Kantara Chapter 1: ಎಷ್ಟು ಸ್ಕ್ರೀನ್‌ನಲ್ಲಿ ಪ್ರೀಮಿಯರ್? ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?
ಕನ್ನಡದ ಬಹು ನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ 'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ರಿಲೀಸ್ ಆಗಿದೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಜೋಡಿಯ ಸಿನಿಮಾವನ್ನು ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿದ್ದಾರೆ. ಬಿಡುಗಡೆಗೂ ಮುನ್ನವೇ 'ಕಾಂತಾರ ಚಾಪ್ಟರ್ 1' ಪೇಯ್ಡ್ ಪ್ರೀಮಿಯರ್ ಮಾಡಲಾಗಿತ್ತು. ಕರ್ನಾಟಕದಾದ್ಯಂತ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ಬಿಡುಗಡೆಯಾಗಿತ್ತು.
ನಿರೀಕ್ಷೆ ಮಾಡಿದಂತೆ ಬೆಂಗಳೂರಿನಲ್ಲಿ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ದುಬಾರಿ ಸಿನಿಮಾಗಳಲ್ಲಿ ಇದೂ ಒಂದು. 2022ರಲ್ಲಿ ತೆರೆಕಂಡಿದ 'ಕಾಂತಾರ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಬಾಕ್ಸಾಫೀಸ್‌ನಲ್ಲಿ 450 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. 'ಕಾಂತಾರ' ದೇಶದ ಉದ್ದಗಲಕ್ಕೂ ಜೋರಾಗಿ ಸದ್ದು ಮಾಡಿತ್ತು.

ಹೀಗಾಗಿ ಸುಮಾರು 125 ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಈ ಕಾರಣಕ್ಕೆ 'ಕಾಂತಾರ ಚಾಪ್ಟರ್ 1' ಮೇಕಿಂಗ್ ವಿಚಾರದಲ್ಲಿ ಹಿಂದೆ ಮುಂದೆ ನೋಡಲಿಲ್ಲ. ಸಿನಿಮಾದ ಸೆಟ್ಟು, ಅದ್ಧೂರಿ ಬಜೆಟ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹಾಗಿದ್ದರೆ, ಕರ್ನಾಟಕದಲ್ಲಿ ಪ್ರೀಮಿಯರ್ ಆಗಿದ್ದ ಶೋ ಎಷ್ಟು? ಪ್ರೀಮಿಯರ್‌ನಿಂದಲೇ ಈ ಸಿನಿಮಾ ಗಳಿಸಿದ್ದೆಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
'ಕಾಂತಾರ' ಪ್ರೀಮಿಯರ್ ಟಿಕೆಟ್ ಎಷ್ಟು?
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ಟಿಕೆಟ್ ಬೆಲೆ ಕೂಡ ದುಬಾರಿಯಾಗಿತ್ತು. ಕೊನೆಯ ಕ್ಷಣದಲ್ಲಿ ಪ್ರೀಮಿಯರ್‌ಗೆ ಟಿಕೆಟ್ ಬುಕಿಂಗ್ ಓಪನ್ ಮಾಡಿದ್ದರೂ ಅದ್ಬುತ ರೆಸ್ಪಾನ್ಸ್ ಸಿಕ್ಕಿತ್ತು. ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ 300 ರೂಪಾಯಿ ಹಿಡಿದು 500 ರೂಪಾಯಿವರೆಗೂ ಇಟ್ಟಿದ್ದರು. ಕೆಲವು ಮಲ್ಟಿಪ್ಲೆಕ್ಸ್ ಸ್ಕೀನ್‌ಗಳಲ್ಲಿ ಸಾವಿರ ದಾಟಿತ್ತು. ಅದ್ಯಾವುದನ್ನೂ ತಲೆ ಕೆಡಿಸಿಕೊಳ್ಳದೆ 'ಕಾಂತಾರ ಚಾಪ್ಟರ್ 1' ಪ್ರೀಮಿಯರ್ ವೀಕ್ಷಣೆ ಮಾಡಿದ್ದಾರೆ.
'ಕಾಂತಾರ 1' ಎಷ್ಟು ಶೋಗಳು?
ಕರ್ನಾಟಕದ ವಿತರಕರ ವಲಯದಿಂದ ಬಂದ ಮಾಹಿತಿ ಪ್ರಕಾರ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ 'ಕಾಂತಾರ ಚಾಪ್ಟರ್ 1' ಸುಮಾರು 439 ಅಧಿಕ ಶೋಗಳನ್ನು ಹಾಕಲಾಗಿತ್ತು. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಹಲವೆಡೆ ಸಿನಿಮಾದ ಪ್ರೀಮಿಯರ್ ಕಂಡಿದೆ. ಈ ಪ್ರೀಮಿಯರ್‌ನಿಂದ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.

'ಕಾಂತಾರ 1' ಪ್ರೀಮಿಯರ್ ಕಲೆಕ್ಷನ್ ಎಷ್ಟು?
'ಕಾಂತಾರ ಚಾಪ್ಟರ್ 1'ರ ಪ್ರೀಮಿಯರ್‌ಗೆ ಕರ್ನಾಟಕದಾದ್ಯಂತ ಮಸ್ತ್ ಕಲೆಕ್ಷನ್ ಆಗಿದೆ. ಸುಮಾರು 439 ಶೋಗಳಿಂದ ಕರ್ನಾಟಕದಾದ್ಯಂತ ಈ ಸಿನಿಮಾ 4.39 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಪ್ರೀಮಿಯರ್ ಕಲೆಕ್ಷನ್ ಬಗ್ಗೆ ಹೊಂಬಾಳೆ ಅಧಿಕೃತವಾಗಿ ಅಂಕಿ ಅಂಶಗಳನ್ನು ನೀಡದೇ ಹೋದರೂ, ವಿತರಕರ ವಲಯದಿಂದ ಈ ಅಂಕಿ ಅಂಶಗಳು ಹೊರಬಿದ್ದಿವೆ.
ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರವೇನು?
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ 'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ಸುಮಾರು 7 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗಿದೆ. ಹೀಗಾಗಿ ಮೊದಲ ದಿನ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ. ಈ ಸಿನಿಮಾ ಮೊದಲ ದಿನ ಸುಮಾರು 40 ರಿಂದ 45 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದೆಂದು ಕೊಯ್‌ಮೊಯ್ ಲೆಕ್ಕ ಹಾಕಿದೆ. ಈ ಲೆಕ್ಕಾಚಾರದ ಪ್ರಕಾರ ಮೊದಲ ಮೂರು ದಿನಗಳಲ್ಲಿ ಭಾರತದ ಬಾಕ್ಸಾಫೀಸ್ ಕಲೆಕ್ಷನ್ ₹100 ಕೋಟಿ ದಾಟಬಹುದೆಂದು ನಿರೀಕ್ಷೆ ಮಾಡಲಾಗಿದೆ.


Click it and Unblock the Notifications











