Kantara Chapter 1 Box Office Day 31: ಕನ್ನಡ ರಾಜ್ಯೋತ್ಸವದಂದು 'ಕಾಂತಾರ ಚಾಪ್ಟರ್ 1' ಗಳಿಸಿದ್ದೆಷ್ಟು?

'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿ ಈಗ ಓಟಿಟಿಗೆ ಲಗ್ಗೆ ಇಟ್ಟಿದೆ. ಹೊಂಬಾಳೆ ಫಿಲ್ಮ್ಸ್ ಬತ್ತಳಿಕೆಗೆ ಮತ್ತೊಂದು ಮೆಗಾ ಸಿನಿಮಾ ಸೇರಿಕೊಂಡಿದೆ. ಬ್ಯಾಕ್ ಟು ಬ್ಯಾಕ್ ಉತ್ತಮ ಸಿನಿಮಾಗಳನ್ನು ನೀಡುತ್ತಿರುವ ಬಂದಿದೆ. 'ಕಾಂತಾರ 1' ಕೂಡ ಭಾರತದಾದ್ಯಂತ ಉತ್ತಮ ಕಲೆಕ್ಷನ್ ಮಾಡಿದೆ. ಹಾಗೇ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ರಿಲೀಸ್ ಮಾಡಲಾಗಿತ್ತು. ಅಲ್ಲಿಂದಲೂ ಸಿನಿಮಾ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಆದರೆ, ಓಟಿಟಿ ಲಗ್ಗೆ ಇಟ್ಟ ದಿನದಿಂದ ಬಾಕ್ಸಾಫೀಸ್‌ ಸಿಕ್ಕಾಪಟ್ಟೆ ಡ್ರಾಪ್ ಆಗಿತ್ತು. ಜನರು ಥಿಯೇಟರ್‌ ಕಡೆಗೆ ಮುಖ ಮಾಡುವುದನ್ನು ಕಡಿಮೆ ಮಾಡಿದ್ದರು. ಆದರೆ, ವೀಕೆಂಡ್‌ನಲ್ಲಿ ಮತ್ತೆ ಬಾಕ್ಸಾಫೀಸ್‌ನಲ್ಲಿ ಏರಿಕೆಯಾಗಿದೆ. ನಿನ್ನೆ ಶನಿವಾರ (ನವೆಂಬರ್ 1) ಕನ್ನಡ ರಾಜ್ಯೋತ್ಸವದ ದಿನದಂದು ಬಾಕ್ಸಾಫೀಸ್‌ನಲ್ಲಿ ಏರಿಕೆ ಕಂಡಿದೆ. ರಜೆಯಂದು ಓಟಿಟಿಯಲ್ಲಿ ರಿಲೀಸ್ ಆಗಿದ್ದರೂ ಜನರು ಥಿಯೇಟರ್‌ಗೆ ನುಗ್ಗಿ ಸಿನಿಮಾ ನೋಡಿದ್ದಾರೆ.

Rishab Shetty Hombale Films Kantara Chapter 1 Day 31 Box office Collection report

31ನೇ ದಿನ 'ಕಾಂತಾರ ಚಾಪ್ಟರ್ 1' ಕನ್ನಡ ಹಾಗೂ ಹಿಂದಿ ವರ್ಷನ್‌ ಕಲೆಕ್ಷನ್ ಕೋಟಿ ದಾಟಿದೆ. ಹಾಗಿದ್ದರೆ, ನಿನ್ನೆ (ನವೆಂಬರ್ 1) ಕನ್ನಡ ರಾಜ್ಯೋತ್ಸವ ದಿನದಂದು ಬಾಕ್ಸಾಫೀಸ್‌ ಕಲೆಕ್ಷನ್ ಎಷ್ಟಾಗಿದೆ? ಇಲ್ಲಿವರೆಗೂ ಭಾರತದಾದ್ಯಂತ ಈ ಸಿನಿಮಾ ಕಲೆಕ್ಷನ್ ಎಷ್ಟು? ಸಾವಿರ ಕೋಟಿಗೆ ಇನ್ನಷ್ಟು ಬೇಕು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

31ನೇ ದಿನ 'ಕಾಂತಾರ 1' ಕಲೆಕ್ಷನ್ ಎಷ್ಟು?

ಓಟಿಟಿಗೆ ಎಂಟ್ರಿ ಕೊಟ್ಮೇಲೆ ಇನ್ನೇನು 'ಕಾಂತಾರ ಚಾಪ್ಟರ್ 1' ಅಧ್ಯಾಯ ಮುಗೀತು ಅಂತ ಟ್ರೇಡ್‌ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದರು. ಆದರೆ, ಕನ್ನಡ ರಾಜ್ಯೋತ್ಸವದಂದು ಈ ಸಿನಿಮಾದ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, 31ನೇ ದಿನ ಈ ಸಿನಿಮಾ ಭಾರತದಾದ್ಯಂತ ₹3.50 ಕೋಟಿ (Net) ಕಲೆಕ್ಷನ್ ಮಾಡಿದೆ. ಕನ್ನಡ ವರ್ಷನ್ ₹1.25 ಕೋಟಿ ಕಲೆಕ್ಷನ್ ಮಾಡಿದ್ದರೆ, ಹಿಂದಿ ವರ್ಷನ್ ₹1.85 ಕೋಟಿ, ತೆಲುಗು ವರ್ಷನ್ ₹10 ಲಕ್ಷ, ತಮಿಳು ವರ್ಷನ್ ₹35 ಲಕ್ಷ ಕಲೆಕ್ಷನ್ ಮಾಡಿದೆ. ಇನ್ನು ಮಲಯಾಳಂ ವರ್ಷನ್ ₹5 ಲಕ್ಷ ಕಲೆ ಹಾಕಿದೆ. ಭಾರತದಾದ್ಯಂತ ಒಟ್ಟು ₹607.05 ಕೋಟಿ ಕಲೆಕ್ಷನ್ ಮಾಡಿದೆ.

