Kantara Chapter 1 Box Office Day 13: 13ನೇ ದಿನ 'ಕಾಂತಾರ 1' ಕಲೆಕ್ಷನ್ ಮತ್ತೆ ಏರಿಕೆ; 'ಕೆಜಿಎಫ್ 2' ಹಿಂದೆ ಹಾಕುತ್ತಾ?

ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಟ್ವಿಸ್ಟ್ ಅಂಡ್ ಟರ್ನ್ ಕೊಡುತ್ತಿದೆ. ವೀಕ್ ಡೇಸ್‌ನಲ್ಲಿ ಕೊಂಚ ಮಟ್ಟಿಗೆ ಡ್ರಾಪ್ ಕಂಡಿದ್ದ ಸಿನಿಮಾದ ಕಲೆಕ್ಷನ್‌ನಲ್ಲಿ ಏರಿಳಿತ ಕಾಣುತ್ತಿದೆ. ಅದರಲ್ಲೂ 12ನೇ ದಿನ 'ಕಾಂತಾರ ಚಾಪ್ಟರ್ 1' ಡ್ರಾಪ್ ಕಂಡಿತ್ತು. ಆದರೆ, 13ನೇ ದಿನ ಗಳಿಕೆಯಲ್ಲಿ ಮತ್ತೆ ಏರಿಕೆ ಕಂಡಿದೆ.

'ಕಾಂತಾರ ಚಾಪ್ಟರ್ 1' ಕನ್ನಡ ಸೇರಿ ಐದು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾದ ಕಲೆಕ್ಷನ್ ಉತ್ತಮವಾಗಿದೆ. ಆದರೆ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಕೊಂಚ ಮಟ್ಟಿಗೆ ಡ್ರಾಪ್ ಕಂಡಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರದ ಪ್ರಕಾರ ಇನ್ನೆರಡು ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಮತ್ತೆ ಏರಿಕೆ ಕಾಣಲಿದೆ.

Rishab Shetty Starrer Kantara Chapter 1 Day 13 Box Office collection report

ಇನ್ನು 12ನೇ ದಿನಕ್ಕೆ ಹೋಲಿಕೆ ಮಾಡಿದರೆ, 13ನೇ ದಿನ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ವೀಕೆಂಡ್‌ನಲ್ಲಿ ಸಿನಿಮಾ ಮತ್ತೆ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದೆ. ಅಲ್ಲದೇ ದೀಪಾವಳಿ ಹಬ್ಬದ ರಜೆಯಲ್ಲಿ ಕಲೆಕ್ಷನ್‌ ಮತ್ತೆ ಹೆಚ್ಚಾಗುತ್ತೆಂದು ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರ. ಹಾಗಿದ್ದರೆ, 13ನೇ ದಿನ 'ಕಾಂತಾರ ಚಾಪ್ಟರ್ 1' ಕಲೆಕ್ಷನ್ ಎಷ್ಟು? 'ಕೆಜಿಎಫ್ 2' ದಾಖಲೆ ಮುರಿಯುತ್ತಾ? ತಿಳಿಯುವುದಕ್ಕೆ ಮುಂದೆ ಓದಿ.

13ನೇ ದಿನದ ಕಲೆಕ್ಷನ್ ಎಷ್ಟು?

'ಕಾಂತಾರ ಚಾಪ್ಟರ್ 1' ಕಲೆಕ್ಷನ್ ಮೂರನೇ ವಾರದಲ್ಲಿ ಡ್ರಾಪ್ ಕಂಡಿದ್ದರೂ, ಅದು ಸಹಜ ಎನ್ನಲಾಗಿದೆ. ಸ್ಯಾಕ್ನಿಲ್ಕ್ ಪ್ರಕಾರ, 13ನೇ ದಿನ ಸಿನಿಮಾ ಅಂದಾಜು ₹14 ಕೋಟಿ ಕಲೆಕ್ಷನ್ ಮಾಡಿದೆ. 12ನೇ ದಿನಕ್ಕೆ ಹೋಲಿಕೆ ಮಾಡಿದರೆ, ಕಲೆಕ್ಷನ್‌ನಲ್ಲಿ ಮತ್ತೆ ಏರಿಕೆಯಾಗಿದೆ. ಕನ್ನಡ ವರ್ಷನ್ ₹3.75 ಕೋಟಿ, ಹಿಂದಿ ವರ್ಷನ್ ₹6.35 ಕೋಟಿ, ತೆಲುಗು ₹1.5 ಕೋಟಿ, ತಮಿಳು ₹1.4 ಕೋಟಿ, ಮಲಯಾಳಂ ₹1 ಕೋಟಿ ಕಲೆಕ್ಷನ್ ಆಗಿದೆ.

