ಕರ್ನಾಟಕದಲ್ಲಿ 'ಕೆಜಿಎಫ್ 2' ಹಿಂದಿಕ್ಕಿದ 'ಕಾಂತಾರ ಚಾಪ್ಟರ್ 1'; ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ

'ಕಾಂತಾರ ಚಾಪ್ಟರ್ 1' ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. 'ಕಾಂತಾರ' ಮತ್ತೊಮ್ಮೆ ರಿಷಬ್ ಶೆಟ್ಟಿಯ ಕೈ ಹಿಡಿದಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಒಂದೊಂದೇ ದಾಖಲೆಗಳನ್ನು ಬ್ರೇಕ್ ಮಾಡುತ್ತಾ ಮುಂದೆ ಸಾಗುತ್ತಿದೆ. ಮೊದಲ 11 ದಿನಗಳಲ್ಲೇ ಕರ್ನಾಟಕದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ರಿಲೀಸ್ ಆದ ದಿನದಿಂದಲೂ ಇಂತಹದ್ದೊಂದು ಲೆಕ್ಕಾಚಾರ ಹಾಕಲಾಗುತ್ತಿತ್ತು. ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಸಿನಿಮಾವನ್ನು 'ಕಾಂತಾರ ಚಾಪ್ಟರ್ 1' ಹಿಂದಿಕ್ಕಬಹುದೇ? ಎಷ್ಟು ದಿನಗಳಲ್ಲಿ ದಾಖಲೆಗಳನ್ನು ಬ್ರೇಕ್ ಮಾಡಬಹುದೆಂಬ ನಿರೀಕ್ಷೆಯಿತ್ತು. ಟ್ರೇಡ್ ಎಕ್ಸ್‌ಪರ್ಟ್‌ಗಳ ಆ ಲೆಕ್ಕಾಚಾರ ನಿಜವಾಗಿದೆ.

Rishab Shetty movie Kantara Chapter 1 become Highest earner in Karnataka Box Office in 11 days

ವಿಶ್ವ ಮಟ್ಟದಲ್ಲಿ 'ಕೆಜಿಎಫ್ 2' ದಾಖಲೆಯನ್ನು ಮುರಿಯುವುದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಆದರೆ, ಕರ್ನಾಟಕದಲ್ಲಿ 'ಕೆಜಿಎಫ್ 2' ದಾಖಲೆಯನ್ನು 'ಕಾಂತಾರ ಚಾಪ್ಟರ್ 1' ಕೇವಲ 11 ದಿನಗಳಲ್ಲಿ ಬ್ರೇಕ್ ಮಾಡಿದೆ. ಹಾಗಿದ್ದರೆ, 11 ದಿನಗಳಲ್ಲಿ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? ಯಾವ್ಯಾವ ಥಿಯೇಟರ್‌ಗಳಿಂದ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ಅನ್ನೋ ಡಿಟೈಲ್ಸ್ ಇಲ್ಲಿದೆ.

ಹೊಂಬಾಳೆ ಕೈ ಹಿಡಿದ ದೈವ

ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಮತ್ತೊಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ. ಈ ಅಭೂತಪೂರ್ವ ಯಶಸ್ಸು ಚಿತ್ರತಂಡಕ್ಕೆ ಸಿಕ್ಕಿದ ದೈವಾನುಗ್ರಹವೇ ಸರಿಯೆಂದು ಟೀಮ್ ಹೇಳಿಕೊಂಡಿದೆ. ಕರ್ನಾಟಕದ ಸಂಸ್ಕೃತಿ, ಆಚಾರ-ವಿಚಾರಗಳ ಬೇರುಗಳನ್ನು ತೆರೆಮೇಲೆ ತೋರಿಸಿದ ಸಿನಿಮಾ. 'ಕಾಂತಾರ ಚಾಪ್ಟರ್ 1' ಶಿವಗಣಗಳ ಮಹತ್ವವನ್ನು ಎತ್ತಿ ಹಿಡಿಯುವುದರೊಂದಿಗೆ ಶಿವಭಕ್ತರ ಭಾವನೆಗಳನ್ನು ಗೌರವಿಸುತ್ತದೆ ಎಂದು ಟೀಮ್ ಹೆಮ್ಮೆಯಿಂದ ಹೇಳಿಕೊಂಡಿದೆ.

Rishab Shetty movie Kantara Chapter 1 become Highest earner in Karnataka Box Office in 11 days

