Kantara Chapter 1 Box Office Day 8:8ನೇ ದಿನಕ್ಕೆ ₹509 ಕೋಟಿ ಕಲೆಕ್ಷನ್; ಎಲ್ಲೆಲ್ಲಿಂದ ಹರಿದು ಬಂತು ಹಣ?
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್ ಧೂಳೆಬ್ಬಿಸುತ್ತಿದೆ. ಸಿನಿಮಾ ಬಿಡುಗಡೆಯಾಗಿ 9ನೇ ದಿನಕ್ಕೆ ಕಾಲಿಟ್ಟಿದ್ದು, ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಜಯರಾಂ, ಗುಲ್ಶನ್ ದೇವಯ್ಯ ಸೇರಿದಂತೆ ಹಲವು ಕಲಾವಿದರ ನಟನೆ ಇಷ್ಟ ಆಗಿದೆ. ಇದರೊಂದಿಗೆ ಅದ್ಧೂರಿ ಸೆಟ್ಟು, ವೈಭವದ ದೃಶ್ಯಗಳಿಗೆ ಪ್ರೇಕ್ಷಕರು ಮನಸೋತಿದ್ದಾರೆ.
ಹೀಗಾಗಿ ಸಿನಿಮಾ ಬಿಡುಗಡೆಯಾದಲ್ಲಿಂದ ಇಲ್ಲಿವರೆಗೂ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಲೇ ಇದೆ. ಕನ್ನಡ ಸಿನಿಮಾವೊಂದು ಬಾಕ್ಸಾಫೀಸ್‌ನಲ್ಲಿ ಬೇರೆ ಭಾಷೆಯ ಸಿನಿಮಾಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ನಿನ್ನೆ (ಅಕ್ಟೋಬರ್ 10) ಅಂದರೆ 8ನೇ ದಿನಕ್ಕೆ 'ಕಾಂತಾರ ಚಾಪ್ಟರ್ 1' ಗಲ್ಲಾಪಟ್ಟಿಗೆಯಲ್ಲಿ ₹500 ಕೋಟಿ ಕ್ಲಬ್ ಸೇರಿದೆ. ವೀಕ್‌ಡೇಸ್‌ನಲ್ಲೂ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

'ಕಾಂತಾರ ಚಾಪ್ಟರ್ 1' ಕೇವಲ ಕನ್ನಡ ಭಾಷೆಯಷ್ಟೇ ಅಲ್ಲ. ಹಿಂದಿಯಲ್ಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿಯೂ ಈ ಸಿನಿಮಾದ ಕಲೆಕ್ಷನ್ ಸಖತ್ ಆಗಿದೆ. ಕೇವಲ ಎಂಟು ದಿನಗಳಲ್ಲಿ 2022ರಲ್ಲಿ ತೆರೆಕಂಡಿದ್ದ 'ಕಾಂತಾರ' ದಾಖಲೆಯನ್ನೇ 'ಕಾಂತಾರ ಚಾಪ್ಟರ್ 1' ಮುರಿದಿದೆ. ಹಾಗಿದ್ದರೆ, ₹509 ಕೋಟಿ ಎಲ್ಲೆಲ್ಲಿಂದ ಬಂತು ಅನ್ನೋದನ್ನು ನೋಡುವುದಕ್ಕೆ ಮುಂದೆ ಓದಿ.
8ನೇ ದಿನ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ ಅಧ್ಯಾಯ 1' ಅಕ್ಟೋಬರ್ 2, 2025ರಂದು ವಿಶ್ವದಾದ್ಯಂತ ತೆರೆಕಂಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಬಾಕ್ಸಾಫೀಸ್‌ನಲ್ಲಿ ಅಬ್ಬರದ ಕಲೆಕ್ಷನ್ ಆಗುತ್ತಲೇ ಇದೆ. ಇಷ್ಟು ದಿನ ಕಾದಿದ್ದಕ್ಕೂ ಕನ್ನಡ ಚಿತ್ರರಂಗಕ್ಕೆ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಸಿಕ್ಕಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ ಈ ಸಿನಿಮಾ 8ನೇ ದಿನ 20.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕನ್ನಡ ವರ್ಷನ್‌ನಿಂದ ₹7.5 ಕೋಟಿ, ಹಿಂದಿ ವರ್ಷನ್ ₹7 ಕೋಟಿ, ತೆಲುಗು ವರ್ಷನ್ ₹2.5 ಕೋಟಿ, ತಮಿಳು ವರ್ಷನ್ ₹1.75 ಕೋಟಿ, ಮಲಯಾಳಂ ವರ್ಷನ್ ₹1.5 ಕೋಟಿ ಕಲೆಕ್ಷನ್ ಮಾಡಿದೆ.
ವಿಶ್ವದಾದ್ಯಂತ ₹509 ಕೋಟಿ ಕಲೆಕ್ಷನ್
'ಕಾಂತಾರ ಅಧ್ಯಾಯ 1' ವಿಶ್ವಾದ್ಯಂತ ₹509 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಮೂಲಕ ಭರ್ಜರಿ ಯಶಸ್ಸನ್ನು ಸಾಧಿಸಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ಹಾಗೂ ನಟಿಸಿದ ಈ ಸಿನಿಮಾ ಅದ್ಭುತ ಕಥಾಹಂದರ, ನಮ್ಮ ನೆಲದ ಸಂಸ್ಕೃತಿಯ ವಾಸ್ತವಿಕ ಚಿತ್ರಣ ಮತ್ತು ತಾಂತ್ರಿಕತೆಯಿಂದ ವೀಕ್ಷಕರ ಪ್ರಶಂಸೆ ಗಳಿಸಿದೆ. ದೇಶ ಹಾಗೂ ವಿದೇಶಿ ಬಾಕ್ಸಾಫೀಸ್‌ನಲ್ಲಿ ಅಬ್ಬರವನ್ನು ಮುಂದುವರೆಸಿದ್ದು, ಕನ್ನಡ ಚಿತ್ರರಂಗವನ್ನು ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗಿದೆ.

ಹೊಂಬಾಳೆ ಫಿಲ್ಮ್ಸ್‌ಗೆ ಮತ್ತೊಂದು ಯಶಸ್ಸು
ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಸಿನಿಮಾಗಳಲ್ಲಿ ಮತ್ತೊಂದು ಯಶಸ್ಸು ಕಂಡಿದೆ. 'ಕಾಂತಾರ ಚಾಪ್ಟರ್ 1' ಯಶಸ್ಸಿನ ಬಳಿಕ ಹೊಂಬಾಳೆಗೆ ಮತ್ತಷ್ಟು ಬಲ ಬಂದಂತೆ ಆಗಿದೆ. ಈಗಾಗಲೇ 'ರಾಜಕುಮಾರ', 'ಕೆಜಿಎಫ್ ಅಧ್ಯಾಯ 1 & 2', 'ಕಾಂತಾರ' ಮತ್ತು'ಸಲಾರ್'ನಂತಹ ಯಶಸ್ವಿ ಸಿನಿಮಾಗಳು ಹೊಂಬಾಳೆ ಫಿಲ್ಮ್ಸ್ ಮುಡಿಗೇರಿಸಿಕೊಂಡಿದೆ. ಈ ಯಶಸ್ಸು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಗರಿ ಬಂದಂತಾಗಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











