Kantara Chapter 1 Box Office Day 20: 'ಕಾಂತಾರ ಚಾಪ್ಟರ್ 1' ಗಳಿಕೆಯಲ್ಲಿ ಏರಿಕೆ; ರಶ್ಮಿಕಾ ಸಿನಿಮಾ ಟಕ್ಕರ್ ಕೊಟ್ಟಿತೇ?
'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಮೆಗಾ ಸಕ್ಸಸ್ ಕಂಡಿದೆ. ಕನ್ನಡದ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದೆ. ಎರಡನೇ ವಾರದ ಅಂತ್ಯದ ವೇಳೆಗೆ ಗಳಿಕೆಯಲ್ಲಿ ಕೊಂಚ ಮಟ್ಟಿಗೆ ಇಳಿಕೆ ಕಂಡಿತ್ತು. ಅದು ದೀಪಾವಳಿ ಹಬ್ಬಕ್ಕೆ ಇರುವ ಸಾಲು ಸಾಲು ರಜೆಗಳಿಗೆ ಸರಿ ಹೋಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ದೊಡ್ಡ ಮಟ್ಟಕ್ಕೆ ಸಹಾಯವಾದಂತೆ ಕಾಣುತ್ತಿಲ್ಲ.
ತುಳುನಾಡಿನ ದೈವದ ಹಿನ್ನೆಲೆಯಿರುವ ರಿಷಬ್ ಶೆಟ್ಟಿಯ ಸಿನಿಮಾಗೆ ದೀಪಾವಳಿಯಲ್ಲಿ ಬೆಳಕಿನ ದರ್ಶನ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಆಗಿಲ್ಲ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ವಾದ. ಕನ್ನಡ ಹಾಗೂ ಹಿಂದಿ ಏರಿಯಾಗಳಲ್ಲಿ 'ಕಾಂತಾರ ಚಾಪ್ಟರ್ 1' ಕಲೆಕ್ಷನ್ ಜೋರಾಗಿದೆ. ನಾಲ್ಕೈದು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ನಿರೀಕ್ಷೆಯಿತ್ತು.

ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಸೇರಿದಂತೆ ದೊಡ್ಡ ಕಲಾವಿದರ ತಂಡವೇ ಇದೆ. ಎರಡು ವಾರಗಳ ಕಾಲ ಬಾಕ್ಸಾಫೀಸ್ ಅಬ್ಬರಿಸಿ ದಾಖಲೆ ಕಲೆಕ್ಷನ್ ಮಾಡಿದೆ. ಮೂರನೇ ವಾರವೂ ಅದೇ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಹಾಗಿದ್ದರೆ, 20ನೇ ದಿನ 'ಕಾಂತಾರ ಚಾಪ್ಟರ್ 1' ಗಳಿಸಿದ್ದೆಷ್ಟು? ರಶ್ಮಿಕಾ ಮಂದಣ್ಣ ಸಿನಿಮಾ 'ಥಮ್ಮಾ' ಹಿಂದಿ ಏರಿಯಾಗಳಲ್ಲಿ ಟಕ್ಕರ್ ಕೊಟ್ಟಿತೇ? ತಿಳಿಯುವುದಕ್ಕೆ ಮುಂದೆ ಓದಿ.
20ನೇ ದಿನದ ಕಲೆಕ್ಷನ್ ಎಷ್ಟು?
'ಕಾಂತಾರ ಚಾಪ್ಟರ್ 1' ಕಲೆಕ್ಷನ್ 19ನೇ ದಿನಕ್ಕೆ ಹೋಲಿಸಿದರೆ, 20ನೇ ದಿನ ಕೊಂಚ ಮಟ್ಟಿಗೆ ಏರಿಕೆಯಾಗಿದೆ. ಸ್ಯಾಕ್ನಿಲ್ಕ್ ಪ್ರಕಾರ, 20ನೇ ದಿನ ಭಾರತದಾದ್ಯಂತ 13 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕನ್ನಡ ವರ್ಷನ್ ₹4.75 ಕೋಟಿ, ತೆಲುಗು ವರ್ಷನ್ ₹85 ಲಕ್ಷ, ಹಿಂದಿ ವರ್ಷನ್ ₹4 ಕೋಟಿ, ತಮಿಳು ವರ್ಷನ್ ₹1.85 ಕೋಟಿ, ಮಲಯಾಳಂ ವರ್ಷನ್ ₹50 ಲಕ್ಷ ಕಲೆ ಹಾಕಿದೆ. ಇದು ಭಾರತದ ಬಾಕ್ಸಾಫೀಸ್‌ನಲ್ಲಿ ಕಲೆ ಹಾಕಿದ ನೆಟ್ ಕಲೆಕ್ಷನ್. ಈ ಮೂಲಕ ಇಲ್ಲಿವರೆಗೂ ₹547.1 ಕೋಟಿ (Net) ಕಲೆಕ್ಷನ್ ಆಗಿದೆ.
ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟಾಯ್ತು?
ರಿಷಬ್ ಶೆಟ್ಟಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೇವಲ ಭಾರತದಲ್ಲಷ್ಟೇ ಅಲ್ಲ. ವಿದೇಶಗಳಲ್ಲಿ ಎಲ್ಲೆಲ್ಲಿ ರಿಲೀಸ್ ಆಗುತ್ತಿದೆಯೋ ಅಲ್ಲೆಲ್ಲ ಸದ್ದು ಮಾಡುತ್ತಿದೆ. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ. ಹೀಗಾಗಿ 19ನೇ ದಿನಕ್ಕೆ ಸಿನಿಮಾ ವಿಶ್ವದಾದ್ಯಂತ ₹800 ಕೋಟಿ (Gross) ಕಲೆಕ್ಷನ್ ಆಗಿದೆ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿತ್ತು. ಇನ್ನು 20 ದಿನದ ₹820 ಕೋಟಿ ಆಗಿರಬಹುದೆಂದು ನಿರೀಕ್ಷೆ ಮಾಡಲಾಗುತ್ತಿದೆ. ಹೊಂಬಾಳೆ ಇನ್ನೂ ಅಧಿಕೃತ ಅಂಕಿ ಅಂಶಗಳನ್ನು ಬಿಟ್ಟು ಕೊಟ್ಟಿಲ್ಲ.
ಟಕ್ಕರ್ ಕೊಟ್ಟಿತೇ ರಶ್ಮಿಕಾ ಸಿನಿಮಾ?
ನಿನ್ನೆ (ಅಕ್ಟೋಬರ್ 21) ರಶ್ಮಿಕಾ ಮಂದಣ್ಣ ಹಾಗೂ ಆಯುಷ್ಮಾನ್ ಖುರಾನಾ ನಟನೆಯ 'ಥಮ್ಮಾ' ಸಿನಿಮಾ ರಿಲೀಸ್ ಆಗಿದೆ. ಈ ಹಾರರ್-ಕಾಮಿಡಿ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, 'ಕಾಂತಾರ ಚಾಪ್ಟರ್ 1' ಕಲೆಕ್ಷನ್ ಇಳಿಕೆಯಾಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಹಿಂದೆ ಏರಿಯಾಗಳಲ್ಲಿ 'ಕಾಂತಾರ' ಕಲೆಕ್ಷನ್ 19ನೇ ದಿನಕ್ಕಿಂತಲೂ 20ನೇ ದಿನ ಏರಿಕೆಯಾಗಿದೆ. ಇಲ್ಲಿವರೆಗೂ ಭಾರತದಲ್ಲಿ ಗಳಿಸಿ ಬಾಕ್ಸಾಫೀಸ್ ರಿಪೋರ್ಟ್ ಹೀಗಿದೆ.
'ಕಾಂತಾರ ಚಾಪ್ಟರ್ 1' ಕಲೆಕ್ಷನ್ (ಭಾರತ)
1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹30.50 ಕೋಟಿ
6ನೇ ದಿನ ₹34.25 ಕೋಟಿ
7ನೇ ದಿನ ₹25.25 ಕೋಟಿ
8ನೇ ದಿನ ₹21.15 ಕೋಟಿ
9ನೇ ದಿನ ₹22.25 ಕೋಟಿ
10ನೇ ದಿನ ₹39 ಕೋಟಿ
11ನೇ ದಿನ ₹40 ಕೋಟಿ
12ನೇ ದಿನ ₹13.35 ಕೋಟಿ
13ನೇ ದಿನ ₹14.15 ಕೋಟಿ
14ನೇ ದಿನ ₹10.5 ಕೋಟಿ
15ನೇ ದಿನ ₹8.85 ಕೋಟಿ
16ನೇ ದಿನ ₹8.5 ಕೋಟಿ
17ನೇ ದಿನ ₹12.75 ಕೋಟಿ
18ನೇ ದಿನ ₹17 ಕೋಟಿ
19ನೇ ದಿನ ₹12.37 ಕೋಟಿ
20ನೇ ದಿನ ₹13 ಕೋಟಿ
ಒಟ್ಟು ₹ 547.1 ಕೋಟಿ (Net)
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











