45 Box Office Day 2: 2ನೇ ದಿನ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿತೇ '45'? ಶಿವಣ್ಣ, ಉಪ್ಪಿ,ರಾಜ್ ಗೆದ್ದರೇ?

ಈ ವರ್ಷ ಕ್ರಿಸ್‌ಮಸ್‌ಗೆ ಕನ್ನಡ ಸಿನಿ ಪ್ರಿಯರಿಗೆ ಹಬ್ಬ. ಕಳೆದ ವರ್ಷದಂತೆ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲಿ ಒಂದು ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಆದರೆ, ಇನ್ನೊಂದು ಶಿವಣ್ಣ, ಉಪೇಂದ್ರ, ರಾಜ್‌ ಬಿ ಶೆಟ್ಟಿ ಸಿನಿಮಾ '45'. ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶಿಸಿರುವ ಈ ಸಿನಿಮಾವನ್ನು ಟ್ರೇಡ್ ಎಕ್ಸ್‌ಪರ್ಟ್‌ಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ರಮೇಶ್ ರೆಡ್ಡಿ ನಿರ್ಮಾಣದ '45' ಹಲವು ಅಂಶಗಳಿಂದ ಗಮನ ಸೆಳೆದಿದೆ. ಸಿನಿಮಾ ಮೇಕಿಂಗ್, ಬಳಸಿರುವ ವಿಎಫ್‌ಎಕ್ಸ್ 45 ಸಿನಿಮಾದ ಹೈಲೈಟ್. ಇದರ ಜೊತೆನೇ ಮೂವರು ದಿಗ್ಗಜರು ಒಟ್ಟಿಗೆ ನಟಿಸಿರುವುದು ಇನ್ನೊಂದು ಹೈಲೈಟ್. ಹೀಗಾಗಿ '45' ಸಿನಿಮಾ ಬಿಡುಗಡೆಗೂ ಮುನ್ನವೇ ಕ್ರೇಜ್ ಹುಟ್ಟಾಕಿತ್ತು. ಸಿನಿಮಾ ರಿಲೀಸ್ ಆದ ಬಳಿಕ ಶಿವಣ್ಣನ ದಶವತಾರ ನೋಡಿ ಪ್ರೇಕ್ಷಕರು ಇಷ್ಟ ಪಟ್ಟಿದ್ದಾರೆ.

Shivarajkumar Upendra Raj B Shetty 45 movie Day 2 Box Office Collection Report

ಮೊದಲ ದಿನ '45' ಸಿನಿಮಾ ₹5.50 ಕೋಟಿ ಕಲೆಕ್ಷನ್ ಮಾಡಿತ್ತು. ಉತ್ತಮ ಆರಂಭ ಕಂಡಿರುವ ಈ ಸಿನಿಮಾ 2ನೇ ದಿನದ ಕಲೆಕ್ಷನ್ ಹೇಗಿದೆ? ವರ್ಕಿಂಗ್ ಡೇನಲ್ಲಿ ಸಿನಿಮಾ ಗಳಿಕೆ ಎಷ್ಟು? ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಈ ಮೂವರು ದಿಗ್ಗಜರ ಪವರ್‌ ಹೇಗಿದೆ? ವೀಕೆಂಡ್‌ನಲ್ಲಿ ಸಿನಿಮಾದ ಕಲೆಕ್ಷನ್ ಎಷ್ಟಾಗಬಹುದು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'45' 2ನೇ ದಿನದ ಕಲೆಕ್ಷನ್ ಎಷ್ಟು?

