Kantara Chapter 1 Box Office Day 23: ಇನ್ನೂ ಅಬ್ಬರಿಸುತ್ತಿದೆಯೇ ಕಾಂತಾರ ಚಾಪ್ಟರ್ 1? ಹೇಗಿದೆ ಕಲೆಕ್ಷನ್?

ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಮೆಗಾ ಬ್ಲಾಕ್‌ಬಸ್ಟರ್ ಪ್ಯಾನ್ ಇಂಡಿಯಾ ಸಿನಿಮಾ ಕೊಡುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ಬಿಡುಗಡೆಯಾದ ದಿನದಿಂದಲೂ ದೇಶಾದ್ಯಂತ ಜನರ ಬಾಯಲ್ಲಿ 'ಕಾಂತಾರ ಚಾಪ್ಟರ್ 1' ಬಗ್ಗೆನೇ ಮಾತು. ಮೊದಲ ಮೂರು ವಾರ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿತ್ತು. ಮೊದಲ ಮೂರು ದಿನಗಳಲ್ಲಿಯೇ ಸಿನಿಮಾಗೆ ಹಾಕಿದ ಬಂಡವಾಳದಷ್ಟು ಕಲೆಕ್ಷನ್ ಆಗಿತ್ತು.

ಮೂರು ವಾರಗಳಿಂದ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಾ ಮುಂದೆ ಸಾಗುತ್ತಿತ್ತು. ನಾಲ್ಕನೇ ವಾರದ ಆರಂಭದಿಂದ ಕಲೆಕ್ಷನ್‌ನಲ್ಲಿ ಇಳಿಕೆಯಾಗುತ್ತಿದೆ. ಇದನ್ನು ಟ್ರೇಡ್ ಎಕ್ಸ್‌ಪರ್ಟ್‌ಗಳು ನಿರೀಕ್ಷೆ ಮಾಡಿದ್ದರು. ಮೊದಲೆರಡು ವಾರ ಭಾರತದಾದ್ಯಂತ ಅತೀ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಹೀಗಾಗಿ ಬಹುತೇಕ ಮಂದಿ ಈ ಸಿನಿಮಾವನ್ನು ನೋಡಿದ್ದರು. ಆದರೂ, ಮೂರನೇ ವಾರ ರಿಪಿಟೆಡ್ ಆಡಿಯನ್ಸ್‌ನಿಂದ ಒಳ್ಳೆಯ ಕಲೆಕ್ಷನ್ ಆಗಿತ್ತು.

Rishab Shetty Film Kantara Chapter 1 day 23 Box office Collection Report lowest till now

ನಾಲ್ಕನೇ ವಾರದಲ್ಲಿ ದೀಪಾವಳಿ ಹಬ್ಬ ಬಂದಿದ್ದರಿಂದ ಕಲೆಕ್ಷನ್ ಮತ್ತೆ ದಿನಕ್ಕೆ 10 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು. ಹಬ್ಬ ಮುಗಿಯುತ್ತಿದ್ದಂತೆ 'ಕಾಂತಾರ ಚಾಪ್ಟರ್ 1' ಕಲೆಕ್ಷನ್‌ನಲ್ಲಿ ಮತ್ತೆ ಡ್ರಾಪ್ ಆಗಿದೆ. ಅದರಲ್ಲೂ ನಿನ್ನೆ (ಅಕ್ಟೋಬರ್ 24) ಅಂದರೆ, 23ನೇ ದಿನ ಬಾಕ್ಸಾಫೀಸ್ ಕಲೆಕ್ಷನ್ ಹಿಂದೆಂದಿಗಿಂತಲೂ ಕಡಿಮೆ ಆಗಿದೆ. ಹಾಗಿದ್ದರೆ, 23ನೇ ದಿನ ಗಳಿಸಿದ್ದೆಷ್ಟು? ವೀಕೆಂಡ್‌ ಲೆಕ್ಕಾಚಾರವೇನು? ಅನ್ನೋದು ತಿಳಿಯುವುದಕ್ಕೆ ಮುಂದೆ ಓದಿ.

