Kantara Chapter 1 Box Office Day 28: 'ಕಾಂತಾರ ಚಾಪ್ಟರ್ 1' ಇನ್ನೊಂದು ಮೈಲಿಗಲ್ಲಿಗೆ ಇನ್ನೆಷ್ಟು ಕೋಟಿ ಬೇಕು?

'ಕಾಂತಾರ ಚಾಪ್ಟರ್ 1' ಥಿಯೇಟರ್‌ ಕಲೆಕ್ಷನ್ ದಿನದಿಂದ ದಿನಕ್ಕೆ ಡ್ರಾಪ್ ಆಗುತ್ತಿದೆ. ಅದರಲ್ಲೂ ಓಟಿಟಿ ರಿಲೀಸ್ ಡೇಟ್ ಅನೌನ್ಸ್ ಆದ ದಿನದಿಂದ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಇಳಿಕೆಯಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಸಿನಿಮಾ ಈಗಾಗಲೇ ದಾಖಲೆ ಕಲೆಕ್ಷನ್ ಮಾಡಿದ್ದು, 1000 ಕೋಟಿ ಕ್ಲಬ್ ಸೇರುವುದಕ್ಕೆ ಕೆಲವೇ ಕೋಟಿಗಳು ಬೇಕಿದೆ. ಆದರೆ, ಅದು ಈಡೇರುತ್ತಾ? ಇಲ್ವಾ? ಅನ್ನೋದು ಕುತೂಹಲವಿದೆ.

ರಿಷಬ್ ಶೆಟ್ಟಿ 'ಕಾಂತಾರ' ಪ್ರೀಕ್ವೆಲ್ ಮಾಡಿ ಗೆದ್ದಿದ್ದು ಆಗಿದೆ. ನಾಳೆಯಿಂದ (ಅಕ್ಟೋಬರ್ 31) 'ಕಾಂತಾರ ಚಾಪ್ಟರ್ 1' ಇಂಗ್ಲಿಷ್ ವರ್ಷನ್ ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಈ ಸಿನಿಮಾ ರೆಸ್ಪಾನ್ಸ್ ಹೇಗಿರುತ್ತೆ? ಅನ್ನೋದನ್ನು ಟ್ರೇಡ್ ಎಕ್ಸ್‌ಪರ್ಟ್‌ಗಳು ಕುತೂಹಲದಿಂದ ನೋಡುತ್ತಿದ್ದಾರೆ. ಒಂದ್ಮೇಳೆ ವಿದೇಶದಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕರೆ ಸಿನಿಮಾದ ಕಲೆಕ್ಷನ್ ಆರಾಮಾಗಿ ₹1000 ಕೋಟಿ ದಾಟುವ ಸಾಧ್ಯತೆಯಿದೆ.

Rishab Shetty Film Kantara Chapter 1 day 28 Box office Collection report

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಭಾರತದಲ್ಲಿ ಥಿಯೇಟ್ರಿಕಲ್ ರನ್ ಮುಗಿಸುವ ಹಂತಕ್ಕೆ ಬಂದಿದೆ. ಇನ್ನು ಓಟಿಟಿಯಲ್ಲಿ ಹೇಗೆಲ್ಲ ದಾಖಲೆ ಬರುತ್ತೆ ಅನ್ನೋ ಲೆಕ್ಕಾಚಾರಗಳು ಶುರುವಾಗಿವೆ. ಹಾಗಿದ್ದರೆ, 28ನೇ ದಿನ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು? ವೀಕೆಂಡ್ ಲೆಕ್ಕಾಚಾರ ಏನಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

28ನೇ ದಿನ 'ಕಾಂತಾರ ಚಾಪ್ಟರ್ 1' ಗಳಿಸಿದ್ದೆಷ್ಟು?

'ಕಾಂತಾರ ಚಾಪ್ಟರ್ 1' ಥಿಯೇಟರ್‌ನಲ್ಲಿ 50 ದಿನಗಳನ್ನು ಪೂರೈಸುವ ಮುನ್ನವೇ ಓಟಿಟಿಗೆ ಲಗ್ಗೆ ಇಡುತ್ತಿದೆ. ಈ ವಿಷಯ ಹೊರಬೀಳುತ್ತಿದ್ದಂತೆ ಬಾಕ್ಸಾಫೀಸ್‌ ಕಲೆಕ್ಷನ್ ಡ್ರಾಪ್ ಆಗಿದೆ. ಇದನ್ನು ಟ್ರೇಡ್ ಎಕ್ಸ್‌ಪರ್ಟ್‌ಗಳು ನಿರೀಕ್ಷೆ ಮಾಡಿದ್ದರು. ಆದರೂ, ಕನ್ನಡ ಸಿನಿಮಾ ಬಹಳ ದಿನಗಳ ಬಳಿಕ ಹಲವು ದಾಖಲೆಗಳನ್ನು ಮುರಿದಿರೋದು ವಿಶೇಷ. ಇನ್ನು ಸ್ಯಾಕ್ನಿಲ್ಕ್ ವರದಿ ಪ್ರಕಾರ, 'ಕಾಂತಾರ ಚಾಪ್ಟರ್ 1' 28ನೇ ದಿನ ₹2.50 ಕೋಟಿ ಕಲೆಕ್ಷನ್ ಮಾಡಿದೆ. ಕನ್ನಡ ವರ್ಷನ್ ₹84 ಲಕ್ಷ, ಹಿಂದಿ ವರ್ಷನ್ ₹1.26 ಕೋಟಿ, ತೆಲುಗು ವರ್ಷನ್ ₹14 ಲಕ್ಷ, ತಮಿಳು ವರ್ಷನ್ ₹24 ಲಕ್ಷ ಹಾಗೂ ಮಲಯಾಳಂ ವರ್ಷನ್ ₹15 ಲಕ್ಷ ಗಳಿಸಿದೆ. ಈ ಮೂಲಕ ಭಾರತದಲ್ಲಿ ಈ ಸಿನಿಮಾ ₹599.13 ಕೋಟಿ (Net) ಕಲೆಕ್ಷನ್ ಮಾಡಿದೆ.

