Kantara Chapter 1 Box Office Day 12; 12ನೇ ದಿನ 'ಕಾಂತಾರ ಚಾಪ್ಟರ್ 1' ಕಲೆಕ್ಷನ್ ಡ್ರಾಪ್ ಆಯ್ತಾ? ಏಕೆ?
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ 'ಕಾಂತಾರ ಚಾಪ್ಟರ್ 1' ಕಳೆದ ಎರಡು ವಾರಗಳಿಂದ ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡಿತ್ತು. ಬಿಡುಗಡೆಯಾದ ಐದು ಭಾಷೆಗಳಲ್ಲಿಯೂ ಈ ಸಿನಿಮಾದ ಸದ್ದು ಜೋರಾಗಿಯೇ ಇತ್ತು. ಬಿಡುಗಡೆಯಾದ ದಿನದಿಂದಲೂ ಸಿನಿಮಾ ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿದ್ದೇ ಇಲ್ಲ. ಅದರಲ್ಲೂ ವೀಕೆಂಡ್‌ನಲ್ಲಿ ಸಖತ್ ಒಳ್ಳೆಯ ಕಲೆಕ್ಷನ್ ಆಗಿತ್ತು. ಸೋಮವಾರದ ಪರೀಕ್ಷೆಯಲ್ಲಿಯೂ ಈ ಸಿನಿಮಾ ಗೆದ್ದು ಬೀಗಿತ್ತು.
ಆದರೆ, ಎರಡನೇ ಸೋಮವಾರದ ಕಥೆ ಏನಾಯ್ತು? ನಿನ್ನೆ (ಅಕ್ಟೋಬರ್ 13) 'ಕಾಂತಾರ ಚಾಪ್ಟರ್ 1' ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದೆ. ಎರಡನೇ ಸೋಮವಾರ ರಿಷಬ್ ಶೆಟ್ಟಿ ಸಿನಿಮಾಗೆ ಆಶಾದಾಯಕವಾಗಿ ಏನೂ ಇರಲಿಲ್ಲ. ಆದರೂ, ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 12ನೇ ದಿನದ ಕಲೆಕ್ಷನ್ ಕೂಡ ಉತ್ತಮ ಎಂದೇ ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ಹಲವು ದಾಖಲೆಗಳನ್ನು ಬರೆದಿರೋ ಸಿನಿಮಾ ಮುಂದೆ ಏನಾಯುತ್ತೆ ಅನ್ನೋ ಲೆಕ್ಕಾಚಾರ ಶುರುವಾಗಿದೆ.

'ಕಾಂತಾರ'ದ ಪ್ರೀಕ್ವೆಲ್ ವಿಶ್ವದಾದ್ಯಂತ ಒಳ್ಳೆಯ ಕಲೆಕ್ಷನ್ ಅನ್ನೇ ಮಾಡಿದೆ. ಇದೂವರೆಗೂ ಸಿನಿಮಾದ ಹಲವು ಮೈಲಿಗಲ್ಲನ್ನು ಸೃಷ್ಟಿಸಿ ಮುನ್ನುತ್ತಿದೆ. 2ನೇ ಸೋಮವಾರ ಗಳಿಕೆಯಲ್ಲಿ ಸ್ವಲ್ಪ ಹಿಂದೆ ಬಿದ್ದಿದ್ದು, ಇದನ್ನು ಟ್ರೇಡ್ ಎಕ್ಸ್‌ಪರ್ಟ್‌ಗಳು ನಿರೀಕ್ಷೆ ಮಾಡಿದ್ದರು. ಆದರೆ, ಮತ್ತೆ ಸಿನಿಮಾದ ಕಲೆಕ್ಷನ್ ರಿಕವರಿ ಆಗುತ್ತೆ ಎಂಬ ಭರವಸೆಯಲ್ಲಿ ಟ್ರೇಡ್ ಎಕ್ಸ್‌ಪರ್ಟ್‌ಗಳು ಇದ್ದಾರೆ. ಅಷ್ಟಕ್ಕೂ 12ನೇ ದಿನ 'ಕಾಂತಾರ ಚಾಪ್ಟರ್ 1' ಗಳಿಸಿದ್ದೆಷ್ಟು?
12ನೇ ದಿನ ಕಾಂತಾರ ಚಾಪ್ಟರ್ 1 ಕಲೆಕ್ಷನ್ ಎಷ್ಟು?
