Kantara Karnataka Box Office Day 1: 'ಕಾಂತಾರ ಚಾಪ್ಟರ್ 1' ಮೊದಲ ದಿನ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ಈ ವರ್ಷ ಅತೀ ದೊಡ್ಡ ಸಿನಿಮಾ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಕನ್ನಡ ಚಿತ್ರರಂಗಕ್ಕೆ ಕಳೆದ ಮೂರು ನಾಲ್ಕು ಸಿನಿಮಾಗಳಿಂದ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳು ಸಿಗುತ್ತಿವೆ. ಈಗ ಭಾರತವನ್ನು ಮತ್ತೆ ತನ್ನ ಸೆಳೆಯುವುದಕ್ಕೆ ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ರಿಲೀಸ್ ಆಗಿದೆ. ಇದು 2022ರಲ್ಲಿ ತೆರೆಕಂಡಿದ್ದ 'ಕಾಂತಾರ' ಸಿನಿಮಾದ 15 ಪಟ್ಟು ಹೆಚ್ಚು ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ.

ಸಿನಿಮಾದ ಬಜೆಟ್ ಅನ್ನು ಪಕ್ಕಕ್ಕೆ ಇಟ್ಟು ನೋಡುವುದಾರೇ, 'ಕಾಂತಾರ' ಕನ್ನಡಿಗರ ಆಧ್ಯಾತ್ಮದ ನಂಬಿಕೆಗಳನ್ನು ಮತ್ತಷ್ಟು ಗಟ್ಟಿ ಮಾಡಿತ್ತು. ಕರ್ನಾಟಕದ ಜನರು ಮುಗಿಬಿದ್ದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು. ಇದು ಬಳಿಕ ದೇಶಾದ್ಯಂತ ವ್ಯಾಪಿಸಿದ್ದು ಗೊತ್ತೇ ಇದೆ. ಈಗ 'ಕಾಂತಾರ' ಒಂದು ಪ್ಯಾನ್ ಇಂಡಿಯಾ ಬ್ರ್ಯಾಂಡ್ ಆಗಿದೆ. ಹೀಗಾಗಿ ಪ್ರೀಕ್ವೆಲ್ 'ಕಾಂತಾರ ಚಾಪ್ಟರ್ 1' ಅನ್ನು ಇಡೀ ದೇಶವೇ ಎದುರು ನೋಡುತ್ತಿತ್ತು.

Rishab Shetty Rukmini Vasanth Kantara Chapter 1 Karnataka Box Office day 1 collection report

'ಕಾಂತಾರ ಚಾಪ್ಟರ್ 1' ಕನ್ನಡ ಚಿತ್ರರಂಗದ ಮತ್ತೊಂದು ಹೋಪ್. ಈ ಸಿನಿಮಾ ಗೆದ್ದರೆ, ಕನ್ನಡ ಚಿತ್ರರಂಗದ ವೇಗ ಇನ್ನಷ್ಟು ಹೆಚ್ಚಾಗುತ್ತೆ. ಅದರಲ್ಲೂ ಈ ಸಿನಿಮಾ ಕರ್ನಾಟಕದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಬೇಕು. ಕನ್ನಡ ವರ್ಷನ್ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದರೆ, ಪರ ಭಾಷೆಯ ಸಿನಿಮಾಗಳನ್ನು ಬಗ್ಗು ಬಡಿಯಬಹುದು. ಆ ಕೆಲಸ ರಿಷಬ್ ಶೆಟ್ಟಿಯ ಸಿನಿಮಾದಿಂದ ಆಗುತ್ತಾ? ಕರ್ನಾಟಕದಲ್ಲಿ 'ಕಾಂತಾರ ಚಾಪ್ಟರ್ 1' ಮೊದಲ ದಿನ ಮಾಡಿರುವ ಕಲೆಕ್ಷನ್ ಎಷ್ಟು? ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ಯಾವ್ಯಾವ ಚಿತ್ರಮಂದಿರದಲ್ಲಿ ಕಲೆಕ್ಷನ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.

