Kantara Chapter 1 Box Office Day 22: 22ನೇ ದಿನ ಅತೀ ಕಲೆಕ್ಷನ್ ಮಾಡಿದ್ರೂ, 'ಛಾವ' ಹಿಂದಿಕ್ಕಿದ 'ಕಾಂತಾರ'

ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರಾ ಚಾಪ್ಟರ್ 1' ರಿಲೀಸ್ ಆಗಿ 23 ದಿನಗಳಾಗಿವೆ. ದೀಪಾವಳಿ ಹಬ್ಬ ಮುಗಿದ ಮಾರನೇ ದಿನದಿಂದಲೇ ಸಿನಿಮಾ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದೆ. ಅದರಲ್ಲೂ ನಿನ್ನೆ (ಅಕ್ಟೋಬರ್ 23) ಬಾಕ್ಸಾಫೀಸ್‌ನಲ್ಲಿ ಬಿಡುಗಡೆಯಾದಲ್ಲಿಂದ ಅತೀ ಕಡೆ ಕಲೆಕ್ಷನ್ ದಾಖಲಿಸಿದೆ. ವಲ್ಡ್‌ವೈಡ್ ರಿಲೀಸ್‌ಗೆ ಮುಂದಾಗಿರುವ 'ಕಾಂತಾರ ಚಾಪ್ಟರ್ 1' ಈ ಮೂಲಕ ಕೊಂಚ ಮಟ್ಟಿಗೆ ಹಿನ್ನಡೆಯಾಗಿದ್ದು, ವೀಕೆಂಡ್‌ನಲ್ಲಿ ರಿಕವರಿಯಾಗಬಹುದೆಂದು ನಿರೀಕ್ಷೆಯಿದೆ.

'ಕಾಂತಾರಾ ಚಾಪ್ಟರ್ 1' ಬಿಡುಗಡೆಯಾದಲ್ಲಿಂದ 22ನೇ ದಿನ ಆದ ಕಲೆಕ್ಷನ್ ಅತೀ ಕಡಿಮೆ. ಬಾಕ್ಸಾಫೀಸ್‌ನಲ್ಲಿ ನಾಲ್ಕನೇ ವಾರಕ್ಕೆ ಕಾಲಿಟ್ಟಿರೋ ರಿಷಬ್ ಶೆಟ್ಟಿ ಸಿನಿಮಾ ಸಾವಿರ ಗಡಿ ದಾಟುತ್ತಾ ಅನ್ನೋ ಅನುಮಾನವಂತೂ ಶುರುವಾಗಿದೆ. ಮೊದಲ ಮೂರು ವಾರ ಗಲ್ಲಾಪೆಟ್ಟಿಗೆಯಲ್ಲಿ ಬೇಜಾನ್ ಸದ್ದು ಮಾಡಿದ್ದ ಸಿನಿಮಾ ನಾಲ್ಕನೇ ವಾರದಲ್ಲಿ ತಣ್ಣಗಾಗಿರೋದಂತೂ ಸತ್ಯ.

Rishab Shetty Film Kantara Chapter 1 day 22 Box office Collection Report

ಇನ್ನು 'ಕಾಂತಾರಾ ಚಾಪ್ಟರ್ 1' ಇಂಗ್ಲಿಷ್ ಭಾಷೆಗೆ ಡಬ್ ಆಗಿ ಇದೇ ಅಕ್ಟೋಬರ್ 31ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಅಲ್ಲಿಂದ ಮತ್ತೆ ಸಿನಿಮಾ ಕಲೆಕ್ಷನ್ ಏರಿಕೆಯಾಗುವ ಸಾಧ್ಯತೆಯಿದೆ. ಇಂಗ್ಲಿಷ್ ವರ್ಷನ್ ಏನಾದರೂ ಬಾಕ್ಸಾಫೀಸ್‌ನಲ್ಲಿ ಗೆದ್ದರೆ, ಸಾವಿರ ಕೋಟಿಯ ಗಡಿಯನ್ನು ದಾಟುವ ಎಲ್ಲಾ ಸಾಧ್ಯತೆಗಳಿವೆ. ಹಾಗಿದ್ದರೆ, 22ನೇ ದಿನ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

22ನೇ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?

'ಕಾಂತಾರಾ ಚಾಪ್ಟರ್ 1' ಈಗಾಗಲೇ ದಾಖಲೆ ಕಲೆಕ್ಷನ್ ಮಾಡಿದೆ. ಹಲವು ಭಾಷೆಯ ಸಿನಿಮಾಗಳ ಕಲೆಕ್ಷನ್ ರೆಕಾರ್ಡ್‌ಗಳನ್ನು ಮುರಿದಿದೆ. ನಾಲ್ಕನೇ ವಾರದ ಹೊತ್ತಿಗೆ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿದೆ. ಸ್ಯಾಕ್ನಿಲ್ಕ್ ಪ್ರಕಾರ, 22ನೇ ದಿನ ಈ ಸಿನಿಮಾ ಬರೋಬ್ಬರಿ ₹6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದೂವರೆಗೂ ಇಷ್ಟು ಕಡಿಮೆ ಕಲೆಕ್ಷನ್ ಆಗಿದ್ದು ಇದೇ ಮೊದಲು. ಈ ಮೂಲಕ ಭಾರತದಾದ್ಯಂತ ಒಟ್ಟು ₹563.50 ಕೋಟಿ ಕಲೆಕ್ಷನ್ ಆಗಿದೆ.

