Kantara Chapter 1 Box Office Day 11; 11ನೇ ದಿನವೂ ಕಾಂತಾರದ್ದೇ ಹವಾ; ಹೀಗೆ ಆದರೆ 'ಕೆಜಿಎಫ್ 2' ದಾಖಲೆಗೂ ಬ್ರೇಕ್

'ಕಾಂತಾರ ಚಾಪ್ಟರ್ 1' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಮತ್ತೊಂದು ಸಿನಿಮಾ ಬಾಕ್ಸಾಫೀಸ್ ಅನ್ನು ಕೊಳ್ಳೆ ಹೊಡೆಯುತ್ತಿದೆ. ಕನ್ನಡ ಅಷ್ಟೇ ಅಲ್ಲ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿಯೂ ಈ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜನರು ಮತ್ತೆ ಮತ್ತೆ ಥಿಯೇಟರ್‌ಗಳಿಗೆ ಹೋಗಿ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ.

ರಿಷಬ್ ಶೆಟ್ಟಿ ಮತ್ತೊಮ್ಮೆ ನಿರ್ದೇಶಕನಾಗಿ, ನಟನಾಗಿ ಗೆದ್ದಿದ್ದಾಗಿದೆ. ಈಗ 'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ಎಷ್ಟು ಕೋಟಿ ಕಲೆಕ್ಷನ್ ಮಾಡಬಹುದೆಂದು ಎದುರು ನೋಡುತ್ತಿದ್ದಾರೆ. ಕಳೆದ 11 ದಿನಗಳ ಕಲೆಕ್ಷನ್ ನೋಡಿದರೆ, ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಕಲೆಕ್ಷನ್ ಆಗುವ ನಿರೀಕ್ಷೆಯಿದೆ. ಈಗಾಗಲೇ ಬಾಕ್ಸಾಫೀಸ್‌ನಲ್ಲಿ ₹600 ಕೋಟಿ ಲೂಟಿ ಮಾಡಿರುವ ಈ ಸಿನಿಮಾ ಸಾವಿರ ಕೋಟಿಯನ್ನು ಸುಲಭವಾಗಿ ದಾಟುವ ನಿರೀಕ್ಷೆಯಿದೆ.

Rishab Shetty Starrer Kantara Chapter 1 Day 11 Box Office collection report

'ಕಾಂತಾರ ಚಾಪ್ಟರ್ 1' ಎಲ್ಲಾ ಭಾಷೆಯ ಜನರು ಇಷ್ಟ ಪಟ್ಟು ನೋಡುತ್ತಿದ್ದಾರೆ. ಎರಡನೇ ವೀಕೆಂಡ್‌ನಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಹೊಂಬಾಳೆ ಫಿಲ್ಮ್ಸ್ ಖಜಾನೆ ತುಂಬಿದೆ. ಹೀಗೆ ಆದರೆ, 'ಕೆಜಿಎಫ್ ಚಾಪ್ಟರ್ 2' ದಾಖಲೆಯನ್ನು ಮುರಿಯೋದ್ರಲ್ಲಿ ಅನುಮಾನವೇ ಇಲ್ಲ. ಹಾಗಿದ್ದರೆ, 11ನೇ ದಿನವಾದ ಭಾನುವಾರದ ಕಲೆಕ್ಷನ್ ರಿಪೋರ್ಟ್ ಹೇಗಿದೆ ಅಂತ ನೋಡುವುದಾರೇ,

11ನೇ ದಿನದ ಕಲೆಕ್ಷನ್ ಎಷ್ಟು?

ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಭಾನುವಾರವೂ (ಅಕ್ಟೋಬರ್ 12) ಬಾಕ್ಸಾಫೀಸ್‌ ಕೊಳ್ಳೆ ಹೊಡೆದಿದೆ. 11ನೇ ದಿನವಾದ ನಿನ್ನೆ ಒಂದು ದಿನ ದೇಶಾದ್ಯಂತ ಬರೋಬ್ಬರಿ 40 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಕನ್ನಡ ವರ್ಷನ್‌ನಿಂದ ₹12.3 ಕೋಟಿ, ಹಿಂದಿ ವರ್ಷನ್ ₹14.25 ಕೋಟಿ, ತೆಲುಗು ₹4.8 ಕೋಟಿ, ತಮಿಳು ₹5.25 ಕೋಟಿ ಹಾಗೂ ಮಲಯಾಳಂ ₹3.4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗಿದೆ. ಒಟ್ಟು ಸೇರಿದರೆ, 11ನೇ ದಿನ ಬರೋಬ್ಬರಿ ₹40 ಕೋಟಿ ಕಲೆಕ್ಷನ್ ಮಾಡಿದೆ.

