Kantara Chapter 1 Day 18; 'ಕಾಂತಾರ ಚಾಪ್ಟರ್ 1' ಕಲೆಕ್ಷನ್‌ನಲ್ಲಿ ಮತ್ತೆ ಏರಿಕೆ? ಆಸ್ಟ್ರೇಲಿಯಾದಲ್ಲೂ ದಾಖಲೆ ಉಡೀಸ್
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ವೀಕ್‌ಡೇಸ್‌ನಲ್ಲಿ ಕಲೆಕ್ಷನ್‌ನಲ್ಲಿ ಡ್ರಾಪ್ ಕಂಡಿತ್ತು. ಮೂರನೇ ವಾರದ ಹೊತ್ತಿಗೆ ಕಲೆಕ್ಷನ್‌ನಲ್ಲಿ ಇಳಿಕೆಯಾಗಿದ್ದರು ಕಂಡು ಸಿನಿಮಾ ಮಂದಿ ಸ್ವಲ್ಪ ಕಂಗಾಲಾಗಿದ್ದು ಇತ್ತು. ಆದ್ರೀಗ ವೀಕೆಂಡ್‌ನಲ್ಲಿ ಮತ್ತೆ ಬಾಕ್ಸಾಫೀಸ್‌ನಲ್ಲಿ ಏರಿಕೆಯಾಗಿದೆ. ಶನಿವಾರ ಹಾಗೂ ಭಾನುವಾರ ಎರಡೂ ದಿನ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ.
ಇನ್ನು ದೀಪಾವಳಿ ಹಬ್ಬದ ಮೂಡಿನಲ್ಲಿರುವ ಜನರು 'ಕಾಂತಾರ ಚಾಪ್ಟರ್ 1' ನೋಡುವುದಕ್ಕೆ ಥಿಯೇಟರ್‌ಗೆ ಬರುತ್ತಾರೆಂಬ ನಂಬಿಕೆಯಿದೆ. ಬ್ಯಾಕ್ ಟು ಬ್ಯಾಕ್ ರಜೆಗಳು ಸಿಕ್ಕಿರುವುದರಿಂದ ಮುಂದಿನ ಮೂರು ದಿನಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಜೋರಾಗಿಯೇ ಇರುತ್ತೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ನಿರೀಕ್ಷೆ ಮಾಡಿದ್ದಾರೆ. ಇನ್ನೊಂದು ಕಡೆ ವಿದೇಶಗಳಲ್ಲೂ ಒಂದೊಂದೇ ದಾಖಲೆಗಳನ್ನು ಉಡೀಸ್ ಮಾಡುತ್ತಾ ಮುಂದೆ ಸಾಗುತ್ತಿದೆ.

'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಕನ್ನಡದ ಅತೀ ದೊಡ್ಡ ಸಿನಿಮಾ ಆಗುತ್ತಾ? ಅನ್ನೋ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಒಂದು ಅಂದಾಜಿನ ಪ್ರಕಾರ, ಈ ಸಿನಿಮಾ 50 ದಿನಗಳ ವರೆಗೂ ಬಾಕ್ಸಾಫೀಸ್‌ನಲ್ಲಿ ಗಳಿಕೆ ಮಾಡುತ್ತಲೇ ಇರುತ್ತೆ ಅನ್ನೋ ನಿರೀಕ್ಷೆಯಿದ್ದರೂ, ಕೆಲವರು ದೀಪಾವಳಿ ಮುಗಿಯುತ್ತಿದ್ದಂತೆ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಡ್ರಾಪ್ ಆಗಬಹುದೆಂಬ ನಿರೀಕ್ಷೆಯಿದೆ.
18ನೇ ದಿನ ಕಲೆಕ್ಷನ್ ಏನು?
