Kantara Chapter 1 Box Office Day 30: ಓಟಿಟಿಗೆ ಬಂದ್ಮೇಲೆ 'ಕಾಂತಾರ' ಕಲೆಕ್ಷನ್ ಡ್ರಾಪ್ ಆಯ್ತಾ? ಹೆಚ್ಚಾಯ್ತಾ?

'ಕಾಂತಾರ ಚಾಪ್ಟರ್ 1' ಓಟಿಟಿಗೆ ಲಗ್ಗೆ ಇಟ್ಟಿರಬಹುದು. ಹಾಗಂತ ಅದರ ಹವಾ ಏನೂ ಕಮ್ಮಿ ಆಗಿಲ್ಲ. ನಿನ್ನೆಯಿಂದ (ಅಕ್ಟೋಬರ್ 31) ಈ ಸಿನಿಮಾ ವಿದೇಶಿ ಭಾಷೆಗಳಲ್ಲೂ ರಿಲೀಸ್ ಆಗಿದೆ. ಅಲ್ಲಿಗೆ ರೆಸ್ಪಾನ್ಸ್ ಹೇಗೆ ಸಿಕ್ಕಿದೆ ಅನ್ನೋದು ಇನ್ನಷ್ಟೇ ಹೊರಬೀಳಬೇಕಿದೆ. ಹಾಗೇ ಓಟಿಟಿಯಲ್ಲಿ ಈ ಸಿನಿಮಾಗೆ ರೆಸ್ಪಾನ್ಸ್ ಹೇಗಿದೆ ಅನ್ನೋದು ಇನ್ನೂ ರಿವೀಲ್ ಆಗಬೇಕಿದೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿ, ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ 'ಕಾಂತಾರ ಚಾಪ್ಟರ್ 1' 31ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಮೂವತ್ತು ದಿನಗಳಲ್ಲಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಆರ್ಭಟ ಮಾಡಿತ್ತು. ಹೊಸ ದಾಖಲೆಗಳನ್ನು ನಿರ್ಮಿಸುವುದರಲ್ಲಿ ಯಶಸ್ವಿನೂ ಆಗಿತ್ತು. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಸಿಕ್ಕಂತಾಗಿದೆ. ಅಂದುಕೊಂಡಿದ್ದಕ್ಕಿಂತ ಮುಂಚೆಯೇ ಓಟಿಟಿಗೆ ಬಂತು ಅನಿಸಿದರೂ, ಇಲ್ಲಿವರೆಗಿನ ಕಲೆಕ್ಷನ್ ಕನ್ನಡ ಚಿತ್ರರಂಗಕ್ಕೆ ಬೂಸ್ಟ್ ಕೊಟ್ಟಿದೆ.

Rishab Shetty Film Kantara Chapter 1 day 30 Box office Collection report After Ott Release

ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಈ ಐದೂ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗ ಇಂಗ್ಲಿಷ್‌ ಹಾಗೂ ಸ್ಪಾನಿಷ್ ಭಾಷೆಯಲ್ಲಿಯೂ ರಿಲೀಸ್ ಆಗಿದೆ. ಆದರೆ, ಓಟಿಟಿಗೆ ಲಗ್ಗೆ ಇಟ್ಟ ಬಳಿಕ 'ಕಾಂತಾರ ಚಾಪ್ಟರ್ 1' ಕಲೆಕ್ಷನ್‌ನಲ್ಲಿ ಡ್ರಾಪ್ ಕಂಡಿದೆ. ಹಾಗಿದ್ದರೆ, 30ನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.

30ನೇ ದಿನದ ಕಲೆಕ್ಷನ್ ಎಷ್ಟು?

'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ ಕಲೆಕ್ಷನ್ ಕಳೆದ ಮೂರು ವರ್ಷಗಳಿಂದ ಸತತ ಸೋಲು ಕಂಡಿದ್ದ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ಕೊಟ್ಟಿದೆ. ಮೊದಲ ಮೂರು ವಾರ ಈ ಸಿನಿಮಾದ ಕಲೆಕ್ಷನ್ ಹೊಸ ದಾಖಲೆಗಳನ್ನು ಸೃಷ್ಟಿಸಿತ್ತು. ಆದರೆ, ನಾಲ್ಕನೇ ವಾರದಿಂದ ಗಳಿಕೆಯಲ್ಲಿ ಇಳಿಕೆ ಕಂಡಿತ್ತು. ಸ್ಯಾಕ್ನಿಲ್ಕ್ ವರದಿ ಪ್ರಕಾರ, ನಿನ್ನೆ (ಅಕ್ಟೋಬರ್ 31) 30ನೇ ದಿನ ಸಿನಿಮಾದ ಕಲೆಕ್ಷನ್ ಭಾರತದಾದ್ಯಂತ ₹1.71 ಕೋಟಿ ಆಗಿದೆ. ಕನ್ನಡ ವರ್ಷನ್ ₹44 ಲಕ್ಷ, ತೆಲುಗು ವರ್ಷನ್ ₹3 ಲಕ್ಷ, ಹಿಂದಿ ವರ್ಷನ್ ₹1.12 ಕೋಟಿ, ತಮಿಳು ವರ್ಷನ್ ₹11 ಲಕ್ಷ, ಮಲಯಾಳಂ ವರ್ಷನ್ ₹11 ಲಕ್ಷ ಆಗಿದೆ.