23ನೇ ದಿನ ಕಾಂತಾರ ಕಲೆಕ್ಷನ್ ಎಷ್ಟು?

'ಕಾಂತಾರ ಚಾಪ್ಟರ್ 1' ಜನರ ಮನಸ್ಸು ಗೆದ್ದಾಗಿದೆ. ನಿರ್ಮಾಪಕರ ಜೇಬು ತುಂಬಿಸಿದ್ದೂ ಆಗಿದೆ. ಇನ್ಮುಂದೆ ಆಗೋ ಕಲೆಕ್ಷನ್‌ ಎಲ್ಲವೂ ಹೊಂಬಾಳೆ ಫಿಲ್ಮ್ಸ್‌ಗೆ ಬೋನಸ್ ಅಷ್ಟೇ. ಸ್ಯಾಕ್ನಿಲ್ಕ್ ಕೊಟ್ಟಿರುವ ವರದಿ ಪ್ರಕಾರ ಸಿನಿಮಾ 23ನೇ ದಿನದಂದು ಅತೀ ಕಡಿಮೆ ಕಲೆಕ್ಷನ್ ಅನ್ನು ದಾಖಲಿಸಿದೆ. ಈ 23 ದಿನಗಳಲ್ಲಿ ಇಷ್ಟು ಕಡಿಮೆ ಕಲೆಕ್ಷನ್ ಆಗಿರಲಿಲ್ಲ. ಅಂದ್ಹಾಗೆ 23ನೇ ದಿನ ಈ ಸಿನಿಮಾದ ಕಲೆಕ್ಷನ್ ₹6.1 ಕೋಟಿ ಆಗಿದೆ. ಈ ಮೂಲಕ ಭಾರತದಲ್ಲಿ ಸಿನಿಮಾದ ಒಟ್ಟು ಕಲೆಕ್ಷನ್ ₹570.20 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ವಲ್ಡ್‌ವೈಡ್ ಕಲೆಕ್ಷನ್ ರಿಪೋರ್ಟ್

ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ 'ಕಾಂತಾರ ಚಾಪ್ಟರ್ 1' ದೇಶದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಉತ್ತಮ ಗಳಿಕೆ ಮಾಡಿದೆ. ಹೀಗಾಗಿ ಅಕ್ಟೋಬರ್ 31ರಂದು ಇಂಗ್ಲಿಷ್ ವರ್ಷನ್ ಅನ್ನು ವಿಶ್ವದಾದ್ಯಂತ ರಿಲೀಸ್ ಮಾಡಲಾಗುತ್ತಿದೆ. ಒಂದು ವೇಳೆ ಇಂಗ್ಲಿಷ್ ವರ್ಷನ್‌ಗೆ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾದರೆ, ಸಿನಿಮಾ ವರ್ಲ್ಡ್‌ವೈಡ್ ಸಾವಿರ ಕೋಟಿ ಕಲೆಕ್ಷನ್ ಮಾಡುವ ಎಲ್ಲಾ ಸಾಧ್ಯತೆಯಿದೆ. 23ನೇ ದಿನಕ್ಕೆ ಈ ಸಿನಿಮಾದ ಕಲೆಕ್ಷನ್ 823 ಕೋಟಿಗೂ (Gross) ಆಗಿರಬಹುದೆಂದು ಅಂದಾಗಿಸಲಾಗಿದೆ. ಹೊಂಬಾಳೆ ಫಿಲ್ಮ್ಸ್ ಇನ್ನೂ ಅಧಿಕೃತವಾಗಿ ಅಂಕಿ ಅಂಶಗಳನ್ನು ನೀಡಬೇಕಿದೆ. ದೇಶದಾದ್ಯಂತ 23 ದಿನಗಳಲ್ಲಿ ಗಳಿಸಿದ ಕಲೆಕ್ಷನ್ ಹೀಗಿದೆ.