ಕರ್ನಾಟಕದ ಕಲೆಕ್ಷನ್ ಎಷ್ಟು?

ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಕರ್ನಾಟಕದಲ್ಲಿ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ. ಸುಮಾರು 470 ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿತ್ತು. ಮೊದಲ ದಿನ ನಿರೀಕ್ಷೆ ಮಾಡಿದಂತೆ ಕರ್ನಾಟಕದಾದ್ಯಂತ ಶೇ.98ರಷ್ಟು ಆಕ್ಯೂಪೆನ್ಸಿ ಇತ್ತು. ವಿತರಕರ ವಲಯ ಹಾಗೂ ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರದ ಪ್ರಕಾರ ರಿಷಬ್ ಶೆಟ್ಟಿಯ ಸಿನಿಮಾ ಫಸ್ಟ್ ಡೇ ಕರ್ನಾಟಕದಲ್ಲಿ ಸುಮಾರು ₹17 ರಿಂದ ₹18 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕಲೆಕ್ಷನ್?

'ಕಾಂತಾರ ಚಾಪ್ಟರ್ 1' ಕರ್ನಾಟಕದಾದ್ಯಂತ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ ಭಾಗಗಳಲ್ಲಂತೂ ಸಿನಿಮಾಗೆ ಸಖತ್ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ಮಂಡ್ಯ, ಹಾಸನ, ತುಮಕೂರು ಭಾಗದಲ್ಲಿಯೂ ಸಿನಿಮಾ ಕಲೆಕ್ಷನ್ ಸಖತ್ ಆಗಿದೆ. ಸಿನಿಮಾ ಸಿಕ್ಕಿದ ರೆಸ್ಪಾನ್ಸ್ ನೋಡಿ ದಿಢೀರನೇ ಶೋಗಳ ಸಂಖ್ಯೆ ಹೆಚ್ಚು ಮಾಡಲಾಗಿತ್ತು. ಮಲ್ಟಿಪ್ಲೆಕ್ಸ್‌ನಲ್ಲಿ ಸಂಜೆಯ ವೇಳೆಗೆ ಒಂದೆರಡು ಶೋಗಳನ್ನು ಹೆಚ್ಚು ಮಾಡಲಾಗಿದೆ.

Rishab Shetty Rukmini Vasanth Kantara Chapter 1 Karnataka Box Office day 1 collection report

ಯಾವ್ಯಾವ ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಹೇಗಿದೆ?

ರಿಷಬ್ ಶೆಟ್ಟಿ ನಟಿಸಿ, ನಿರ್ಮಿಸಿರುವ 'ಕಾಂತಾರ ಚಾಪ್ಟರ್ 1' ಕೆಲವು ಥಿಯೇಟರ್‌ಗಳಲ್ಲಿ ಕಲೆಕ್ಷನ್ ಜೋರಾಗಿದೆ. ಬೆಂಗಳೂರು, ತುಮಕೂರು ಹಾಗೂ ಕೋಲಾರದಲ್ಲಿ ಶೇ. 53ರಷ್ಟು ಕಲೆಕ್ಷನ್ ಆಗಿದ್ದರೆ, ಮಂಡ್ಯ, ಮೈಸೂರು, ಕೊಡಗು ಹಾಗೂ ಹಾಸನ ಏರಿಯಾಗಳಲ್ಲಿ ಶೇ.18ರಷ್ಟು ಕಲೆಕ್ಷನ್ ಆಗಿದೆ. ಹಾಗೇ ಶಿವಮೊಗ್ಗ, ಮಂಗಳೂರು, ಉಡುಪಿ ಭಾಗದಲ್ಲಿಯೂ ಕಲೆಕ್ಷನ್ ಅದ್ಭುತವಾಗಿದೆ. ಹಾಗಿದ್ದರೆ, ಯಾವ್ಯಾವ ಥಿಯೇಟರ್‌ಗಳಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ ಅನ್ನೋ ರಿಪೋರ್ಟ್ ಇಲ್ಲಿದೆ.


