Kantara Chapter 1 Box Office Day 5; ಸೋಮವಾರದ ಪರೀಕ್ಷೆಯಲ್ಲಿ ಗೆದ್ದಿತೇ ಕಾಂತಾರ? 5ನೇ ದಿನ ಗಳಿಸಿದ್ದೆಷ್ಟು?
'ಕಾಂತಾರ ಚಾಪ್ಟರ್ 1' ದೇಶಾದ್ಯಂತ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಸಿನಿಮಾ ಬಿಡುಗಡೆಗೂ ಮುನ್ನ ಹೆಚ್ಚೇನು ಪ್ರಚಾರ ಮಾಡಿರಲಿಲ್ಲ. ಆದರೂ, ಮೊದಲ ದಿನದಿಂದಲೇ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ರಿಷಬ್ ಶೆಟ್ಟಿ ಮತ್ತೊಮ್ಮೆ 'ಕಾಂತಾರ' ಸಿನಿಮಾ ಮೂಲಕವೇ ದೇಶಾದ್ಯಂತ ಮಿಂಚಿದ್ದಾರೆ. ಎಲ್ಲಾ ಕಡೆಯೂ ಸಿನಿಮಾ ಕಲೆಕ್ಷನ್ ಬಗ್ಗೆನೇ ಚರ್ಚೆಯಾಗುತ್ತಿದೆ.
ರಿಷಬ್ ಶೆಟ್ಟಿ ಸಿನಿಮಾ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿಸಿದೆ. ಐದು ಭಾಷೆಗಳಲ್ಲಿಯೂ 'ಕಾಂತಾರ ಚಾಪ್ಟರ್ 1' ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಮತ್ತೊಂದು ಕನ್ನಡ ಸಿನಿಮಾ ದಾಖಲೆ ಬರೆಯುವತ್ತ ಮುನ್ನಡೆಯುತ್ತಿದೆ. ಬ್ಯಾಕ್ ಟು ಬ್ಯಾಕ್ ರಜೆಗಳು ಕಾಂತಾರ ಯಶಸ್ಸಿಗೆ ಸಾಥ್ ಕೊಟ್ಟಿವೆ. ಮೊದಲ ನಾಲ್ಕು ದಿನ ನಿರೀಕ್ಷೆ ಮಾಡಿದಂತೆ ಕಲೆಕ್ಷನ್ ಅದ್ಭುತವಾಗಿಯೇ ಇತ್ತು. 5ನೇ ದಿನದ ಕಲೆಕ್ಷನ್ ಮೇಲೆ ಎಲ್ಲರ ಕಣ್ಣಿಟ್ಟಿತ್ತು.

ಯಾಕಂದ್ರೆ, ಸೋಮವಾರ ಸಾಮಾನ್ಯವಾಗಿ ಕಲೆಕ್ಷನ್ ಡ್ರಾಪ್ ಆಗುತ್ತೆ. 'ಕಾಂತಾರ ಚಾಪ್ಟರ್ 1' ಸಿನಿಮಾದ ಕಲೆಕ್ಷನ್ ಕೂಡ ಡ್ರಾಪ್ ಆಗಿದೆ. ಆದರೂ ಗಳಿಸಿದ್ದು ಕಮ್ಮಿಯೇನಲ್ಲ. ಹಾಗಿದ್ದರೆ, 'ಕಾಂತಾರ ಚಾಪ್ಟರ್ 1' ಸೋಮವಾರದ ಪರೀಕ್ಷೆ ಗೆದ್ದಿತೇ? 5ನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು? ವಿಶ್ವದಾದ್ಯಂತ ಕಾಂತಾರ ಕಲೆಕ್ಷನ್ ಹೇಗಾಗಿದೆ ತಿಳಿಯುವುದಕ್ಕೆ ಮುಂದೆ ಓದಿ.
5ನೇ ದಿನ 'ಕಾಂತಾರ' ಕಲೆಕ್ಷನ್ ಎಷ್ಟು?
