18ನೇ ದಿನಕ್ಕೆ 'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ₹765 ಕೋಟಿ; ಕೇರಳದಲ್ಲಿ ಆಲ್‌ಟೈಮ್ ರೆಕಾರ್ಡ್..ಕಲೆಕ್ಷನ್ ಎಷ್ಟು?

ರಿಷಬ್ ಶೆಟ್ಟಿ ಸಿನಿಮಾ ಗೆದ್ದಿದ್ದಕ್ಕೆ ಟೆಂಪಲ್ ರನ್ ಮಾಡುತ್ತಿದ್ದಾರೆ. ಕಾಶಿ, ಹಾಸನಾಂಬ ಉತ್ಸವಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಇನ್ನೊಂದು ಕಡೆ 'ಕಾಂತಾರ ಚಾಪ್ಟರ್ 1' ದಾಖಲೆಗಳನ್ನೆಲ್ಲ ಅಳಿಸುತ್ತಾ ಮುಂದೆ ಸಾಗುತ್ತಲೇ ಇದೆ. ಸಿನಿಮಾ ಬಿಡುಗಡೆಯಾಗಿ 18 ದಿನಗಳಾಗಿದ್ದರೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಲೇ ಇದೆ.

'ಕಾಂತಾರ ಚಾಪ್ಟರ್ 1' ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ. ದೇಶದಲ್ಲಷ್ಟೇ ಅಲ್ಲ. ವಿದೇಶದಲ್ಲೂ ಸದ್ದು ಮಾಡುತ್ತಿದೆ. ವಿದೇಶದಲ್ಲಿ ಬಿಡುಗಡೆಯಾದ ಕಡೆಗಳಲ್ಲೆಲ್ಲ ಈ ಸಿನಿಮಾ ಬಾಕ್ಸಾಫೀಸ್‌ ಕೊಳ್ಳೆ ಹೊಡೆಯುತ್ತಿದೆ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು, ಬೇರೆ ಭಾಷೆ ಮಾತಾಡುವ ಭಾರತೀಯರು ಸಿನಿಮಾವನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ.

Rishab Shetty movie Kantara Chapter 1 worldwide and Kerala official box office collection report

ಇನ್ನು 'ಕಾಂತಾರ ಚಾಪ್ಟರ್ 1' ಇದೂವರೆಗೂ ವಿಶ್ವದಾದ್ಯಂತ ಗಳಿಸಿದ್ದೆಷ್ಟು? 'ಕೆಜಿಎಫ್ 2' ಕಲೆಕ್ಷನ್ ದಾಖಲೆಯನ್ನು ಉಡೀಸ್ ಮಾಡುತ್ತಾ? ವಿಶ್ವದ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನು ಬರುಯುತ್ತಾ? ಅದಕ್ಕೆ ಇನ್ನೂ ಕೆಲವು ದಿನಗಳು ಕಾಯಬೇಕು. ಹಾಗಿದ್ದರೆ, ವಿಶ್ವದಾದ್ಯಂತ ಬಾಕ್ಸಾಫೀಸ್ ಕಲೆಕ್ಷನ್ ಡಿಟೈಲ್ಸ್ ಜೊತೆಗೆ ಕೇರಳದಲ್ಲಿ ಆಲ್‌ಟೈಮ್ ರೆಕಾರ್ಡ್ ಮಾಡಿದ್ದು, ಅಧಿಕೃತ ಗಳಿಕೆಯ ಡಿಟೈಲ್ಸ್ ಇಲ್ಲಿದೆ.

ವಿಶ್ವದಾದ್ಯಂತ ₹765 ಕೋಟಿ ಕಲೆಕ್ಷನ್

'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. 18ನೇ ದಿನ ವರ್ಲ್ಡ್‌ವೈಡ್ ಬಾಕ್ಸಾಫೀಸ್ ಕಲೆಕ್ಷನ್ ₹765 ಕೋಟಿ (Gross) ಎಂದು ಹೊಂಬಾಳೆ ಅಧಿಕೃತವಾಗಿ ಹೇಳಿಕೊಂಡಿದೆ. ಈ ಮೂಲಕ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಮೆಗಾ ಹಿಟ್ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಂತಾಗಿದೆ. ಈಗ ಎದ್ದಿರುವ ಪ್ರಶ್ನೆ ಇದು 'ಕೆಜಿಎಫ್ 2' ಗಳಿಸಿದ್ದ ₹1250 ಕೋಟಿ ಕಲೆಕ್ಷನ್ ಅನ್ನು ಮೀರಿಸಬಹುದೇ? ಈ ಪ್ರಶ್ನೆಗೆ ಉತ್ತರ ಸಿಗಲು ಇನ್ನೊಂದಿಷ್ಟು ದಿನ ಕಾಯಲೇಬೇಕು.

