Kantara Chapter 1 Box Office Day 21: 'ಕಾಂತಾರ ಚಾಪ್ಟರ್ 1' ದೀಪಾವಳಿ ಕಲೆಕ್ಷನ್ ರಿಪೋರ್ಟ್; 21ನೇ ದಿನ ಗಳಿಸಿದ್ದೆಷ್ಟು?

ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ದೀಪಾವಳಿ ಹಬ್ಬದಲ್ಲಿ ಉತ್ತಮ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿತ್ತು. ಟ್ರೇಡ್‌ ಎಕ್ಸ್‌ಪರ್ಟ್‌ಗಳು ಕೂಡ ಇದೇ ನಿರೀಕ್ಷೆಯಲ್ಲಿದ್ದರು. ಮೊದಲ ಎರಡು ವಾರ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ್ದ ಈ ಸಿನಿಮಾ ಮೂರು ವಾರ ಇಳಿಕೆ ಕಾಣುತ್ತಾ ಸಾಗಿತ್ತು. ಹೀಗಾಗಿ ಹಬ್ಬದ ಸಂಭ್ರಮದಲ್ಲಿ ಈ ಸಿನಿಮಾ ಮತ್ತೆ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಬಹುದೆಂದು ಲೆಕ್ಕ ಹಾಕಿದ್ದರು. ಆ ಲೆಕ್ಕಾಚಾರಕ್ಕೀಗ ಉತ್ತರ ಸಿಕ್ಕಿದೆ.

ದೀಪಾವಳಿ ದಕ್ಷಿಣ ಭಾರತದ ಸಿನಿಮಾ ಮಂದಿಗೆ ಲಾಭದಾಯಕ ಆಗಿರುವ ಉದಾಹರಣೆಗಳು ತೀರಾ ಕಡಿಮೆ. ಆದರೆ, ಬಾಲಿವುಡ್ ಮಂದಿಗೆ ಈ ಹಬ್ಬ ಲಾಭ ತಂದುಕೊಟ್ಟ ಸಾಕಷ್ಟು ಉದಾಹರಣೆಗಳು ಇವೆ. ಹೀಗಾಗಿ ಹಿಂದಿ ಏರಿಯಾಗಳಲ್ಲಿ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆಯಿತ್ತು. ಆದರೆ, ಅವರೇಜ್ ಕಲೆಕ್ಷನ್ ಆಗಿದೆ ಎಂದು ಲೆಕ್ಕ ಕೊಡುತ್ತಿದ್ದಾರೆ.

Rishab Shetty Rukmini Vasanth Film Kantara Chapter 1 day 21 Diwali Box office Collection Report

ಬಾಲಿವುಡ್‌ನಲ್ಲಿ 'ಥಮ್ಮಾ' ಬಿಟ್ಟರೆ, ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಹೀಗಾಗಿ 'ಕಾಂತಾರ ಚಾಪ್ಟರ್ 1' ಕಲೆಕ್ಷನ್ ಜೋರಾಗಿ ಇರುತ್ತೆ ಎಂದು ನಂಬಲಾಗಿತ್ತು. ಹಾಗಿದ್ದರೆ, ಈ ಸಿನಿಮಾ 21ನೇ ದಿನ ಗಳಿಸಿದ್ದೆಷ್ಟು? ಅತೀ ಹೆಚ್ಚು ಕಲೆಕ್ಷನ್ ಆದ ಕನ್ನಡ ಹಾಗೂ ಹಿಂದಿ ಏರಿಯಾಗಳಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

21ನೇ ದಿನದ ಕಲೆಕ್ಷನ್ ಏನು?

'ಕಾಂತಾರ ಚಾಪ್ಟರ್ 1' 21ನೇ ದಿನ ದೇಶಾದ್ಯಂತ ಉತ್ತಮ ಕಲೆಕ್ಷನ್ ಆಗಿದೆ. ಸ್ಯಾಕ್ನಿಲ್ಕ್ ಪ್ರಕಾರ, 21ನೇ ದಿನ ಈ ಸಿನಿಮಾ ಸುಮಾರು ₹10.25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿ ಮಾಡಿದೆ. ಕನ್ನಡ ವರ್ಷನ್ ₹4.1 ಕೋಟಿ, ತೆಲುಗು ವರ್ಷನ್ ₹38 ಲಕ್ಷ, ಹಿಂದಿ ₹4.25 ಕೋಟಿ, ತಮಿಳು ₹86 ಲಕ್ಷ, ಮಲಯಾಳಂ ₹26 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಇದರಿಂದ ದೇಶಾದ್ಯಂತ 21ನೇ ದಿನಕ್ಕೆ ₹556.75 ಕೋಟಿ (Net) ಕಲೆಕ್ಷನ್ ಆಗಿದೆ.

ದೀಪಾವಳಿ ಹಬ್ಬದಂದು ಕಾಂತಾರ ಗಳಿಸಿದ್ದೆಷ್ಟು?

