Kantara Chapter 1 Box Office Day 19: 'ಕಾಂತಾರ'ಗೆ ಬೆಳಕಿನ ದರ್ಶನ ಮಾಡಿಸಿತೇ ದೀಪಾವಳಿ? 19ನೇ ದಿನ ಗಳಿಸಿದ್ದೆಷ್ಟು?

ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ ಚಾಪ್ಟರ್ 1' ಕಳೆದ ಮೂರು ವಾರಗಳಿಂದ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ. ಮೂರನೇ ವಾರದ ಆರಂಭದಲ್ಲಿ ಬೆಳಕಿನ ಹಬ್ಬ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಬಹುದೆಂಬ ನಿರೀಕ್ಷೆ ಮಾಡಲಾಗಿದೆ. ನಿರಂತರವಾಗಿ ರಜೆಗಳು ಬಂದಿರುವುದರಿಂದ ಈ ಸಿನಿಮಾ ಗಳಿಕೆ ಮತ್ತೆ ಏರಿಕೆ ಆಗಬಹುದೆಂಬ ನಿರೀಕ್ಷೆಯಿದೆ.

ಈಗಾಗಲೇ ಜನರು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಕೆಲವು ಭಾಷೆಗಳಲ್ಲಿ ಈ ಸಿನಿಮಾ ದಾಖಲೆಗಳನ್ನು ಸೃಷ್ಟಿ ಮಾಡಿದೆ. ಅದರಲ್ಲೂ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ 'ಕಾಂತಾರ ಚಾಪ್ಟರ್ 1' ದಾಖಲೆಗಳನ್ನೇ ಸೃಷ್ಟಿ ಮಾಡಿದೆ. ₹200 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹೊಸ ಚರಿತ್ರೆಯನ್ನು ಸೃಷ್ಟಿಸಿದೆ. ಮೂರನೇ ವಾರಕ್ಕೆ ಲಗ್ಗೆ ಇಟ್ಟಿರುವ ಸಿನಿಮಾ ಇನ್ನೂ ಹೆಚ್ಚು ಗಳಿಕೆ ಮಾಡುವ ನಿರೀಕ್ಷೆಯಿದೆ.

Rishab Shetty Rukmini Vasanth movie Kantara Chapter 1 day 19 Diwali week Box office Collection Report

ದೀಪಾವಳಿ ಹಬ್ಬಕ್ಕೆ 'ಕಾಂತಾರ ಚಾಪ್ಟರ್ 1' ಲಾಭದಾಯಕವಾಗುತ್ತಾ ಅನ್ನೋದನ್ನು ಟ್ರೇಡ್ ಎಕ್ಸ್‌ಪರ್ಟ್‌ಗಳು ಎದುರು ನೋಡುತ್ತಿದ್ದಾರೆ. ನಿನ್ನೆ (ಅಕ್ಟೋಬರ್ 20) ಅಂದರೆ, 19ನೇ ದಿನ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದೆ. ಇನ್ನೆರಡು ದಿನಗಳಲ್ಲಿ ಸಿನಿಮಾದ ಗಳಿಕೆಯಲ್ಲಿ ಏರಿಕೆಯಾಗುತ್ತಾ? ಈ ಸಿನಿಮಾ ₹800 ಕೋಟಿಯ ಗಡಿ ದಾಟುತ್ತಾ? ಅನ್ನೋ ಕುತೂಹಲ ಟ್ರೇಡ್ ಎಕ್ಸ್‌ಪರ್ಟ್‌ಗಳಲ್ಲಿ ಇದೆ.

19ನೇ ದಿನ ಕಾಂತಾರ ಚಾಪ್ಟರ್ 1 ಗಳಿಸಿದ್ದೆಷ್ಟು?

ನಿನ್ನೆ (ಅಕ್ಟೋಬರ್ 19) 'ಕಾಂತಾರ ಚಾಪ್ಟರ್ 1' ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗುತ್ತೆ ಎನ್ನುವ ನಿರೀಕ್ಷೆಯಿತ್ತು. ಆದರೆ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗೆ ಬಂದಿಲ್ಲ. ಸ್ಯಾಕ್ನಿಲ್ಕ್ ಪ್ರಕಾರ, 19ನೇ ದಿನ ಕಾಂತಾರ ₹12.37 ಕೋಟಿ ಕಲೆಕ್ಷನ್ ಮಾಡಿದೆ. ಕನ್ನಡ ವರ್ಷನ್ ₹4.69 ಕೋಟಿ, ಹಿಂದಿ ವರ್ಷನ್ ₹3.78 ಕೋಟಿ, ತೆಲುಗು ವರ್ಷನ್ ₹85 ಲಕ್ಷ, ಮಲಯಾಳಂ ವರ್ಷನ್ ₹91 ಲಕ್ಷ ಕಲೆಕ್ಷನ್ ಆಗಿದೆ. ಇಂಟ್ರೆಸ್ಟಿಂಗ್ ವಿಷಯ ಅಂದರೆ, ತಮಿಳು ವರ್ಷನ್ ಗಳಿಕೆಯಲ್ಲಿ ಏರಿಕೆಯಾಗಿದ್ದು, ₹2.14 ಕೋಟಿ ಕಲೆಕ್ಷನ್ ಮಾಡಿದೆ.

ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟು?

'ಕಾಂತಾರ ಚಾಪ್ಟರ್ 1' ಎಲ್ಲಾ ದಾಖಲೆಗಳನ್ನು ಮುರಿಯಬಹುದೆಂಬ ನಿರೀಕ್ಷೆಯಿತ್ತು. ಆದರೆ, ಮೂರನೇ ವಾರದ ಹೊತ್ತಿಗೆ ಗಳಿಕೆಯಲ್ಲಿ ಇಳಿಮುಖವಾಗಿದೆ. ಈ ಸಿನಿಮಾದ ವರ್ಲ್ಡ್‌ ವೈಡ್ ಕಲೆಕ್ಷನ್ ₹775 ರಿಂದ ₹780 ಕೋಟಿವರೆಗೂ ಕಲೆಕ್ಷನ್ ಆಗಿರಬಹುದೆಂಬ ನಿರೀಕ್ಷೆಯಿತ್ತು. ಹೊಂಬಾಳೆ ಫಿಲ್ಮ್ಸ್ ವರ್ಲ್ಡ್‌ ವೈಡ್ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿಯನ್ನು ಹೊರ ಹಾಕಿದೆ. ವರ್ಲ್ಡ್‌ವೈಡ್ ₹800 ಕೋಟಿ ಕಲೆಕ್ಷನ್ (Gross) ಮಾಡಿದೆ ಎಂದು ಘೋಷಿಸಿದೆ.

Rishab Shetty Rukmini Vasanth movie Kantara Chapter 1 day 19 Diwali week Box office Collection Report

ತಮಿಳುನಾಡಿನಲ್ಲಿ ಅಚ್ಚರಿಯ ಏರಿಕೆ?

ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಎಲ್ಲಾ ಭಾಷೆಯಲ್ಲಿ ಇಳಿಕೆ ಕಂಡರೆ, ತಮಿಳುನಾಡಿನಲ್ಲಿ ಏರಿಕೆಯಾಗಿದೆ. 18ನೇ ದಿನ ₹1.6 ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾ 19ನೇ ದಿನ ₹2.14 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ತಮಿಳುನಾಡಿನಲ್ಲಿ 'ಕಾಂತಾರ'ಗೆ ದೀಪಾವಳಿ ಹಬ್ಬ ಲಾಭದಾಯಕವೆನಿಸಿದೆ. ಇದು ಟ್ರೇಡ್ ಎಕ್ಸ್‌ಪರ್ಟ್‌ಗಳಿಗೂ ಅಚ್ಚರಿ ಮೂಡಿಸಿದೆ. ಅಂದ್ಹಾಗೆ, 19 ದಿನಗಳಲ್ಲಿ ಭಾರತದಲ್ಲಿ ಕಲೆ ಹಾಕಿದ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಹೀಗಿದೆ.

'ಕಾಂತಾರ ಚಾಪ್ಟರ್ 1' ಕಲೆಕ್ಷನ್ (ಭಾರತ)

1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹30.50 ಕೋಟಿ
6ನೇ ದಿನ ₹34.25 ಕೋಟಿ
7ನೇ ದಿನ ₹25.25 ಕೋಟಿ
8ನೇ ದಿನ ₹21.15 ಕೋಟಿ
9ನೇ ದಿನ ₹22.25 ಕೋಟಿ
10ನೇ ದಿನ ₹39 ಕೋಟಿ
11ನೇ ದಿನ ₹40 ಕೋಟಿ
12ನೇ ದಿನ ₹13.35 ಕೋಟಿ
13ನೇ ದಿನ ₹14.15 ಕೋಟಿ
14ನೇ ದಿನ ₹10.5 ಕೋಟಿ
15ನೇ ದಿನ ₹8.85 ಕೋಟಿ
16ನೇ ದಿನ ₹8.5 ಕೋಟಿ
17ನೇ ದಿನ ₹12.75 ಕೋಟಿ
18ನೇ ದಿನ ₹17 ಕೋಟಿ
19ನೇ ದಿನ ₹12.37 ಕೋಟಿ
ಒಟ್ಟು ₹

ಒಟ್ಟು ₹ 535.25 ಕೋಟಿ (Net)

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Rishab Shetty, Rukmini Vasanth movie Kantara Chapter 1 day 19 Diwali week Box office Collection Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X