Kantara Chapter 1: ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1' 2ನೇ ದಿನ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಹವಾ ಎಬ್ಬಿಸುತ್ತಿದೆ. ಪ್ರಮುಖ ಐದು ಭಾಷೆಗಳಲ್ಲಿ ಈ ಸಿನಿಮಾಗೆ ಸಖತ್ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ರಿಲೀಸ್ ಆದ ಮೊದಲ ಮೂರು ದಿನಗಳು ಕೂಡ ಗಲ್ಲಾಪಟ್ಟಿಗೆಯಲ್ಲಿ ಹಣ ದೋಚುತ್ತಿದೆ. ಅದರಲ್ಲೂ ಭಾರತದಾದ್ಯಂತ ಎರಡನೇ ದಿನಕ್ಕೆ ಸಿನಿಮಾ ಕಲೆಕ್ಷನ್ 100 ಕೋಟಿ ರೂಪಾಯಿ ದಾಟಿರೋದು ಸಿನಿಮಾ ಮಂದಿಯಲ್ಲಿ ಅಚ್ಚರಿ ಮೂಡಿಸಿದೆ.

'ಕಾಂತಾರ ಚಾಪ್ಟರ್ 1' ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಕಳೆದ ಎರಡು ದಿನಗಳಲ್ಲಿ ಎಲ್ಲಾ ಭಾಷೆಯಿಂದಲೂ ಸೇರಿ ಭಾರತದ ಬಾಕ್ಸಾಫೀಸ್‌ನಲ್ಲಿ 107.85 ಕೋಟಿ ರೂಪಾಯಿ (Net) ಕಲೆಕ್ಷನ್ ಆಗಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಅದರಲ್ಲೂ ಕರ್ನಾಟಕದಲ್ಲಿ ಕನ್ನಡ ವರ್ಷನ್ ಕಲೆಕ್ಷನ್ ಎಲ್ಲಾ ಭಾಷೆಗಿಂತಲೂ ಹೆಚ್ಚಾಗಿರೋದು ವಿಶೇಷ.

Rishab Shetty Rukmini Vasanth movies Kantara Chapter 1 day 2 Karnataka Box Office collection report

ಕರ್ನಾಟಕದಲ್ಲಿ ಮೊದಲ ದಿನವೂ ಒಳ್ಳೆಯ ಕಲೆಕ್ಷನ್ ಆಗಿತ್ತು. ಅದೇ ಕಲೆಕ್ಷನ್ ಎರಡನೇ ದಿನವೂ ಮುಂದುವರೆದಿದೆ. ಮೊದಲನೇ ದಿನಕ್ಕೂ ಎರಡನೇ ದಿನಕ್ಕೂ ಕಲೆಕ್ಷನ್ ವಿಚಾರದಲ್ಲಿ ಸ್ವಲ್ಪ ಏರು-ಪೇರಾಗಿದೆಷ್ಟೇ. ಆದರೂ, 'ಕಾಂತಾರ ಚಾಪ್ಟರ್ 1' ಕರ್ನಾಟಕದಲ್ಲಿ ಮಸ್ತ್ ಕಲೆಕ್ಷನ್ ಮಾಡುತ್ತಿದೆ. ಹಾಗಿದ್ದರೆ, ಎರಡನೇ ದಿನ ರಿಷಬ್ ಶೆಟ್ಟಿ ಸಿನಿಮಾ ಗಳಿಸಿದ್ದೆಷ್ಟು? ಯಾವ್ಯಾವ ಚಿತ್ರಮಂದಿರದಲ್ಲಿ ಎಷ್ಟು ಮಂದಿ ಸಿನಿಮಾ ನೋಡಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.

'ಕಾಂತಾರ' 2ನೇ ದಿನದ ಕರ್ನಾಟಕ ಕಲೆಕ್ಷನ್ ಎಷ್ಟು?

ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕಾಂತಾರ ಚಾಪ್ಟರ್ 1' ಟಿಕೆಟ್‌ಗಳು ಕಡ್ಲೆಪುರಿಯಂತೆ ಸೇಲ್ ಆಗುತ್ತಿದೆ. ಆನ್‌ಲೈನ್‌ನಲ್ಲಿ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಸೇಲ್ ಆಗುತ್ತಿವೆ. ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾ 2ನೇ ದಿನ ದೇಶಾದ್ಯಂತ 46 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ಕರ್ನಾಟಕದಲ್ಲಿ ಈ ಸಿನಿಮಾಗಳಿಸಿದ್ದು 13.5 ಕೋಟಿ ರೂಪಾಯಿ ಎಂದು ವರದಿ ಮಾಡಿದೆ. ಅದೇ ಕರ್ನಾಟಕದಲ್ಲಿ ಈ ಸಿನಿಮಾ 2ನೇ ದಿನ ಗಳಿಸಿದ್ದು 13.5 ಕೋಟಿ ರೂಪಾಯಿ ಎನ್ನಲಾಗಿದೆ. ಇನ್ನು ಕರ್ನಾಟಕದ ವಿತರಕರ ವಲಯದಲ್ಲಿ ಈ ಸಿನಿಮಾದ 16 ಕೋಟಿ ರೂಪಾಯಿ ಎಂಬ ಲೆಕ್ಕ ಸಿಗುತ್ತಿದೆ.

ಯಾವ್ಯಾವ ಚಿತ್ರಮಂದಿರದಲ್ಲಿ ಎಷ್ಟೆಷ್ಟು ಗಳಿಕೆ?

ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಮಂಗಳೂರು, ಉಡುಪಿ, ದಾವಣಗೆರೆ ಭಾಗಗಳಲ್ಲಿ ಈ ಸಿನಿಮಾಗೆ ಸಖತ್ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇಲ್ಲಿನ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನಗಳು ಕಾಣುತ್ತಿವೆ. ಯಾವ್ಯಾವ ಚಿತ್ರಮಂದಿರಗಳಲ್ಲಿ ಎಷ್ಟು ಕಲೆಕ್ಷನ್ ಆಗಿದೆ ಎಂದು ನೋಡುವುದಾರೇ,

2ನೇ ದಿನದ ಕಲೆಕ್ಷನ್

ಬೆಂಗಳೂರು

ಸಂತೋಷ್ ₹12 ಲಕ್ಷ
ವೀರೇಶ್ ₹14 ಲಕ್ಷ
ಪ್ರಸನ್ನ ₹9 ಲಕ್ಷ
ಸಿದ್ಧಲಿಂಗೇಶ್ವರ & ಸಿದ್ದೇಶ್ವರ ₹14 ಲಕ್ಷ
ಬೃಂದಾ ₹9 ಲಕ್ಷ
ರಾಬಿನ್ ₹8 ಲಕ್ಷ
ಬಾಲಾಜಿ ₹8 ಲಕ್ಷ
ಮುಕುಂದ ₹6 ಲಕ್ಷ
ಊರ್ವಶಿ ₹2.7 ಲಕ್ಷ (1 ಶೋ)
ಭಾರತಿ ₹7 ಲಕ್ಷ
ನವರಂಗ್ ₹6 ಲಕ್ಷ
ವಿನಾಯಕ ₹3 ಲಕ್ಷ