ಬೆಂಗಳೂರು

ವೀರೇಶ್ ₹16 ಲಕ್ಷ
ಪ್ರಸನ್ನ ₹10 ಲಕ್ಷ
ಸಂತೋಷ್ ₹14 ಲಕ್ಷ
ಸಿದ್ದಲಿಂಗೇಶ್ವರ+ ಸಿದ್ದೇಶ್ವರ ₹19 ಲಕ್ಷ
ಬೃಂದಾ ₹9 ಲಕ್ಷ
ರಾಬಿನ್ ₹11 ಲಕ್ಷ
ಬಾಲಾಜಿ (ತಾವರೆಕರೆ) ₹10 ಲಕ್ಷ

ಮಂಡ್ಯ

ಗುರುಶ್ರೀ ₹6.9 ಲಕ್ಷ
ಮಹಾದೇವ ₹4.17 ಲಕ್ಷ

ಹಾಸನ

ಎಸ್‌ಜಿಬಿ ₹6.30 ಲಕ್ಷ

ದಾವಣಗೆರೆ

ತ್ರಿಶುಲ್ ₹7 ಲಕ್ಷ
ಗೀತಾಂಜಲಿ ₹6 ಲಕ್ಷ
ಮೂವಿ ಟೈಮ್ ₹5.5 ಲಕ್ಷ

ಮಂಗಳೂರು

ಬಿಗ್ ಸಿನಿಮಾಸ್ ₹13 ಲಕ್ಷ
ಎಸ್‌ಪಿ ಸಿನಿಮಾಸ್ ₹8 ಲಕ್ಷ

ಉಡುಪಿ

ಬಿಗ್ ಸಿನಿಮಾಸ್ ₹6 ಲಕ್ಷ
ಐನಾಕ್ಸ್ ₹4.80 ಲಕ್ಷ
ಕಲ್ಪನಾ ₹3 ಲಕ್ಷ

ಮೈಸೂರು

ವುಡ್‌ಲ್ಯಾಂಡ್ ₹9 ಲಕ್ಷ
ಸಂಗಮ್ ₹11 ಲಕ್ಷ
ಡಿಆರ್‌ಸಿ ₹8 ಲಕ್ಷ

ತುಮಕೂರು

ಗಾಯತ್ರಿ ₹7 ಲಕ್ಷ
ಜೈ ಭಾರತ್ ₹7 ಲಕ್ಷ
ಐನಾಕ್ಸ್ ₹9 ಲಕ್ಷ

'ಕಾಂತಾರ ಚಾಪ್ಟರ್ 1' ಸಿನಿಮಾದ ಮೊದಲ ದಿನದ ಚಿತ್ರಮಂದಿರಗಳ ಕಲೆಕ್ಷನ್ ಅನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ವಿತರಕರು, ಟ್ರೇಡ್ ಎಕ್ಸ್‌ಪರ್ಟ್‌ಗಳಿಂದ ಮಾಹಿತಿ ಸಂಗ್ರಹಿಸಿ ಮಾಹಿತಿ ನೀಡಲಾಗಿದೆ. ಚಿತ್ರಮಂದಿರಗಳಾಗಲಿ, ಇಲ್ಲವೇ ಹೊಂಬಾಳೆ ಫಿಲ್ಮ್ಸ್ ಆಗಲಿ ಅಧಿಕೃತವಾಗಿ ಅಂಕಿ ಅಂಶಗಳನ್ನು ನೀಡಿರುವುದಿಲ್ಲ.

More from Filmibeat

English summary
Rishab Shetty Rukmini Vasanth Kantara Chapter 1 Karnataka Box Office day 1 collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X