ಇಲ್ಲಿವರೆಗೂ ಕಾಂತಾರ ಸಿನಿಮಾ ಗಳಿಸಿದ್ದೆಷ್ಟು?

'ಕಾಂತಾರ ಚಾಪ್ಟರ್ 1' ಎರಡನೇ ವೀಕೆಂಡ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿದೆ. 12ನೇ ದಿನಕ್ಕೆ ಕಾಲಿಟ್ಟಿರುವ ಸಿನಿಮಾ ಮುಂದಿನ ದಿನಗಳಲ್ಲಿ ಕಲೆಕ್ಷನ್ ಹೇಗಿರುತ್ತೆ? ಅನ್ನೋ ಕುತೂಹಲವಿದೆ. ಸದ್ಯಕ್ಕೆ ಭಾರತದಾದ್ಯಂತ ಈ ಸಿನಿಮಾ ₹522 ಕೋಟಿ (Gross) ಕಲೆಕ್ಷನ್ ಮಾಡಿದ್ದು, ₹478.65 ಕೋಟಿ (Net) ಕಲೆಕ್ಷನ್ ಆಗಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಈ 11 ದಿನಗಳ ಒಟ್ಟು ಕಲೆಕ್ಷನ್ ಹೇಗಿದೆ ಅಂತ ನೋಡುವುದಾರೇ,

'ಕಾಂತಾರ ಚಾಪ್ಟರ್ 1' ಕಲೆಕ್ಷನ್ (ಭಾರತ)

1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹30.50 ಕೋಟಿ
6ನೇ ದಿನ ₹34.25 ಕೋಟಿ
7ನೇ ದಿನ ₹25.25 ಕೋಟಿ
8ನೇ ದಿನ ₹ 21.15 ಕೋಟಿ
9ನೇ ದಿನ ₹ 22.25 ಕೋಟಿ
10ನೇ ದಿನ ₹ 39 ಕೋಟಿ
11ನೇ ದಿನ ₹ 40 ಕೋಟಿ

ಒಟ್ಟು ₹ 478.65 ಕೋಟಿ (Net)

Rishab Shetty Starrer Kantara Chapter 1 Day 11 Box Office collection report

'ಕೆಜಿಎಫ್ 2' ದಾಖಲೆ ಮುರಿಯಬಹುದೇ?

ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 'ಕೆಜಿಎಫ್ 2' 1230 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಕನ್ನಡದಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಾಡಿದ ಮೊದಲ ಸಿನಿಮಾ. ಈ ದಾಖಲೆಯನ್ನು 'ಕಾಂತಾರ ಚಾಪ್ಟರ್ 1' ಮುರಿಯಬಹುದೆಂದು ಟ್ರೇಡ್‌ ಎಕ್ಸ್‌ಪರ್ಟ್‌ಗಳು ಎದುರು ನೋಡುತ್ತಿದ್ದಾರೆ. ವಿಶ್ವದಾದ್ಯಂತ ಈ ಸಿನಿಮಾ 610 ಕೋಟಿ ರೂಪಾಯಿ (Gross) ಕಲೆಕ್ಷನ್ ಮಾಡಿದೆ. 'ಕೆಜಿಎಫ್ 2' ಬಾಕ್ಸಾಫೀಸ್ ದಾಖಲೆ ಮುರಿಯುವುದಕ್ಕೆ ಇನ್ನು 600 ಕೋಟಿಗೂ ಅಧಿಕ ಕಳಿಸಬೇಕಿದೆ. ಅದು ಆಗುತ್ತಾ? ಅನ್ನೋದು ಸದ್ಯಕ್ಕಂತೂ ಕುತೂಹಲ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Rishab Shetty, Rukmini Vasanth Starrer Kantara Chapter 1 Day 11 Box Office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X