲ್ಮ್ಸ್‌ಗೆ ಕರ್ನಾಟಕ ಬಿಟ್ಟರೆ, ಹಿಂದಿ ಏರಿಯಾಗಳಿಂದ ದೊಡ್ಡ ಮಟ್ಟದ ಕಲೆಕ್ಷನ್ ಆಗಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ಮೆಗಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರುವುದಕ್ಕೆ ಹಿಂದಿ ಏರಿಯಾ ಹಾಗೂ ಓವರ್‌ಸೀಸ್‌ ಕಲೆಕ್ಷನ್ ಕೂಡ ಒಂದು ಕಾರಣ. ಹಿಂದಿ ಸಿನಿಮಾಗಳನ್ನು ನೋಡುವ ಜನರು 'ಕಾಂತಾರ ಚಾಪ್ಟರ್ 1' ನೋಡಿ ಮೆಚ್ಚಿಕೊಂಡಿದ್ದಾರೆ. ಹಿಂದಿ ಏರಿಯಾಗಳಿಂದ ₹233 ಕೋಟಿ ಕಲೆಕ್ಷನ್ ಆಗಿದ್ದರೆ, ಓವರ್‌ಸೀಸ್‌ನಿಂದ ₹116 ಕೋಟಿ ಕಲೆಕ್ಷನ್ ಆಗಿದೆ. ಇಲ್ಲಿವರೆಗೂ ವಿಶ್ವದಾದ್ಯಂತ ಒಟ್ಟು ₹867 ಕೋಟಿ ಕೋಟಿ (Gross) ಕಲೆಕ್ಷನ್ ಆಗಿದೆ.

ಇಂಗ್ಲಿಷ್-ಸ್ಪಾನಿಷ್ ಕಥೆಯೇನು?

ಅಕ್ಟೋಬರ್ 31ರಿಂದ ಇಂಗ್ಲಿಷ್ ವರ್ಷನ್ ಹಾಗೂ ಸ್ಪಾನಿಷ್ ವರ್ಷನ್ ವಿಶ್ವದೆಲ್ಲಡೆ ರಿಲೀಸ್ ಆಗಿದೆ. ಇಲ್ಲಿಂದ ಹೇಗೆ ರೆಸ್ಪಾನ್ಸ್ ಸಿಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸಾವಿರ ಕೋಟಿ ಗಡಿ ದಾಟುವುದಕ್ಕೆ ಇನ್ನು ₹133 ಕೋಟಿ ಬೇಕಿದೆ. ಅದೇನಾದರೂ ಆದರೆ, ಮತ್ತೊಂದು ಕನ್ನಡ ಸಿನಿಮಾ ಸಾವಿರ ಕೋಟಿ ಗಡಿ ದಾಟಿದಂತಾಗುತ್ತೆ.

More from Filmibeat

English summary
Rishab Shetty directed Kantara Chapter 1 Worldwide box office report before OTT release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X