ಕರ್ನಾಟಕದಲ್ಲಿ 'ಕೆಜಿಎಫ್ 2' ದಾಖಲೆ ಉಡೀಸ್

ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 'ಕಾಂತಾರ ಚಾಪ್ಟರ್ 1' ಕರ್ನಾಟಕದಲ್ಲಿ ಗಲ್ಲಾಪಟ್ಟಿಗೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಈ ಸಿನಿಮಾ ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ಕರ್ನಾಟಕದಲ್ಲಿ ಸುಮಾರು ₹191 ಕೋಟಿಗೂ (Gross) ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿದೆ ಎಂದು ಹೊಂಬಾಳೆ ಫಿಲ್ಮ್ಸ್ ಮೂಲಗಳೇ ಕನ್ಫರ್ಮ್ ಮಾಡಿವೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ ಯಶ್-ಪ್ರಶಾಂತ್ ನೀಲ್ ಜೋಡಿಯ 'ಕೆಜಿಎಫ್ ಚಾಪ್ಟರ್ 2' ಕರ್ನಾಟಕದಲ್ಲಿ ₹154.69 ಕೋಟಿ (Net) ಕಲೆಕ್ಷನ್ ಮಾಡಿತ್ತು. 'ಕಾಂತಾರ 1' (Gross) ಕಲೆಕ್ಷನ್ ಆದರೂ, ದಾಖಲೆ ಬ್ರೇಕ್ ಮಾಡಿದೆ ಎಂದು ಹೇಳಲಾಗಿದೆ.

ಕರ್ನಾಟಕದ ಚಿತ್ರಮಂದಿರಗಳ ಕಲೆಕ್ಷನ್

ಕರ್ನಾಟಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ 'ಕಾಂತಾರ ಚಾಪ್ಟರ್ 1' ಕಲೆಕ್ಷನ್ ಅದ್ಭುತವಾಗಿದೆ. ಕರ್ನಾಟಕದ ಕೆಲವು ಚಿತ್ರಮಂದಿಗಳಲ್ಲಿ ದಾಖಲೆ ಕಲೆಕ್ಷನ್ ಆಗಿವೆ. ಅಂತಹ ಕೆಲವು ಚಿತ್ರಮಂದಿರಗಳು ಎರಡನೇ ವೀಕೆಂಡ್‌ನಲ್ಲಿ ಮಾಡಿದ ಕಲೆಕ್ಷನ್ ಹೀಗಿದೆ.

ಥಿಯೇಟರ್‌ಗಳ ಕಲೆಕ್ಷನ್ (3 ದಿನಗಳ ಗಳಿಕೆ)

ಸಂತೋಷ್ ₹16 ಲಕ್ಷ
ವೀರೇಶ್ ₹21 ಲಕ್ಷ (2 Screens)
ಪ್ರಸನ್ನ ₹16 ಲಕ್ಷ
ಊರ್ವಶಿ ₹21.5 ಲಕ್ಷ
ಬಾಲಾಜಿ ₹16 ಲಕ್ಷ
ವೈಭವ್ ₹14 ಲಕ್ಷ
ಸಿದ್ದೇಶ್ವರ+ಸಿದ್ದಲಿಂಗೇಶ್ವರ ₹27 ಲಕ್ಷ
ಗುರುಶ್ರೀ (ಮಂಡ್ಯ) ₹18 ಲಕ್ಷ
ಮಹಾವೀರ್ (ಮಂಡ್ಯ) ₹11 ಲಕ್ಷ
ಸಂಗಮ್ ಮೈಸೂರು ₹16 ಲಕ್ಷ
ವುಡ್‌ಲ್ಯಾಂಡ್ (ಮೈಸೂರು) ₹16 ಲಕ್ಷ
ಗಾಯತ್ರಿ (ಮೈಸೂರು) ₹15 ಲಕ್ಷ
ಡಿಆರ್‌ಎಸ್‌ (ಮೈಸೂರು) ₹23 ಲಕ್ಷ
ತ್ರಿಶುಲ್+ತ್ರಿನೇತ್ರ (ದಾವಣಗೆರೆ) ₹19 ಲಕ್ಷ
ಶ್ರೀಗುರು (ಹಾಸನ) ₹14 ಲಕ್ಷ
ಎಸ್‌ಬಿಜಿ (ಹಾಸನ) ₹11 ಲಕ್ಷ

₹250 ಕೋಟಿ ದಾಟುತ್ತಾ?

'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ಈಗಾಗಲೇ ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಎನ್ನಲಾಗಿದೆ. ಇದರಿಂದ ಕರ್ನಾಟಕದ ಗಲ್ಲಾಪಟ್ಟೆಗೆಯಲ್ಲಿ ₹191 ಕೋಟಿ ಕಲೆಕ್ಷನ್ ಆಗಿದೆ. ಇನ್ನು ದೀಪಾವಳಿ ಹಬ್ಬಕ್ಕೆ ಬ್ಯಾಕ್ ಟು ಬ್ಯಾಕ್ ರಜೆ ಇರುವುದರಿಂದ ಆ ಮೂಡ್‌ನಲ್ಲಿ ಮತ್ತಷ್ಟು ಜನರು ಸಿನಿಮಾ ನೋಡುವ ನಿರೀಕ್ಷೆಯಿದೆ. ಹೀಗಾಗಿ ಈ ಸಿನಿಮಾ ₹250 ಕೋಟಿ ಕಲೆಕ್ಷನ್ ಮಾಡಬಹುದೆಂದು ಅಂದಾಜಿಸಲಾಗಿದೆ.

More from Filmibeat

English summary
Rishab Shetty movie Kantara Chapter 1 become Highest earner in Karnataka Box Office in 11 days;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X