'ಛಾವ' ಹಿಂದಿಕ್ಕಿದ 'ಕಾಂತಾರ ಚಾಪ್ಟರ್ 1'

2025ರ ಬಾಕ್ಸಾಫೀಸ್‌ನಲ್ಲಿ 'ಛಾವ' ಅತೀ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆ ಹೊಂದಿತ್ತು. ಈ ಸಿನಿಮಾ ವಿಶ್ವದಾದ್ಯಂತ ಸುಮಾರು ₹807 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, 'ಕಾಂತಾರ ಚಾಪ್ಟರ್ 1' ₹818 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಈ ಮೂಲಕ 2025ರಲ್ಲಿ ಇದೂವರೆಗೂ ತೆರೆಕಂಡ ಸಿನಿಮಾಗಳಲ್ಲಿ 'ಕಾಂತಾರ 1' ಎಲ್ಲಾ ದಾಖಲೆಗಳನ್ನು ಮುರಿದು ನಂಬರ್ 1 ಸ್ಥಾನಕ್ಕೆ ಏರಿದೆ. ಇಂಗ್ಲಿಷ್ ವರ್ಷನ್ ರಿಲೀಸ್ ಬಳಿಕ ಈ ಸಿನಿಮಾ ಕಲೆಕ್ಷನ್ ಎಷ್ಟಕ್ಕೇರುತ್ತೆ? ಅನ್ನೋದು ನೋಡಬೇಕಿದೆ. ಇನ್ನು 22 ದಿನಗಳು ಭಾರತದಾದ್ಯಂತ ಗಳಿಸಿದ ಕಲೆಕ್ಷನ್ ಹೀಗಿದೆ.

'ಕಾಂತಾರ ಚಾಪ್ಟರ್ 1' ಕಲೆಕ್ಷನ್ (ಭಾರತ)

1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹30.50 ಕೋಟಿ
6ನೇ ದಿನ ₹34.25 ಕೋಟಿ
7ನೇ ದಿನ ₹25.25 ಕೋಟಿ
8ನೇ ದಿನ ₹21.15 ಕೋಟಿ
9ನೇ ದಿನ ₹22.25 ಕೋಟಿ
10ನೇ ದಿನ ₹39 ಕೋಟಿ
11ನೇ ದಿನ ₹40 ಕೋಟಿ
12ನೇ ದಿನ ₹13.35 ಕೋಟಿ
13ನೇ ದಿನ ₹14.15 ಕೋಟಿ
14ನೇ ದಿನ ₹10.5 ಕೋಟಿ
15ನೇ ದಿನ ₹8.85 ಕೋಟಿ
16ನೇ ದಿನ ₹8.5 ಕೋಟಿ
17ನೇ ದಿನ ₹12.75 ಕೋಟಿ
18ನೇ ದಿನ ₹17 ಕೋಟಿ
19ನೇ ದಿನ ₹12.37 ಕೋಟಿ
20ನೇ ದಿನ ₹13 ಕೋಟಿ
21ನೇ ದಿನ ₹10.25 ಕೋಟಿ
22ನೇ ದಿನ ₹6.25 ಕೋಟಿ
ಒಟ್ಟು ₹ 563.75 ಕೋಟಿ (Net)

Rishab Shetty Film Kantara Chapter 1 day 22 Box office Collection Report
3ನೇ ವಾರದ ಕಲೆಕ್ಷನ್ ಎಷ್ಟು?

ಇನ್ನು ಸ್ಯಾಕ್ನಿಲ್ಕ್ ಪ್ರಕಾರ ಮೂರನೇ ವಾರದ ಕಲೆಕ್ಷನ್‌ನಲ್ಲೂ ಶೇ.46ರಷ್ಟು ಕಲೆಕ್ಷನ್ ಡ್ರಾಪ್ ಆಗಿದೆ. 3ನೇ ವಾರ ಈ ಸಿನಿಮಾ ₹78.5 ಕೋಟಿ ಕಲೆಕ್ಷನ್ ಮಾಡಿದೆ. ಕನ್ನಡ ವರ್ಷನ್ ₹29.2 ಕೋಟಿ ಕಲೆಕ್ಷನ್ ಮಾಡಿದರೆ, ತೆಲುಗು ವರ್ಷನ್ ₹5.7 ಕೋಟಿ, ಹಿಂದಿ ವರ್ಷನ್ ₹29.65 ಕೋಟಿ, ತಮಿಳು ವರ್ಷನ್ ₹8.7 ಕೋಟಿ, ಮಲಯಾಳಂ ವರ್ಷನ್ ₹5.25 ಕೋಟಿ ಕಲೆಕ್ಷನ್ ಮಾಡಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Rishab Shetty Film Kantara Chapter 1 day 22 Box office Collection Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X