Kantara Chapter 1 Box Office Day 1; 1ನೇ ದಿನ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ 'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ರಿಲೀಸ್ ಆಗಿದೆ. ಕನ್ನಡ ಬಹು ನಿರೀಕ್ಷೆಯ ಈ ಪ್ಯಾನ್ ಇಂಡಿಯಾ ಸಿನಿಮಾಗೆ ರೆಸ್ಪಾನ್ಸ್ ಹೇಗೆ ಸಿಗುತ್ತೆ ಅನ್ನೋದನ್ನು ಜನರು ಕೂಡ ಎದುರು ನೋಡುತ್ತಿದ್ದರು. ಕನ್ನಡ ಅಷ್ಟೇ ಅಲ್ಲದೇ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಇದೇ ಕ್ರೇಜ್ ಇತ್ತು. ಹೀಗಾಗಿ ಈ ಸಿನಿಮಾದ ಕಲೆಕ್ಷನ್ ಮೇಲೂ ಅದೇ ಕಣ್ಣು ಇದೆ.
'ಕಾಂತಾರ ಚಾಪ್ಟರ್ 1' ರಿಷಬ್ ಶೆಟ್ಟಿಯ ವೃತ್ತಿ ಬದುಕಿನ ಅತೀ ದೊಡ್ಡ ಬಜೆಟ್ ಸಿನಿಮಾ. 2022ರಲ್ಲಿ ತೆರೆಕಂಡಿದ್ದ 'ಕಾಂತಾರ' ಬಾಕ್ಸಾಫೀಸ್ ದಾಖಲೆಗಳನ್ನು ಬರೆಯುತ್ತಿದ್ದಂತೆ ಬಿಗ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುವುದಕ್ಕೆ ರಿಷಬ್ ಶೆಟ್ಟಿ ಹಾಗೂ ಅವರ ಕಥೆಯನ್ನು ಸಿದ್ಧಪಡಿಸಿದ್ದರು. ಈಗಾಗಲೇ ವರದಯಾದಂತೆ 125 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಹೇಗೆ ಮೋಡಿ ಮಾಡುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

ನಿರೀಕ್ಷೆ ಮಾಡಿದಂತೆ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್ ರಿಪೋರ್ಟ್ ಹೊರಬಿದ್ದಿದೆ. ಮೊದಲ ದಿನ ಈ ಸಿನಿಮಾ ಭಾರತದಾದ್ಯಂತ ಬಾಕ್ಸಾಫೀಸ್‌ನಲ್ಲಿ ಕಲೆ ಹಾಕಿದ ಗಳಿಕೆಯನ್ನು ರಿವೀಲ್ ಮಾಡಲಾಗಿದೆ. ಕಾಂತಾರ ಕಲೆಕ್ಷನ್ ಅಂದಾಜು ಲೆಕ್ಕ ಹೊರಬಂದಿದ್ದು, ಮೊದಲ ಕಲೆಕ್ಷನ್ ಹೀಗಿದೆ.
'ಕಾಂತಾರ ಚಾಪ್ಟರ್ 1' ಮೊದಲ ದಿನದ ಕಲೆಕ್ಷನ್ ಎಷ್ಟು?
ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ ಚಾಪ್ಟರ್ 1' ಮೊದಲ ದಿನದ ಕಲೆಕ್ಷನ್ ಮೇಲೆ ನಿರೀಕ್ಷೆ ಹೆಚ್ಚಿತ್ತು. ಮೊದಲ ದಿನ ದಾಖಲೆ ಬರೆಯಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಸ್ಯಾಕ್ನಿಲ್ಕ್ ಪ್ರಕಾರ ಈ ಸಿನಿಮಾ 'ಕಾಂತಾರ ಚಾಪ್ಟರ್ 1' ಫಸ್ಟ್ ಡೇ ಸುಮಾರು 60 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ ಎಂದು ಅಂದಾಜು ಮಾಡಲಾಗಿದೆ. ಇದು ಅಂಕಿ ಅಂಶಗಳು ಇನ್ನು ಏರಿಕೆಯಾಗುವ ನಿರೀಕ್ಷೆಯಿದ್ದು, ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಕಲೆಕ್ಷನ್ ರಿಪೋರ್ಟ್ ರಿಲೀಸ್ ಮಾಡಬೇಕಿದೆ.
ಯಾವ್ಯಾವ ಭಾಷೆಯಲ್ಲಿ ಹೇಗಿದೆ ಆಕ್ಯೂಪೆನ್ಸಿ?
'ಕಾಂತಾರ ಚಾಪ್ಟರ್ 1' ಐದು ಪ್ರಮುಖ ಭಾಷೆಯಲ್ಲಿ ಓಪನಿಂಗ್ ಸೂಪರ್ ಆಗಿದೆ. ಅದರಲ್ಲೂ ಸಂಜೆಯ ಮೇಲಿನ ಶೋಗಳು ಶೇ.95ಕ್ಕೂ ಹೆಚ್ಚು ಫುಲ್ ಆಗಿದ್ದವು. ಸ್ಯಾಕ್ನಿಲ್ಕ್ ಪ್ರಕಾರ ಐದು ಪ್ರಮುಖ ಭಾಷೆಗಳ ಬಾಕ್ಸಾಫೀಸ್ ಕಲೆಕ್ಷನ್ ಜೋರಾಗಿಯೇ ಇದೆ. ಕನ್ನಡ ಅಷ್ಟೇ ಅಲ್ಲದೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಒಳ್ಳೆಯ ಓಪನಿಂಗ್ ಸಿಕ್ಕಿದೆ.
ಕನ್ನಡ ಶೇ.95
ತೆಲುಗು ಶೇ.75
ತಮಿಳು ಶೇ.75
ಹಿಂದಿ ಶೇ.70

ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್?
'ಕಾಂತಾರ ಚಾಪ್ಟರ್ 1' ಮೊದಲ ದಿನದ ಕಲೆಕ್ಷನ್ ₹60 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ, ಇನ್ನೂ ಅಧಿಕೃತ ರಿಪೋರ್ಟ್ ಹೊರಬರಬೇಕಿದೆ. ಇದು ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ. ಕನ್ನಡ, ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ 'ಕಾಂತಾರ ಚಾಪ್ಟರ್ 1'ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಪ್ರಾಬಲ್ಯ ಸಾಧಿಸಿವೆ. ಅದ್ದೂರಿ ಮೇಕಿಂಗ್‌ಗೆ ಎಲ್ಲಾ ಭಾಷೆಯ ಪ್ರೇಕ್ಷಕರು ಕಳೆದು ಹೋಗಿದ್ದಾರೆ. ಹೀಗಾಗಿ ಮುಂದಿನ ಮೂರು ದಿನಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಲಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದಾರೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