ಕಳೆದ ಶುಕ್ರವಾರದಿಂದಲೇ ರಜೆಗಳು ಆರಂಭ ಆಗಿದ್ದವು. ಶನಿವಾರದಿಂದ (ಅಕ್ಟೋಬರ್ 18) ನಿನ್ನೆವರೆಗೂ (ಅಕ್ಟೋಬರ್ 22) ದೀಪಾವಳಿ ಹಬ್ಬದ ಸಂಭ್ರಮದಲ್ಲಿಯೇ ಇದ್ದರು. ಈ ಐದು ದಿನಗಳಲ್ಲಿ ಕಾಂತಾರ ಚಾಪ್ಟರ್ 1 ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಕನ್ನಡ ಹಾಗೂ ಹಿಂದಿ ವರ್ಷನ್‌ಗಳು ಹೆಚ್ಚು ಕಲೆಕ್ಷನ್ ಮಾಡಿವೆ.

ಐದು ದಿನಗಳ ಕಲೆಕ್ಷನ್ ಹೀಗಿದೆ (ಭಾರತ)

ಶನಿವಾರ (17ನೇ ದಿನ) ₹12.75 ಕೋಟಿ
ಭಾನುವಾರ (18ನೇ ದಿನ) ₹17 ಕೋಟಿ
ಸೋಮವಾರ (19ನೇ ದಿನ) ₹11.65 ಕೋಟಿ
ಮಂಗಳವಾರ (20ನೇ ದಿನ) ₹11.75 ಕೋಟಿ
ಬುಧವಾರ (21ನೇ ದಿನ) ₹10.25 ಕೋಟಿ
ಒಟ್ಟು ₹62.40 ಕೋಟಿ (Net)

Rishab Shetty Rukmini Vasanth Film Kantara Chapter 1 day 21 Diwali Box office Collection Report

ವರ್ಲ್ಡ್‌ ವೈಡ್ ಕಲೆಕ್ಷನ್ ಎಷ್ಟಾಗಿದೆ?

'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಮಾಡುವ ನಿರೀಕ್ಷೆಯಿತ್ತು. ಆದರೆ, ಅದರ ಸನಿಹದಲ್ಲಿ ಕಲೆಕ್ಷನ್ ಕ್ಲೋಸ್ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಕಾಂತಾರ ಇಂಗ್ಲಿಷ್ ಡಬ್ ವರ್ಷನ್ ರಿಲೀಸ್ ಮಾಡುತ್ತಿರುವುದರಿಂದ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ₹1000 ಕೋಟಿ ದಾಟಿದರೂ ಅಚ್ಚರಿ ಪಡೆಬೇಕಿಲ್ಲ. ಸದ್ಯಕ್ಕೆ ₹830 ಕೋಟಿ ಆಸು-ಪಾಸಿನಲ್ಲಿ ಕಲೆಕ್ಷನ್ ಆಗಿರಬಹುದೆಂಬ ನಿರೀಕ್ಷೆಯಿದೆ. ಅಂದ್ಹಾಗೆ ಇಲ್ಲಿವರೆಗೂ ಭಾರತದ ಬಾಕ್ಸಾಫೀಸ್‌ನಲ್ಲಿ ಗಳಿಸಿದ ಕಲೆಕ್ಷನ್ ಹೀಗಿದೆ.

'ಕಾಂತಾರ ಚಾಪ್ಟರ್ 1' ಕಲೆಕ್ಷನ್ (ಭಾರತ)

1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹30.50 ಕೋಟಿ
6ನೇ ದಿನ ₹34.25 ಕೋಟಿ
7ನೇ ದಿನ ₹25.25 ಕೋಟಿ
8ನೇ ದಿನ ₹21.15 ಕೋಟಿ
9ನೇ ದಿನ ₹22.25 ಕೋಟಿ
10ನೇ ದಿನ ₹39 ಕೋಟಿ
11ನೇ ದಿನ ₹40 ಕೋಟಿ
12ನೇ ದಿನ ₹13.35 ಕೋಟಿ
13ನೇ ದಿನ ₹14.15 ಕೋಟಿ
14ನೇ ದಿನ ₹10.5 ಕೋಟಿ
15ನೇ ದಿನ ₹8.85 ಕೋಟಿ
16ನೇ ದಿನ ₹8.5 ಕೋಟಿ
17ನೇ ದಿನ ₹12.75 ಕೋಟಿ
18ನೇ ದಿನ ₹17 ಕೋಟಿ
19ನೇ ದಿನ ₹12.37 ಕೋಟಿ
20ನೇ ದಿನ ₹13 ಕೋಟಿ
21ನೇ ದಿನ ₹10.25 ಕೋಟಿ

ಒಟ್ಟು ₹ 557.26 ಕೋಟಿ (Net)

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Rishab Shetty, Rukmini Vasanth Film Kantara Chapter 1 day 21 Diwali Box office Collection Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X