ಕೇರಳದಲ್ಲಿ ದಾಖಲೆ ಕಲೆಕ್ಷನ್

ರಿಷಬ್ ಶೆಟ್ಟಿ ನಿರ್ದೇಶಿಸಿದ 'ಕಾಂತಾರ ಚಾಪ್ಟರ್ 1'ಗೆ ಕೇರಳದಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ ಈ ಸಿನಿಮಾ ಕೇರಳದಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ. ಹೊಂಬಾಳೆ ಅಧಿಕೃತವಾಗಿ 18 ದಿನಗಳಲ್ಲಿ ಕೇರಳದಲ್ಲಿ ಗಳಿಸಿದ ಕಲೆಕ್ಷನ್ ಅನ್ನು ರಿವೀಲ ಮಾಡಿದೆ. ಇಲ್ಲಿವರೆಗೂ 'ಕಾಂತಾರ ಚಾಪ್ಟರ್ 1' ಮಲಯಾಳಂ ವರ್ಷನ್ ₹55 ಕೋಟಿ ರೂಪಾಯಿಗಳನ್ನು ಕಲೆ ಹಾಕಿದೆ ಎಂದು ಲೆಕ್ಕ ಕೊಟ್ಟಿದೆ.

ಕೇರಳದಲ್ಲಿ ಕನ್ನಡ ಸಿನಿಮಾದ ಹವಾ

ಕೇರಳದಲ್ಲಿ 'ಕಾಂತಾರ ಚಾಪ್ಟರ್ 1' ಹೊಸ ದಾಖಲೆಯನ್ನು ಸೃಷ್ಟಿಸಿದೆ. ಮಲಯಾಳಂಗೆ ಡಬ್ ಆದ ಸಿನಿಮಾಗಳ ಪೈಕಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾವೆಂಬ ದಾಖಲೆಯನ್ನು ಬರೆದಿದೆ. ಮಲಯಾಳಂ ಚಿತ್ರರಂಗದಲ್ಲಿ ಡಬ್ಬಿಂಗ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲುವುದು ತೀರಾ ವಿರಳ. ಆದರೆ, 'ಕಾಂತಾರ ಚಾಪ್ಟರ್ 1' ಆ ದಾಖಲೆಯನ್ನು ಮುರಿದಿದೆ.

ಪೃಥ್ವಿರಾಜ್ ಪ್ರೊಡಕ್ಷನ್ ವಿತರಣೆ

'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಕೇರಳದಲ್ಲಿ ವಿತರಣೆ ಮಾಡಿದ್ದರು. ಈ ಸಿನಿಮಾಗೆ ಮಲಯಾಳಿಗಳು ಒಳ್ಳೆಯ ರೆಸ್ಪಾನ್ಸ್ ಕೊಟ್ಟಿದ್ದಾರೆ. ಈ ಮೂಲಕ ಕನ್ನಡದಲ್ಲಿ ಡಬ್ ಆದ ಸಿನಿಮಾಗಳನ್ನು ಕೇರಳದಲ್ಲಿ ಧೈರ್ಯವಾಗಿ ರಿಲೀಸ್ ಮಾಡಬಹುದೆಂಬ ಭರವಸೆ ಸಿಕ್ಕಿದೆ. ಹಾಗೇ ಇನ್ನು ಎಷ್ಟು ಕಲೆ ಹಾಕಬಹುದೆಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಎದುರು ನೋಡುತ್ತಿದ್ದಾರೆ.

More from Filmibeat

English summary
Rishab Shetty movie Kantara Chapter 1 worldwide and Kerala official box office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X