ಸ್ಯಾಂಡಲ್‌ವುಡ್‌ನ ಮೂವರು ದಿಗ್ಗಜರು ಒಂದೇ ಸಿನಿಮಾದಲ್ಲಿ ನಟಿಸಿರೋದು ಅಡ್ವಾಂಜೇಟ್. ಯಾಕಂದ್ರೆ ಕನ್ನಡದಲ್ಲಿ ಮಲ್ಟಿಸ್ಟಾರರ್ ಸಿನಿಮಾ ಬರೋದೇ ಅಪರೂಪ. ಹೀಗಿರುವಾಗ '45' ಸಿನಿಮಾದ ಬಾಕ್ಸಾಫೀಸ್‌ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವುದು ಕಾಮನ್. ಬಾಕ್ಸಾಫೀಸ್ ಅಂಕಿ-ಅಂಶಗಳನ್ನು ನೀಡುವ ಸ್ಯಾಕ್ನಿಲ್ಕ್ ಪ್ರಕಾರ, '45' 2ನೇ ದಿನದ ಕಲೆಕ್ಷನ್ ₹2 ಕೋಟಿ. ಅದೇ ಕರ್ನಾಟಕದ ವಿತರಕರ ಪ್ರಕಾರ, ಈ ಸಿನಿಮಾದ ಕಲೆಕ್ಷನ್ ಇಷ್ಟಾಗಿದೆ.

ಮೌತ್ ಪಬ್ಲಿಸಿಟಿ ಅಗತ್ಯವಿದೆ

'45' ಸಿನಿಮಾ ನಿಧಾನವಾಗಿ ಮೌತ್ ಪಬ್ಲಿಸಿಟಿ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. 'ಗರುಡ ಪುರಾಣ'ವನ್ನು ಆಧಾರವಾಗಿಟ್ಟುಕೊಂಡ ಅರ್ಜುನ್ ಜನ್ಯ ಈ ಕಥೆಯನ್ನು ಹೆಣೆದಿದ್ದಾರೆ. ಹೀಗಾಗಿ ಪ್ರೇಕ್ಷಕರಿಗೆ ಈ ಸಿನಿಮಾ ವಿಶೇಷ ಅಂತ ಅನಿಸುತ್ತಿದೆ. ಸದ್ಯ ಈ ಸಿನಿಮಾ ಬಿಡುಗಡೆಯಾಗಿ ಇನ್ನೂ ಮೂರು ದಿನಗಳಾಗಿವೆ. ಹೀಗಾಗಿ ಮೌತ್ ಪಬ್ಲಿಸಿಟಿ ಚೆನ್ನಾಗಿ ಆದರೆ, ಸಿನಿಮಾ ಹೊಸ ವರ್ಷ ಸಂಭ್ರಮವನ್ನು ಸದುಪಯೋಗ ಪಡಿಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತೆ. ಸದ್ಯ ಎರಡು ದಿನಗಳ ಒಟ್ಟು ಕಲೆಕ್ಷನ್ ₹7.50 ಕೋಟಿ ಆಗಿದೆ.

Shivarajkumar Upendra Raj B Shetty 45 movie Day 2 Box Office Collection Report

ವೀಕೆಂಡ್ ಕಲೆಕ್ಷನ್ ನಿರ್ಣಾಯಕ

ಇನ್ನು '45' ಸಿನಿಮಾ ವೀಕೆಂಡ್‌ ಬಾಕ್ಸಾಫೀಸ್‌ನಲ್ಲಿ ಪರ್ಫಾರ್ಮ್ ಮಾಡಲೇಬೇಕು. ಶನಿವಾರ ಹಾಗೂ ಭಾನುವಾರ ಈ ಎರಡು ದಿನಗಳು ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಆದರೆ, ಸಿನಿಮಾ ₹15 ರಿಂದ ₹20 ಕೋಟಿವರೆಗೂ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಈಗ '45' ಸಿನಿಮಾ ಉತ್ತಮ ಕಲೆಕ್ಷನ್ ಆಗುತ್ತಿದ್ದು, ಇಂದು ಮತ್ತೆ ನಾಳೆ ಗಳಿಕೆ ಮೇಲೆ ಮುಂದಿನ ವಾರದ ಭವಿಷ್ಯ ನಿಂತಿದೆ. ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅಂತಹ ದಿಗ್ಗಜರು ಇರೋದ್ರಿಂದ ಸಿನಿಮಾ ವೀಕೆಂಡ್‌ನಲ್ಲಿ ಸದ್ದು ಮಾಡುತ್ತೆಂಬ ನಂಬಿಕೆ ಟ್ರೇಡ್ ಎಕ್ಸ್‌ಪರ್ಟ್‌ಗಳದ್ದು.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Shivarajkumar, Upendra, Raj B Shetty 45 movie Day 2 Box Office Collection Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X