Kantara Chapter 1 Box Office Day 27:ಓಟಿಟಿ ಡೇಟ್ ಅನೌನ್ಸ್.. 27ನೇ ದಿನದ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಕಲೆಕ್ಷನ್ ಎಷ್ಟು?
ಕಳೆದ ಎರಡೂವರೆ ಮೂರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಮೋಡ ಕವಿದ ವಾತಾವರಣವಿತ್ತು. ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವುದನ್ನೇ ನಿಲ್ಲಿಸಿದ್ದರು. ಇನ್ನೇನು ಕನ್ನಡ ಚಿತ್ರರಂಗದ ಕಥೆ ಅಷ್ಟೇ ಅಂದುಕೊಂಡವರಿಗೆ 'ಮ್ಯಾಕ್ಸ್', 'ಸು ಫ್ರಮ್ ಸೋ' ಅಂತಹ ಸಿನಿಮಾಗಳು ಸರಿಯಾದ ಉತ್ತರ ಕೊಟ್ಟಿದ್ದವು. ಆದರೆ, ಸಿನಿಮಾ ಮಂದಿ 'ಕಾಂತಾರ ಚಾಪ್ಟರ್ 1'ರ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು. ಅದು ಸುಳ್ಳಾಗಲಿಲ್ಲ.
'ಕಾಂತಾರ ಚಾಪ್ಟರ್ 1' ರಿಲೀಸ್ ಆದ ದಿನದಿಂದ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಾ ಬಂದಿದೆ. ಆದರೂ ಇಷ್ಟು ಬೇಗ ಓಟಿಟಿಗೆ ಲಗ್ಗೆ ಇಡಬಹುದೆಂಬ ನಿರೀಕ್ಷೆ ಇರಲಿಲ್ಲ. ಬಾಕ್ಸಾಫೀಸ್‌ನಲ್ಲಿ 1000 ಕೋಟಿಯ ಗಡಿ ದಾಟಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ, ಆ ಕನಸು ಸದ್ಯಕ್ಕೆ ಭಗ್ನವಾಗಿದ್ದರೂ, ಇನ್ನೊಂದು ಹೋಪ್ ಇದೆ. 'ಕಾಂತಾರ ಚಾಪ್ಟರ್ 1' ಇಂಗ್ಲಿಷ್ ವರ್ಷನ್ ವಿಶ್ವದಾದ್ಯಂತ ಹಿಟ್ ಆದರೆ, ₹1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಬಹುದು.

ಆದರೆ, ಅದೇ ದಿನ ಈ ಸಿನಿಮಾ ಓಟಿಟಿಗೆ ಲಗ್ಗೆ ಇಡುತ್ತಿದೆ. ಹಿಂದಿ ವರ್ಷನ್ ಒಂದನ್ನು ಬಿಟ್ಟು ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲೂ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಹೀಗಾಗಿ 'ಕಾಂತಾರ ಚಾಪ್ಟರ್ 1' ಓಟಿಟಿಯಲ್ಲಿ ನೋಡುವವರ ಸಂಖ್ಯೆ ಹೆಚ್ಚಾಗಬಹುದು. ಅಷ್ಟಕ್ಕೂ ಓಟಿಟಿ ರಿಲೀಸ್ ಡೇಟ್ ಅನೌನ್ಸ್ ಆದ್ಮೇಲೆ 'ಕಾಂತಾರ ಚಾಪ್ಟರ್ 1' ಗಳಿಕೆ ಏನಾಗಿದೆ? 27ನೇ ದಿನ ಗಳಿಸಿದ್ದೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
27ನೇ ದಿನ ಕಾಂತಾರ ಗಳಿಸಿದ್ದೆಷ್ಟು?
'ಕಾಂತಾರ ಚಾಪ್ಟರ್ 1' ಡಿವೈನ್ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದೆ. ವಿಶ್ವದಾದ್ಯಂತ ಈಗಾಗಲೇ ₹830 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಭಾರತದಲ್ಲಿಯೇ ನೆಟ್ ಕಲೆಕ್ಷನ್ ₹600 ಕೋಟಿ ಸಮೀಪಿಸಿದೆ. ಇನ್ನು ಓಟಿಟಿ ರಿಲೀಸ್ ಡೇಟ್ ಅನೌನ್ಸ್ ಆದ್ಮೇಲೆ ಕಲೆಕ್ಷನ್‌ನಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ ಈ ಸಿನಿಮಾ 27ನೇ ಗಳಿಸಿದ್ದು ₹3.65 ಕೋಟಿ ರೂಪಾಯಿ. ಕನ್ನಡ ವರ್ಷನ್ ₹94 ಲಕ್ಷ, ತೆಲುಗು ₹14 ಲಕ್ಷ, ಹಿಂದಿ ₹2.4 ಕೋಟಿ, ತಮಿಳು ₹26 ಲಕ್ಷ, ಮಲಯಾಳಂ ವರ್ಷನ್ 15 ಲಕ್ಷ ಕಲೆಕ್ಷನ್ ಆಗಿದೆಂದು ವರದಿಯಾಗಿದೆ.