'ಕಾಂತಾರ ಚಾಪ್ಟರ್ 1' ವೀಕ್‌ಡೇಸ್‌ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿದೆ. ಭಾನುವಾರದ ಗಳಿಕೆಗೆ ಹೋಲಿಸಿದರೆ, ಸೋಮವಾರ ಕಲೆಕ್ಷನ್ ಶೇ.50ರಷ್ಟು ಡ್ರಾಪ್ ಕಂಡಿದೆ. ಆದರೂ, ಇದು ಉತ್ತಮ ಗಳಿಕೆ ಅಂತಾರೆ ಟ್ರೇಡ್ ಎಕ್ಸ್‌ಪರ್ಟ್‌ಗಳು. ಸ್ಯಾಕ್ನಿಲ್ಕ್ ವರದಿ ಪ್ರಕಾರ, 5ನೇ ದಿನ ಕಾಂತಾರ ಸಿನಿಮಾದ ಕಲೆಕ್ಷನ್ 30.50 ಕೋಟಿ ರೂಪಾಯಿ ಆಗಿದೆ ಎಂದು ಹೇಳಲಾಗಿದೆ. ಕನ್ನಡ ಸೇರಿದಂತೆ ತೆಲುಗು,ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಅದ್ಭುತ ಕಲೆಕ್ಷನ್ ಆಗಿದೆ.
5 ದಿನಗಳ ಕಲೆಕ್ಷನ್ ಏನು?
ರಿಷಬ್ ಶೆಟ್ಟಿ ಸಿನಿಮಾ 5ನೇ ದಿನ ಕಲೆಕ್ಷನ್ ಬಗ್ಗೆನೂ ಟ್ರೇಡ್ ಎಕ್ಸ್‌ಪರ್ಟ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಸಿನಿಮಾದ ಕಲೆಕ್ಷನ್ ಸಖತ್ ಆಗಿಯೇ ಇದೆ. ಒಂದರ ಹಿಂದೊಂದು ರಜೆಯ ಮೂಡಿನಲ್ಲಿರುವ ಜನರು 'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ನೋಡುತ್ತಿದ್ದಾರೆ. ಕಳೆದ ಐದು ದಿನಗಳಲ್ಲಿ ಈ ಸಿನಿಮಾದ ಪ್ಯಾನ್ ಇಂಡಿಯಾ ಕಲೆಕ್ಷನ್ ಹೀಗಿದೆ.
'ಕಾಂತಾರ ಚಾಪ್ಟರ್ 1' ಕಲೆಕ್ಷನ್
1ನೇ ದಿನ ₹61.85 ಕೋಟಿ
2ನೇ ದಿನ ₹46 ಕೋಟಿ
3ನೇ ದಿನ ₹55 ಕೋಟಿ
4ನೇ ದಿನ ₹63 ಕೋಟಿ
5ನೇ ದಿನ ₹30.50 ಕೋಟಿ
ಒಟ್ಟು ₹255.75 ಕೋಟಿ (Net)

ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು ಕಲೆಕ್ಷನ್?
'ಕಾಂತಾರ ಚಾಪ್ಟರ್ 1' ಐದು ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಅದ್ಭುತ ಕಲೆಕ್ಷನ್ ಆಗಿದೆ. ಇನ್ನು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಎರಡು ದಿನಗಳ ಬಳಿಕ ಒಳ್ಳೆಯ ಕಲೆಕ್ಷನ್ ಆಗುತ್ತಿದೆ. ಈ ಐದು ಭಾಷೆಗಳಲ್ಲಿ ಕಾಂತಾರ ಸಿನಿಮಾದ ಕಲೆಕ್ಷನ್ ಹೇಗಾಗಿದೆ? ಅನ್ನೋ ರಿಪೋರ್ಟ್ ಇಲ್ಲಿದೆ.
5 ದಿನಗಳ ಕಲೆಕ್ಷನ್
ಕನ್ನಡ ₹75.85 ಕೋಟಿ
ಹಿಂದಿ ₹82.25 ಕೋಟಿ
ತೆಲುಗು ₹52.75 ಕೋಟಿ
ತಮಿಳು ₹24.75 ಕೋಟಿ
ಮಲಯಾಳಂ ₹20.90 ಕೋಟಿ
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