30 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' 2025ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಲಿಸ್ಟ್‌ನಲ್ಲಿ ಟಾಪ್‌ನಲ್ಲಿದೆ. ಅಲ್ಲದೇ ಆಸ್ಟ್ರೇಲಿಯಾ ಸೇರಿದಂತೆ ವಿದೇಶದ ಹಲವು ಭಾಗಗಳಲ್ಲಿ ಸಿನಿಮಾದ ಕಲೆಕ್ಷನ್ ಇನ್ನೂ ಉತ್ತಮವಾಗಿದೆ ಎಂದು ವರದಿಯಾಗಿದೆ. ಆದರೆ, ಓಟಿಟಿ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಬಳಿಕ ಈ ಸಿನಿಮಾದ ಕಲೆಕ್ಷನ್ ಡ್ರಾಪ್‌ ಕಂಡಿದ್ದರೂ ಭಾರತದಾದ್ಯಂತ ಸಿನಿಮಾದ ಕಲೆಕ್ಷನ್ ₹603.45 ಕೋಟಿ (Net) ದಾಟುವಲ್ಲಿ ಯಶಸ್ವಿಯಾಗಿದೆ.

'ಕಾಂತಾರ ಚಾಪ್ಟರ್ 1' ಕಲೆಕ್ಷನ್ (ಭಾರತ)

1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹30.50 ಕೋಟಿ
6ನೇ ದಿನ ₹34.25 ಕೋಟಿ
7ನೇ ದಿನ ₹25.25 ಕೋಟಿ
8ನೇ ದಿನ ₹21.15 ಕೋಟಿ
9ನೇ ದಿನ ₹22.25 ಕೋಟಿ
10ನೇ ದಿನ ₹39 ಕೋಟಿ
11ನೇ ದಿನ ₹40 ಕೋಟಿ
12ನೇ ದಿನ ₹13.35 ಕೋಟಿ
13ನೇ ದಿನ ₹14.15 ಕೋಟಿ
14ನೇ ದಿನ ₹10.5 ಕೋಟಿ
15ನೇ ದಿನ ₹8.85 ಕೋಟಿ
16ನೇ ದಿನ ₹8.5 ಕೋಟಿ
17ನೇ ದಿನ ₹12.75 ಕೋಟಿ
18ನೇ ದಿನ ₹17 ಕೋಟಿ
19ನೇ ದಿನ ₹12.37 ಕೋಟಿ
20ನೇ ದಿನ ₹13 ಕೋಟಿ
21ನೇ ದಿನ ₹10.25 ಕೋಟಿ
22ನೇ ದಿನ ₹6.60 ಕೋಟಿ
23ನೇ ದಿನ ₹6.1 ಕೋಟಿ
24ನೇ ದಿನ ₹9 ಕೋಟಿ
25ನೇ ದಿನ ₹10.4 ಕೋಟಿ
26ನೇ ದಿನ ₹3.25 ಕೋಟಿ
27ನೇ ದಿನ ₹3.65 ಕೋಟಿ
28ನೇ ದಿನ ₹2.50 ಕೋಟಿ
29ನೇ ದಿನ ₹2.4 ಕೋಟಿ
30ನೇ ದಿನ ₹1.75 ಕೋಟಿ
ಒಟ್ಟು ₹603.45 ಕೋಟಿ (Net)

Rishab Shetty Film Kantara Chapter 1 day 30 Box office Collection report After Ott Release

ಸ್ಪಾನಿಷ್ ಬಾಕ್ಸಾಫೀಸ್ ಮೇಲೆ ಕಣ್ಣು

ಅಕ್ಟೊಬರ್ 31 ರಿಂದ 'ಕಾಂತಾರ ಚಾಪ್ಟರ್ 1' ಸ್ಪಾನಿಷ್ ಭಾಷೆಯಲ್ಲಿ ರಿಲೀಸ್ ಆಗಿದೆ. ಲ್ಯಾಟಿನ್ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸ್ಪಾನಿಷ್ ಭಾಷೆಯನ್ನು ಮಾತಾಡುತ್ತಾರೆ. ಕೆಲವಡೆ ಭಾರತೀಯ ಸಿನಿಮಾಗಳನ್ನು ನೋಡುವ ಸ್ಪಾಷನ್ ಜನರು ಕೂಡ ಇದ್ದಾರೆ. ಅಂತಹ ಏರಿಯಾಗಳಲ್ಲಿ ಈ ಸಿನಿಮಾವನ್ನು ಅವರ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಸ್ಪಾನಿಷ್ ಹಾಗೂ ಇಂಗ್ಲಿಷ್ ಭಾಷೆಯಿಂದ ₹135 ರಿಂದ ₹140 ಕೋಟಿ ಕಲೆಕ್ಷನ್ ಆದರೆ, ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರುವುದರಲ್ಲಿ ಅನುಮಾನವಿಲ್ಲ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Rishab Shetty Film Kantara Chapter 1 day 30 Box office Collection report After Ott Release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X