17ನೇ ದಿನವಾಗಿದ್ದ ಶನಿವಾರ 12.5 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಅದೇ ಭಾನುವಾರ ಅಂದರೆ ನಿನ್ನೆ (ಅಕ್ಟೋಬರ್ 19) 'ಕಾಂತಾರ ಚಾಪ್ಟರ್ 1' ಕಲೆಕ್ಷನ್ 17ನೇ ದಿನಕ್ಕಿಂತೂ ಹೆಚ್ಚಾಗಿದೆ. ಸ್ಯಾಕ್ನಿಲ್ಕ್ ಪ್ರಕಾರ, 18ನೇ ದಿನ ಈ ಸಿನಿಮಾದ ಕಲೆಕ್ಷನ್ 17.50 ಕೋಟಿ ರೂಪಾಯಿ ಕಲೆಕ್ಷನ್ (Net) ಆಗಿದೆ. ಕನ್ನಡ ವರ್ಷನ್ 6.25 ಕೋಟಿ ರೂಪಾಯಿ, ತೆಲುಗು ವರ್ಷನ್ 1.5 ಕೋಟಿ ರೂಪಾಯಿ, ಹಿಂದಿ ವರ್ಷನ್ 6.35 ಕೋಟಿ ರೂಪಾಯಿ, ತಮಿಳು ವರ್ಷನ್ 1.65 ಕೋಟಿ ರೂಪಾಯಿ, ಮಲಯಾಳಂ 1.75 ಕೋಟಿ ರೂಪಾಯಿ. ಈ ಮೂಲಕ ಭಾರತದಾದ್ಯಂತ 524.15 ಕೋಟಿ (Net) ಆಗಿದೆಯೆಂದು ವರದಿಯಾಗಿದೆ.
ವಿಶ್ವದಾದ್ಯಂತ ಕಲೆಕ್ಷನ್ ಎಷ್ಟು?
'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ 'ಕೆಜಿಎಫ್ 2' ದಾಖಲೆಯನ್ನು ಮುರಿಯಬಹುದೆಂದು ನಿರೀಕ್ಷೆ ಮಾಡಲಾಗುತ್ತಿದೆ. ಅದು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ಸ್ಯಾಕ್ನಿಲ್ಕ್ ವರದಿ ಮಾಡಿರುವಂತೆ ಈ ಸಿನಿಮಾ 18 ದಿನಗಳಲ್ಲಿ 731.25 ಕೋಟಿ ರೂಪಾಯಿ ಕಲೆಕ್ಷನ್ (Gross) ಮಾಡಿದೆ. ಆದರೆ, ಹೊಂಬಾಳೆ ಲೆಕ್ಕಾಚಾರ ಬೇರೆನೇ ಇದೆ. ಅಧಿಕೃತವಾಗಿ 18ನೇ ದಿನ ಕಲೆಕ್ಷನ್ ಅನ್ನು ಇನ್ನೂ ರಿಲೀಸ್ ಮಾಡಬೇಕಿದೆ. ಇನ್ನು ಮೂರು ದಿನಗಳಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ? ಅನ್ನೋದನ್ನು ಟ್ರೇಡ್ ಎಕ್ಸ್‌ಪರ್ಟ್‌ಗಳು ಎದುರು ನೋಡುತ್ತಿದ್ದಾರೆ.

ಆಸ್ಟ್ರೇಲಿಯಾದಲ್ಲಿ ದಾಖಲೆ ಉಡೀಸ್
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಸಿನಿಮಾ ಆಸ್ಟ್ರೇಲಿಯಾದಲ್ಲಿ ಉತ್ತಮ ಗಳಿಕೆ ಕಂಡಿದೆ. ಹೊಂಬಾಳೆ ನಿರ್ಮಿಸಿದ್ದ 'ಕೆಜಿಎಫ್ 1', ಕಾಂತಾರ 2022, ಸಲಾರ್ 1 ದಾಖಲೆಗಳನ್ನು ಮುರಿದಿದೆ. ಹಾಗೇ ರಜನಿಕಾಂತ್ ನಟಿಸಿದ ಜೈಲರ್, ಕೂಲಿ, ಪೊನ್ನಿಯಿನ್ ಸೆಲ್ವನ್ 1, ಪೊನ್ನಿಯಿನ್ ಸೆಲ್ವನ್ 2, ಲಿಯೋ, ದೇವರ ಪಾರ್ಟ್ 1, ಹನುಮಾನ್, ಛಾವಾ, ಸೈಯ್ಯಾರ ಸಿನಿಮಾ ಮಾಡಿದ ದಾಖಲೆಗಳನ್ನು ಉಡೀಸ್ ಮಾಡಿದೆ. ಅಲ್ಲದೆ 2025ರಲ್ಲಿ ಆಸ್ಟ್ರೇಲಿಯಾದಲ್ಲಿ ಅತೀ ಗಳಿಕೆ ಕಂಡ ಸಿನಿಮಾ ಎಂದು ಹೊಂಬಾಳೆ ಅಧಿಕೃತವಾಗಿ ಅನೌನ್ಸ್ ಮಾಡಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