ಮಂಡ್ಯ

ಗುರುಶ್ರೀ ₹6.9 ಲಕ್ಷ
ಮಹಾವೀರ ₹3.4 ಲಕ್ಷ

ಹಾಸನ

ಎಸ್‌ಬಿಜಿ ₹6.30 ಲಕ್ಷ
ಶ್ರೀಗುರು ₹5 ಲಕ್ಷ

ದಾವಣಗೆರೆ

ತ್ರಿಶುಲ್ ₹5.6 ಲಕ್ಷ
ಗೀತಾಂಜಲಿ ₹4.6 ಲಕ್ಷ
ಮೂವಿ ಟೈಮ್ ₹6 ಲಕ್ಷ

ಮಂಗಳೂರು

ಬಿಗ್ ಸಿನಿಮಾಸ್ ₹15 ಲಕ್ಷ
ಎಸ್‌ಪಿ ಸಿನಿಮಾಸ್ ₹8 ಲಕ್ಷ

ಉಡುಪಿ

ಬಿಗ್ ಸಿನಿಮಾಸ್ ₹7.6 ಲಕ್ಷ
ಐನಾಕ್ಸ್ ₹6 ಲಕ್ಷ
ಕಲ್ಪನಾ ₹3 ಲಕ್ಷ

ಮೈಸೂರು

ವುಡ್‌ಲ್ಯಾಂಡ್ ₹9 ಲಕ್ಷ
ಸಂಗಮ್ ₹11 ಲಕ್ಷ
ಡಿಆರ್‌ಸಿ ₹10 ಲಕ್ಷ

ತುಮಕೂರು

ಗಾಯತ್ರಿ ₹ 6 ಲಕ್ಷ
ಜೈ ಭಾರತ್ ₹5 ಲಕ್ಷ
ಐನಾಕ್ಸ್ ₹9 ಲಕ್ಷ

ಎಲ್ಲೆಲ್ಲಿ, ಎಷ್ಟೆಷ್ಟು ಟಿಕೆಟ್ ಸೇಲ್?

ಇನ್ನು 'ಕಾಂತಾರ ಚಾಪ್ಟರ್ 1' ಸಿನಿಮಾದ ಟಿಕೆಟ್‌ಗಳು ಸಾವಿರ ಲೆಕ್ಕದಲ್ಲಿ ಸೇಲ್ ಆಗಿವೆ. ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳಲ್ಲಿ ಈ ಸಿನಿಮಾಗೆ ಸರಿ ಸಮನಾದ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ಬಿಡುಗಡೆಯಾದ ದಿನದಿಂದ ಇವತ್ತಿನ (ಅಕ್ಟೋಬರ್ 4) ವರೆಗೆ ಒಟ್ಟು ಮೂರು ದಿನಗಳಲ್ಲಿ ಕೆಲವು ಪ್ರಮುಖ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕೀನ್‌ಗಳಲ್ಲಿ ಟಿಕೆಟ್ ಸೇಲ್ ಆದ ಡಿಟೈಲ್ಸ್ ಇಲ್ಲಿದೆ.

ಬೆಂಗಳೂರು

ಪಿವಿಆರ್ ಫೋರಂ ಮಾಲ್ 7000 ಟಿಕೆಟ್ (3 ದಿನ)
ಪಿವಿಆರ್ ಫಾಲ್ಕನ್ ಸಿಟಿ 33,970 ಟಿಕೆಟ್ (3 ದಿನ)
ಸಂತೋಷ್ 13650 ಟಿಕೆಟ್ (3 ದಿನ)
ವೀರೇಶ್ 6500 ಟಿಕೆಟ್ (3 ದಿನ)
ನವರಂಗ್ 18000 ಟಿಕೆಟ್ (3 ದಿನ)
ಮುಕುಂದ 4200 ಟಿಕೆಟ್ (2 ದಿನ)
ಊರ್ವಶಿ 4400 ಟಿಕೆಟ್ (4 ಶೋ)
ಸ್ವಾಗತ್ ಶಂಕರ್‌ನಾಗ್ 7200 ಟಿಕೆಟ್ (3 ದಿನ)

ಮಂಡ್ಯ

ಗುರುಶ್ರೀ 13800 (3 ದಿನ)
ಶ್ರೀಗುರು (ಹಾಸನ) 9000 (3 ದಿನ)

ತ್ರಿಶೂಲ್ (ದಾವಣಗೆರೆ) 14100 (3 ದಿನ)
ಗೀತಾಂಜಲಿ (ದಾವಣಗೆರೆ) 9360 (3 ದಿನ)

More from Filmibeat

English summary
Rishab Shetty, Rukmini Vasanth movies Kantara Chapter 1 day 2 Karnataka Box Office collection report;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X