ವಿಶ್ವದಾದ್ಯಂತ ಈ ಸಿನಿಮಾ ಗಳಿಸಿದ್ದೆಷ್ಟು?
ರಿಷಬ್ ಶೆಟ್ಟಿ ನಟಿ, ನಿರ್ದೇಶಿಸಿದ 'ಕಾಂತಾರ ಚಾಪ್ಟರ್ 1' ಸಿನಿಮಾ ಬಾಕ್ಸಾಫೀಸ್ ಒಳ್ಳೆಯ ಗಳಿಕೆ ಮಾಡಿತ್ತು. ಆರಂಭದ ಮೂರು ವಾರಗಳು ಅಬ್ಬರಿಸಿ ಬೊಬ್ಬಿರಿದಿದ್ದ ಈ ಸಿನಿಮಾ ನಾಲ್ಕನೇ ವಾರ ಬಾಕ್ಸಾಫೀಸ್‌ನಲ್ಲಿ ಇಳಿಕೆ ಕಂಡಿದೆ. ಹೀಗಾಗಿ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇಲ್ಲಿವರೆಗೂ ವಿಶ್ವದಾದ್ಯಂತ 'ಕಾಂತಾರ ಚಾಪ್ಟರ್ 1' ಗಳಿಸಿದ್ದು ₹830 ಕೋಟಿ ಎಂದು ಅಂದಾಜಿಸಲಾಗಿದೆ. ಇನ್ನು ಭಾರತದಾದ್ಯಂತ 27 ದಿನಗಳಲ್ಲಿ ಗಳಿಸಿದ ನೆಟ್ ಕಲೆಕ್ಷನ್ ಹೀಗಿದೆ.
'ಕಾಂತಾರ ಚಾಪ್ಟರ್ 1' ಕಲೆಕ್ಷನ್ (ಭಾರತ)
1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹30.50 ಕೋಟಿ
6ನೇ ದಿನ ₹34.25 ಕೋಟಿ
7ನೇ ದಿನ ₹25.25 ಕೋಟಿ
8ನೇ ದಿನ ₹21.15 ಕೋಟಿ
9ನೇ ದಿನ ₹22.25 ಕೋಟಿ
10ನೇ ದಿನ ₹39 ಕೋಟಿ
11ನೇ ದಿನ ₹40 ಕೋಟಿ
12ನೇ ದಿನ ₹13.35 ಕೋಟಿ
13ನೇ ದಿನ ₹14.15 ಕೋಟಿ
14ನೇ ದಿನ ₹10.5 ಕೋಟಿ
15ನೇ ದಿನ ₹8.85 ಕೋಟಿ
16ನೇ ದಿನ ₹8.5 ಕೋಟಿ
17ನೇ ದಿನ ₹12.75 ಕೋಟಿ
18ನೇ ದಿನ ₹17 ಕೋಟಿ
19ನೇ ದಿನ ₹12.37 ಕೋಟಿ
20ನೇ ದಿನ ₹13 ಕೋಟಿ
21ನೇ ದಿನ ₹10.25 ಕೋಟಿ
22ನೇ ದಿನ ₹6.60 ಕೋಟಿ
23ನೇ ದಿನ ₹6.1 ಕೋಟಿ
24ನೇ ದಿನ ₹9 ಕೋಟಿ
25ನೇ ದಿನ ₹10.4 ಕೋಟಿ
26ನೇ ದಿನ ₹3.25 ಕೋಟಿ
27ನೇ ದಿನ ₹3.65 ಕೋಟಿ
ಒಟ್ಟು ₹ 596.50 ಕೋಟಿ (Net)
ಓಟಿಟಿ ಲೆಕ್ಕಾಚಾರವೇನು?
'ಕಾಂತಾರ ಚಾಪ್ಟರ್ 1' ಥಿಯೇಟರ್‌ನಲ್ಲಿ 50 ದಿನಗಳನ್ನು ಪೂರೈಸುವುದಕ್ಕೂ ಮುನ್ನ ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಕನ್ನಡವೂ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಈ ನಾಲ್ಕು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಅಮೆಜಾನ್ ಪ್ರೈಂ ವಿಡಿಯೋ ಡೀಲ್ ಮಾಡಿಕೊಂಡಿದ್ದರಿಂದ ಅಕ್ಟೋಬರ್ 31ಕ್ಕೆ ಓಟಿಟಿಗೆ ಲಗ್ಗೆ ಇಡುತ್ತಿದೆ. ಇನ್ನು ಅದೇ ದಿನ ಇಂಗ್ಲಿಷ್ ವರ್ಷನ್ ರಿಲೀಸ್ ಆಗುತ್ತಿರುವುದರಿಂದ ವಿದೇಶದ ಕಲೆಕ್ಷನ್‌ನಲ್ಲಿ ಏರಿಕೆ ಆದರೂ ಆಗಬಹುದು.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











