Kantara Chapter 1 Box Office Day 3;3ನೇ ದಿನ ಕಾಂತಾರ ಗಳಿಸಿದ್ದೆಷ್ಟು? ಕಲೆಕ್ಷನ್ ಕಮ್ಮಿ ಆಯ್ತಾ? ಜಾಸ್ತಿ ಆಯ್ತಾ?
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ದೇಶದಾದ್ಯಂತ ಸದ್ದು ಮಾಡುತ್ತಿದೆ. ಕೇವಲ ಕನ್ನಡ ಭಾಷೆಯಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಕಲೆಕ್ಷನ್ ಜೋರಾಗಿದೆ. 3ನೇ ದಿನವೂ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದ ಸಿನಿಮಾಗೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ರಿಷಬ್ ಶೆಟ್ಟಿಯ ಮ್ಯಾಜಿಕ್ ಮತ್ತೊಮ್ಮೆ ಕೆಲಸ ಮಾಡಿದೆ. 'ಕಾಂತಾರ' ತೆರೆಕಂಡು ಮೂರು ವರ್ಷಗಳ ಬಳಿಕ ಪ್ರೀಕ್ವೆಲ್ ಮಾಡಿದ್ದಕ್ಕೂ ಸಾರ್ಥಕ ಎನಿಸಿದೆ. ಸಿನಿಮಾ ಎಲ್ಲೆಲ್ಲಿ ರಿಲೀಸ್ ಆಗಿದೆಯೋ? ಅಲ್ಲೆಲ್ಲ ಕಲೆಕ್ಷನ್ ಜೋರಾಗಿಯೇ ಇದೆ. ಅದರಲ್ಲೂ ಉತ್ತರ ಭಾರತದಲ್ಲಂತೂ 'ಕಾಂತಾರ ಚಾಪ್ಟರ್ 1' ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಸಾಲಿಗೆ ಈ ಸಿನಿಮಾ ಸೇರುವ ಲಕ್ಷಣಗಳು ಎದ್ದು ಕಾಣಿಸುತ್ತಿದೆ.

ಭಾರತದಾದ್ಯಂತ ಸುಮಾರು 7 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಕಾಂತಾರ ಚಾಪ್ಟರ್ 1' ರಿಲೀಸ್ ಆಗಿದ್ದು, ಬಾಕ್ಸಾಫೀಸ್‌ನಲ್ಲಿ ಚಿಂದಿ ಕಲೆಕ್ಷನ್ ಮಾಡಿದೆ. 3ನೇ ದಿನ ಬಾಕ್ಸಾಫೀಸ್‌ನಲ್ಲಿ ಏರಿಕೆಯಾಗಿದ್ದು, ಕೇವಲ ಭಾರತದಲ್ಲಿ ₹150 ಕೋಟಿಯ ಗಡಿ ದಾಟಿದೆ. ಹಾಗಿದ್ದರೆ, 3 ನೇ ದಿನ ಎಷ್ಟು ಕಲೆಕ್ಷನ್ ಆಗಿದೆ? ಕರ್ನಾಟಕದಲ್ಲಿ ಈ ಸಿನಿಮಾ ಗಳಿಸಿದ್ದೆಷ್ಟು? ಯಾವ್ಯಾವ ಕಡೆ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಕಾಂತಾರ ಚಾಪ್ಟರ್ 1' 3ನೇ ದಿನ ಕಲೆಕ್ಷನ್
ರಿಷಬ್ ಶೆಟ್ಟಿಯ ಮತ್ತೊಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೋದು ಕನ್ಫರ್ಮ್. ಅದರಲ್ಲೂ 'ಕಾಂತಾರ ಚಾಪ್ಟರ್ 1' ಕಲೆಕ್ಷನ್ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ 2ನೇ ದಿನಕ್ಕೆ ಹೋಲಿಕೆ ಮಾಡಿದರೆ, ಈ ಸಿನಿಮಾದ ಕಲೆಕ್ಷನ್ ಮೂರನೇ ದಿನಕ್ಕೆ ಏರಿಕೆಯಾಗಿದೆ. ಭಾರತದಾದ್ಯಂತ ಈ ಸಿನಿಮಾ 3ನೇ ದಿನ ಗಳಿಸಿದ್ದು ₹55 ಕೋಟಿ ಎಂದು ವರದಿಯಾಗಿದೆ.
3 ದಿನಗಳಲ್ಲಿ ಗಳಿಸಿದ್ದೆಷ್ಟು?
'ಕಾಂತಾರ ಚಾಪ್ಟರ್ 1' ಥಿಯೇಟರ್‌ಗಳಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ. ಮೊದಲೆರಡು ದಿನ ತಮಿಳುನಾಡಿನಲ್ಲಿ ಕಲೆಕ್ಷನ್ ಸ್ವಲ್ಪ ಸ್ಲೋ ಇತ್ತು. ಆದರೆ, ಮೂರನೇ ದಿನದಲ್ಲಿ ಅಲ್ಲೂ ಪಿಕಪ್ ಆಗಿದೆ. ಧನುಷ್ ಸಿನಿಮಾವನ್ನೇ ಮೀರಿಸಿ ಅಬ್ಬರಿಸ ಲಕ್ಷಣ ಕಾಣಿಸುತ್ತಿದೆ. ಸದ್ಯ ಈ ಸಿನಿಮಾ ಮೂರು ದಿನಗಳಲ್ಲಿ 162.85 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ಮೂರು ದಿನಗಳ ಕಲೆಕ್ಷನ್ ಹೀಗಿದೆ.
'ಕಾಂತಾರ ಚಾಪ್ಟರ್ 1' ಕಲೆಕ್ಷನ್
1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
ಒಟ್ಟು ₹162.85 ಕೋಟಿ (Net)

ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
ಈಗಿನ ಸ್ಥಿತಿಯನ್ನು ನೋಡಿದರೆ, ರಿಷಬ್ ಶೆಟ್ಟಿಯ ಸಿನಿಮಾ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುವ ಸಾಧ್ಯತೆಯಿದೆ. ಮೊದಲ ಮೂರು ದಿನವೂ ಚಿಂದಿ ಕಲೆಕ್ಷನ್ ಮಾಡಿದೆ. ಕರ್ನಾಟಕದಲ್ಲಿ ಸುಮಾರು 768 ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಅದರಲ್ಲಿ ಬೆಂಗಳೂರಿನಲ್ಲಿಯೇ 368 ಸ್ಕ್ರೀನ್‌ಗಳಲ್ಲಿ ಪ್ರಸಾರ ಆಗಿತ್ತು. ಕೇವಲ ಮೂರು ದಿನಕ್ಕೆ ₹47.5 ಕೋಟಿ ಕಲೆಕ್ಷನ್ ಆಗಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಇನ್ನು ವಿತರಕರ ವಲಯದಲ್ಲಿ 3ನೇ ದಿನ ₹18 ಕೋಟಿ ಆಗಿದೆ ಎಂದು ಲೆಕ್ಕ ಹಾಕಲಾಗಿದೆ. ಕೆಲವು ಚಿತ್ರಮಂದಿರಗಳ ಕಲೆಕ್ಷನ್ ಹೀಗಿದೆ.
3ನೇ ದಿನದ ಕಲೆಕ್ಷನ್
ಬೆಂಗಳೂರು
ಸಂತೋಷ್ ₹12 ಲಕ್ಷ
ವೀರೇಶ್ ₹14 ಲಕ್ಷ
ಪ್ರಸನ್ನ ₹9 ಲಕ್ಷ
ಸಿದ್ಧಲಿಂಗೇಶ್ವರ & ಸಿದ್ದೇಶ್ವರ ₹14 ಲಕ್ಷ
ಬೃಂದಾ ₹9 ಲಕ್ಷ
ರಾಬಿನ್ ₹8 ಲಕ್ಷ
ಬಾಲಾಜಿ ₹8 ಲಕ್ಷ
ಮುಕುಂದ ₹6 ಲಕ್ಷ
ಊರ್ವಶಿ ₹2.7 ಲಕ್ಷ (1 ಶೋ)
ಭಾರತಿ ₹7 ಲಕ್ಷ
ನವರಂಗ್ ₹6 ಲಕ್ಷ
ವಿನಾಯಕ ₹3 ಲಕ್ಷ
ಮಂಡ್ಯ
ಗುರುಶ್ರೀ ₹6.9 ಲಕ್ಷ
ಮಹಾವೀರ ₹3.4 ಲಕ್ಷ
ಹಾಸನ
ಎಸ್‌ಬಿಜಿ ₹6.30 ಲಕ್ಷ
ಶ್ರೀಗುರು ₹5 ಲಕ್ಷ
ದಾವಣಗೆರೆ
ತ್ರಿಶುಲ್ ₹5.6 ಲಕ್ಷ
ಗೀತಾಂಜಲಿ ₹4.6 ಲಕ್ಷ
ಮೂವಿ ಟೈಮ್ ₹7.6 ಲಕ್ಷ
ಮಂಗಳೂರು
ಬಿಗ್ ಸಿನಿಮಾಸ್ ₹16 ಲಕ್ಷ
ಎಸ್‌ಪಿ ಸಿನಿಮಾಸ್ ₹8 ಲಕ್ಷ
ಉಡುಪಿ
ಬಿಗ್ ಸಿನಿಮಾಸ್ ₹7.7 ಲಕ್ಷ
ಐನಾಕ್ಸ್ ₹7 ಲಕ್ಷ
ಕಲ್ಪನಾ ₹3 ಲಕ್ಷ
ಮೈಸೂರು
ವುಡ್‌ಲ್ಯಾಂಡ್ ₹9 ಲಕ್ಷ
ಸಂಗಮ್ ₹11 ಲಕ್ಷ
ಡಿಆರ್‌ಸಿ ₹11 ಲಕ್ಷ
ತುಮಕೂರು
ಗಾಯತ್ರಿ ₹ 6 ಲಕ್ಷ
ಜೈ ಭಾರತ್ ₹5 ಲಕ್ಷ
ಐನಾಕ್ಸ್ ₹9.9 ಲಕ್ಷ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ


Click it and Unblock the Notifications