'ಕಾಂತಾರ ಚಾಪ್ಟರ್ 1' ಕಲೆಕ್ಷನ್ (ಭಾರತ)

1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹30.50 ಕೋಟಿ
6ನೇ ದಿನ ₹34.25 ಕೋಟಿ
7ನೇ ದಿನ ₹25.25 ಕೋಟಿ
8ನೇ ದಿನ ₹21.15 ಕೋಟಿ
9ನೇ ದಿನ ₹22.25 ಕೋಟಿ
10ನೇ ದಿನ ₹39 ಕೋಟಿ
11ನೇ ದಿನ ₹40 ಕೋಟಿ
12ನೇ ದಿನ ₹13.35 ಕೋಟಿ
13ನೇ ದಿನ ₹14.15 ಕೋಟಿ
14ನೇ ದಿನ ₹10.5 ಕೋಟಿ
15ನೇ ದಿನ ₹8.85 ಕೋಟಿ
16ನೇ ದಿನ ₹8.5 ಕೋಟಿ
17ನೇ ದಿನ ₹12.75 ಕೋಟಿ
18ನೇ ದಿನ ₹17 ಕೋಟಿ
19ನೇ ದಿನ ₹12.37 ಕೋಟಿ
20ನೇ ದಿನ ₹13 ಕೋಟಿ
21ನೇ ದಿನ ₹10.25 ಕೋಟಿ
22ನೇ ದಿನ ₹6.60 ಕೋಟಿ
23ನೇ ದಿನ ₹6.1 ಕೋಟಿ
ಒಟ್ಟು ₹ 570.20 ಕೋಟಿ (Net)

Rishab Shetty Film Kantara Chapter 1 day 23 Box office Collection Report lowest till now
ಕರ್ನಾಟಕ ಕೆಲ ಚಿತ್ರಮಂದಿರಗಳ ಕಲೆಕ್ಷನ್

'ಕಾಂತಾರ ಚಾಪ್ಟರ್ 1' ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಎಲ್ಲಾ ದಾಖಲೆಗಳನ್ನು ಮುರಿದು ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ. ಕರ್ನಾಟಕದ ಕೆಲವು ಚಿತ್ರಮಂದಿರಗಳಲ್ಲಿ 3ನೇ ವಾರದ ಅಂತ್ಯದ ವೇಳೆ ಗಳಿಸಿದ ಕಲೆಕ್ಷನ್ ಹೀಗಿದೆ.

3ನೇ ವಾರದ ಅಂತ್ಯದ ಕಲೆಕ್ಷನ್ (ಕರ್ನಾಟಕ)

ಊರ್ವಶಿ (ಬೆಂಗಳೂರು) ₹17 ಲಕ್ಷ
ಸಿದ್ದೇಶ್ವರ (ಬೆಂಗಳೂರು) ₹16 ಲಕ್ಷ
ವೀರೇಶ್ (ಬೆಂಗಳೂರು) ₹19 ಲಕ್ಷ
ನವರಂಗ್ (ಬೆಂಗಳೂರು) ₹13 ಲಕ್ಷ
ಗುರುಶ್ರೀ (ಮಂಡ್ಯ) ₹21 ಲಕ್ಷ
ವುಡ್‌ಲ್ಯಾಂಡ್ (ಮೈಸೂರು) ₹24 ಲಕ್ಷ
ಗಾಯತ್ರಿ (ಮೈಸೂರು) ₹20 ಲಕ್ಷ
ಶ್ರೀಗುರು (ಹಾಸನ) ₹10 ಲಕ್ಷ
ತ್ರಿಶೂಲ್+ತಿನೇತ್ರ (ದಾವಣಗೆರೆ) ₹13 ಲಕ್ಷ

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Rishab Shetty Film Kantara Chapter 1 day 23 Box office Collection Report lowest till now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X