'ಕಾಂತಾರ ಚಾಪ್ಟರ್ 1' ನಿರೀಕ್ಷೆ ಮಾಡಿದ್ದಕ್ಕಿಂತ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ವಾರದ ಆರಂಭದ ದಿನವಾದ ಸೋಮವಾರ ಸಹಜವಾಗಿ ಕಲೆಕ್ಷನ್‌ನಲ್ಲಿ ಡ್ರಾಪ್ ಆಗೋದು ಸಹಜ. ಈ ಸಿನಿಮಾಗೆ ಎರಡನೇ ಸೋಮವಾರ ಡ್ರಾಪ್ ಕಂಡಿದೆ. ಆದರೂ ಕಲೆಕ್ಷನ್ ಏನು ಕಮ್ಮಿಯಲ್ಲ. ಸ್ಯಾಕ್ನಿಲ್ಕ್ ವರದಿ ಪ್ರಕಾರ 12ನೇ ದಿನ ಈ ಸಿನಿಮಾ ದೇಶದಾದ್ಯಂತ ₹13.50 ಕೋಟಿ (Net) ಕಲೆಕ್ಷನ್ ಮಾಡಿದೆ.
12 ದಿನಗಳಲ್ಲಿ ಗಳಿಸಿದ್ದು ಎಷ್ಟು?
ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿದೆ. ಮತ್ತೊಂದು ಕನ್ನಡ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಬ್ಬರಿಗೆ ಹಲವು ಸಿನಿಮಾಗಳ ಕಲೆಕ್ಷನ್ ಅನ್ನು ಹಿಂದಿಕ್ಕಿದೆ. ಕರ್ನಾಟಕದಲ್ಲಿ 'ಕೆಜಿಎಫ್ 2' ದಾಖಲೆಯನ್ನೇ ಮುರಿದಿದೆ. 2ನೇ ಸೋಮವಾರ ಡ್ರಾಪ್ ಬಂದ ಕಲೆಕ್ಷನ್ ಅನ್ನೂ ಸೇರಿಸಿ ಇದೂವರೆಗೂ ಭಾರತದಾದ್ಯಂತ 451.9 ಕೋಟಿ (Net) ಕಲೆಕ್ಷನ್ ಆಗಿದೆ ಎಂದು ಸ್ಯಾಕ್ನಿಲ್ಕ್ ರಿಪೋರ್ಟ್ ಮಾಡಿದೆ. ಹಾಗಿದ್ದರೆ, ಈ 12 ದಿನಗಳಲ್ಲಿ 'ಕಾಂತಾರ ಚಾಪ್ಟರ್ 1' ಗಳಿಸಿದ್ದೆಷ್ಟು?
'ಕಾಂತಾರ ಚಾಪ್ಟರ್ 1' ಕಲೆಕ್ಷನ್ (ಭಾರತ)
1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹30.50 ಕೋಟಿ
6ನೇ ದಿನ ₹34.25 ಕೋಟಿ
7ನೇ ದಿನ ₹25.25 ಕೋಟಿ
8ನೇ ದಿನ ₹21.15 ಕೋಟಿ
9ನೇ ದಿನ ₹22.25 ಕೋಟಿ
10ನೇ ದಿನ ₹39 ಕೋಟಿ
11ನೇ ದಿನ ₹40 ಕೋಟಿ
12ನೇ ದಿನ ₹13.5 ಕೋಟಿ
ಒಟ್ಟು ₹ 491.9 ಕೋಟಿ (Net)

ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ಒಳ್ಳೆಯ ಕಲೆಕ್ಷನ್ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಹೇಳಿಕೊಂಡಂತೆ 11ನೇ ದಿನಕ್ಕೆ ₹655 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನೂ 12ನೇ ದಿನದ ಕಲೆಕ್ಷನ್ ₹700 ಕೋಟಿ ಸಮೀಪಿಸಬಹುದೆಂದು ಅಂದಾಜಿಸಲಾಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 12ನೇ ದಿನಕ್ಕೆ ಈ ಸಿನಿಮಾ ವಿಶ್ವದಾದ್ಯಂತ ₹680 ಕೋಟಿಯಿಂದ ₹685 ಕೋಟಿವರೆಗೂ ಕಲೆಕ್ಷನ್ ಮಾಡಬಹುದು ಎಂದು ಅಂದಾಜು ಹಾಕಿದ್ದಾರೆ.
'ಕೆಜಿಎಫ್ 2' ದಾಖಲೆ ಮುರಿಯುತ್ತಾ?
ರಾಕಿಂಗ್ ಸ್ಟಾರ್ ಯಶ್-ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ 'ಕೆಜಿಎಫ್ 2' ವಿಶ್ವದಾದ್ಯಂತ ₹1230 ಕೋಟಿ ಕಲೆಕ್ಷನ್ ಮಾಡಿತ್ತು. ಈ ದಾಖಲೆಯನ್ನು 'ಕಾಂತಾರ ಚಾಪ್ಟರ್ 1' ಮುರಿಯಬಹುದೇ ಎಂಬ ಚರ್ಚೆಯಾಗುತ್ತಿದೆ. ಸದ್ಯ ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ರಿಷಬ್ ಶೆಟ್ಟಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ₹1000 ಕೋಟಿ ಗಡಿ ದಾಟಬಹುದೆಂದು ಅಂದಾಜಿಸಿದ್ದಾರೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