13 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?

ರಿಷಬ್ ಶೆಟ್ಟಿ ಸಿನಿಮಾದ ಕಲೆಕ್ಷನ್ ಹಿಂದಿ ಏರಿಯಾಗಳಲ್ಲಿ ಏರಿಕೆಯಾಗಿದೆ. 12ನೇ ದಿನಕ್ಕಿಂತ 13ನೇ ದಿನ ಸುಮಾರು ₹2 ಕೋಟಿ ಹೆಚ್ಚು ಕಲೆಕ್ಷನ್ ಆಗಿದೆ. 12ನೇ ದಿನ ₹4.5 ಕೋಟಿ ಕಲೆಕ್ಷನ್ ಆಗಿತ್ತು. ಅದೇ 13ನೇ ದಿನ ₹6.35 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಹೀಗಾಗಿ ಈ ವೀಕೆಂಡ್ ಹಾಗೂ ರಜೆಯಲ್ಲಿ ಸಿನಿಮಾ ಕಲೆಕ್ಷನ್ ಮತ್ತೆ ಮೊದಲ ವಾರದಷ್ಟೇ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಈ 13 ದಿನಗಳಲ್ಲಿ ಭಾರತದಲ್ಲಿ ಕಂಡ ಕಲೆಕ್ಷನ್ ರಿಪೋರ್ಟ್ ಹೀಗಿದೆ.

'ಕಾಂತಾರ ಚಾಪ್ಟರ್ 1' ಕಲೆಕ್ಷನ್ (ಭಾರತ)

1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹30.50 ಕೋಟಿ
6ನೇ ದಿನ ₹34.25 ಕೋಟಿ
7ನೇ ದಿನ ₹25.25 ಕೋಟಿ
8ನೇ ದಿನ ₹21.15 ಕೋಟಿ
9ನೇ ದಿನ ₹22.25 ಕೋಟಿ
10ನೇ ದಿನ ₹39 ಕೋಟಿ
11ನೇ ದಿನ ₹40 ಕೋಟಿ
12ನೇ ದಿನ ₹13.5 ಕೋಟಿ
13ನೇ ದಿನ ₹14 ಕೋಟಿ
ಒಟ್ಟು ₹ 465.75 ಕೋಟಿ (Net)

Rishab Shetty Starrer Kantara Chapter 1 Day 13 Box Office collection report

'ಕೆಜಿಎಫ್ 2' ದಾಖಲೆ ಮುರಿಯುತ್ತಾ?

ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ 'ಕಾಂತಾರ ಚಾಪ್ಟರ್ 1' ಯಶ್-ಪ್ರಶಾಂತ್ ನೀಲ್ ಜೋಡಿಯ 'ಕೆಜಿಎಫ್ 2' ದಾಖಲೆ ಮುರಿಯುವ ಸಾಧ್ಯತೆಯಿದೆ. ಆದರೆ, ಅದು ದೀಪಾವಳಿ ಹಬ್ಬದ ರಜೆಯಲ್ಲಿ ಆಗುವ ಗಳಿಕೆ ಮೇಲೆ ನಿಂತಿದೆ. ಇದಷ್ಟೇ ಅಲ್ಲದೆ, ಇನ್ನೂ ಎರಡು ವಾರಗಳ ಕಾಲ ಥಿಯೇಟರ್‌ಗಳ ಕಲೆಕ್ಷನ್ ಉತ್ತಮವಾಗಿದ್ದರೆ, 'ಕೆಜಿಎಫ್ 2' ದಾಖಲೆಯನ್ನು ಮುರಿಯಬಹುದೆಂದು ಅಂದಾಜಿಸಿದ್ದಾರೆ. ಸದ್ಯ ವಿಶ್ವದಾದ್ಯಂತ ₹700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. 'ಕೆಜಿಎಫ್ 2' ಹಿಂದಿಕ್ಕಲು ಇನ್ನೂ ₹550 ಕೋಟಿ ಹತ್ತಿರ ಕಲೆಕ್ಷನ್ ಆಗಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Rishab Shetty, Rukmini Vasanth Starrer Kantara Chapter 1 Day 13 Box Office collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X