₹1000 ಕೋಟಿ ಕ್ಲಬ್ ಸೇರಲು ಇನ್ನೆಷ್ಟು ಬೇಕು?

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ 'ಕಾಂತಾರ ಚಾಪ್ಟರ್ 1' ಬಿಡುಗಡೆಗೂ ಮುನ್ನ ₹1000 ಕೋಟಿ ಕಲೆಕ್ಷನ್ ಮಾಡುತ್ತೆ ಎಂಬ ನಿರೀಕ್ಷೆಯಿತ್ತು. ಆದರೆ, ಸ್ವಲ್ಪ ಹಿಂದೆ ಬಿದ್ದಿದೆ. ಆದರೂ, ಇಂಗ್ಲಿಷ್ ವರ್ಷನ್ ರಿಲೀಸ್ ಆಗುತ್ತಿರುವುದರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕರೆ, ಸಿನಿಮಾ ₹1000 ಕೋಟಿ ಕಲೆಕ್ಷನ್ ಮಾಡುವ ಎಲ್ಲಾ ಸಾಧ್ಯತೆಗಳು ಇವೆ. ಸದ್ಯ ವಿಶ್ವದಾದ್ಯಂತ ಈ ಸಿನಿಮಾ ₹835 ಕೋಟಿವರೆಗೂ ಕಲೆಕ್ಷನ್ ಆಗಿರಬಹುದೆಂದು ನಿರೀಕ್ಷೆ ಮಾಡಲಾಗಿದೆ. ಇನ್ನು ಭಾರತದಾದ್ಯಂತ 28 ದಿನಗಳ ಕಲೆಕ್ಷನ್ ಹೀಗಿದೆ.

'ಕಾಂತಾರ ಚಾಪ್ಟರ್ 1' ಕಲೆಕ್ಷನ್ (ಭಾರತ)

1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹30.50 ಕೋಟಿ
6ನೇ ದಿನ ₹34.25 ಕೋಟಿ
7ನೇ ದಿನ ₹25.25 ಕೋಟಿ
8ನೇ ದಿನ ₹21.15 ಕೋಟಿ
9ನೇ ದಿನ ₹22.25 ಕೋಟಿ
10ನೇ ದಿನ ₹39 ಕೋಟಿ
11ನೇ ದಿನ ₹40 ಕೋಟಿ
12ನೇ ದಿನ ₹13.35 ಕೋಟಿ
13ನೇ ದಿನ ₹14.15 ಕೋಟಿ
14ನೇ ದಿನ ₹10.5 ಕೋಟಿ
15ನೇ ದಿನ ₹8.85 ಕೋಟಿ
16ನೇ ದಿನ ₹8.5 ಕೋಟಿ
17ನೇ ದಿನ ₹12.75 ಕೋಟಿ
18ನೇ ದಿನ ₹17 ಕೋಟಿ
19ನೇ ದಿನ ₹12.37 ಕೋಟಿ
20ನೇ ದಿನ ₹13 ಕೋಟಿ
21ನೇ ದಿನ ₹10.25 ಕೋಟಿ
22ನೇ ದಿನ ₹6.60 ಕೋಟಿ
23ನೇ ದಿನ ₹6.1 ಕೋಟಿ
24ನೇ ದಿನ ₹9 ಕೋಟಿ
25ನೇ ದಿನ ₹10.4 ಕೋಟಿ
26ನೇ ದಿನ ₹3.25 ಕೋಟಿ
27ನೇ ದಿನ ₹3.65 ಕೋಟಿ
28ನೇ ದಿನ ₹2.50 ಕೋಟಿ
ಒಟ್ಟು ₹599.15 ಕೋಟಿ (Net)

Rishab Shetty Film Kantara Chapter 1 day 28 Box office Collection report

ಇಂಗ್ಲಿಷ್ ವರ್ಷನ್ ಲೆಕ್ಕಾಚಾರವೇನು?

ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಅಕ್ಟೋಬರ್ 31ರಿಂದ ಓಟಿಟಿಗೆ ಲಗ್ಗೆ ಇಡುತ್ತಿದೆ. ಅದೇ ದಿನ ವಿಶ್ವದಾದ್ಯಂತ ಇಂಗ್ಲಿಷ್ ವರ್ಷನ್ ಕೂಡ ಬಿಡುಗಡೆಯಾಗುತ್ತಿದೆ. ಹೀಗಾಗಿ ಕನ್ನಡ ಸಿನಿಮಾಗೆ ಗ್ಲೋಬಲ್ ಆಡಿಯನ್ಸ್ ರಿಯಾಕ್ಷನ್ ಹೇಗಿರುತ್ತೆ? ಅಲ್ಲಿಂದ ಎಷ್ಟು ಕಲೆಕ್ಷನ್ ಆಗಬಹುದೆಂದು ಕುತೂಹಲ ಟ್ರೇಡ್‌ ಎಕ್ಸ್‌ಪರ್ಟ್‌ಗಿದೆ. ಒಂದು ವೇಳೆ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆದರೆ, ಮತ್ತೊಂದು ಕನ್ನಡ ಸಿನಿಮಾ ₹1000 ಕೋಟಿ ಗಳಿಸಿದಂತೆ ಆಗುತ್ತೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Rishab Shetty Film Kantara Chapter 1 day 28 Box office Collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X