ವಿಶ್ವದಾದ್ಯಂತ ಎಷ್ಟಾಗಿ ಕಲೆಕ್ಷನ್?

'ಕಾಂತಾರ ಚಾಪ್ಟರ್ 1' ವಿಶ್ವದ ಹಲವು ದೇಶಗಳಲ್ಲಿ ರಿಲೀಸ್ ಆಗಿತ್ತು. ಅಮೆರಿಕ, ಜರ್ಮನಿ, ಆಸ್ಟ್ರೇಲಿಯಾಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಅಲ್ಲೆಲ್ಲ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸ್ಯಾಕ್ನಿಲ್ಕ್ ಪ್ರಕಾರ, ಇಲ್ಲಿವರೆಗೂ ಈ ಸಿನಿಮಾ ಓವರ್‌ಸೀಸನ್ ಬಾಕ್ಸಾಫೀಸ್‌ನಿಂದ ₹110.5 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ಭಾರತದಾದ್ಯಂತ 31 ದಿನಗಳಲ್ಲಿ ಗಳಿಸಿದ ಕಲೆಕ್ಷನ್ ಹೀಗಿದೆ.

'ಕಾಂತಾರ ಚಾಪ್ಟರ್ 1' ಕಲೆಕ್ಷನ್ (ಭಾರತ)

1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹30.50 ಕೋಟಿ
6ನೇ ದಿನ ₹34.25 ಕೋಟಿ
7ನೇ ದಿನ ₹25.25 ಕೋಟಿ
8ನೇ ದಿನ ₹21.15 ಕೋಟಿ
9ನೇ ದಿನ ₹22.25 ಕೋಟಿ
10ನೇ ದಿನ ₹39 ಕೋಟಿ
11ನೇ ದಿನ ₹40 ಕೋಟಿ
12ನೇ ದಿನ ₹13.35 ಕೋಟಿ
13ನೇ ದಿನ ₹14.15 ಕೋಟಿ
14ನೇ ದಿನ ₹10.5 ಕೋಟಿ
15ನೇ ದಿನ ₹8.85 ಕೋಟಿ
16ನೇ ದಿನ ₹8.5 ಕೋಟಿ
17ನೇ ದಿನ ₹12.75 ಕೋಟಿ
18ನೇ ದಿನ ₹17 ಕೋಟಿ
19ನೇ ದಿನ ₹12.37 ಕೋಟಿ
20ನೇ ದಿನ ₹13 ಕೋಟಿ
21ನೇ ದಿನ ₹10.25 ಕೋಟಿ
22ನೇ ದಿನ ₹6.60 ಕೋಟಿ
23ನೇ ದಿನ ₹6.1 ಕೋಟಿ
24ನೇ ದಿನ ₹9 ಕೋಟಿ
25ನೇ ದಿನ ₹10.4 ಕೋಟಿ
26ನೇ ದಿನ ₹3.25 ಕೋಟಿ
27ನೇ ದಿನ ₹3.65 ಕೋಟಿ
28ನೇ ದಿನ ₹2.50 ಕೋಟಿ
29ನೇ ದಿನ ₹2.4 ಕೋಟಿ
30ನೇ ದಿನ ₹1.85 ಕೋಟಿ
31ನೇ ದಿನ ₹3.50 ಕೋಟಿ
ಒಟ್ಟು ₹607.15 ಕೋಟಿ (Net)

Rishab Shetty Hombale Films Kantara Chapter 1 Day 31 Box office Collection report

ಭಾನುವಾರ ಕಲೆಕ್ಷನ್ ಲೆಕ್ಕಾಚಾರವೇನು?

ಬ್ಯಾಕ್ ಟು ಬ್ಯಾಕ್ ರಜೆ ಇದ್ದಿದ್ದರಿಂದ 'ಕಾಂತಾರ ಚಾಪ್ಟರ್ 1' ಭಾನುವಾರವೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಬಹುದೆಂದು ನಿರೀಕ್ಷೆ ಮಾಡಲಾಗಿದೆ. 32ನೇ ದಿನವೂ ಕಲೆಕ್ಷನ್ ಮೂರು ಕೋಟಿ ದಾಟಿದರೆ, ಕೇವಲ ಭಾರತದಲ್ಲಿಯೇ ₹610 ಕೋಟಿ (Net) ಕಲೆಕ್ಷನ್ ಆಗುವ ಎಲ್ಲಾ ಸಾಧ್ಯತೆಯಿದೆ. ಇನ್ನು ಸ್ಪಾನಿಷ್ ಭಾಷೆಯಲ್ಲಿ ಕಲೆಕ್ಷನ್ ಹೇಗಾಗಿದೆ ಅನ್ನೋ ವರದಿ ಇನ್ನೂ ಹೊರಬಿದ್ದಿಲ್ಲ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Rishab Shetty, Hombale Films Kantara Chapter 1 Day 31 Box office Collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X